Shivamogga Dasara Video: ಶಿವಮೊಗ್ಗ ದಸರಾ: ಅಂಬಾರಿ ಹೊತ್ತ ಆನೆ ಗಿರಕಿ, ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ!

ಶಿವಮೊಗ್ಗದಲ್ಲಿ ದಸರಾ ಅಂಬಾರಿ ಹೊತ್ತ ಆನೆಯು ಗಿರಕಿ ಹೊಡೆದಿರುವ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೈಸೂರಿನಲ್ಲಿ ನಾಡಹಬ್ಬ ವಿಜೃಂಭಣೆಯಿಂದ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಕರ್ನಾಟಕದ ವಿವಿಧ ನಗರಗಳಲ್ಲೂ ದಸರಾ ಸಂಭ್ರಮ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಶಿವಮೊಗ್ಗದಲ್ಲೂ ದಸರಾ ಸಂಭ್ರಮಾಚರಣೆ ನಡೆಯುವಾಗ ಅವಘಡ ಸಂಭವಿಸಿದೆ. ಶಿವಮೊಗ್ಗ ದಸರಾದಲ್ಲಿ ಕೊನೆಯ ಕ್ಷಣದಲ್ಲಿ ಅಂಬಾರಿ ಹೊರುವ ಆನೆ ಬದಲಾಗಿತ್ತು. ಇದೀಗ ದಸರಾ ಸಂಭ್ರಮಾಚರಣೆಯ ಸಂದರ್ಭದಲ್ಲಿ ಆನೆ ಗಿರಕಿ ಹಾಕಿರುವುದು ವೈರಲ್ ಆಗುತ್ತಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

ಶಿವಮೊಗ್ಗ ದಸರಾ ಜಂಬೂಸವಾರಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಶಿವಮೊಗ್ಗದ ಜಂಬು ಸವಾರಿಯಲ್ಲಿ ಬೆಳ್ಳಿ ಅಂಬಾರಿ ಹೊತ್ತ ಆನೆ ಏಕಾಏಕಿ ದಿಕ್ಕಾಪಾಲಾಗಿ ಓಟಕ್ಕಿತ್ತಿದೆ, ಇದರಿಂದ ಅಂಬಾರಿ ನೆಲಕ್ಕೆ ಬಿದ್ದಿದೆ! ವಿಜಯದಶಮಿ ಮೆರವಣಿಗೆಯಲ್ಲಿ ಕ್ರಾಕರ್ಸ್ ಸದ್ದಿಗೆ ಗಜರಾಜ ಬೆಚ್ಚಿಬಿದ್ದಿದ್ದು ರಸ್ತೆಯಲ್ಲಿದ್ದ ಕಾರು ಜಖಂ ಆಗಿದೆ. ಆನೆಯ ಓಟವನ್ನು ನೋಡಿ ಜನರು ದಿಕ್ಕಾಪಾಲಾಗಿ ಓಡಿದ್ದಾರೆ.

Shivamogga Dasara Elephant Carrying Ambari Spins Suddenly No One Hurt

ಹಲವು ವಾಹನಗಳು ಜಖಂ

ಇನ್ನು ಶಿವಮೊಗ್ಗದಲ್ಲಿ ದಸರಾ ಅಂಬಾರಿ ಹೊತ್ತ ಆನೆಯು ಗಿರಕಿ ಹೊಡೆದು ಬೆಳ್ಳಿ ಅಂಬಾರಿ ಕೆಳಗೆ ಬಿದ್ದಿರುವುದರಿಂದ ಹಲವು ವಾಹನಗಳು ಜಖಂ ಆಗಿವೆ. ಆನೆಯು ಕೆಳಗೆ ಬಿದ್ದ ಅಂಬಾರಿಯೊಂದಿಗೆ ಸಾಗಿದ್ದು, ಬೈಕ್ ಹಾಗೂ ಕಾರುಗಳಿಗೆ ಹಾನಿಯಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಕೊನೆಯ ಕ್ಷಣದಲ್ಲಿ ಬದಲಾಗಿತ್ತು ಆನೆ

ಶಿವಮೊಗ್ಗ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಈ ಬಾರಿ ಅವಘಡ ಸಂಭವಿಸಿದೆ. ಕೊನೆಯ ಕ್ಷಣದಲ್ಲಿ ಅಂಬಾರಿ ಹೊರುವ ಆನೆಯನ್ನು ಬದಲಾಯಿಸಿ ಅರಣ್ಯ ಇಲಾಖೆ ನಿರ್ಧಾರ ತೆಗೆದುಕೊಂಡಿತ್ತು. ಕಳೆದ 6 ವರ್ಷಗಳಿಂದ ಅಂಬಾರಿ ಹೊರತ್ತಿದ್ದ ಸಾಗರ್ ಆನೆಯ ಬದಲಾಗಿ, ಈ ಬಾರಿ ಸೋಮಣ್ಣ ಆನೆಗೆ ಶ್ರೀ ಚಾಮುಂಡೇಶ್ವರಿ ದೇವಿಯ ಅಂಬಾರಿ ಹೊರಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಕೊನೆಯ ಕ್ಷಣದ ಬದಲಾವಣೆಯಿಂದ ಅವಘಡ ಸಂಭವಿಸಿದೆಯೇ ಎನ್ನುವ ಚರ್ಚೆ ಇದೀಗ ಪ್ರಾರಂಭವಾಗಿದೆ.

ಸಕ್ರೆಬೈಲು ಆನೆ ಬಿಡಾರದ ಸೋಮಣ್ಣ ಆನೆ ಮೊಟ್ಟ ಮೊದಲ ಬಾರಿಗೆ ಶಿವಮೊಗ್ಗ ದಸರಾ ಮಹೋತ್ಸವದಲ್ಲಿ ಭಾಗವಹಿಸಿತ್ತು. ಸೋಮಣ್ಣನಿಗೆ ಅಂಬಾರಿ ಹೊರಿಸುವ ಕುರಿತು ಅಕ್ಟೋಬರ್‌ 20ರ ಮಂಗಳವಾರ ಸಂಜೆಯಷ್ಟೇ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ವೈದ್ಯರು ಸಭೆ ನಡೆಸಿ ಅಂತಿಮ ತೀರ್ಮಾನವನ್ನು ತೆಗೆದುಕೊಂಡಿದ್ದರು.

ತನಿಖೆಗೆ ಶಿವಮೊಗ್ಗ ಡಿಸಿ ಆದೇಶ

ಶಿವಮೊಗ್ಗ ದಸರಾ ಆಚರಣೆ ವೇಳೆ ಅನಾಹುತ ಸಂಭವಿಸಿದ್ದು, ಅಂಬಾರಿ ಕೆಳಗೆ ಬಿದ್ದಿದೆ. ಆನೆ ದಿಕ್ಕೆಟ್ಟು ಓಡಿದ್ದರಿಂದ 650 ಕೆಜಿ ತೂಕದ ಬೆಳ್ಳಿ ಅಂಬಾರಿ ಕೆಳಗೆ ಬಿದ್ದಿದೆ. ಮೆರವಣಿಗೆಯಲ್ಲಿ ಸ್ವಲ್ಪ ದೂರ ಸಾಗಿದ ಬೆನ್ನಲ್ಲೇ ಬೆದರಿ ದಿಕ್ಕಪಾಲಾಗಿ ಆನೆ ಓಡಿತ್ತು. ಆನೆ ಮೇಲಿಂದ ಕೆಳಗೆ ಬಿದ್ದು ಅಂಬಾರಿಗೆ ಹಾನಿ ಆಗಿರುವುದರಿಂದ ಮೆರವಣಿಗೆ ರದ್ದು ಮಾಡಲಾಗಿದೆ. 2 ದಿನದ ಹಿಂದೆ ಅಂಬಾರಿ ಹೊರುವ ಆನೆ ಬದಲಿಸಿದ್ದ ಅಧಿಕಾರಿಗ ಸಾಗರ್ ಆನೆ ಬದಲಿಗೆ ಸೋಮಣ್ಣ ಎಂಬ ಆನೆ ಆಯ್ಕೆ ಮಾಡಿದ್ದರು.

ಆನೆ ಮೇಲಿಂದ ಅಂಬಾರಿ ಬಿದ್ದಿದ್ದರಿಂದ ಚಾಮುಂಡೇಶ್ವರಿ ವಿಗ್ರಹ ಭಿನ್ನ ಆಗಿದ್ದು, ಉತ್ಸವ ಮೂರ್ತಿ ಚಾಮುಂಡಿ ದೇವಿಯ ವಿಗ್ರಹದ ಕೈ ಮುರಿತವಾಗಿದ್ದು. ಮುರಿದುಬಿದ್ದ ಚಾಮುಂಡಿ ದೇವಿ ವಿಗ್ರಹ, ಅಂಬಾರಿಗೂ ಹಾನಿ ಆಗಿದೆ.

ಅಂಬಾರಿ ಬೀಳಿಸಿದ ನಂತರ ಸ್ಥಳೀಯರನ್ನು ಆನೆ ಅಟ್ಟಾಡಿಸಿತ್ತು. ಅರವಳಿಕೆ ನೀಡಿ ಅರಣ್ಯ ಇಲಾಖೆ ಅಧಿಕಾರಿಗಳು ಅಂಬಾರಿ ಕಳಚಿದ್ದಾರೆ. ಶಿವಮೊಗ್ಗ ದಸರಾ ಆಚರಣೆಯಲ್ಲಿ ಜಿಲ್ಲಾ ಅಧಿಕಾರಿಗಳ ನಿರ್ಲಕ್ಷ್ಯವಹಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಕುಮ್ಕಿ ಆನೆಗಳಿಲ್ಲದೇ ಗಂಡಾನೆಗಳನ್ನ ಮಾತ್ರ ಅಧಿಕಾರಿಗಳು ಕರೆತಂದಿದ್ದರು. ಇದೀಗ ಗಾಜನೂರು ಶಿಬಿರಕ್ಕೆ ಎರಡೂ ಆನೆಗಳನ್ನ ಕರೆದೊಯಲಾಗಿದೆ. ಅಂಬಾರಿ ಮತ್ತು ವಿಗ್ರಹ ಭಿನ್ನ ಕಾರಣಕ್ಕೆ ದಸರಾ ಮೆರವಣಿಗೆ ರದ್ದಾಗಿದೆ. ಇಡೀ ಘಟನೆಯ ಬಗ್ಗೆ ತನಿಖೆಗೆ ಶಿವಮೊಗ್ಗದ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ.

ನಂದಿಧ್ವಜ ಮುಗಿಲೆತ್ತರಕ್ಕೆ, ದಸರಾ ವೈಭವ ಜಗದಗಲಕ್ಕೆ: ಸಿಎಂ ಡಿ.ಕೆ ಶಿವಕುಮಾರ್

ನಂದಿಧ್ವಜ ಮುಗಿಲೆತ್ತರಕ್ಕೆ, ದಸರಾ ವೈಭವ ಜಗದಗಲಕ್ಕೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ನಾಡಹಬ್ಬ ದಸರಾ ಅಂಗವಾಗಿ ಮೈಸೂರು ಅರಮನೆಯ ಬಲರಾಮ ದ್ವಾರದಲ್ಲಿ ಇಂದು ನಂದಿಧ್ವಜಕ್ಕೆ ಪೂಜೆ ನೆರವೇರಿಸಿ, ನಾಡಿನ ಸಮೃದ್ಧಿ, ಸುಖ-ಶಾಂತಿ ಹಾಗೂ ಸರ್ವರ ಕಲ್ಯಾಣಕ್ಕಾಗಿ ಪ್ರಾರ್ಥಿಸಿದೆ.

ಮೈಸೂರು ದಸರಾ ಸಂಪ್ರದಾಯದಲ್ಲಿ ಈ ನಂದಿಧ್ವಜ ಪೂಜೆಗೆ ವಿಶೇಷ ಮಹತ್ವವಿದೆ. ಐತಿಹಾಸಿಕ ಜಂಬೂಸವಾರಿಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಚಾಲನೆ ನೀಡುವ ಈ ಆಚರಣೆಯು ನಾಡಿನ ರಾಜಪರಂಪರೆ, ಧಾರ್ಮಿಕ ನಂಬಿಕೆ ಮತ್ತು ಸಾಂಸ್ಕೃತಿಕ ವೈಭವದ ಪ್ರತೀಕವಾಗಿದೆ ಎಂದೂ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+