Shiggaon By Election: ಶಿಗ್ಗಾಂವಿ ಕ್ಷೇತ್ರದಾದ್ಯಂತ ಶಾಂತಿಯುತ ಚುನಾವಣೆ :ಮತದಾನ ಆಗಿದ್ದೆಷ್ಟು?
ಹಾವೇರಿ, ನವೆಂಬರ್ 13: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯು ನವೆಂಬರ್ 13ರಂದು ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿ ಸಂಜೆವರೆಗೆ ಶಾಂತಯುತವಾಗಿ ನಡೆಯಿತು. ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಅವರ ಮಾರ್ಗದರ್ಶನದಲ್ಲಿ, ಅಧಿಕಾರಿಗಳು ಮತ್ತು ಸಿಬ್ಬಂದಿಯು ಮತದಾನ ಪ್ರಕ್ರಿಯೆಯ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಬೆಳಗ್ಗೆ 7.30ರ ವೇಳೆಗೆ ಜನರು ಮತಗಟ್ಟೆಗಳಲ್ಲಿ ಸರತಿ ಸಾಲಲಿ ನಿಂತಿದ್ದರು. ಮಧ್ಯಾಹ್ನ ವೇಳೆ ಮತದಾನದ ಪ್ರಮಾಣವು ಮಂದಗತಿಯಲ್ಲಿತ್ತು. ಹೊತ್ತಿಳಿಯುತ್ತಿದ್ದಂತೆ ಮತದಾನ ದಾಖಲಾತಿ ಪ್ರಮಾಣ ಬಿರುಸು ಪಡೆಯಿತು. ಪಟ್ಟಣ, ನಗರ ಪ್ರದೇಶದ ಮತದಾರರು ಬೆಳಗ್ಗೆ 10 ಗಂಟೆತ ನಂತರ ಮತಗಟ್ಟೆಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತದಾನ ಮಾಡುವುದು ಕಂಡು ಬಂದಿತು.

ಈ ಉಪ ಚುನಾವಣೆಯಲ್ಲಿ ಪುರುಷರಿಗಿಂತ ನಾರಿಯರೇ ಹೆಚ್ಚಿನ ಪ್ರಮಾಣದಲ್ಲಿ ತಮ್ಮ ಮತಹಕ್ಕನ್ನು ಚಲಾಯಿಸಿದರು. ಪುರುಷರು ಹಾಗು ಮಹಿಳೆಯರು ಸೇರಿ ಒಟ್ಟು 773 ಮತದಾರರು ಇರುವ ಹೊಸಮೆಳ್ಳಾಗಟ್ಟಿಯ ಸಹಿಪ್ರಾ ಶಾಲೆಯ ಸಖಿ ಮತಗಟ್ಟೆ ಸಂಖ್ಯೆ 212ರಲ್ಲಿ ಬೆಳಗಿನ 10 ಗಂಟೆ ವೇಳೆಗೆ 85 ಜನ ಪುರುಷರಿಗಿಂತ ಹೆಚ್ಚಿಗೆ 106 ಮಹಿಳೆಯರು ಮತಹಕ್ಕನ್ನು ಚಲಾಯಿಸಿದ್ದರು.
ಬೆಳಗಿನ 11 ಗಂಟೆ ವೇಳೆಗೆ ಒಟ್ಟು 1542 ಮತದಾರರು ಇರುವ ಸವಣೂರ ಪಟ್ಟಣದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 136ರಲ್ಲಿ 219 ಮಹಿಳೆಯರು ಮತದಾನ ಮಾಡಿದ್ದರು. ಈ ವೇಳೆಗೆ 191 ಪುರುಷರು ಮಾತ್ರ ಮತದಾನ ಮಾಡಿದ್ದರು. ಒಟ್ಟು 1225 ಮತದಾರರು ಇರುವ ಸವಣೂರ ಪಟ್ಟಣದ ಜಿಲ್ಲಾ ಕೇಂದ್ರ ಗ್ರಂಥಾಲಯ ಶಾಖೆ ಮತಗಟ್ಟೆ ಸಂಖ್ಯೆ 137ರಲ್ಲಿ ಬೆಳಗಿನ 11 ಗಂಟೆ ವೇಳೆಗೆ 623 ಪುರುಷರ ಪೈಕಿ 198 ಜನರು ಮತ್ತು ಒಟ್ಟು 602 ಮಹಿಳಾ ಮತದಾರರ ಪೈಕಿ 211 ಜನರು ಮತಹಕ್ಕನ್ನು ಚಲಾಯಿಸಿದ್ದರು.
ಒಟ್ಟು 1502 ಮತದಾರರು ಇರುವ ಸವಣೂರ ಪಟ್ಟಣದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಸಖಿ ಮತಗಟ್ಟೆ ಸಂಖ್ಯೆ 133ರಲ್ಲಿ 720 ಪುರುಷರ ಪೈಕಿ 193 ಜನರು ಮತ್ತು ಒಟ್ಟು 782 ಮಹಿಳಾ ಮತದಾರರ ಪೈಕಿ 243 ಜನರು ಮತಹಕ್ಕನ್ನು ಚಲಾಯಿಸಿದ್ದರು. ಒಟ್ಟು 1319 ಮತದಾರರು ಇರುವ ಸವಣೂರ ತಾಲೂಕಿನ ಹುಲಗೂರದ ಸರ್ಕಾರಿ ಮಾದರಿಯ ಬಾಲಕರ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 31ರಲ್ಲಿ ಮಧ್ಯಾಹ್ನ 12.30ರ ವೇಳೆಗೆ ಮತ ಚಲಾಯಿಸಿದ ಪುರುಷ ಮತದಾರರ ಸಂಖ್ಯೆ 281 ಇತ್ತು. ಇದೆ ವೇಳೆ ಇಲ್ಲಿ 308 ಮಹಿಳೆಯರು ಮತಹಕ್ಕು ಚಲಾಯಿಸಿ ಪುರುಷರಿಗಿಂತ ಮುಂದೆ ಇದ್ದರು. ಒಟ್ಟು 1050 ಮತದಾರರು ಇರುವ ಶಿಗ್ಗಾಂವ ಪುರಸಭೆ ಕಾರ್ಯಾಲಯದ ಮತಗಟ್ಟೆ ಸಂಖ್ಯೆ 98ರಲ್ಲಿ ಮಧ್ಯಾಹ್ನ 1.20ರ ವೇಳೆಗೆ 507 ಪುರುಷ ಮತದಾರರ ಪೈಕಿ 242 ಜನರು ಮತ್ತು ಒಟ್ಟು 543 ಮಹಿಳಾ ಮತದಾರರ ಪೈಕಿ 283 ಜನರು ಮತಹಕ್ಕನ್ನು ಚಲಾಯಿಸಿದ್ದರು.
ಮತದಾನದ ವಿವರ: ಹಳೆಮೆಳ್ಳಾಗಟ್ಟಿಯ ಸಹಿಪ್ರಾ ಶಾಲೆ ಮತಗಟ್ಟೆ ಸಂಖ್ಯೆ 211ರಲ್ಲಿ ಬೆಳಗಿನ 9.30ರವರೆಗೆ ಒಟ್ಟು 392 ಪುರುಷರ ಪೈಕಿ 72 ಜನರು ಮತ್ತು ಒಟ್ಟು 372 ಮಹಿಳಾ ಮತದಾರರ ಪೈಕಿ 64 ಜನರು ಮತಹಕ್ಕನ್ನು ಚಲಾಯಿಸಿದ್ದರು. 903 ಮತದಾರರು ಇರುವ ಹುರಳಿಕೊಪ್ಪಿಯ ಸಹಿಪ್ರಾ ಶಾಲೆ ಪಶ್ಚಿಮಭಾಗದ ಮತಗಟ್ಟೆ ಸಂಖ್ಯೆ 203ರಲ್ಲಿ ಬೆಳಗಿನ 10.15ರವರೆಗೆ ಒಟ್ಟು 453 ಪುರುಷರ ಪೈಕಿ 119 ಜನರು ಮತ್ತು ಒಟ್ಟು 450 ಮಹಿಳಾ ಮತದಾರರ ಪೈಕಿ 108 ಜನರು, ಮತಗಟ್ಟೆ ಸಂಖ್ಯೆ 205ರಲ್ಲಿ ಒಟ್ಟು 579 ಪುರುಷರ ಪೈಕಿ 157 ಜನರು ಮತ್ತು ಒಟ್ಟು 544 ಮಹಿಳಾ ಮತದಾರರ ಪೈಕಿ 152 ಜನರು ಮತಹಕ್ಕನ್ನು ಚಲಾಯಿಸಿದ್ದರು.
ಒಟ್ಟು 769 ಮತದಾರರು ಇರುವ ಸವಣೂರ ಪಟ್ಟಣದ ಶ್ರೀಮತಿ ಗಂಗಾದೇವಿ ನೆಲವಗಿ ಬಾಲಕಿಯರ ಪ್ರೌಢಶಾಲೆ ಮತಗಟ್ಟೆ ಸಂಖ್ಯೆ 124ರಲ್ಲಿ ಬೆಳಗಿನ 10.45ರ ವೇಳೆಗೆ ಒಟ್ಟು 365 ಪುರುಷರ ಪೈಕಿ 69 ಜನರು ಮತ್ತು ಒಟ್ಟು 404 ಮಹಿಳಾ ಮತದಾರರ ಪೈಕಿ 52 ಜನರು ಮತಹಕ್ಕನ್ನು ಚಲಾಯಿಸಿದ್ದರು. 990 ಮತದಾರರು ಇರುವ ಸವಣೂರ ತಾಲೂಕಿನ ಚಿಲ್ಲೂರಬಡ್ನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ ಮತಗಟ್ಟೆ ಸಂಖ್ಯೆ117ರಲ್ಲಿ ಮಧ್ಯಾಹ್ನ 12 ಗಂಟೆ ವೇಳೆಗೆ ಒಟ್ಟು 508 ಪುರುಷ ಮತದಾರರ ಪೈಕಿ 116 ಜನರು ಮತ್ತು ಒಟ್ಟು 482 ಮಹಿಳಾ ಮತದಾರರ ಪೈಕಿ 99 ಜನರು ಮತಹಕ್ಕನ್ನು ಚಲಾಯಿಸಿದ್ದರು.
ಸವಣೂರ ತಾಲೂಕಿನ ವಿಶೇಷ: ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಆಗಮಿಸಿ ಸಾಲಾಗಿ ನಿಂತು ಮತದಾನ ಮಾಡುತ್ತಿರುವ ದೃಶ್ಯಗಳು. ಸವಣೂರ ಪಟ್ಟಣದ ಮತಗಟ್ಟೆ ಸಂಖ್ಯೆ 135, 136 ಮತ್ತು 137ಗಳಲ್ಲಿ ಬೆಳಗಿನ 11 ಗಂಟೆ ವೇಳೆಗೆ ಕಂಡುಬಂದವು. ಬೆಳಗಿನ 11 ಗಂಟೆ ವೇಳೆಗೆ ಸವಣೂರ ಪಟ್ಟಣದಲ್ಲಿ ಮತಗಟ್ಟೆ ಸಂಖ್ಯೆ 135ರಲ್ಲಿ 720 ಪುರುಷರ ಪೈಕಿ 193 ಮತ್ತು 782 ಮಹಿಳಾ ಮತದಾರರ ಪೈಕಿ 243 ಜನರು ಮತದಾನ ಮಾಡಿದ್ದರು.
ಮತಗಟ್ಟೆ ಸಂಖ್ಯೆ 136ರಲ್ಲಿ 783 ಪುರುಷರ ಪೈಕಿ 191 ಮತ್ತು 759 ಮಹಿಳಾ ಮತದಾರರ ಪೈಕಿ 219 ಜನರು ಮತದಾನ ಮಾಡಿದ್ದರು. ಮತಗಟ್ಟೆ ಸಂಖ್ಯೆ 137ರಲ್ಲಿ 623 ಪುರುಷರ ಪೈಕಿ 198 ಜನರು ಮತ್ತು 602 ಮಹಿಳಾ ಮತದಾರರ ಪೈಕಿ 211 ಜನರು ಮತದಾನ ಮಾಡಿದ್ದರು.
ವಯೋವೃದ್ದೆಯಿಂದ ಮತದಾನ: ಶಿಗ್ಗಾಂವಿಯ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ 96ರ ವಯೋವೃದ್ದೆ ದುರ್ಗಮ್ಮ ಆಲದಕಟ್ಡಿ ಅವರು ಶಿಗ್ಗಾಂವಿಯ ಮತಗಟ್ಟೆ ಸಂಖ್ಯೆ 106ಕ್ಕೆ ಆಗಮಿಸಿ ಮತಹಕ್ಕನ್ನು ಚಲಾಯಿಸಿ ಗಮನ ಸೆಳೆದರು.
ಮೊದಲಬಾರಿಗೆ ಮತದಾನ ಮಾಡಿದ ಸಂಭ್ರಮ: ಶಿಗ್ಗಾಂವ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮತಗಟ್ಟೆ ಸಂಖ್ಯೆ 135ರ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಸವಣೂರದ ಸಖಿ ಮತಗಟ್ಟೆಯಲ್ಲಿ ಅಂಜಲಿ ತೆಲಗಿ ಅವರು ಮೊದಲನೇ ಬಾರಿಗೆ ಮತ ಚಲಾಯಿಸಿ ಸಂತಷ ಹಂಚಿಕೊಂಡರು.
ಅನಿವಾಸಿ ಭಾರತೀಯರಿಂದ ಮತದಾನ: ಅಮೇರಿಕಾದ ಆಸ್ಟನ್ ಟೆಕ್ಸಿಸ್ ವಾಸಿಯಾಗಿರುವ ಅನುಷಾ ಸೊಬಾನಿ ಅವರು ಶಿಗ್ಗಾಂವಿ ಪಟ್ಟಣದ ಮತಗಟ್ಟೆ ಸಂಖ್ಯೆ 108ಕ್ಕೆ ಆಗಮಿಸಿ ತಮ್ಮ ಮತಹಕ್ಕನ್ನು ಚಲಾಯಿಸಿದರು.
ವಿಶೇಷ ಮತಗಟ್ಟೆಗಳು: ಸುರಪಗತ್ತಿಯ ಮತಗಟ್ಟೆ ಸಂಖ್ಯೆ 39ರಲ್ಲಿ, ಶಿಗ್ಗಾಂವ ಪುರಸಭೆಯ ಮತಗಟ್ಟೆ ಸಂಖ್ಯೆ 98ರಲ್ಲಿ, ಕೊಟ್ಟಿಗೇರಿಯ ಮತಗಟ್ಟೆ ಸಂಖ್ಯೆ 195ರಲ್ಲಿ, ಸವಣೂರದ ಮತಗಟ್ಟೆ ಸಂಖ್ಯೆ 135 ಮತ್ತು ಮೆಳ್ಳಗಟ್ಟಿಯ ಮತಗಟ್ಟೆ ಸಂಖ್ಯೆ 212ರ ಐದೂ ಸಖಿ ಮತಗಟ್ಟೆಗಳಲ್ಲಿ ಮಹಿಳಾ ನೌಕರರೇ ಕಾರ್ಯನಿರ್ವಹಿಸಿ ಸೈ ಅನಿಸಿಕೊಂಡರು. ಮತಗಟ್ಟೆ ಸಂಖ್ಯೆ 178 ನಾರಾಯಣಪುರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ತೆರೆಯಲಾಗಿದ್ದ ವಿಶೇಷಚೇತನರ ಮತಗಟ್ಟೆಯಲ್ಲಿ ವಿಕಲಚೇತನ ನೌಕರರು ಕಾರ್ಯನಿರ್ವಹಿಸಿ ಗಮನ ಸೆಳೆದರು. ದುಂಡಶಿ ಗ್ರಾಮದಲ್ಲಿನ ಶಾಸಕರ ಮಾದರಿಯ ಸರ್ಕಾರಿ ಶಾಲೆಯಲ್ಲಿನ ವಿಷಯಾಧಾರಿತ ಮತಗಟ್ಟೆ ಮತ್ತು ಕೋನನಕೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪೂರ್ವ ದಿಕ್ಕಿನಲ್ಲಿದ್ದ ಯುವ ಮತಗಟ್ಟೆಗಳು ಮತದಾರರ ಗಮನ ಸೆಳೆದವು.
ಸೂಕ್ತ ಭದ್ರತೆ: 241 ಮತಗಟ್ಟೆಗಳಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಅಗತ್ಯಕ್ಕೆ ತಕ್ಕಂತೆ ಪೊಲೀಸ್, ಗೃಹರಕ್ಷಕ ದಳ ಮತ್ತು ಇನ್ನೀತರ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಿ ಸೂಕ್ತ ಭದ್ರತೆ ಒದಗಿಸಲಾಗಿತ್ತು. 716ಕ್ಕು ಹೆಚ್ಚು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸಿದರು. ಕೆಎಸ್‌ಆರ್‌ಪಿ ಮತ್ತು ಡಿಎಆರ್ ತುಕಡಿಗಳಿಂದ ಸೂಕ್ತ ಭದ್ರತೆ ಒದಗಿಸಲಾಗಿತ್ತು. ಬೆಳಗಿನ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ಶೇ.75.07 ರಷ್ಟು ಮತದಾನವಾಗಿದೆ.
-
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ 3 ಜಾಗ ನಿಗದಿ: ಡಿಸಿಎಂ ಡಿ.ಕೆ ಶಿವಕುಮಾರ್ ಅಪ್ಡೇಟ್ಸ್












Click it and Unblock the Notifications