ಕರ್ನಾಟಕದಲ್ಲಿ ಶೆಡ್‌ ಕ್ರೇಜ್‌- ಟೀ ಸ್ಟಾಲ್‌ ಪೋಸ್ಟರ್‌ ಭಾರೀ ವೈರಲ್‌

Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಪವಿತ್ರಾ ಗೌಡನನ್ನು ನೋಡಲು ಬಂದ ತಮ್ಮ ಮಾಧ್ಯಮದವರಿಗೆ ನಿಮಗೆ ಮಾಡೋದಿಕ್ಕೆ ಕೆಲಸವಿಲ್ಲವಾ ಎಂದು ಪ್ರಶ್ನಿಸಿದ್ದ. ಬಳಿಕ ನಿರೂಪಕರೊಬ್ಬರು ನಮಗೆ ಕೆಲ್ಸ ಇಲ್ಲ ಶೆಡ್‌ಗೆ ಹೋಗೋಣ ಬಾ ಎಂದು ತಿರುಗೇಟು ನೀಡಿದ್ದು, ಈ ಸಂಬಂಧಿಸಿದಂತೆ ರೀಲ್ಸ್‌ಗಳು ಸಹ ಆಗುತ್ತಿವೆ. ಇದರ ನಡುವೆಯೇ ಮತ್ತೊಂದು ಪೋಸ್ಟರ್‌ ವೈರಲ್‌ ಆಗುತ್ತಿದೆ.

ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾರೆ ಎಂಬ ಕಾರಣಕ್ಕೆ ರೇಣುಕಾಸ್ವಾಮಿಯನ್ನು ನಟ ದರ್ಶನ್‌ & ಗ್ಯಾಂಗ್ ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆದೊಯ್ದು ಭೀಕರವಾಗಿ ಹತ್ಯೆ ಮಾಡಿದ್ದರು. ಬಳಿಕ ಪರಪ್ಪನ ಅಗ್ರಹಾರ ಜೈಲಿನ ಮುಂದೆ ಪವಿತ್ರಾ ಗೌಡ ತಮ್ಮ ಮಾಧ್ಯಮದವರಿಗೆ ನಿಮಗೆ ಮಾಡೋದಿಕ್ಕೆ ಏನು ಕೆಲಸವಿಲ್ಲವಾ ಎಂದು ಪ್ರಶ್ನಿಸಿದ್ದರು.

Shed tea stall Poster viral What is this know details

ಆಗ ಖ್ಯಾತ ನಿರೂಪಕರೊಬ್ಬರು ನಮ್ಗೆ ಕೆಲ್ಸ ಇಲ್ಲ ಬಾ ಶೆಡ್‌ಗೆ ಹೋಗೋಣ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದರು. ಆಗಿನಿಂದ ಈ ವಾಕ್ಯವನ್ನೇ ಇಟ್ಟುಕೊಂಡು ರೀಲ್ಸ್‌ ಮಾಡುವವರ ಸಂಖ್ಯೆಯೂ ಹೆಚ್ಚಾಯಿತು. ಇದೀಗ ಶೆಡ್‌ ಪದ ಇಡೀ ಕರ್ನಾಟಕದಲ್ಲಿ ಟ್ರೆಂಡಿಗ್‌ನಲ್ಲಿದೆ. ಅಲ್ಲದೆ ಟೀ ಸ್ಟಾಲ್‌ವೊಂದಕ್ಕೆ ಶೆಡ್‌ ಟೀ ಸ್ಟಾಲ್‌ ಎಂದು ಹೆಸರಿಟ್ಟಿದ್ದು, ಈ ಪೋಸ್ಟರ್‌ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಅಷ್ಟಕ್ಕೂ ಈ ಹೋಟೆಲ್‌ ಇರುವುದು ಎಲ್ಲಿ ಎಂದು ಇಲ್ಲಿ ತಿಳಿಯಿರಿ.

ತರೀಕೆರೆಯ ಎಂ.ಜಿ.ರಸ್ತೆ ಶೆಡ್‌ ಟೀ ಸ್ಟಾಲ್‌ ಶುರುವಾಗಿದ್ದು, ಈ ನಾಪಫಲಕದಲ್ಲಿ ನಮ್ಮಲ್ಲಿ ಬೀಡಾ, ಟೀ, ಜ್ಯೂಸ್‌ ಹಾಲು ದೊರೆಯುತ್ತದೆ ಎಂದು ಸಾಮಾನ್ಯ ಹೋಟೆಲ್‌ಗಳಂತೆ ಬರೆದಿದ್ದಾರೆ. ಆದರೆ ಗಮನ ಸೆಳೆದಿದ್ದೆಂದರೆ, ಬಾ ಗುರು ಶೆಡ್‌ಗೆ ಟೀ ಕುಡಿ ಎಂದು ಬರೆಸಿರುವ ಪೋಸ್ಟರ್‌ ಸಾಮಾಜಿಕ ಜಾಲತಾಣದಲ್ಲಿ ಇದೀಹ ಸಖತ್‌ ಸದ್ದು ಮಾಡುತ್ತಿದೆ.

Shed tea stall Poster viral What is this know details

ಇನ್ನು ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಈಗಾಗಲೇ ಮುಗಿಯುವ ಹಂತಕ್ಕೆ ಬಂದಿದ್ದು, ಪೊಲೀಸರು ಚಾರ್ಜ್‌ ಸಲ್ಲಿಕೆಗೆ ಎಲ್ಲಾ ಸಕಲ ಸಿದ್ಧತೆಗಳನ್ನು ನಡೆಸಿದ್ದಾರೆ. ಅಲ್ಲದೆ, ನಟ ದರ್ಶನ್‌ನ ಒಂದೊಂದೇ ಕರಾಳ ಮುಖಗಳು ಬಟಾ ಬಯಾಲಾಗುತ್ತಲೇ ಇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+