Get Updates
Get notified of breaking news, exclusive insights, and must-see stories!

Karnataka transport: 2000 ಹೊಸ ಬಸ್ ಖರೀದಿ: ₹2000 ಕೋಟಿ ಅನುದಾನ: ರಾಮಲಿಂಗಾ ರೆಡ್ಡಿ ಮಹತ್ವದ ಮಾಹಿತಿ

ಬೆಂಗಳೂರು, ಮಾರ್ಚ್ 24: ಮಹಿಳಾ ಸಬಲೀಕರಣ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರ 'ಶಕ್ತಿ ಯೋಜನೆ'ಯ ಜಾರಿಗೆ ದಿಟ್ಟ ಹೆಜ್ಜೆ ಇಡಲಾಗಿದೆ. ರಾಜ್ಯ ಸರ್ಕಾರ ಒಟ್ಟು 2,000 ಹೊಸ ಬಸ್‌ಗಳ ಖರೀದಿಗೆ ಮುಂದಾಗಿದೆ. ಇದಕ್ಕಾಗಿ ಸರ್ಕಾರದಿಂದಲೇ ಸೂಕ್ತ ಅನುದಾನಕ್ಕೆ ಒಪ್ಪಿಗೆ ದೊರೆತಿದೆ. ಬಸ್‌ಗಳಲ್ಲಿ ಉಚಿತ ಪ್ರಯಾಣಿಕರ ಸಂಖ್ಯೆ ಲಕ್ಷಗಳಿಂದ ಕೋಟಿಗೆ ದಾಟಿದೆ ಎಂದು ಸಾರಿಗೆ ಇಲಾಖೆ ಮತ್ತು ಮುಜರಾಯಿ ಖಾತೆ ಸಚಿವ ರಾಮಲಿಂಗಾ ರೆಡ್ಡಿ ಅವರು ಮಹತ್ವದ ಮಾಹಿತಿ ನೀಡಿದರು.

ಶಕ್ತಿ ಯೋಜನೆ ಜಾರಿಯಾದ ಬಳಿಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿ ದಿನನಿತ್ಯ ಪ್ರಯಾಣಿಸುವವರ ಸಂಖ್ಯೆ ಏರಿಕೆಯಾಗುತ್ತಲೇ ಬಂದಿದೆ. ಈವರೆಗೆ ಸ್ಥಗಿತಗೊಂಡಿದ್ದ ನೇಮಕಾತಿ ಕಾರಣದಿಂದ ಸಾರಿಗೆ ಸಂಸ್ಥೆಗಳು ತತ್ತರಿಸಿ ಹೋಗಿದ್ದವು. ಈ ವೇಳೆ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಶಕ್ತಿ ಯೋಜನೆ ಅನುಷ್ಠಾನ ಸುಲಭವಾಗಿರಲಿಲ್ಲ. ಯೋಜನೆ ಅನುಷ್ಠಾನ ನಿಜಕ್ಕೂ ಸವಾಲಾಗಿತ್ತು. ಅದೆಲ್ಲವುಗಳನ್ನು ಮೆಟ್ಟಿ ನಿಂತು ಯೋಜನೆ ಜಾರಿಗೆ ಮಾಡಿದ್ದೇವೆ. ಜೊತೆಗೆ 2000 ಹೊಸ ಬಸ್‌ಗಳ ಖರೀದಿಗೆ ಮುಂದಾಗಿದ್ದೇವೆ ಎಂದು ತಿಳಿಸಿದರು.

Shakti Scheme Government Approves to get Rs 2000 Cr Loan and Buy 2000 New Buses Ramalinga Reddy

1000 ನೇಮಕಾತಿ, 5800 ಹೊಸ ಬಸ್ಸುಗಳ ಸೇರ್ಪಡೆ

ರಾಜ್ಯದಲ್ಲಿ ಸರ್ಕಾರದಿಂದ ಸಾರಿಗೆ ಇಲಾಖೆಗೆ 5,800 ಹೊಸ ಬಸ್ಸುಗಳ ಸೇರ್ಪಡೆ ಆಗಿದೆ. ಸಾರಿಗೆ ನಿಗಮಗಳಲ್ಲಿ 9000 ಹೊಸ ನೇಮಕಾತಿಗೆ ಅನುಮತಿ ಪಡೆಯಲಾಗಿದೆ. ಈವರೆಗೆ 1000 ಅನುಕಂಪದ ಆಧಾರದ ನೇಮಕಾತಿ ನಡೆದಿವೆ. ಸರ್ಕಾರ ಬಂದಾಗ ಸಾರಿಗೆ ಇಲಾಖೆ ವ್ಯಾಪ್ತಿಯಲ್ಲಿದ್ದ ಇದ್ದ ಸವಾಲು ಎದುರಿಸಿ ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಒದಗಿಸಿದ್ದೇವೆ ಎಂದರು.

2000 ಕೋಟಿ ಸಾಲದ ಅಸಲು, ಬಡ್ಡಿ ಸರ್ಕಾರ ಕಟ್ಟುತ್ತೆ

ಕರ್ನಾಟಕ ಸಾರಿಗೆ ಸಂಸ್ಥೆಗಳು ರೂಪಾಯಿ 2000 ಕೋಟಿ ಸಾಲ ತೆಗೆದುಕೊಳ್ಳಲು ಮುಖ್ಯಮಂತ್ರಿಗಳು ಅನುಮತಿ ನೀಡಿದ್ದಾರೆ. ಇಲ್ಲಿ ವಿಶೇಷವೆಂದರೆ ಸದರಿ ಸಾಲದ ಅಸಲು ಮತ್ತು ಬಡ್ಡಿಯನ್ನು ಸರ್ಕಾರವೇ ಭರಿಸುವುದಾಗಿ ತಿಳಿಸಿದೆ. ಪ್ರಸಕ್ತ ಸಾಲಿನ 2025-26ರ ಬಜೆಟ್‌ನಲ್ಲಿ ಸಹ ಸಾರಿಗೆ ಇಲಾಖೆಗೆ ಮಹತ್ವದ ಘೋಷಣೆ ಆಗಿವೆ.

ನೂರಾರು ಸಂಖ್ಯೆಯಲ್ಲಿ ಹಳೆಯ ಬಸ್ಸುಗಳ ನಿಷ್ಕ್ರಿಯಗೊಳಿಸಲೇಬೇಕಾಗಿದೆ. ಪ್ರಯಾಣಿಕರಿಗೆ ಮತ್ತಷ್ಟು ಉತ್ತಮ ಸಾರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಹೊಸ ಬಸ್‌ಗಳ ಸೇರ್ಪಡೆ ಮಾಡುವುದಾಗಿ ಈಗಾಗಲೇ ಅಧಿಕೃತವಾಗಿ ಅವರೇ ರಾಜ್ಯದ ಆಯವ್ಯಯದಲ್ಲಿ ಘೋಷಿಸಿದ್ದಾರೆ ಎಂದರು.

Shakti Scheme Government Approves to get Rs 2000 Cr Loan and Buy 2000 New Buses Ramalinga Reddy

2,000 ಹೊಸ ಬಸ್‌ ಖರೀದಿಗೆ ಸರ್ಕಾರದಿಂದ ಹಣ

2005-2006 ರಲ್ಲಿ ಜಿ.ಸಿ.ಸಿ ಆಧಾರದಲ್ಲಿ ಡೀಸೆಲ್‌ ಬಸ್ಸುಗಳ ಕಾರ್ಯಾಚರಣೆಯು ಸಾರಿಗೆ ಸಂಸ್ಥೆಗಳಲ್ಲಿ ಯಶಸ್ವಿ ಆಗಿಲ್ಲ. ಇದನ್ನು ಸಾರಿಗೆ ಸಚಿವರು, ಮುಖ್ಯಮಂತ್ರಿಗಳವರಿಗೆ ಹಾಗೂ ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ವಿವರಿಸಿದ ನಂತರ, ಸಾರಿಗೆ ಸಂಸ್ಥೆಗಳ ಹಿತ ಕಾಯುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಸಾರಿಗೆ ನಿಗಮಗಳಿಗೆ 1,000 ಬಸ್‌ಗಳನ್ನು ಜಿಸಿಸಿ ಮೂಲಕ ಒದಗಿಸುವ ಬಗ್ಗೆ ಘೋಷಿಸಲಾಗಿದೆ. ಇದೀಗ ಅದನ್ನು ಪರಿಷ್ಕರಿಸಿ 2,000 ಹೊಸ ಬಸ್‌ಗಳನ್ನು ಖರೀದಿಸಲು ಮತ್ತು ಇದಕ್ಕೆ ಬೇಕಾಗಿರುವ ಅನುದಾನವನ್ನು ಸರ್ಕಾರವೇ ಒದಗಿಸಲಾಗುವುದು ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ ಎಂದು ವಿವರಿಸಿದರು.

Take a Poll

ಸಾರಿಗೆ ಇಲಾಖೆಯಲ್ಲಿ ಮಹತ್ವದ ಬದಲಾವಣೆ

ರಾಜ್ಯದಲ್ಲಿ ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಾಗಿದೆ. ಮೊದಲಿದ್ದ ಹಳೆಯ ಬಸ್‌ಗಳ ಬದಲಾಗಿ ಉತ್ತಮ ಬಸ್‌ಗಳನ್ನು ನೀವು ಜವಾಬ್ದಾರಿ ನಮ್ಮ ಮೇಲಿದೆ. ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸಲು ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸುವುದು ಉತ್ತಮವಾದ ಕ್ರಮವಾಗಿದೆ.ನಮ್ಮ ಸರ್ಕಾರದ ಬದ್ಧತೆಯು ಸಾರಿಗೆ ಸಂಸ್ಥೆಗಳ ಹಿತ ಮತ್ತು ಪ್ರಯಾಣಿಕರಿಗೆ ಸಮಗ್ರ ಸಾರಿಗೆ ಸೌಲಭ್ಯ ಒದಗಿಸುತ್ತಿದೆ ಎಂದು ಸಾರಿಗೆ ಇಲಾಖೆಯಲ್ಲಿ ಆದ ಬದಲಾವಣೆಗಳನ್ನು ಅವರು ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+