ಶಕ್ತಿ ಯೋಜನೆ ಪರಿಣಾಮ: ಒಂದೂವರೆ ತಿಂಗಳಲ್ಲೇ ದೇವಸ್ಥಾನಗಳಿಗೆ ಸಂದಾಯವಾದ ಒಂದು ವರ್ಷದ ಕಾಣಿಕೆ ಹಣ- ಯಾವ ದೇಗುಲದಲ್ಲಿ ಎಷ್ಟು ಗೊತ್ತ
ಬೆಂಗಳೂರು, ಜುಲೈ 21: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಜಾರಿಗೊಳಿಸಿರುವ ಶಕ್ತಿ ಯೋಜನೆಯು ರಾಜ್ಯದಲ್ಲಿ ಭಾರೀ ಯಶಸ್ಸು ಕಂಡಿದೆ. ಈ ಮಹತ್ವದ ಯೋಜನೆ ಮೂಲಕ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸಲಾಗುತ್ತಿದೆ. ಜೂನ್ 11 ರಂದು ಘೋಷಣೆಯಾದ ಈ ಯೋಜನೆಯು ರಾಜ್ಯದ ದೇವಸ್ಥಾನಗಳಿಗೆ ಅಪಾರ ಲಾಭ ತಂದುಕೊಟ್ಟಿದೆ.
ಕುತೂಹಲಕರ ಸಂಗತಿ ಎಂದರೆ, ಕರ್ನಾಟಕದ ಪ್ರಸಿದ್ಧ ತೀರ್ಥಕ್ಷೇತ್ರಗಳು ಮಹಿಳೆಯರಿಂದ ತುಂಬಿ ತುಳುಕುತ್ತಿವೆ. ಇದಕ್ಕೆ ಪ್ರತಿಕ್ರಿಯೆಯಾಗಿ ಧರ್ಮಸ್ಥಳದ ಧರ್ಮಾಧಿಕಾರಿಯಾಗಿರುವ ವೀರೇಂದ್ರ ಹೆಗ್ಗಡೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಧನ್ಯವಾದ ಅರ್ಪಿಸಿದ್ದಾರೆ.

ಇಷ್ಟೇ ಅಲ್ಲದೇ, ಶಕ್ತಿ ಯೋಜನೆಯಿಂದ ಉತ್ತರ ಕರ್ನಾಟಕ, ಕರಾವಳಿ ಹಾಗೂ ಹಳೇ ಮೈಸೂರು ಭಾಗದ ದೇವಸ್ಥಾನಗಳ ಹುಂಡಿಗಳು ಮಹಿಳೆಯರು ನೀಡಿರುವ ಕಾಣಿಕೆ ಹಣದಿಂದ ತುಂಬಿ ತುಳುಕುತ್ತಿವೆ.
ಮುಜರಾಯಿ ಇಲಾಖೆಗೆ ಸೇರಿದ ಬಹುತೇಕ ದೇವಸ್ಥಾನಗಳಲ್ಲಿ ಕಾಣಿಕೆ ಹರಿವು ದುಪ್ಪಟ್ಟಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಬಾದಾಮಿ ಬನಶಂಕರಿ, ಮೈಸೂರಿನ ಚಾಮುಂಡೇಶ್ವರಿ, ಹೊರನಾಡ ಅನ್ನಪೂರ್ಣೇಶ್ವರಿ, ಸವದತ್ತಿ ಯಲ್ಲಮ್ಮ, ಹುಲಿಗೆಮ್ಮ, ಕನಕಪುರದ ಕಬ್ಬಾಳಮ್ಮ, ಶ್ರೀರಂಗಪಟ್ಟಣದ ನಿಮಿಷಾಂಬ ಹಾಗೂ ಮೈಲಾರ ದೇವಸ್ಥಾನಗಳಿಗೆ ಭೇಟಿ ನೀಡುವ ಮಹಿಳೆಯರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ ಎಂದು ವರದಿಯಾಗಿದೆ.
ಕಳೆದ ವರ್ಷಪೂರ್ತಿ ಸಂಗ್ರಹವಾದ ಕಾಣಿಕೆಯು ಒಂದೂವರೆ ತಿಂಗಳಲ್ಲೇ ( ಶಕ್ತಿ ಯೋಜನೆ ಆರಂಭವಾದಾಗಿಂದ ) ಸಂದಾಯವಾಗಿದೆ ಎಂದು ಅಂಕಿಅಂಶಗಳು ತಿಳಿಸಿವೆ.

ಕರ್ನಾಟಕದ ಪ್ರಮುಖ ದೇವಸ್ಥಾನಗಳಲ್ಲಿ ಸಂಗ್ರಹವಾದ ಕಾಣಿಕೆ ವಿವರ
ಕುಕ್ಕೆ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ- 2022 ರಲ್ಲಿ 11.13 ಕೋಟಿ ರೂ.ಗಳು- 2023ರ ಜೂ.11ರಿಂದ ಜು.15ರ ವರೆಗೆ 11.16 ಕೋಟಿ ರೂ.ಗಳು
ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ- 2022 ರಲ್ಲಿ 48.01 ಲಕ್ಷ ರೂ. ಗಳು- 2023ರ ಜೂ.11ರಿಂದ ಜು.15ರ ವರೆಗೆ 3.63 ಕೋಟಿ ರೂ. ಗಳು
ಯಡಿಯೂರು ಸಿದ್ದಲಿಂಗೇಶ್ವರ ದೇವಸ್ಥಾನ- 2022 ರಲ್ಲಿ 1.20 ಕೋಟಿ ರೂ. ಗಳು- 2023ರ ಜೂ.11ರಿಂದ ಜು.15ರ ವರೆಗೆ 1.48 ಕೋಟಿ ರೂ. ಗಳು

ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನ- 2022 ರಲ್ಲಿ 1.05 ಕೋಟಿ ರೂ. ಗಳು- 2023ರ ಜೂ.11ರಿಂದ ಜು.15ರ ವರೆಗೆ 1.27 ಕೋಟಿ ರೂ.ಗಳು
ಕೊಪ್ಪಳ ಜಿಲ್ಲೆ ಹುಲಿಗೆಮ್ಮದೇವಿ ದೇವಸ್ಥಾನ- 2022 ರಲ್ಲಿ 1.02 ಕೋಟಿ ರೂ. ಗಳು- 2023ರ ಜೂ.11ರಿಂದ ಜು.15ರ ವರೆಗೆ 1.41 ಕೋಟಿ ರೂ.ಗಳು
ಬೆಂಗಳೂರಿನ ಬನಶಂಕರಿ ದೇವಸ್ಥಾನ- 2022 ರಲ್ಲಿ 65.82 ಲಕ್ಷ ರೂ. ಗಳು- 2023ರ ಜೂ.11ರಿಂದ ಜು.15ರ ವರೆಗೆ 83.64 ಲಕ್ಷ ರೂ.ಗಳು
ದಕ್ಷಿಣ ಕನ್ನಡದ ಮಹಾಲಿಂಗೇಶ್ವರ ದೇವಸ್ಥಾನ- 2022 ರಲ್ಲಿ 43.33 ಲಕ್ಷ ರೂ. ಗಳು- 2023ರ ಜೂ.11ರಿಂದ ಜು.15ರ ವರೆಗೆ 48.09 ಲಕ್ಷ ರೂ.ಗಳು

ಶ್ರೀರಂಗಪಟ್ಟಣ ನಿಮಿಷಾಂಬ ದೇವಿ ದೇವಸ್ಥಾನ- 2022 ರಲ್ಲಿ 20.76 ಲಕ್ಷ ರೂ. ಗಳು- 2023ರ ಜೂ.11ರಿಂದ ಜು.15ರ ವರೆಗೆ 27.98 ಲಕ್ಷ ರೂ.ಗಳು
ಕನಕಪುರ ಕಬ್ಬಾಳಮ್ಮ ದೇವಸ್ಥಾನ- 2022 ರಲ್ಲಿ 13.96 ಲಕ್ಷ ರೂ. ಗಳು- 2023ರ ಜೂ.11ರಿಂದ ಜು.15ರ ವರೆಗೆ 19.64 ಲಕ್ಷ ರೂ.ಗಳು
ರಾಮನಗರದ ಶ್ರೀ ಅಪ್ರಮೇಯಸ್ವಾಮಿ ದೇವಸ್ಥಾನ- 2022 ರಲ್ಲಿ 3.64 ಲಕ್ಷ ರೂ. ಗಳು- 2023ರ ಜೂ.11ರಿಂದ ಜು.15ರ ವರೆಗೆ 5.99 ಲಕ್ಷ ರೂ.ಗಳು

ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನ- 2022 ರಲ್ಲಿ 2.14 ಲಕ್ಷ 2.14 ಲಕ್ಷ- 2023ರ ಜೂ.11ರಿಂದ ಜು.15ರ ವರೆಗೆ 5.05 ಲಕ್ಷ ರೂ.ಗಳು
-
ಬೆಂಗಳೂರಿನಲ್ಲಿ ದೇಶದ ಮೊದಲ ಮನೋರೋಗ ಅಧ್ಯಯನದ ಡಿಜಿಟಲ್ 'ಕಾಮ್-ಬ್ರೈನ್' ಲೋಕಾರ್ಪಣೆ -
ಮಾರ್ಚ್ 26ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
ಮಾರ್ಚ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ರಾಜ್ಯದ ಕಾರಾಗೃಹ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯಕೀಯ ಸಿಬ್ಬಂದಿ ಹುದ್ದೆಗಳ ಭರ್ತಿಗೆ ಸರ್ಕಾರದ ಮಹತ್ವದ ಆದೇಶ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ












Click it and Unblock the Notifications