ಪಂಚಮಸಾಲಿ ಮೀಸಲಾತಿಗೆ ಡೆಡ್ ಲೈನ್ ಸರಿಯಲ್ಲ: ಸಿಸಿ ಪಾಟೀಲ್
ಬೆಂಗಳೂರು, ಜನವರಿ 7: ಪಂಚಮಸಾಲಿ ಮೀಸಲಾತಿ ಸಂಬಂಧಿಸಿದಂತೆ ಡೆಡ್ ಲೈನ್ ನೀಡುವುದು ಸರಿಯಲ್ಲ ಎಂದು ಸಚಿವ ಸಿ.ಸಿ ಪಾಟೀಲ್ ಹೇಳಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿ ಅವರು, ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಬನ್ನಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಚರ್ಚೆ ಮಾಡಿ ಎಂದು ಸಚಿವ ಸಿಸಿ ಪಾಟೀಲ್ ಅವರು ಬಸವ ಜಯಮೃತ್ಯುಂಜಯ ಸ್ವಾಮೀಜಿಗೆ ಆಹ್ವಾನ ನೀಡಿದರು.
ಇನ್ನೂ ಜಯಮೃತುಂಜಯ ಸ್ವಾಮೀಜಿ ಹೋರಾಟವನ್ನು ನಾನು ಮೆಚ್ಚುತ್ತೇನೆ. ಅವರ ಪಾದಯಾತ್ರೆಗೆ ನಾವು ಸಹಕಾರ ಕೊಟ್ಟಿದ್ದೇವು. ಅಂದಿನ ಗೃಹ ಸಚಿವರು ಇಂದಿನ ಮುಖ್ಯಮಂತ್ರಿಗಳು ಸಹ ಅವರ ಪಾದಯಾತ್ರೆಗೆ ಸಹಕಾರ ಕೊಟ್ಟಿದ್ದರು. ನಾನು ಸಚಿವನಾಗಿ ಸಹಕಾರ ಕೊಟ್ಟಿದ್ದೆ ಎಂದರು.

ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾದ ಮೇಲೆ ಜಯಪ್ರಕಾಶ್ ಹೆಗ್ಡೆ ಅವರ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ರಚನೆ ಮಾಡಿದರು. ಜಯಪ್ರಕಾಶ್ ಹೆಗ್ಡೆ ಅವರು ಅಧ್ಯಯನ ನಡೆಸಿ ಮಧ್ಯಂತರ ವರದಿಯನ್ನ ಸಲ್ಲಿಕೆ ಮಾಡಿದ್ರು. ಅವರು ವರದಿ ನೀಡುವಿಕಯಲ್ಲಿ ವಿಳಂಬವಾಗಿದೆ ಅದನ್ನ ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಕೋವಿಡ್ ಕಾರಣ ವಿಳಂಬವಾಗಿದೆ. ತದನಂತರ ಬೆಳಗಾವಿಯಲ್ಲಿ ಮಧ್ಯಂತರ ವರದಿಯನ್ನು ನೀಡಿದ್ದ, ಯಾರಿಗೂ ಅನ್ಯಾಯವಾಗದಂತೆ ಪಂಚಮಸಾಲಿ ಸಮುದಾಯಕ್ಕೆ 2Dಯನ್ನು ನೀಡಲಾಗಿದೆ ಎಂದರು.
ಸಮುದಾಯದ ನಾಯಕರ ಜೊತೆ ನಡೆದ ಸಭೆಯಲ್ಲಿ ಸಿಎಂ ಮನವರಿಕೆ ಮಾತುಗಳನ್ನ ಹೇಳಿದ್ದಾರೆ. ಸ್ವಾಮೀಜಿಗೆ ಎಲ್ಲೋ ಒಂದು ಕಡೆ ವಿಳಂಬವಾಗಿತ್ತೆ ಅನ್ನೋ ಭಾವನೆ ಬಂದಿರಬಹುದು. ಚುನಾವಣಾ ನೀತಿ ಸಂಹಿತೆ ಬಂದರೆ ಮೀಸಲಾತಿ ವಿಳಂಬವಾಗುತ್ತೆ ಅಂದುಕೊಂಡಿರಬೇಕು ಎಂದರು.
ಇದೀಗ ಮೀಸಲಾತಿ ವಿಚಾರವಾಗಿ ಜಯಮೃತುಂಜಯ ಸ್ವಾಮೀಜಿ ಅವರ ಡೆಡ್ ಲೈನ್ ಸರಿ ಅಲ್ಲ. ನೀವು ಯಾವತ್ತು ಹೇಳ್ತೋರೋ ಅವತ್ತು ಮುಖ್ಯಮಂತ್ರಿಗಳೊಡನೆ ಸಭೆ ಮಾಡೋಣ. ಮೀಸಲಾತಿಗೆ ಸಂಬಂಧಿಸಿದಂತೆಮುಖ್ಯಮಂತ್ರಿಗಳು ಪ್ರಾಮಾಣಿಕವಾಗಿ ಹೆಜ್ಜೆಯನ್ನು ಇಡುತ್ತಿದ್ದಾರೆ. ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಯಾವುದೇ ಅನ್ಯಾಯವಾಗುವುದಿಲ್ಲ. ಯತ್ನಾಳ್ ಸಹ ಸಿಎಂ ಜೊತೆ ಆತ್ಮೀಯವಾಗಿದ್ದಾರೆ. ನಾನೇ ಮುಖ್ಯಮಂತ್ರಿ ಯಾಗಿದ್ರು 24 ಗಂಟೆಯಲ್ಲಿ ಕೊಡೋಕೆ ಆಗುತ್ತಾ? ಎಂದು ಪ್ರಶ್ನಿಸಿದರು.

ಸ್ಯಾಂಟ್ರೋ ರವಿ ಯಾರು ನಂಗೆ ಗೊತ್ತಿಲ್ಲ
ಇನ್ನು ಸ್ಯಾಂಟ್ರೋ ರವಿ ಜೊತೆ ಬಿಜೆಪಿ ನಾಯಕರು ಸಂಪರ್ಕ ವಿಚಾರವಾಗಿ ಮಾತನಾಡಿ, ಸ್ಯಾಂಟ್ರೋ ರವಿ ಯಾರು ನಂಗೆ ಗೊತ್ತಿಲ್ಲ. ನಿನ್ನೆ ಅವರ ಹೆಸರನ್ನು ನಾನು ಕೇಳಿದ್ದು ಎಂದು ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್ ಹೇಳಿದರು. ಅಲ್ಲದೇ ರವಿ ಕೆಕೆ ಗೆಸ್ಟ್ ಹೌಸ್ ರಲ್ಲಿ ಉಳಿದುಕೊಂಡಿದ್ದರು. ಆದರೆ ಕೆಕೆ ಗೆಸ್ಟ್ ಹೌಸ್ ಡಿಪಿಆರ್ ವ್ಯಾಪ್ತಿಗೆ ಬರುತ್ತೆ. ನನ್ನ ಕ್ಷೇತ್ರದವರು ಯಾರಾದ್ರು ಬೆಂಗಳೂರಲ್ಲಿ ಆಸ್ಪತ್ರೆಗೆ ಅಂತ ಬಂದ್ರೆ ಅವರಿಗೆ ಎರಡು ದಿವಸಕ್ಕೆ ಕಾವೇರಿ ಗೆಸ್ಟ್ ಹೌಸ್ ಕೊಡಸಿದ್ದೇನೆ ಅಷ್ಟೇ ಎಂದರು.
ಪ್ರಭಾವಿ ರಾಜಕಾರಣಿಗಳ ಜೊತೆ ಸ್ಯಾಂಟ್ರೋ ರವಿ ಫೋಟೋ ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ಉಳಿದುಕೊಂಡಿದ್ದರು. ವಿವಾದದ ಹಿನ್ನಲೆಯಲ್ಲಿ ಲೋಕೋಪಯೋಗಿ ಅಧೀನದಲ್ಲಿ ಇರುವ ಕಾವೇರಿ ಗೆಸ್ಟ್‌ಹೌಸ್ ನಲ್ಲಿ ಉಳಿಕೊಂಡವರ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಗೆಸ್ಟ್ ಹೌಸ್ ನಲ್ಲಿ ಉಳಿದುಕೊಂಡವರ ವರದಿಯನ್ನು ಲೋಕೋಪಯೋಗಿ ಇಲಾಖೆ ಕೇಳಿದೆ.
ಗೆಸ್ಟ್ ಹೌಸ್ ನಲ್ಲಿ ಯಾರೆಲ್ಲಾ ಇದ್ದಾರೆ? ಎಷ್ಟು ಸಮಯದಿಂದ ಇದ್ದಾರೆ ಎಂಬ ಮಾಹಿತಿ ನೀಡಲು ಸೂಚನೆ ನೀಡಲಾಗಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ ಪಾಟೀಲ್ ತಿಳಿಸಿದರು.












Click it and Unblock the Notifications