ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಗೆ ಅಶೋಕ್ ಹಾರನಹಳ್ಳಿ ಬಾಸ್

|
Google Oneindia Kannada News

ಬೆಂಗಳೂರು, ಡಿ 20: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾಗಿ ಹಿರಿಯ ವಕೀಲ ಮತ್ತು ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಆಯ್ಕೆಯಾಗಿದ್ದಾರೆ. ಭಾನುವಾರ (ಡಿ 19) ಎರಡನೇ ಹಂತದ ಮತದಾನ ನಡೆದ ನಂತರ ಮತಎಣಿಕೆ ನಡೆದಿದೆ.

ಇಡೀ ಚುನಾವಣೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ರಾಜ್ಯಾದ್ಯಂತ ಕೇವಲ ಶೇ. 25ರಷ್ಟು ಮಾತ್ರ ಮತದಾನವಾಗಿತ್ತು. ಒಟ್ಟು 41 ಸಾವಿರ ಮತದಾರರ ಪೈಕಿ 10,711 ಮತಗಳಷ್ಟೇ ಚಲಾವಣೆಯಾಗಿದ್ದವು. ಮುಂದಿನ ಮೂರು ವರ್ಷಕ್ಕೆ ಹಾರನಹಳ್ಳಿಯವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಹಾರನಹಳ್ಳಿಯವರು 455 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರೆ, ಇವರ ಪ್ರತಿಸ್ಪರ್ಧಿ ಮತ್ತು ಉದ್ಯಮಿಯೂ ಆಗಿರುವ ಎಸ್.ರಘುನಾಥ್ ಅವರಿಗೆ 3,969 ಮತ್ತು ಆರ್. ಲಕ್ಷ್ಮೀಕಾಂತ್ ಅವರಿಗೆ 2,239 ಮತಗಳು ಬಿದ್ದಿದ್ದಾವೆ.

Senior Advocate Ashok Harnahalli Elected As President Of Akhila Karnataka Brahmana Mahasabha

ನಗರದ ಶಂಕರಪುರದಲ್ಲಿರುವ ಚಂದ್ರಶೇಖರ ಭಾರತಿ ಕಲ್ಯಾಣ ಮಂಟಪದಲ್ಲಿ ಎರಡನೇ ಹಂತದ ಮತದಾನ ನಡೆದಿತ್ತು. ಬ್ರಾಹ್ಮಣ ಮಹಾಸಭಾವು ಬೆಂಗಳೂರಿನಲ್ಲಿ ಅತಿಹೆಚ್ಚು ಮತದಾರರನ್ನು ಹೊಂದಿದೆ. ಹಾಗಾಗಿ, ಭಾರೀ ಪೊಲೀಸ್ ಬಂದೋಬಸ್ತ್ ಅನ್ನು ಮಾಡಲಾಗಿತ್ತು.

ಮೊದಲ ಹಂತದ ಮತದಾನ ಡಿಸೆಂಬರ್ ಹನ್ನೆರಡರಂದು ನಡೆದಿತ್ತು. ಮೈಸೂರು, ಶಿವಮೊಗ್ಗ, ಹಾಸನ ಮತ್ತು ರಾಯಚೂರು ಕೇಂದ್ರದಲ್ಲಿ ನಡೆದಿತ್ತು. ಎರಡನೇ ಹಂತದಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ ಮತ್ತು ತುಮಕೂರಿನ ಜಿಲ್ಲೆಗಳಿಂದ ಮತದಾನ ನಡೆದಿತ್ತು.

ಚುನಾವಣೆ ಕೇಂದ್ರ ಇರದ ಜಿಲ್ಲೆಯ ಮತದಾರರು ಇನ್ನೊಂದು ಕೇಂದ್ರಕ್ಕೆ ತೆರಳಿ ಮತದಾನ ನಡೆಸಬೇಕಾಗಿದ್ದರಿಂದ, ಮತದಾನದ ಪ್ರಮಾಣ ಕಮ್ಮಿಯಾಗಲು ಕಾರಣವಾಗಿದೆ. ಕಳೆದ ಬಾರಿಯೂ ಇದೇ ಸಮಸ್ಯೆ ಎದುರಾಗಿದ್ದರೂ, ಬ್ರಾಹ್ಮಣ ಸಭಾ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳದೇ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಅಶೋಕ್‌ ಹಾರನಹಳ್ಳಿ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಅವರು ತಕ್ಷಣವೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಹಾಸಭಾದ ಕಾರ್ಯಕಾರಿ ಸಮಿತಿ ಮಾಜಿ ಸದಸ್ಯ ಕೆ.ಎನ್‌. ವೆಂಕಟನಾರಾಯಣ ಒತ್ತಾಯಿಸಿದ್ದರು.

Recommended Video

ಇನ್ಮುಂದೆ ಯಾರೂ ಇಮ್ರಾನ್ ಖಾನ್ ವಿರುದ್ಧ ಸುದ್ದಿ ಪ್ರಸಾರ ಮಾಡಂಗಿಲ್ಲ | Oneindia Kannada

English summary
Senior Advocate Ashok Harnahalli Elected As President Of Akhila Karnataka Brahmana Mahasabha. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X