ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರದುರ್ಗ: ಆಡು ಮಲ್ಲೇಶ್ವರ ನಿಸರ್ಗಧಾಮದಲ್ಲಿ ಬೀಜಬಿತ್ತನೆ

ಚಿತ್ರದುರ್ಗ ಪ್ರಾಂತ್ಯದಲ್ಲಿನ ಜನಪ್ರಿಯ ನಿಸರ್ಗ ಧಾಮವಾದ 'ಆಡು ಮಲ್ಲೇಶ್ವರ'ದಲ್ಲಿ ಜೂನ್ 19ರಂದು ಬೀಜ ಬಿತ್ತನೆ ಅಭಿಯಾನ ಕೈಗೊಳ್ಳಲಾಗಿತ್ತು. ಚಿತ್ರದುರ್ಗ ಅನೇಕ ಸಂಘ ಸಂಸ್ಥೆಗಳ ಕಾರ್ಯಕರ್ತರು ಇದರಲ್ಲಿ ಪಾಲ್ಗೊಂಡಿದ್ದರು.

|
Google Oneindia Kannada News

ಚಿತ್ರದುರ್ಗ, ಜೂನ್ 19: ಉತ್ತಿಷ್ಠ ಭಾರತ, ಸಾಮಾಜಿಕ ಅರಣ್ಯ ಇಲಾಖೆ, ಜ್ಞಾನದೀಪ ಹಾಗೂ ವಾಸವಿ ಶಾಲೆ, ಫೋರ್ಟ್ ಸಿಟಿ ರೆಡ್‌ಬುಲ್, ಇನ್ನರ್‌ವೀಲ್ ಕ್ಲಬ್ ಚಿತ್ರದುರ್ಗ, ರೋಟರಿ ಕ್ಲಬ್ ಚಿತ್ರದುರ್ಗ ಇನ್ನು ಅನೇಕ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಆಡುಮಲ್ಲೇಶ್ವರದಲ್ಲಿ ಭಾನುವಾರ ಬೀಜದುಂಡೆಗಳನ್ನು ಬಿತ್ತಲಾಯಿತು.

ಬೀಜದುಂಡೆ, ಕುಡಗೋಲು, ಹಾರೆ, ಸಲಕೆಗಳ ಮೂಲಕ ಆಡುಮಲ್ಲೇಶ್ವರದ ಸುತ್ತಮುತ್ತ ಹತ್ತಾರು ಕಿ.ಮೀ.ಆಸುಪಾಸಿನಲ್ಲಿ ಬೀಜದುಂಡೆಗಳನ್ನು ಪಸರಿಸಿದರು.

ಹಾವೇರಿ: ಮುಂಗಾರು ಕೈಕೊಟ್ಟಿದ್ದಕ್ಕೆ ಹತಾಶೆ; ರೈತನಿಂದ ಬಾಳೆ ತೋಟ ನಾಶಹಾವೇರಿ: ಮುಂಗಾರು ಕೈಕೊಟ್ಟಿದ್ದಕ್ಕೆ ಹತಾಶೆ; ರೈತನಿಂದ ಬಾಳೆ ತೋಟ ನಾಶ

Seed sowing campaign organised in Aadu Malleshwara in Chitradurga

ರೋಟರಿ ಕ್ಲಬ್ ಉಪಾಧ್ಯಕ್ಷ ವಿಶ್ವನಾಥ್ ಮಾತನಾಡುತ್ತ ದಿನದಿಂದ ದಿನೆ ಮರ ಗಿಡಗಳ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಸಮಯಕ್ಕೆ ಸರಿಯಾಗಿ ಮಳೆಯಾಗುತ್ತಿಲ್ಲ. ಇದರಿಂದ ಸಕಲ ಜೀವರಾಶಿಗಳು ಕುಡಿಯುವ ನೀರಿಗೆ ಪರಿತಪಿಸುವಂತಾಗಿದೆ. ರೈತಾಪಿ ವರ್ಗ ಕೂಡ ಬೆಳೆಯಿಲ್ಲದೆ ಕಂಗಾಲಾಗಿದ್ದಾರೆ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಬೀಜದ ಉಂಡೆಗಳನ್ನು ಬಿತ್ತುವ ಕಾರ್ಯಕ್ಕೆ ಮುಂದಾಗಿದ್ದೇವೆ. ಇದರಿಂದ ಇಂದಲ್ಲ ನಾಳೆ ಪರಿಸರಕ್ಕೆ ಉತ್ತಮ ಕೊಡುಗೆ ನೀಡಿದಂತಾಗುತ್ತದೆ ಎಂದು ಹೇಳಿದರು.

ಸಾಮಾಜಿಕ ಅರಣ್ಯ ಇಲಾಖೆಯ ಡಿ.ಎಫ್.ಓ., ಮಳವಳ್ಳಿ ಮಾತನಾಡುತ್ತ. ಪರಿಸರವನ್ನು ಸಂರಕ್ಷಿಸುವ ಜಾಗೃತಿ ಪ್ರತಿಯೊಬ್ಬರಲ್ಲಿಯೂ ಮೂಡಿದಾಗ ಮಾತ್ರ ಮರಗಿಡಗಳನ್ನು ನಾಶವಾಗದಂತೆ ಕಾಪಾಡಿಕೊಳ್ಳಬಹುದು. ಬರದನಾಡು ಚಿತ್ರದುರ್ಗದಲ್ಲಿ ಹೆಚ್ಚು ಹೆಚ್ಚು ಮರ ಗಿಡಗಳನ್ನು ನೆಟ್ಟು ಪೋಷಿಸಿದಾಗ ಮಾತ್ರ ಪ್ರಕೃತಿಗೆ ಏನಾದರೂ ಕೊಡುಗೆ ನೀಡಿದಂತಾಗುತ್ತದೆ ಎಂದರು.

ಮಡಿಕೇರಿಯಲ್ಲಿ ಭತ್ತದ ಬೆಳೆ ಕುಂಠಿತವಾಗಿದ್ದು ಯಾಕೆ?ಮಡಿಕೇರಿಯಲ್ಲಿ ಭತ್ತದ ಬೆಳೆ ಕುಂಠಿತವಾಗಿದ್ದು ಯಾಕೆ?

ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ರಾಜೇಶ್ವರಿಸಿದ್ದರಾಂ, ನಾಗಭೂಷಣ್, ಜ್ಯೋತಿಲಕ್ಷ್ಮಣ್, ವಾಸವಿ ವಿದ್ಯಾಸಂಸ್ಥೆಯ ಸುರೇಶ್‌ರಾಜು, ಲಕ್ಷ್ಮಣ್, ಜ್ಞಾನದೀಪ ಹಾಗೂ ವಾಸವಿ ಶಾಲೆ ಮಕ್ಕಳು, ಸಾಮಾಜಿಕ ಅರಣ್ಯ ಇಲಾಖೆ ಸಿಬ್ಬಂದಿಗಳು ಬೀಜದುಂಡೆ ಪ್ರಸರಣದಲ್ಲಿ ಪಾಲ್ಗೊಂಡಿದ್ದರು.
ಆಡುಮಲ್ಲೇಶ್ವರದ ಸುತ್ತಮುತ್ತ ಅರಣ್ಯ ಪ್ರದೇಶದಲ್ಲಿ ಒಂದು ಲಕ್ಷದಷ್ಟು ಬೀಜದ ಉಂಡೆಗಳನ್ನು ಬಿತ್ತಲಾಯಿತು

English summary
To increase the number of trees in Chitradurga district's natural habitat Aadu Malleshwara, 'seed sowing campaign' was organised by various institutions on June 19, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X