India
 • search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ: 2021-22ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಇಲ್ಲಿದೆ

|
Google Oneindia Kannada News

ಬೆಂಗಳೂರು, ಜೂನ್ 05: ಶಿಕ್ಷಣ ಇಲಾಖೆಯು ಕೊರೊನಾ ಭೀತಿ ನಡುವೆಯೇ 2021-22ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಇಡೀ ವರ್ಷದ ವೇಳಾಪಟ್ಟಿ ಪ್ರಕಟವಾಗಿದ್ದು, ಈ ವರ್ಷ ಜುಲೈ 1 ರಿಂದ ಮುಂದಿನ ವರ್ಷ ಅಂದರೆ 2022ರ ಏಪ್ರಿಲ್ 30ವರೆಗೆ ಶಾಲೆಗಳು ನಡೆಯಲಿದೆ.

ಕ್ರಿಸ್‍ಮಸ್ ರಜೆಯನ್ನು ನೀಡಿ ವಿದ್ಯಾರ್ಥಿಗಳಿಗೆ ಬೋಧನಾ ಕಲಿಕೆಗೆ ಸಮಸ್ಯೆ ಆಗದಂತೆ ವೇಳಾಪಟ್ಟಿ ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

2021-22 ನೇ ಸಾಲಿನಲ್ಲಿ ಸುಮಾರು 223 ದಿನಗಳು ಬೋಧನೆ ಲಭ್ಯವಾಗಲಿವೆ. ಈ ವರ್ಷ 10 ದಿನ ದಸರಾ ರಜೆ, 27 ದಿನ ಬೇಸಿಗೆ ರಜೆ ವಿದ್ಯಾರ್ಥಿಗಳಿಗೆ ಸಿಗಲಿದೆ. ದಾಖಲಾತಿ ಪ್ರಕ್ರಿಯೆ ಜೂನ್ 15 ರಿಂದ ಪ್ರಾರಂಭವಾಗಲಿದ್ದು, ಆಗಸ್ಟ್ 30ರ ಒಳಗೆ ದಾಖಲಾತಿ ಪ್ರಕ್ರಿಯೆ ಮುಗಿಸಲು ಇಲಾಖೆ ಸೂಚನೆ ನೀಡಿದೆ.

ಜುಲೈ ಒಂದರಿಂದ ರಾಜ್ಯದಲ್ಲಿನ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಆರಂಭಿಸಲಾಗುವುದು ಎಂದು ತಿಳಿಸಲಾಗಿದೆ.

ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ ರದ್ದುಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ ರದ್ದು

ಶಿಕ್ಷಣ ಇಲಾಖೆ ನೀಡಿರುವ ವೇಳಾಪಟ್ಟಿ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ ಅನ್ವಯ ಆಗಲಿದೆ. ವೇಳಾಪಟ್ಟಿ ತಾತ್ಕಾಲಿಕವಾಗಿದ್ದು, ಕೊರೊನಾ ನಿಯಂತ್ರಣಕ್ಕೆ ಬಾರದಿದ್ದರೆ ವೇಳಾಪಟ್ಟಿ ಬದಲಾವಣೆ ಆಗುವ ಸಾಧ್ಯತೆ ಇದೆ. ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ, ಸರ್ಕಾರ ನಿಗದಿಪಡಿಸಿದ ವಿವಿಧ ಜಯಂತಿಗಳನ್ನು ಆಚರಣೆ ಮಾಡಲು ಸೂಚನೆ ನೀಡಲಾಗಿದೆ.

   ಲೆಕ್ಕ ಕೊಟ್ಟು DC Rohini Sindhuri ತಿರುಗೇಟು ಕೊಟ್ಟ Shilpa Nag | Oneindia Kannada

   - ಜುಲೈ 1 ರಿಂದ ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳು ಪ್ರಾರಂಭ ಆಗಲಿವೆ.
   - ಜೂನ್ 15 ರಿಂದ ದಾಖಲಾತಿ ಪ್ರಕ್ರಿಯೆ ಪ್ರಾರಂಭ ಆಗಲಿದ್ದು, ಆಗಸ್ಟ್ 30 ಒಳಗೆ ದಾಖಲಾತಿ ಪ್ರಕ್ರಿಯೆ ಮುಕ್ತಾಯ ಮಾಡಬೇಕು.
   - ಶಾಲೆಗಳ ಮೊದಲ ಅವಧಿ - ಜುಲೈ 1 ರಿಂದ ಅಕ್ಟೋಬರ್ 9 ನಡೆಯಲಿದೆ.
   - ಎರಡನೇ ಅವಧಿ - ಅಕ್ಟೋಬರ್ 21 ರಿಂದ ಏಪ್ರಿಲ್ 30, 2022ರವರೆಗೆ ನಡೆಯಲಿದೆ.
   - ದಸರಾ ರಜೆ- ಅಕ್ಟೋಬರ್ 10 ರಿಂದ ಅಕ್ಟೋಬರ್ 20 ನಿಗಧಿ ಮಾಡಲಾಗಿದೆ.
   - ಬೇಸಿಗೆ ರಜೆ - 2022 ಮೇ 1 ರಿಂದ ಮೇ 28ವರೆಗೆ ನಿಗಧಿಪಡಿಸಲಾಗಿದೆ.

   English summary
   While the focus of the education department remains on holding board examinations, officials are still working out the reopening schedule for the next academic year.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X