ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯಾರ್ಥಿ ಸಾಧನೆಯ ಟ್ರ್ಯಾಕಿಂಗ್ ವ್ಯವಸ್ಥೆಗೆ ಸರ್ವರ್ ಕಾಟ: ಶಿಕ್ಷಕರ ಪರದಾಟ..!

|
Google Oneindia Kannada News

ಬೆಂಗಳೂರು, ಜೂನ್ 06: ಕರ್ನಾಟಕದಲ್ಲಿ ಶಾಲೆಗಳು ಪ್ರಾರಂಭವಾಗಿದೆ. ಎರಡು ವರ್ಷಗಳಿಂದ ಶಾಲೆಗಳಲ್ಲಿ ಮಕ್ಕಳಿಲ್ಲದೇ ಬಿಕೋ ಎನ್ನುತ್ತಿತ್ತು. ಇದೀಗ ಶಾಲೆಗಳಲ್ಲಿ ಮಕ್ಕಳು ಗಿಜಿಗುಡಲು ಪ್ರಾರಂಭಿಸಿದ್ದಾರೆ. ಮಕ್ಕಳು ಸಹ ವಲಸೆ ಹಕ್ಕಿಗಳಂತೆ ಬೇರೆ ಬೇರೆ ಶಾಲೆಗೆ ಸೇರಿದ್ದಾರೆ. ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳಲ್ಲಿ ತಮ್ಮ ದಾಖಲೆಯನ್ನು ಮಾಡಿಕೊಂಡಿದ್ದಾರೆ. ಆದರೆ ಶಾಲೆಗಳಲ್ಲಿ ವರ್ಗಾವಣೆ ಪತ್ರಕ್ಕಾಗಿ ಅರ್ಜಿಯನ್ನು ಕೊಟ್ಟಿದ್ದರೂ ವರ್ಗಾವಣೆ ಪತ್ರ ಸಿಗುತ್ತಿಲ್ಲ. ಇದಕ್ಕೆ ಕಾರಣವೇ ಸರ್ವರ್ ಪ್ರಾಬ್ಲಂ. ಮಕ್ಕಳ ಮಾಹಿತಿಯನ್ನು ತುಂಬಲು ಸಾಧ್ಯವಾಗದೇ ಶಿಕ್ಷಕರು ಪರದಾಡುತ್ತಿದ್ದಾರೆ.

ಶಾಲೆಗಳಲ್ಲಿ ಮಕ್ಕಳನ್ನು ಒಂದು ವ್ಯವಸ್ಥೆಯಲ್ಲಿ ತರಲು ಶಿಕ್ಷಣ ಇಲಾಖೆ SATS (Student achievement tracking system) ವ್ಯವಸ್ಥೆ ಜಾರಿಗೆ ತಂದಿದೆ. ವಿದ್ಯಾರ್ಥಿಗಳ ಸಂಪೂರ್ಣ ಮಾಹಿತಿ, ವಿದ್ಯಾರ್ಥಿಗಳಿಗೆ ಒಂಬತ್ತು ಅಂಕಿಯ ಸ್ಯಾಟ್ಸ್ ಸಂಖ್ಯೆ, ವಿದ್ಯಾರ್ಥಿಯ ಹಾಜರಾತಿ , ಗೈರು ಹಾಜರಿ, ವಿದ್ಯಾರ್ಥಿಯ ಗಳಿಸಿದ ಅಂಕಗಳ ಆಧಾರದಲ್ಲಿ ಗ್ರೇಡ್ ಸೇರಿದಂತೆ ಎಲ್ಲ ಮಾಹಿತಿ ಸ್ಯಾಟ್ಸ್ ನಲ್ಲಿ ಸಿಗಲಿದೆ.

ವಿದ್ಯಾರ್ಥಿಗೆ ಸ್ಕಾಲರ್ ಶಿಪ್ ಸಹ ಲಭ್ಯವಾಗಲಿದ್ದು ಆಧಾರ್ ಸಂಖ್ಯೆ , ಜಾತಿ ಪ್ರಮಾಣಪತ್ರದ ಆರ್‌ಡಿ ಸಂಖ್ಯೆ, ವಿದ್ಯಾರ್ಥಿಯ ಹೆಸರಿನಲ್ಲಿ ಮಾಡಿಸಿರುವ ಆದಾಯ ಪ್ರಮಾಣ ಪತ್ರದ ವಿವರ, ಆಧಾರ್ ನಂಬರ್ ಲಿಂಕ್ ಆಗಿರುವ ಬ್ಯಾಂಕ್ ಅಂಕೌಂಟ್ ನಂಬರ್ ವಿವರ ಸೇರಿದಂತೆ ವಿದ್ಯಾರ್ಥಿಯ ಪ್ರತಿಯೊಂದು ವಿವರವನ್ನು ಶಾಲೆಗಳು ಸ್ಯಾಟ್ಸ್ ನಲ್ಲಿ ಎಂಟ್ರಿ ಮಾಡಬೇಕಿದೆ.

ಶಾಲಾ ಸಮಯದಲ್ಲಿ ಎಂಟ್ರಿ ಬಲುಕಷ್ಟ

ಶಾಲಾ ಸಮಯದಲ್ಲಿ ಎಂಟ್ರಿ ಬಲುಕಷ್ಟ

ಮಕ್ಕಳ ಮಾಹಿತಿಯನ್ನು ಸ್ಯಾಟ್ಸ್‌ನಲ್ಲಿ ಎಂಟ್ರಿ ಮಾಡಬೇಕು. ಸ್ಯಾಟ್ಸ್‌ನಲ್ಲಿ ಎಂಟ್ರಿ ಮಾಡಲು ಬೇಕಾದ ದಾಖಲೆಗಳೆಲ್ಲವೂ ಶಾಲೆಯಲ್ಲೇ ಇರುತ್ತದೆ. ಆದರೆ, ಸ್ಯಾಟ್ಸ್‌ನಲ್ಲಿ ಎಂಟ್ರಿ ಮಾಡಲು ಕುಳಿತರೆ ತಲೆಸುತ್ತು ಬರೋದು ಗ್ಯಾರಂಟಿ. ಡೇಟಾವನ್ನು ಎಂಟ್ರಿಮಾಡಬೇಕಾದ ಸಂದರ್ಭದಲ್ಲಿ ಕೆಲವೊಂದು ಅಂಶಗಳನ್ನು ತೆಗೆದುಕೊಂಡು ಅಪ್‌ಡೇಟ್ಮಾಡುವ ಸಮಯದಲ್ಲಿ ಸುತ್ತಲೂ ಪ್ರಾರಂಭಿಸಿದರೇ ಮುಗಿಯಿತು. ಮತ್ತೆ ಮೊದಲ ಸ್ಥಾನಕ್ಕೆ ಬಂದು ಕುಳಿತುಬಿಡುತ್ತೆ. ಮರಳಿ ಯತ್ನವ ಮಾಡು ಎಂಬಂತೆ ಎಲ್ಲವನ್ನು ಎಂಟ್ರಿಮಾಡಬೇಕು. ಹಾಗೇ ಮಾಡಿದರು ಸಮಸ್ಯೆ ಬಗೆಹರಿಯುತ್ತೆ ಅನ್ನೋ ಗ್ಯಾರಂಟಿ ಇಲ್ಲಾ. ಇದರಿಂದಾಗಿ ಶಾಲಾ ಸಮಯದಲ್ಲಿ ಸ್ಯಾಟ್ಸ್ ಎಂಟ್ರಿ ಕೆಲಸ ಬಹುಕಷ್ಟವಾಗ್ತಿದೆ.

ಹಳೇಯ ವಿದ್ಯಾರ್ಥಿಗಳನ್ನು ಮರುದಾಖಲೆ ಮಾಡಬೇಕು

ಹಳೇಯ ವಿದ್ಯಾರ್ಥಿಗಳನ್ನು ಮರುದಾಖಲೆ ಮಾಡಬೇಕು

ಶಾಲೆಗೆ ಹೊಸ ದಾಖಲಾತಿಯನ್ನು ಹೊಂದಿದ ಮಕ್ಕಳ ಡೇಟಾವನ್ನು ಎಂಟ್ರಿ ಮಾಡಿ ಸ್ಯಾಟ್ಸ್ ನಂಬರ್ ಅನ್ನು ಸೃಜಿಸಬೇಕಿದೆ. ಸ್ಯಾಟ್ಸ್ ನಲ್ಲಿ ಎಂಟ್ರಿಯಾದ ಬಳಿಕ ಆ ಮಗು ಶಾಲೆಗೆ ಸೇರಿದ್ದರ ಬಗ್ಗೆ ಮತ್ತೊಂದು ಅಧಿಕೃತ ದಾಖಲೆಯಾದಂತಾಗುತ್ತದೆ. ಇನ್ನು ಹಳೆಯ ವಿದ್ಯಾರ್ಥಿಗಳಿದ್ದರೇ ಆ ಮಕ್ಕಳನ್ನು ಪ್ರಮೋಷನ್ ಟು ಅಡ್ಮಿಷನ್ ಎಂದು ಮರುದಾಖಲೆಯನ್ನು ಮಾಡಿಕೊಳ್ಳಬೇಕಿದೆ. ಅಂದರೆ ಪ್ರತಿಯೊಂದು ಮಗುವಿನ ಹೆಸರಿನ ಮುಂದೆ ಅಡ್ಮಿಟ್ ಎಂಬ ಬಟನ್ ಇದ್ದು ಇದನ್ನು ಕ್ಲಿಕ್ ಮಾಡುವ ಮೂಲಕ ವಿದ್ಯಾರ್ಥಿಯನ್ನು ಮರುದಾಖಲೆ ಮಾಡಿಕೊಳ್ಳಬೇಕಿದೆ.

ವರ್ಗಾವಣೆ ಪತ್ರ ನೀಡದದ್ದಕ್ಕೆ ಶಾಲೆಗಳ ಮುಂದೆ ಗಲಾಟೆ

ವರ್ಗಾವಣೆ ಪತ್ರ ನೀಡದದ್ದಕ್ಕೆ ಶಾಲೆಗಳ ಮುಂದೆ ಗಲಾಟೆ

ಇನ್ನು ಸರ್ವರ್ ಸಮಸ್ಯೆಗಳಿಂದಾಗಿ ಆನ್‌ಲೈನ್ ವರ್ಗಾವಣೆ ಪತ್ರವನ್ನು ನೀಡಲು ಶಾಲೆಗಳಲ್ಲಿ ಸಮಸ್ಯೆಯಾಗುತ್ತಿದೆ. ವರ್ಗಾವಣೆ ಪತ್ರವಿಲ್ಲದೇ ಕೆಲವು ಶಾಲೆಗಳು ದಾಖಲೆಯನ್ನು ಮಾಡಿಕೊಳ್ಳುವುದಿಲ್ಲ ಎನ್ನುತ್ತಿವೆ. ಇನ್ನು ""ಮಕ್ಕಳ ಹಳೇಯ ಶಾಲೆಯವರು ಫೀಸ್ ಕಟ್ಟಿ , ಸರ್ವರ್ ಸಮಸ್ಯೆ ಇದೆ ಎನ್ನುತ್ತಿದ್ದಾರೆ ಎಂದು ಪೋಷಕರೊಬ್ಬರು'' ತಿಳಿಸಿದ್ದಾರೆ. ಇದೇ ಕಾರಣಕ್ಕೆ ಕೆಲವು ಶಾಲೆಗಲ್ಲಿ ಪೋಷಕರು ಮತ್ತು ಮುಖ್ಯೋಪಾದ್ಯಾಯರು, ಆಡಳಿತ ಮಂಡಳಿಯ ನಡುವೆ ವಾಗ್ಯುದ್ದಗಳು ನಡೆಯುತ್ತಿದೆ ಎನ್ನಲಾಗಿದೆ.

ಮಧ್ಯರಾತ್ರಿಯಲ್ಲಿ ಡೇಟಾ ಎಂಟ್ರಿಗೆ ಸೂಚನೆ

ಮಧ್ಯರಾತ್ರಿಯಲ್ಲಿ ಡೇಟಾ ಎಂಟ್ರಿಗೆ ಸೂಚನೆ

""ಶಾಲೆಗಳ ಕ್ಲಸ್ಟರ್ ಮಟ್ಟದ ಸಿಆರ್‌ಪಿಗಳು ಸ್ಯಾಟ್ಸ್ ಪೂರ್ಣಗೊಳಿಸುವಂತೆ ಒತ್ತಡವನ್ನು ಹೇರುತ್ತಿದ್ದಾರೆ. ಸರ್ವರ್ ಸಮಸ್ಯೆಯಿಂದ ಸ್ಯಾಟ್ಸ್ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದರೆ ಮಧ್ಯರಾತ್ರಿಯಲ್ಲಿ ಸ್ಯಾಟ್ಸ್ ಡೇಟಾ ಎಂಟ್ರಿ ಮಾಡುವಂತೆ ಒತ್ತಡವನ್ನು ಹೇರಲಾಗುತ್ತಿದೆ'' ಎಂದು ಸರ್ಕಾರಿ ಶಾಲೆಯ ಶಿಕ್ಷಕರು ಮಾಹಿತಿಯನ್ನು ನೀಡಿದ್ದಾರೆ.

English summary
Karnataka Schools facing Student Achievement Tracking System Problem. Student data could not be completed due to a server problem, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X