ಜುಲೈ 9 ಬುಧವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ... School Holiday
ಕರ್ನಾಟಕ ರಾಜ್ಯದಲ್ಲಿ ಶಾಲಾ & ಕಾಲೇಜು ಶಿಕ್ಷಣ ಅತ್ಯುತ್ತಮವಾಗಿ ನಡೆಯುತ್ತಾ ಇದ್ದು, ಇದೇ ಕಾರಣಕ್ಕೆ ಬೇರೆ ಬೇರೆ ರಾಜ್ಯದಿಂದ ಕೂಡ ಕರ್ನಾಟಕಕ್ಕೆ ಬಂದು ಶಿಕ್ಷಣ ಪಡೆಯುತ್ತಾರೆ. ಅದರಲ್ಲೂ ಇಡೀ ದೇಶದಲ್ಲಿ ಕರ್ನಾಟಕ ರಾಜ್ಯದ ಶಿಕ್ಷಣ ಪದ್ಧತಿ ಅತ್ಯುತ್ತಮವಾಗಿದ್ದು, ರಾಜ್ಯ ಸರ್ಕಾರ ಕೂಡ ಶೈಕ್ಷಣಿಕ ಗುಣಮಟ್ಟದ ಸುಧಾರಣೆಗೆ ಸಾಕಷ್ಟು ಒತ್ತು ನೀಡುತ್ತಿದೆ. ಎಸ್‌ಎಸ್‌ಎಲ್‌ಸಿ & ಪಿಯುಸಿ ಶಿಕ್ಷಣ ವಿಚಾರದಲ್ಲಿ ಕೂಡ ಭಾರಿ ಸದ್ದು ಮಾಡುತ್ತಿದೆ ಕರ್ನಾಟಕದ ಶಿಕ್ಷಣ ಪದ್ಧತಿ. ಹೀಗಿದ್ದಾಗಲೇ, ಕರ್ನಾಟಕದಲ್ಲಿ ಶಾಲಾ & ಕಾಲೇಜುಗಳಿಗೆ ಪದೇ ಪದೇ ರಜೆ ಘೋಷಣೆ?
ಕರ್ನಾಟಕದಲ್ಲಿ ಶಾಲಾ & ಕಾಲೇಜುಗಳಿಗೆ ಒಂದಾದ ನಂತರ ಒಂದು ರಜೆಯನ್ನ ಘೋಷಣೆ ಮಾಡಲಾಗ್ತಿದೆ. ಶಾಲಾ & ಕಾಲೇಜುಗಳಿಗೆ ಬೇಸಿಗೆ ರಜೆ ಅಂತಾನೇ 60 ದಿನ ಅಂದ್ರೆ ಸುಮಾರು 2 ತಿಂಗಳ ಕಾಲ ರಜೆಯನ್ನ ಘೋಷಣೆ ಮಾಡಲಾಗಿತ್ತು. ಹೀಗೆ 60 ದಿನಗಳ ಕಾಲ ರಜೆ ಎಂಜಾಯ್ ಮಾಡಿ ಮತ್ತೆ ಶಾಲಾ & ಕಾಲೇಜುಗಳಿಗೆ ವಿದ್ಯಾರ್ಥಿಗಳು ವಾಪಸ್ ಆಗಿದ್ದಾರೆ. ಕರ್ನಾಟಕ ಸೇರಿದಂತೆ ಇಡೀ ಇಂಡಿಯಾ ಪೂರ್ತಿ ಶಾಲಾ & ಕಾಲೇಜು ರೀ ಓಪನ್ ಅಂದ್ರೆ ಮತ್ತೆ ತೆರೆಯುವ ಮೂಲಕ ಮಕ್ಕಳಿಗೆ ಪಾಠ ಮಾಡಲು ಸಜ್ಜಾಗಿದ್ದವು. ಹೀಗಿದ್ದಾಗಲೇ, ಜುಲೈ 9 ಬುಧವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

ಜುಲೈ 9 ಬುಧವಾರ ಶಾಲಾ & ಕಾಲೇಜುಗಳಿಗೆ ರಜೆ...
ಶಾಲೆ & ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ವಿಚಾರದಲ್ಲಿ ಸರ್ಕಾರಗಳು ಸಾಕಷ್ಟು ಆಲೋಚನೆಯ ಮಾಡುತ್ತವೆ. ಆದರೆ ಅನಿವಾರ್ಯ ಪರಿಸ್ಥಿತಿ ಇದ್ದಾಗ ಶಾಲೆ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಬೇಕು, ಇಂತಹ ಸ್ಥಿತಿ ಎದುರಾಗುತ್ತದೆ. ಈಗ ಶಾಲೆ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ... ಹೀಗಿದ್ದಾಗಲೇ, ಜುಲೈ 9 ಬುಧವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...
ಶಾಲಾ & ಕಾಲೇಜುಗಳಿಗೆ ರಜೆ.. ರಜೆ..?
ಶಾಲೆ & ಕಾಲೇಜುಗಳಿಗೆ ಪದೇ ಪದೇ ರಜೆ ಘೋಷಣೆ ಆಗುತ್ತಿದೆ ಅಂತಾ ವಿದ್ಯಾರ್ಥಿಗಳು ಖುಷಿಯಾಗಿದ್ದರೆ, ಆ ಕಡೆ ಪಾಠಗಳು ಸರಿಯಾಗಿ ನಡೆಸಲು ಆಗುತ್ತಿಲ್ಲ ಅಂತಾ ಶಿಕ್ಷಕರು ಚಿಂತೆ ಮಾಡುವಂತೆ ಆಗಿದೆ. ಮಳೆ ಕಾರಣಕ್ಕೆ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಈಗಾಗಲೇ ಸಾಲು ಸಾಲು ರಜೆ ಘೋಷಣೆ ಮಾಡಿ ಶಾಲೆ & ಕಾಲೇಜು ವಿದ್ಯಾರ್ಥಿಗಳಿಗೆ ಖುಷಿ ಸುದ್ದಿ ನೀಡಲಾಗಿತ್ತು. ಇಂತಹ ಸಮಯದಲ್ಲೇ ಮತ್ತೊಂದು ರಜೆ ಸುದ್ದಿ ಇದೀಗ ಹಬ್ಬಿದೆ, ಅದು ಏನೆಂದರೆ 'ಕಾರ್ಮಿಕ ವಿರೋಧಿ ನೀತಿ ವಿರುದ್ಧ ಜುಲೈ 9 ಬುಧವಾರ ಭಾರತದ ಮೂಲೆ ಮೂಲೆಯಲ್ಲೂ ಪ್ರತಿಭಟನೆ' ಅಂತಾ ಕಾರ್ಮಿಕ ಸಂಘಟನೆಗಳು ಈಗಾಗಲೇ ಹೇಳಿವೆ. ಕೇಂದ್ರದ ವಿರುದ್ಧ ಕರ್ನಾಟಕ, ಬೆಂಗಳೂರು ಸೇರಿದಂತೆ ಇಡೀ ಭಾರತದಲ್ಲಿ ದೊಡ್ಡ ಹೋರಾಟ ನಡೆಸಲಿದ್ದಾರಂತೆ ಕಾರ್ಮಿಕರು.
ಹೀಗೆ ಅಖಿಲ ಭಾರತ ಮುಷ್ಕರಕ್ಕೆ ಕಾರ್ಮಿಕ ಸಂಘಟನೆಗಳು ಇದೀಗ ಕರೆ ನೀಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ಬಂದ್ & ಭಾರತ್ ಬಂದ್ ಆಗುವ ಸಾಧ್ಯತೆ ದಟ್ಟವಾಗಿದೆ. ಕಾರ್ಮಿಕ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆ, ನಮ್ಮ ಬೆಂಗಳೂರು & ಹುಬ್ಬಳ್ಳಿ ಮತ್ತು ಧಾರವಾಡ ಸೇರಿದಂತೆ ಭಾರತದ ಎಲ್ಲಾ ಪ್ರಮುಖ ನಗರಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ತುಂಬಾ ದೊಡ್ಡ ಮಟ್ಟದಲ್ಲೇ ಕಾರ್ಮಿಕರು ಹೋರಾಟ ನಡೆಸಲು ಸಜ್ಜಾಗಿದ್ದು, ಇದೇ ಕಾರಣಕ್ಕೆ ಜುಲೈ 9 ಬುಧವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ ಇದೆ. ಆದರೂ ಈ ಬಗ್ಗೆ ಸಂಜೆ ಅಧಿಕೃತ ಹೇಳಿಕೆ ಹೊರ ಬೀಳುವ ಸಾಧ್ಯತೆ ದಟ್ಟವಾಗಿದ್ದು, ಬಹುತೇಕ ನಾಳೆ ಬಂದ್ & ಭಾರಿ ದೊಡ್ಡ ಪ್ರತಿಭಟನೆ ವಾತಾವರಣ ಕರ್ನಾಟಕ ಸೇರಿದಂತೆ ಕನ್ನಡಿಗರ ರಾಜಧಾನಿ ಬೆಂಗಳೂರಿನಲ್ಲೂ ಸೃಷ್ಟಿಯಾಗುವ ಸಾಧ್ಯತೆ ಇದೆ.
ಭಾರತ್ ಬಂದ್ & ಕರ್ನಾಟಕ ಬಂದ್ ಯಾಕೆ?
ದೇಶದಲ್ಲಿ ಕಾರ್ಮಿಕರ ಹೋರಾಟಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತವೆ, ಹಾಗೇ ಕಾರ್ಮಿಕರು ಹೋರಾಟ ಮಾಡುತ್ತಾರೆ ಅಂದರೆ ದೊಡ್ಡ ಪ್ರತಿಭಟನೆ & ಭಾರತ ಬಂದ್ ಆಗುವುದು ಕೂಡ ಗ್ಯಾರಂಟಿ. ಹೀಗಿದ್ದಾಗಲೇ ಇದೀಗ ಮತ್ತೊಮ್ಮೆ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಮಿಕ ಸಂಘಟನೆಗಳು ಹೋರಾಟ ನಡೆಸಲು & ಆ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಲು ಸಜ್ಜಾಗಿವೆ. ಇದೇ ಕಾರಣಕ್ಕೆ ಜುಲೈ 9 ಬುಧವಾರ ದೇಶದ ಮೂಲೆ ಮೂಲೆಯಲ್ಲೂ ಪ್ರತಿಭಟನೆಗಳು ನಡೆಯಲಿವೆ. ಮತ್ತೊಂದು ಕಡೆ ಬಸ್ & ಸಾರ್ವಜನಿಕ ಸಾರಿಗೆ ವ್ಯವಸ್ಥೆಯೂ ಸೇರಿದಂತೆ, ಫ್ಯಾಕ್ಟರಿಗಳು ಹಾಗೂ ಮೂಲ ಸೌಲಭ್ಯ ವ್ಯವಸ್ಥೆಯಲ್ಲಿ ಭಾರಿ ವ್ಯತ್ಯಾಸ ಆಗುವ ಸಾಧ್ಯತೆ ದಟ್ಟವಾಗಿದೆ. ಮತ್ತೊಂದು ಕಡೆ ಜುಲೈ 9 ಬುಧವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ ಇದ್ದು, ಜುಲೈ 8 ಮಂಗಳವಾರ ಸಂಜೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರ ಬೀಳುವ ಸಾಧ್ಯತೆ ಇದೆ....
ರಜೆ ಸಿಗುತ್ತಾ? ರಜೆ ಸಿಗಲ್ವಾ?
ಜುಲೈ 9 ಬುಧವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಆಗುತ್ತಾ? ಅನ್ನೋ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದ್ದು, ಈವರೆಗೂ ಯಾವುದೇ ಶಾಲೆಗಳಲ್ಲಿ ಅಧಿಕೃತವಾಗಿ ರಜೆ ಘೋಷಣೆ ಆಗಿಲ್ಲ, ಆದರೆ ಪ್ರತಿಭಟನೆ ಬಿಸಿ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿರುವ ಹಿನ್ನೆಲೆ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ. ಇನ್ನು ಮತ್ತೊಂದು ಕಡೆ ಶಾಲಾ ಒಕ್ಕೂಟಗಳು ಬಂದ್ ಬಗ್ಗೆ ಪ್ರತಿಕ್ರಿಯೆ ನೀಡಿವೆ. ಭಾರತ್ ಬಂದ್‌ಗೆ ನಮ್ಮ ಬೆಂಬಲ ಇದೆ, ಆದರೂ ಸರ್ಕಾರಿ & ಖಾಸಗಿ ಶಾಲಾ ಕಾಲೇಜುಗಳು ಎಂದಿನಂತೆ ನಡೆಯುತ್ತೆ ಅಂತಾ ಕೃಪಾ ಸಂಘಟನೆ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿದ್ದಾರೆ. ಮತ್ತೊಂದು ಕಡೆಯಲ್ಲಿ ಕ್ಯಾಮ್ಸ್ ಖಾಸಗಿ ಶಾಲಾ ಸಂಘಟನೆ ಬಂದ್‌ಗೆ ಬೆಂಬಲ ಇಲ್ಲ ಅಂತಾ ತಿಳಿಸಿದ್ದು, ಈ ಬಗ್ಗೆ ಸ್ಪಷ್ಟನೆ ಸಿಕ್ಕಂತೆ ಆಗಿದೆ. ಇನ್ನೊಂದು ಕಡೆ, ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಶಿಕ್ಷಣ ಇಲಾಖೆಯಿಂದ ಸಿಕ್ಕಿಲ್ಲ, ಹೀಗಾಗಿ ಪೋಷಕರು & ಮಕ್ಕಳು ಕಾಯುವಂತೆ ಆಗಿದೆ.












Click it and Unblock the Notifications