ಆಗಸ್ಟ್ 11 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ... School Holiday

ಆಗಸ್ಟ್ 8 ಶುಕ್ರವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಆಗಿತ್ತು, ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಕರ್ನಾಟಕದ ಎಲ್ಲಾ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಇನ್ನು ನಾಳೆ ಶನಿವಾರ & ನಾಡಿದ್ದು ಭಾನುವಾರ ಇರಲಿದೆ. ಇಂತಹ ಸಮಯದಲ್ಲೇ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಬಗ್ಗೆ ಇದೀಗ ಭರ್ಜರಿ ಸುದ್ದಿಯೊಂದು ಹೊರ ಬಿದ್ದಿದೆ. ಈಗಾಗಲೇ ಸಾಲು ಸಾಲು ರಜೆ ಪಡೆಯುತ್ತಿರುವ ಶಾಲಾ & ಕಾಲೇಜುಗಳ ವಿದ್ಯಾರ್ಥಿಗಳಿಗೆ ಖುಷಿ ಆಗುವ ಸುದ್ದಿ ಓಡಾಡುತ್ತಿದೆ. ಹೀಗಿದ್ದಾಗಲೇ, ಆಗಸ್ಟ್ 11 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

ಅಂದಹಾಗೆ ಕರ್ನಾಟಕ ರಾಜ್ಯದಲ್ಲಿ ಶಾಲಾ & ಕಾಲೇಜುಗಳು ಶುರುವಾಗಿ ಸುಮಾರು ಎರಡೂವರೆ ತಿಂಗಳು ಕಳೆದಿದ್ದು, ವಿದ್ಯಾರ್ಥಿಗಳು ಹೊಸ ಪಾಠ ಆರಂಭಿಸಿದ್ದಾರೆ. ಆದರೆ ಹಲವು ಜಿಲ್ಲೆಗಳಲ್ಲಿ ಹಲವು ಕಾರಣಗಳಿಗೆ ಪದೇ, ಪದೇ ರಜೆ ಘೋಷಣೆ ಮಾಡುವ ಪರಿಸ್ಥಿತಿ ಬರುತ್ತಿದೆ. ಇನ್ನು ಆಗಸ್ಟ್ ತಿಂಗಳಲ್ಲಿ ಸಾಲು ಸಾಲು ಹಬ್ಬ ಮತ್ತು ಭಾರತೀಯರ ಹೆಮ್ಮೆಯ ದಿನ ಸ್ವಾತಂತ್ರ್ಯ ದಿನಾಚರಣೆ ಇರುವ ಕಾರಣಕ್ಕೆ ಮುಂದಿನ ವಾರ ಅಂದ್ರೆ ಆಗಸ್ಟ್ 15 ಶುಕ್ರವಾರ ಕೂಡ ರಜೆ ಸಿಗಲಿದೆ. ಇಂತಹ ಸಮಯದಲ್ಲೇ, ಆಗಸ್ಟ್ 11 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

School Holiday May Announce In Karnataka On August 11 Of 2025 For This Reason

ಆಗಸ್ಟ್ 11 ಸೋಮವಾರ ಶಾಲಾ & ಕಾಲೇಜುಗಳಿಗೆ...

ಹೌದು, ರಜೆ.. ರಜೆ.. ರಜೆ.. ಹೀಗೆ ಸಾಲು ಸಾಲು ರಜೆಗಳು ಇದೀಗ ವಿದ್ಯಾರ್ಥಿಗಳಿಗೆ ಅಂತಾನೇ ಕಾಯುತ್ತಾ ಇವೆ. ಶಾಲಾ & ಕಾಲೇಜುಗಳಿಗೆ ಬೇಸಿಗೆ ರಜೆ ಅಂತಾ 60 ದಿನ ಅಂದ್ರೆ ಸುಮಾರು 2 ತಿಂಗಳ ಕಾಲ ರಜೆ ಘೋಷಣೆ ಮಾಡಲಾಗಿತ್ತು. 60 ದಿನಗಳ ಕಾಲ ರಜೆ ಎಂಜಾಯ್ ಮಾಡಿ ಮತ್ತೆ ಶಾಲಾ & ಕಾಲೇಜುಗಳಿಗೆ ವಿದ್ಯಾರ್ಥಿಗಳು ವಾಪಸ್ ಆಗಿದ್ದಾರೆ. ಇಂತಹ ಸಮಯದಲ್ಲೇ 2025 ಜೂನ್ ತಿಂಗಳು & ಜುಲೈ ತಿಂಗಳಲ್ಲಿ ಸಾಲು ಸಾಲಾಗಿ ರಜೆಗಳು ಸಿಗುತ್ತಿವೆ. ಹೀಗಿದ್ದಾಗಲೇ, ಆಗಸ್ಟ್ 11 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

ಕರ್ನಾಟಕದಲ್ಲಿ ಮುಂಗಾರು ಮಳೆ ಆರ್ಭಟ ಜೋರಾಗಿದ್ದು, ಎಲ್ಲೆಲ್ಲೂ ಮಳೆರಾಯನ ಅಬ್ಬರ ಹೆಚ್ಚಾಗುತ್ತಿದೆ. ಹೀಗಾಗಿಯೇ ಒಂದು ಕಡೆ ನದಿಗಳು ತುಂಬಿ ಹರಿದು ಡ್ಯಾಂಗಳಲ್ಲಿ ಕೂಡ ಭಾರಿ ಪ್ರಮಾಣದಲ್ಲಿ ನೀರು ಸಂಗ್ರಹ ಆಗಿದೆ. ಆದರೆ ಈ ಸಮಯದಲ್ಲೇ ಭಾರಿ ಮಳೆ ಬೀಳುತ್ತಿರುವ ಕಾರಣ ಹಲವು ಜಿಲ್ಲೆಗಳ ಶಾಲೆ & ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ಪರಿಸ್ಥಿತಿ ಇದೆ. ಅದರಲ್ಲೂ ಆಗಸ್ಟ್ 11 ಸೋಮವಾರ ಕೂಡ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುವ ಮುನ್ಸೂಚನೆ ಇದ್ದು, ಹೀಗಾಗಿ ಕರ್ನಾಟಕದ ಹಲವು ಜಿಲ್ಲೆಗಳ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ ದಟ್ಟವಾಗಿದೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯಲಿದೆ? ಯಾವೆಲ್ಲಾ ಜಿಲ್ಲೆಗಳ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಆಗಬಹುದು? ಮುಂದೆ ಓದಿ.

ಆಗಸ್ಟ್ 11 ಸೋಮವಾರ ರಜೆ ಘೋಷಣೆ?

ಆಗಸ್ಟ್ 11 ಸೋಮವಾರ ಕರ್ನಾಟಕದ ಹಲವು ಭಾಗಗಳಲ್ಲಿ ಭಾರಿ ಮಳೆ ಸುರಿಯುವ ಕುರಿತು ಮುನ್ಸೂಚನೆ ನೀಡಲಾಗಿದೆ. ಬೆಂಗಳೂರು ಸೇರಿ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡ, ಮಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡ, ಮಲೆನಾಡು ಜಿಲ್ಲೆ ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಭಾಗದಲ್ಲೂ ಭಾರಿ ಮಳೆ ಮುನ್ನೆಚ್ಚರಿಕೆ ನೀಡಲಾಗಿದೆ. ಹಾಸನ, ಮಂಡ್ಯ, ಮೈಸೂರು, ರಾಮನಗರ ಸೇರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಆಗಸ್ಟ್ 11 ಸೋಮವಾರ ಭಾರಿ ಮಳೆ ಬೀಳುವ ಮುನ್ಸೂಚನೆ ಸಿಕ್ಕಿದೆ. ಹೀಗಿದ್ದಾಗ ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳಿಗೂ ಮಳೆ ಕಾಟ ಇರಲಿದ್ದು, ಅತಿಹೆಚ್ಚು ಮಳೆ ಸುರಿಯುವ ಜಿಲ್ಲೆಗಳ ಹಲವು ಭಾಗಗಳಲ್ಲಿ ಆಗಸ್ಟ್ 11 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ ದಟ್ಟವಾಗಿ ಇದೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಅಧಿಕೃತ ಮಾಹಿತಿಗೆ ಆಗಸ್ಟ್ 10 ಭಾನುವಾರ ತನಕ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+