Minister Santosh Lad: ಬಿಜೆಪಿಯವರು ಬೆಂಕಿ ಹಚ್ಚಿ ದೇಶ ಹೊಡೆಯುತ್ತಿದ್ದಾರೆ: ಸಂತೋಷ್ ಲಾಡ್!
ಹುಬ್ಬಳ್ಳಿ, ಜುಲೈ15: ಭಾರತ ದೇಶವನ್ನ ಜೋಡಿಸುತ್ತೇನೆ ಅಂತ ರಾಹುಲ್ ಗಾಂಧಿ ಹೊರಟಿದ್ದಾರೆ ಆದರೆ ಭಾರತೀಯ ಜನತಾ ಪಕ್ಷದವರು ಬೆಂಕಿ ಹಚ್ಚಿ ದೇಶ ಹೊಡೆಯುತ್ತಿದ್ದಾರೆ ಎಂದು ಗಂಭೀರ ಸ್ವರೂಪದ ಆರೋಪ ಮಾಡಿದರು.
ಈ ಕುರಿತು ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷಕ್ಕೆ ಸೋಲಿನ ಭಯ ಇರಬಹುದು ಆದ್ದರಿಂದ ಇನ್ನು ರಾಹುಲ್ ಗಾಂಧಿ ಪ್ರಖ್ಯಾತಿ ಹೆಚ್ಚುತ್ತಿದ್ದು ಮನಸ್ಸು ಹಾಗೂ ಮನುಷ್ಯ ಒಂದಾಗಲಿ ಸಾಮಾಜಿಕ ಸಾಮರಸ್ಯ ಬೆಸೆಯಲಿ. ದೇಶವನ್ನ ಜೋಡಿಸುವ ಕೆಲಸ ನಾ ಮಾಡುವೆ ಎಂದು ರಾಹುಲ್ ಗಾಂಧಿ ಹೊರಟಿದ್ದಾರೆ.

ದೊಡ್ಡ ದೊಡ್ಡ ಉದ್ಯಮಿಗಳಾದ ಅದಾನಿ ವಿರುದ್ಧ ರಾಹುಲ್ ಗಾಂಧಿ ಮಾತನಾಡಲು ಶುರುಮಾಡಿದ್ದೆ ಅನರ್ಹತೆಗೆ ಕಾರಣ. ಆದ್ದರಿಂದ ಅದಾನಿ ಪ್ರಧಾನಿ ನರೇಂದ್ರ ಮೋದಿಗೆ ಏನು ಸಂಬಂಧ ಅಂತಾ ಕೇಳುವುದಕ್ಕೆ ಶುರು ಮಾಡಿದ್ದರು ಆದ್ದರಿಂದ ಆಗ ಅಸಂವಿಧಾನಿಕ ಪದದ ಲೋಪದೋಷದ ಪದ ಹುಡುಕಿ ತೆಗೆದರು, ಅದರ ಮೇಲೆ ಸದಸ್ಯತ್ವ ಅನರ್ಹ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಇದನ್ನೆಲ್ಲ ಇಡೀ ಭಾರತ ದೇಶ ನೋಡುತ್ತಿದೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಇದು ನನಗೆ ನಂಬಿಕೆ ಇದೆ ಎಂದು ತಿಳಿಸಿದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತು ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಹಾಗೂ ಜಾತ್ಯಾತೀತ ಮೈತ್ರಿ ವಿಚಾರ ಸಂಬಂಧಿಸಿದ್ದು ಅಲ್ಲಾ ಅದು ಅವರವರ ಪಕ್ಷದ ವಿಚಾರ ಎಂದು ಹೇಳಿದರು.
ರಾಜಕೀಯ ಪಕ್ಷಗಳು ಆಗಾಗ ಮೈತ್ರಿ ಮಾಡಿಕೊಳ್ಳುತ್ತವೆ ಅದು ಆಯಾ ಪಕ್ಷಗಳ ನಿಲುವು ಕಳೆದ ಸಲ ನಾವೂ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ವಿ ಆದ್ದರಿಂದ ಇದರಲ್ಲಿ ಅಂತಹ ಹೇಳಿಕೊಳ್ಳುವ ವಿಚಾರ ಇಲ್ಲ. ಅದು ಅವರವರ ಇಚ್ಛಾಶಕ್ತಿ, ಅವರ ಪಕ್ಷಗಳ ವಿಚಾರ, ಅವರು ಏನು ನಿರ್ಧಾರ ತೆಗೆದು ಕೊಳ್ಳುತ್ತಾರೆ ಅವರಿಗೆ ಬಿಟ್ಟಿದ್ದು ಎಂದು ತಿಳಿಸಿದರು.












Click it and Unblock the Notifications