ಟ್ರಸ್ಟ್ ರೂಪದಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನೋಂದಣಿ!

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 23 : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನೋಂದಣಿಯಾಗಿದೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಟ್ರಸ್ಟ್ ರೂಪದಲ್ಲಿ ನೋಂದಣಿಯಾಗಿದ್ದು, ಅಚ್ಚರಿಯ ಸಂಗತಿ ಎಂದರೆ ಟ್ರಸ್ಟ್‌ನಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರು ಯಾವುದೇ ಹುದ್ದೆಯನ್ನು ಪಡೆದಿಲ್ಲ.

ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಕೆ.ಎಸ್.ಈಶ್ವರಪ್ಪ ನಡುವಿನ ಜಟಾಪಟಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಾರಣವಾಗಿದೆ. ಆದರೆ, ಬ್ರಿಗೇಡ್ ಅನ್ನು ಟ್ರಸ್ಟ್ ಹೆಸರಿನಲ್ಲಿ ಏಕೆ ನೋಂದಣಿ ಮಾಡಿಸಲಾಗದೆ? ಎಂಬುದು ಬಹಿರಂಗವಾಗಿಲ್ಲ.[ದೆಹಲಿ ತಲುಪಿದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವಿವಾದ]

ks eshwarappa

ಪದಾಧಿಕಾರಿಗಳ ಪಟ್ಟಿ : ಕೆ.ಎಸ್.ಈಶ್ವರಪ್ಪ ಅವರ ಮುಂದಾಳತ್ವದಲ್ಲಿ ಟ್ರಸ್ಟ್ ಸ್ಥಾಪನೆಯಾಗಿದೆ. ಆದರೆ, ಈಶ್ವರಪ್ಪ ಅವರು ಟ್ರಸ್ಟ್‌ನಲ್ಲಿ ಯಾವುದೇ ಪದಾಧಿಕಾರಿಗಳ ಹುದ್ದೆಯನ್ನು ಹೊಂದಿಲ್ಲ. ಈ ಟ್ರಸ್ಟ್‌ನಲ್ಲಿ ಒಟ್ಟು 12 ಮಂದಿ ಸದಸ್ಯರಿದ್ದಾರೆ.[ಈಶ್ವರಪ್ಪ ಕಿವಿ ಹಿಂಡಲು ಹೈಕಮಾಂಡಿಗೆ ದೂರು?]

ಮಾಜಿ ಸಂಸದ ವಿರೂಪಾಕ್ಷಪ್ಪ ಅವರು ಅಧ್ಯಕ್ಷರು. ಕೆಪಿಎಸ್‍ಸಿ ಮಾಜಿ ಸದಸ್ಯ ಕೆ.ಮುಕುಡಪ್ಪ ಕಾರ್ಯಾಧ್ಯಕ್ಷರಾಗಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿ ಎಸ್.ಪುಟ್ಟಸ್ವಾಮಿ, ನಿವೃತ್ತ ಪೊಲೀಸ್ ಅಧಿಕಾರಿ ಸಂಗ್ರಾಮ್ ಸಿಂಗ್ ಗೌರವ ಅಧ್ಯಕ್ಷರಾಗಿದ್ದಾರೆ.[ರಾಯಣ್ಣ ಬ್ರಿಗೇಡ್ : ಬಿಎಸ್ ವೈ ಈಶ್ವರಪ್ಪ ಜಟಾಪಟಿ]

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಾಜಿ ಮೇಯರ್ ವೆಂಕಟೇಶ್‌ ಮೂರ್ತಿ, ದಲಿತ ಮುಖಂಡ ಚಿ.ನಾ.ರಾಮು ಪ್ರಧಾನ ಕಾರ್ಯದರ್ಶಿಗಳಾಗಿದ್ದಾರೆ. ಸೆ.26ರಂದು ಈ ಟ್ರಸ್ಟ್ ಮೊದಲ ಸಭೆ ನಡೆಯುವ ನೀರಿಕ್ಷೆ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sangolli Rayanna Brigade headed by BJP senior leader K.S.Eshwarappa registered as trust.
Please Wait while comments are loading...