ಪ್ರಜ್ವಲ್ ಪ್ರಕರಣದಲ್ಲಿ ಕರ್ನಾಟಕದ ಮಾನ ಹರಾಜಾಗುತ್ತಿದ್ದರೂ ಕನ್ನಡದ ಮಹಾನ್ ಸೆಲೆಬ್ರಿಟಿಗಳು ಫುಲ್ ಸೈಲೆಂಟ್!
ಕನ್ನಡದ ಕೆಲ ಮಹಾನ್ ಸೆಲೆಬ್ರಿಟಿಗಳು ಮಾತು ಎತ್ತಿದ್ದರೆ ತಾಯಿನಾಡು & ಹೆಣ್ಣು ಮಕ್ಕಳ ಗೌರವದ ಬಗ್ಗೆ ಪುಂಖಾನುಪುಂಖ ಡೈಲಾಗ್ ಪುಂಗುತ್ತಾರೆ. ಆದರೆ ಪ್ರಜ್ವಲ್ ರೇವಣ್ಣ ಕೇಸ್ ಇದೀಗ ಕನ್ನಡಿಗರ ಹೆಸರನ್ನು ಹಾಗೂ ಮರ್ಯಾದಿಯನ್ನು ಇಡೀ ಜಗತ್ತಿನಾದ್ಯಂತ ಹರಾಜು ಹಾಕುತ್ತಿದೆ. ಹೀಗಿದ್ದರೂ ಯಾವುದೇ ಸೆಲೆಬ್ರಿಟಿ ಬಾಯಲ್ಲಿ ಈ ಬಗ್ಗೆ ಒಂದೇ ಒಂದು ಮಾತು ಕೂಡ ಹೊರಬಂದಿಲ್ಲ, ಹಂಗಾದ್ರೆ ಸ್ಯಾಂಡಲ್‌ವುಡ್ ಅಂದರೆ ಕನ್ನಡ ಸಿನಿಮಾ ರಂಗದಲ್ಲಿನ ಸೋ ಕಾಲ್ಡ್ ಸೆಲೆಬ್ರಿಟಿಗಳು ಸೈಲೆಂಟ್ ಆಗಲು ಕಾರಣ ಏನು?
ಕನ್ನಡ ನಾಡು ಎಂದರೆ ಹೆಣ್ಣು ಮಕ್ಕಳಿಗೆ ಅತಿಹೆಚ್ಚು ಗೌರವ ನೀಡುವ ರಾಜ್ಯ. ಭಾರತದ, ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಹೆಣ್ಣುಮಕ್ಕಳ ಅಭಿವೃದ್ಧಿ ವಿಚಾರದಲ್ಲಿ ಕರ್ನಾಟಕ ಶತ ಶತಮಾನದಿಂದ ಕೂಡ ಮಾದರಿ ಆಗಿದೆ. ಅದರಲ್ಲೂ ಇಡೀ ಭಾರತದಲ್ಲೇ ಮೊದಲನೇ ಬಾರಿಗೆ ಹೆಣ್ಣು ಮಕ್ಕಳಿಗೆ ಮತದಾನದ ಹಕ್ಕು ನೀಡಿದ್ದು ನಮ್ಮ ಕರ್ನಾಟಕದಲ್ಲಿ. ಹೀಗಿದ್ದರೂ ಇದೇ ಹೆಣ್ಣು ಮಕ್ಕಳ ಮೇಲೆ ಇದೀಗ ನಮ್ಮದೇ ಕರ್ನಾಟಕ ರಾಜ್ಯದಲ್ಲಿ ದೌರ್ಜನ್ಯ ಎಸಗಿ, ಅಶ್ಲೀಲ ವಿಡಿಯೋಗಳನ್ನು ಶೂಟಿಂಗ್ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಪರಿಸ್ಥಿತಿ ಹೀಗಿದ್ದಾಗ ಯಾವುದೇ ಸೆಲೆಬ್ರಿಟಿಗಳು ಕೂಡ ಈ ವಿಚಾರದ ಕುರಿತು ತುಟಿ ಬಿಚ್ಚುತ್ತಿಲ್ಲ, ಅದು ಯಾಕೆ?

ಜನ ಏನ್ ಹೇಳ್ತಾ ಇದ್ದಾರೆ?
ಕರ್ನಾಟಕದಲ್ಲಿ ಸಂಸದರ ವಿರುದ್ಧ ಕೇಳಿಬಂದ ಆರೋಪ ಸಂಚಲನ ಸೃಷ್ಟಿಮಾಡಿದೆ. ಇದೆಲ್ಲಾ ಏನೇ ಇರಲಿ ತಪ್ಪು ಯಾರೆ ಮಾಡಿದ್ದರೂ ತಪ್ಪು, ಅದರ ವಿರುದ್ಧವಾಗಿ ಈಗ ಕರ್ನಾಟಕ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ ಅಂತ ಸೋಷಿಯಲ್ ಮೀಡಿಯಾದಲ್ಲಿ ಜನ ಆಗ್ರಹಿಸುತ್ತಿದ್ದಾರೆ. ಹೀಗಾಗಿ ಈ ಕೇಸ್ ಎಲ್ಲಿಗೆ ಬಂದು ನಿಲ್ಲುತ್ತೆ? ಮುಂದೆ ಕರ್ನಾಟಕ ರಾಜಕೀಯದಲ್ಲಿ ಯಾವ ರೀತಿ ತಲ್ಲಣ ಸೃಷ್ಟಿ ಮಾಡಲಿದೆ? ಅಂತಾ ಜನರು ಚರ್ಚೆ ಮಾಡುತ್ತಿದ್ದಾರೆ. ಆದರೂ ಕನ್ನಡದ ಸೋ ಕಾಲ್ಡ್ ಸೆಲೆಬ್ರಿಟಿಗಳು ಮಾತ್ರ ಈ ವಿಚಾರದ ಬಗ್ಗೆ ಉಸಿರು ಎತ್ತುತ್ತಿಲ್ಲ ಎಂದು ಸ್ವತಃ ಕನ್ನಡ ನಾಡಿನ ಜನರೇ ಆಕ್ರೋಶ ಹೊರಹಾಕುತ್ತಿದ್ದಾರೆ.
ಎಲ್ಲೆಲ್ಲೂ ಮೊಳಗುತ್ತಿದೆ ಆಕ್ರೋಶ
ಹಾಸನದಲ್ಲಿ ರೋಡ್ ರೋಡ್‌ನಲ್ಲಿ ಸಿಗುತ್ತಿರುವ, ಪಾರ್ಕ್ & ಕ್ರೀಡಾಂಗಣದಲ್ಲೆಲ್ಲಾ ಚೆಲ್ಲಾಪಿಲ್ಲಿ ಆಗಿ ಬಿದ್ದಿದ್ದ ಪೆನ್‌ಡ್ರೈವ್ ಒಳಗೆ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿರುವ ಖಾಸಗಿ ವಿಡಿಯೋ ಇವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಆರೋಪಗಳು ದೊಡ್ಡದಾಗಿ ಕಾಡ್ಗಿಚ್ಚು ಹೊತ್ತಿಸಿವೆ ಇದೇ ಸಮಯದಲ್ಲಿ ಸಿದ್ದರಾಮಯ್ಯ ಸರ್ಕಾರ ಕೂಡ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ವಿಶೇಷ ತಂಡ ರಚನೆ ಮಾಡಿ ತನಿಖೆಗೆ ಕೂಡ ಆದೇಶ ನೀಡಿದೆ. ಇಷ್ಟೆಲ್ಲಾ ಆದರೂ ಈ ಕುರಿತು ಕನ್ನಡದ ಯಾವುದೇ ಹೀರೋ, ಹೀರೋಯಿನ್ ಅದು ಬಿಡಿ ಕನಿಷ್ಠ ಜ್ಞಾನ ಇರುವ ಯಾವುದೇ ಸೆಲೆಬ್ರಿಟಿ ಕೂಡ ಮಾತನಾಡುತ್ತಿಲ್ಲ ಅಂತಾ ಜನರು ಆಕ್ರೋಶ ಹೊರ ಹಾಕುತ್ತಿದ್ದಾರೆ.












Click it and Unblock the Notifications