ಮುಂಡ್ಕೂರು ವಿಠೋಬ ದೇವರ ಸಹಸ್ರ ಕುಂಭಾಭಿಷೇಕ ಸಂಪನ್ನ

Posted By:
Subscribe to Oneindia Kannada

ಮಂಗಳೂರು, ನ 19: ಶ್ರೀ ವಿಠೋಬ ದೇವಸ್ಥಾನ ಮುಂಡ್ಕೂರು ಇದರ ಸಹಸ್ರ ಕುಂಭಾಭಿಷೇಕ ರವಿವಾರ (ನ. 19) ಸಂಪನ್ನಗೊಂಡಿತು. ಕಾಶೀಮಠ ಸಂಸ್ಥಾನದ ಸುಕೃತೀಂದ್ರ ತೀರ್ಥರಿಂದ ಮೂಲ ಪ್ರತಿಷ್ಠೆಗೊಂಡು, ಸುಧೀಂದ್ರ ತೀರ್ಥರಿಂದ ನೂತನ ಶಿಲಾಮಯ ಗರ್ಭಗುಡಿಯಲ್ಲಿ ಪುನಃಪ್ರತಿಷ್ಠಾಪನೆಗೊಂಡಿತ್ತು.

ಹರಿದ್ವಾರದಲ್ಲಿ ಶ್ರೀರಾಮ ಕ್ಷೇತ್ರದ ಶಾಖಾ ಮಠ ಆರಂಭ

ಇದೀಗ ಕಾಶೀ ಮಠಾಧೀಶ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರಿಂದ ಸಹಸ್ರ ಕುಂಭಾಭಿಷಿಕ್ತನಾಗುವ ಪರಿವಾರಸಹಿತ ವಿಠೋಬ ದೇವರು ಕಾಶೀಮಠ ಸಂಸ್ಥಾನದ ಮೂರು ತಲೆಮಾರಿನ ಗುರುವರ್ಯರಿಂದಲೂ ಅರ್ಚಿತನಾದವನು.

Sahasra Kumbhabhisheka in Mundkooru Vitobha Temple concluded

ಈ ಶುಭಸಂದರ್ಭದಲ್ಲಿ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯಹಸ್ತಗಳಿಂದ ಪರಿವಾರಸಹಿತ ವಿಠೋಬ ದೇವರಿಗೆ ತಂತ್ರಸಾರೋಕ್ತ ಸಹಸ್ರ ಕುಂಭಾಭಿಷೇಕವು ನಡೆಯಿತು. ಆಸೇತು ಹಿಮಾಲಯದಿಂದ ರಾಮೇಶ್ವರದವರೆಗಿನ ಸಮಸ್ತ ಪವಿತ್ರ ನದಿ, ಸರೋವರಗಳಿಂದ ತೀರ್ಥ, ಮೃತ್ತಿಕೆಗಳನ್ನು, ಮುಂಡ್ಕೂರಿನ ಕಾರ್ಯಕರ್ತರೂ ಸೇರಿ ಪ್ರಾರ್ಥನಾಪೂರ್ವಕ, ವಿಧಿವತ್ತಾಗಿ ಶ್ರದ್ಧೆಯಿಂದ ಗುರುಗಳ ಆದೇಶದಂತೆ ಸಂಗ್ರಹಿಸಿ ತಂದಿದ್ದರು.

ರವಿವಾರ ಮಾರ್ಗಶಿರ ಶುದ್ದ ಪಾಡ್ಯ ಬೆಳಗ್ಗೆ 4-15ಕ್ಕೆ ದೇವರ ಕವಾಟೋದ್ಘಾಟನೆ, 5.30ಕ್ಕೆ ಹತ್ತು ಸಮಸ್ತರಿಂದ ಪ್ರಾರ್ಥನೆ, ಗುರುಗಣಪತಿ​ ​ಪೂಜನ, ಸ್ವಸ್ತಿ ಪುಣ್ಯಾಹವಾಚನ, ಗಂಗಾ ಪೂಜನೆ, ವಿವಿಧ ಕ್ಷೇತ್ರಗಳಿಂದ ಆಗಮಿಸಿದ ವೈದಿಕರಿಂದ ಮಂಡಲೆ ಸಹಸ್ರ ಕಲಶಾಭಿಮಂತ್ರಣ, ದೇವರಿಗೆ ಪಂಚಾಮೃತ ಅಭಿಷೇಕ,ತತ್ವ ಹೋಮ​, ​ಪ್ರಧಾನ ದೇವತಾ ಮೂಲ ಮಂತ್ರಾದಿ ಹೋಮ ಬೆಳಿಗ್ಗೆ ಗಂಟೆ 9.30ಕ್ಕೆ ದೇವರಿಗೆ ಸಂಯಮೀಂದ್ರ ತೀರ್ಥ ಶ್ರೀಗಳಿಂದ ನೇತೃತ್ವದಲ್ಲಿ ನಡೆಯಿತು.

Sahasra Kumbhabhisheka in Mundkooru Vitobha Temple concluded

ಜೊತೆಗೆ, ತಂತ್ರಸಾರೋಕ್ತ​ ​ಸಹಸ್ರ​ ​ಕುಂಭಾಭಿಷೇಕ, ಕನಕಾಭಿಷೇಕ, ಗಂಗಾಭಿಷೇಕ, ದೇವರಿಗೆ​ ​ಅಭಿಷೇಕಾಂಗಪ್ರಸನ್ನ​ ​ಪೂಜೆ​ ​ಅಷ್ಟಮಂಗಲ ನಿರೀಕ್ಷಣೆ, ಪಟ್ಟಕಾಣಿಕೆ,ಗುರು ಕಾಣಿಕೆ.​ ಹತ್ತು ಸಮಸ್ತರಿಗೆ ಪ್ರಸಾದ,ಪ್ರಾಯಶ್ಚಿತ ಹೋಮ, ಬಲಿಪ್ರಧಾನ.
ಮಧ್ಯಾಹ್ನ ಗಂಟೆ 3.00ಕ್ಕೆ.​ ​ಶ್ರೀದೇವರು​ ​ಯಜ್ಞಮಂಟಪದಲ್ಲಿ​ ​ಚಿತ್ತೈಸಿ .ಪೂರ್ಣಾಹುತಿ ಮುಂತಾದ ಕಾರ್ಯಾಕ್ರಮ ನಡೆಯಿತು.

ಈ ಸಂಧರ್ಭದಲ್ಲಿ ಸಹಸ್ರ ಕುಂಭಾಭಿಷೇಕ ಸಮಿತಿಯ ಏಕನಾಥ್ ಪ್ರಭು , ನರಹರಿ ಪ್ರಭು, ಸುಬ್ಬಣ್ಣ ಪ್ರಭು , ರಾಮದಾಸ್ ಕಾಮತ , ಎಂ. ಜಗನ್ನಾಥ್ ಕಾಮತ್, ಬೆಂಗಳೂರಿನ ಉದ್ಯಮಿ ರವಿಶಂಕರ್ ಪ್ರಭು ಮತ್ತು ದೇವಳದ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಕುಂಭಾಭಿಷೇಕ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು .

ಬೆಳಿಗ್ಗೆಯಿಂದ ರಾತ್ರಿಯವರೆಗೆ ನಿರಂತರ ಭಜನೆ / ಸಂಕೀರ್ತನೆ ಸಾಂಸ್ಕ್ರತಿಕ ವೇದಿಕೆಯಲ್ಲಿ ನಡೆಯಿತು. ಊರ ಪರವೂರ ಸಹಸ್ರಾರು ಸಮಾಜಭಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. (ಚಿತ್ರ: ಮಂಜು ನೀರೇಶ್ವಾಲ್ಯ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sahasra Kumbhabhisheka in Mundkooru Vitobha Temple in Dakshina Kannada district concluded on Sunday, Nov 19.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ