RTI- RTE ಅಕ್ರಮ ವಿರುದ್ಧ ವೇದಿಕೆ ಅಭಯ

rti-rte-abuse-karnataka-info-right-compulsary-education-activists-help
ಬೆಂಗಳೂರು, ಮೇ 6-ಸಮಾಜಮುಖಿ/ ಮಹತ್ವಾಕಾಂಕ್ಷಿ ಯೋಜನೆಗಳಾದ ಮಾಹಿತಿ ಹಕ್ಕು ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆಗಳ ದುರುಪಯೋಗವಾಗುತ್ತಿದ್ದು, ಬಹಳಷ್ಟು ಅವ್ಯವಹಾರಗಳು ನಡೆಯುತ್ತಿವೆ. ಇಂತಹವುಗಳ ವಿರುದ್ಧ ಹೋರಾಟ ಅತ್ಯಗತ್ಯ ಎಂದು ಕರ್ನಾಟಕ ಮಾಹಿತಿ ಹಕ್ಕು ಹಾಗೂ ಕಡ್ಡಾಯ ಶಿಕ್ಷಣ ಕಾಯ್ದೆ ಕಾರ್ಯಕರ್ತರ ವೇದಿಕೆ ಹೇಳಿದೆ. ಮತ್ತು ಇಂತಹ ಹೋರಾಟಗಳಲ್ಲಿ ಕೈಜೋಡಿಸಲು ತಾವು ಸದಾ ಸಿದ್ಧವಾಗಿರುತ್ತೇವೆ ಎಂದೂ ವೇದಿಕೆಯ ಕಾರ್ಯಕರ್ತರು ತಿಳಿಸಿದ್ದಾರೆ.

ಕರ್ನಾಟಕ ಮಾಹಿತಿ ಹಕ್ಕು ಹಾಗೂ ಕಡ್ಡಾಯ ಶಿಕ್ಷಣ ಕಾಯ್ದೆ ಕಾರ್ಯಕರ್ತರ ವೇದಿಕೆಯ ಅಭಯ:
ಈ ಬಗ್ಗೆ ವೇದಿಕೆಯ ರಾಜ್ಯಾಧ್ಯಕ್ಷ ಕನ್ನಡ ಸಿರಿ ಆನಂದಕುಮಾರ್ ಅವರು ಮಾಹಿತಿ ನೀಡಿದ್ದು, ಎಷ್ಟೋ ಶಾಲೆಗಳಲ್ಲಿ ಆರ್ ಟಿಇ ಕಾಯ್ದೆಯನ್ನು ಉಲ್ಲಂಘಿಸಲಾಗುತ್ತಿದೆ. ಇದರಿಂದ ಮಕ್ಕಳಿಗೆ ಅನ್ಯಾಯವಾಗಿದೆ. ಇಂಥದ್ದರ ವಿರುದ್ಧ ಹೋರಾಟಗಾರರು ಧ್ವನಿ ಎತ್ತಿದರೆ ಅವರ ಮೇಲೆ ಹಲ್ಲೆ ನಡೆಸಲಾಗುತ್ತಿದೆ.

ಇಂತಹ ಹೋರಾಟಗಾರರು ಯಾವುದೇ ಮಾಹಿತಿ ಕೇಳಿದರೆ ಅಧಿಕಾರಿಗಳು ಮಾನಸಿಕ ಹಿಂಸೆ ನೀಡುತ್ತಾರೆ. ಇದು ಸರ್ವತಾ ಖಂಡನೀಯ. ಹೀಗೆ ಹೋರಾಟ ಮಾಡುವವರು ನಮ್ಮ ವೇದಿಕೆಗೆ ವಿಷಯ ತಿಳಿಸಿದರೆ ನಾವು ಅವರ ಹೋರಾಟದಲ್ಲಿ ನೆರವಾಗುತ್ತೇವೆ ಎಂದು ತಿಳಿಸಿದ್ದಾರೆ.

ಆರ್ ಟಿಇ ಮತ್ತು ಆರ್‌ ಟಿಐ ಕಾಯ್ದೆಗಳಡಿ ನಡೆಯುವ ಅಕ್ರಮಗಳ ಬಗ್ಗೆ ಹೋರಾಡುವವರಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಕರ್ನಾಟಕ ಮಾಹಿತಿ ಹಕ್ಕು ಹಾಗೂ ಕಡ್ಡಾಯ ಶಿಕ್ಷಣ ಕಾಯ್ದೆ ಕಾರ್ಯಕರ್ತರ ವೇದಿಕೆ ಅಭಯ ನೀಡಿದೆ.

ಹೋರಾಟಗಾರರು ವೇದಿಕೆಯ ಆನಂದಕುಮಾರ್ ಅವರನ್ನು ಮೊಬೈಲ್ ಸಂಖ್ಯೆ 94485 48023 ಹಾಗೂ ಬಾಲಕೃಷ್ಣ ಸಂಗ್ಯಾಪುರ ಮೊಬೈಲ್ 99453 53704 ಮೂಲಕ ಸಂಪರ್ಕಿಸಬಹುದು. (ಹೈಕೋರ್ಟ್ ತೀರ್ಪು: ವಾಣಿ ಸ್ಕೂಲಿಗೆ ನುಂಗಲಾರದ ತುತ್ತು)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+