ಸ್ವಿಗ್ಗಿ, ಜೊಮಾಟೊನಂತಹ ಗಿಗ್‌ ಕಾರ್ಮಿಕರಿಗೆ ಸಿಹಿ ಸುದ್ದಿ; ಸರ್ಕಾರದಿಂದ ಮಹತ್ವದ ಘೋಷಣೆ

ಬೆಂಗಳೂರು, ಸೆಪ್ಟೆಂಬರ್‌ 12: ಸ್ವಿಗ್ಗಿ, ಜೊಮಾಟೊ ಮತ್ತು ಅಮೆಜಾನ್​​ನಂತಹ ಇ-ಕಾಮರ್ಸ್​​ ಡೆವಲರಿ ಬಾಯ್​​ಗಳಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ 4 ಲಕ್ಷ ರೂ. ಜೀವ ಮತ್ತು ಅಪಘಾತ ವಿಮೆಯನ್ನು ಘೋಷಿಸಿದ್ದರು. ಇದೀಗ ಸರ್ಕಾರ ಸೆ.08 ರಂದು ಅಧಿಕೃತ ಸುತ್ತೋಲೆ ಹೊರಡಿಸುವ ಮೂಲಕ ಯೋಜನೆಯನ್ನು ಜಾರಿ ಮಾಡಿದೆ.

4 ಲಕ್ಷ ವಿಮಾ ರಕ್ಷಣೆಯ ಪ್ಯಾಕೇಜ್ ಅನ್ನು ಬಿಡುಗಡೆ ಮಾಡಲು ಆದೇಶವನ್ನು ಹೊರಡಿಸಿದ್ದು, 2 ಲಕ್ಷ ಜೀವ ವಿಮೆ ಮತ್ತು ರೂ 2 ಲಕ್ಷ ಅಪಘಾತ ವಿಮೆ ಘೋಷಿಸಿದೆ. ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರು ವಿಮಾ ಯೋಜನೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಮೂಲಕ ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಇದು ಕಾರ್ಮಿಕ ಕಾನೂನುಗಳ ಅಡಿಯಲ್ಲಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರ 2023-24 ರ ಬಜೆಟ್‌ ನಲ್ಲಿ ಘೋಷಿಸಿದ್ದರು.

Rs 4 Lakh Insurance Cover For Gig Workers: Karnataka government

1 ಲಕ್ಷದವರೆಗಿನ ಆಸ್ಪತ್ರೆಯ ವೆಚ್ಚಗಳನ್ನು ಮರುಪಾವತಿಸಲಾಗುವುದು ಮತ್ತು "ಕರ್ತವ್ಯ ಮತ್ತು ಕರ್ತವ್ಯದಿಂದ ಹೊರಗಿರುವ ಅಪಘಾತ" ಸಂದರ್ಭದಲ್ಲಿ ಪ್ರಯೋಜನಗಳು ಅನ್ವಯವಾಗುತ್ತವೆ, ಆದರೆ ಸಕ್ರಿಯ ಕೆಲಸಗಾರರಿಗೆ ಮಾತ್ರ. ಅಪಘಾತ/ಸಾವಿನ ಒಂದು ವರ್ಷದೊಳಗೆ ಅವರು ಅರ್ಜಿ ಸಲ್ಲಿಸಬಹುದು.

ಸರಕು ಮತ್ತು ಸೇವೆಗಳನ್ನು ತಲುಪಿಸುವಾಗ ತಮ್ಮ ಜೀವವನ್ನು ಅಪಾಯಕ್ಕೆ ಸಿಲುಕಿಸುವ ಕಾರ್ಮಿಕರಿಗೆ ಇದು ಒಂದು ಪ್ರಗತಿ ಎಂದು ಪರಿಗಣಿಸಲಾಗಿದೆ. ರಾಜ್ಯ ಕಾರ್ಮಿಕ ಇಲಾಖೆಯು ಕಾರ್ಮಿಕರ ಸಂಖ್ಯೆಯ ಬಗ್ಗೆ ಯಾವುದೇ ಡೇಟಾವನ್ನು ಹೊಂದಿಲ್ಲವಾದರೂ, ಕೇಂದ್ರದ ನೀತಿ ಆಯೋಗವು ಅದನ್ನು ಒದಗಿಸಿದೆ, ಸಾಮಾಜಿಕ ಭದ್ರತಾ ಉಪಕ್ರಮದ ಅಗತ್ಯವನ್ನು ಸೂಚಿಸುತ್ತದೆ.

ಸರ್ಕಾರದ ಅಧಿಕೃತ ವೆಬ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಗಿಗ್ ಕೆಲಸಗಾರರು ಉಪಕ್ರಮದಿಂದ ಪ್ರಯೋಜನ ಪಡೆಯುತ್ತಾರೆ. ಫಲಾನುಭವಿಗಳ ಕಾನೂನು ವಾರಸುದಾರರು ಮತ್ತು ಅವಿವಾಹಿತ ಕಾರ್ಮಿಕರ ಒಡಹುಟ್ಟಿದವರು ಪರಿಹಾರಕ್ಕೆ ಅರ್ಹರಾಗಿರುತ್ತಾರೆ. ಅವರು ಇ-ಲೇಬರ್ ಐಡೆಂಟಿಟಿ ಕಾರ್ಡ್ ಸಂಖ್ಯೆ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ನೇರವಾಗಿ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯು ಸವಲತ್ತುಗಳನ್ನು ವಿತರಿಸಲು ರಾಷ್ಟ್ರೀಕೃತ ಬ್ಯಾಂಕ್‌ನ ಯಾವುದೇ ಶಾಖೆಯಲ್ಲಿ 'ಕರ್ನಾಟಕ ರಾಜ್ಯ ಬಸ್ ಕಾರ್ಮಿಕರ ವಿಮಾ ಯೋಜನೆ' ಖಾತೆಯನ್ನು ತೆರೆಯುವ ಮೂಲಕ ಹಣಕಾಸು ನಿಧಿಯನ್ನು ರಚಿಸಿದೆ. ಸಬ್ಸಿಡಿ ಲಭ್ಯವಿದ್ದರೆ ಹಣಕಾಸಿನ ಮೂಲವು ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರದಿಂದ ಅನುದಾನವನ್ನು ಒಳಗೊಂಡಿರುತ್ತದೆ.

ಜೀವ, ಅಪಘಾತ ಜೀವ ವಿಮೆ ಷರತ್ತುಗಳು ಇಲ್ಲಿವೆ

18-60 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಮತ್ತು ಕನಿಷ್ಠ ಒಂದು ವರ್ಷದ ಅವಧಿಯವರೆಗೆ ಯಾವುದೇ ಆನ್‌ಲೈನ್ ಆಹಾರ ವಿತರಣೆ ಅಥವಾ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಕಂಪನಿಯಲ್ಲಿ ಗಿಗ್ ಕೆಲಸಗಾರರಾಗಿ ಕೆಲಸ ಮಾಡುತ್ತಿರಬೇಕು.

ಅಪಘಾತದಲ್ಲಿ ಮೃತಪಟ್ಟರೇ 4 ಲಕ್ಷ ರೂಪಾಯಿಗಳನ್ನು ಒದಗಿಸಲಾಗುತ್ತದೆ. ಇದರಲ್ಲಿ 2 ಲಕ್ಷ ರೂಪಾಯಿ ಅಪಘಾತ ಕವರೇಜ್ ಕೂಡ ಸೇರಿದೆ. ಒಂದು ವೇಳೆ ಅಪಘಾತದಿಂದ ಗಾಯ ಮತ್ತು ಅಂಗವೈಕಲ್ಯರಾದರೆ ಅದರ ಪ್ರಮಾಣವನ್ನು ಆಧರಿಸಿ ಗಿಗ್ ಕೆಲಸಗಾರರಿಗೆ ಹಣ ನೀಡಲಾಗುತ್ತದೆ.

ಆಸ್ಪತ್ರೆಗೆ ದಾಖಲಾದರೆ, 1 ಲಕ್ಷದವರೆಗಿನ ಮೊತ್ತವನ್ನು ಮರುಪಾವತಿ ಮಾಡಲಾಗುತ್ತದೆ.

ಗಿಗ್ ಕಾರ್ಮಿಕರು ಆದಾಯ ತೆರಿಗೆ ಪಾವತಿಸುತ್ತಿದ್ದರೆ, ಭವಿಷ್ಯ ನಿಧಿ ಅಥವಾ ಇಎಸ್‌ಐ ಹೊಂದಿದ್ದರೆ ಹಂತವರು ಯೋಜನೆಗೆ ಅರ್ಹರಾಗಿರುವುದಿಲ್ಲ.

ಕೆಲಸದಲ್ಲಿರುವಾಗ ಗಿಗ್ ಕಾರ್ಮಿಕ ಮದ್ಯಪಾನ ಅಥವಾ ಡ್ರಗ್ಸ್‌ನ ಅಮಲಿನಲ್ಲಿ ಅಪಘಾತ ಅಥವಾ ಮೃತಪಟ್ಟರೆ ಯೋಜನೆಯ ಪ್ರಯೋಜನಗಳಿಗೆ ಅರ್ಹರಾಗಿರುವುದಿಲ್ಲ.

ಗಿಗ್ ಕಾರ್ಮಿಕ ಆತ್ಮಹತ್ಯೆಯಿಂದ ಸತ್ತರೆ, ಉದ್ದೇಶಪೂರ್ವಕವಾಗಿ ಯಾರನ್ನಾದರೂ ನೋಯಿಸಲು ಅಪಘಾತದ ಕೃತ್ಯವನ್ನು ಮಾಡಿದರೆ ಅಥವಾ ಮಾನಸಿಕ ಅಸ್ಥಿರತೆಯಿಂದ ಅಪಘಾತ ಸಂಭವಿಸಿದಲ್ಲಿ ಯೋಜನೆಯ ಪ್ರಯೋಜನೆ ಪಡೆಯಲು ಸಾಧ್ಯವಿಲ್ಲ.

ಅಪಘಾತ ಅಥವಾ ಸಾವಿನ ಒಂದು ವರ್ಷದೊಳಗೆ ಅರ್ಜಿ ಸಲ್ಲಿಸಬೇಕು.

ನೋಂದಣಿಗಾಗಿ ಸಲ್ಲಿಸಬೇಕಾದ ದಾಖಲೆಗಳು

ಗಿಗ್‌ ಕಾರ್ಮಿಕನಾಗಿ ಕಾರ್ಯನಿರ್ವಹಿಸುತ್ತಿರುವ ಕುರಿತು ನಿಗದಿತ ನಮೂನೆಯಲ್ಲಿ ಉದ್ಯೋಗದಾತರಿಂದ ಪಡೆದ ಉದ್ಯೋಗ ಪ್ರಮಾಣ ಪತ್ರ/ ಗುರುತಿನ ಚೀಟಿ.

ಆಧಾರ್ ಸಂಖ್ಯೆ.

ಇ-ಶ್ರಮ್ ಗುರುತಿನ ಚೀಟಿ ಸಂಖ್ಯೆ

ಪಾಸ್‌ಪೋರ್ಟ್‌ ಅಳತೆಯ ಇತ್ತೀಚಿನ ಭಾವಚಿತ್ರ

ವಿಳಾಸ ಪುರಾವೆಗಾಗಿ ಯಾವುದಾದರೂ ದಾಖಲೆ (ಮತದಾರರ ಗುರುತಿನ ಚೀಟಿ/ಚಾಲನಾ ಪರವಾನಗಿ/ಆಧಾರ್/ಬ್ಯಾಂಕ್‌ ಬುಕ್‌ ಇತ್ಯಾದಿ

ಯೋಜನೆಯ ಸೌಲಭ್ಯಗಳು

ಜೀವ ವಿಮಿ: ಫಲಾನುಭವಿಯ ಮರಣದ ನಂತರ ಕಾನೂನುಬದ್ದ ವಾರಸುದಾರರಿಗೆ 2 ಲಕ್ಷಗಳ ಜೀವ ವಿಮಾ ಪರಿಹಾರ

ಅಪಘಾತ ವಿಮಾ ಸೌಲಭ್ಯ: ಮರಣ ಪ್ರಕರಣ - ರೂ. 2.00 ಲಕ್ಷಗಳ ಅಪಘಾತ ವಿಮಾ ಪರಿಹಾರ ಹಾಗೂ ರೂ. 2.00

ಲಕ್ಷಗಳ ಜೀವ ವಿಮಾ ಪರಿಹಾರ ಸೇರಿ ಒಟ್ಟು ರೂ. 4.00 ಲಕ್ಷಗಳ ಪರಿಹಾರ

ಅಪಘಾತದಿಂದುಟಾಗುವ ಸಂಪೂರ್ಣ ಶಾಶ್ವತ/ಭಾಗಶಃ ದುರ್ಬಲತ ಪರಿಹಾರ ಶೇಕಡವಾರು ದುರ್ಬಲತೆ ಆಧಾರದ ಮೇಲೆ ರೂ. 2.00 ಲಕ್ಷಗಳವರೆಗೆ ಪರಿಹಾರ,

ಆಸ್ಪತ್ರೆ ವೆಚ್ಚ ಮರುಪಾವತಿ - ರೂ. 1.00 ಲಕ್ಷಗಳವರೆಗೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+