ಎಚ್ಚರ: ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಉಗುಳಿದರೆ 100 ರೂಪಾಯಿ ದಂಡ
ಬೆಂಗಳೂರು, ಮೇ 30: ಇನ್ಮೇಲೆ ಅಪ್ಪಿ-ತಪ್ಪಿ ನೀವೇನಾದರೂ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಉಗುಳಿದರೆ ನಿಮಗೆ 100 ರೂಪಾಯಿ ದಂಡ ಬೀಳುವುದು ಗ್ಯಾರೆಂಟಿ.
ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರಿಂದ ಮಹಾಮಾರಿ ಕೋವಿಡ್-19 ಹರಡುವ ಸಾಧ್ಯತೆಯೂ ಇರುವುದರಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಕಛೇರಿ, ಘಟಕ, ವಿಭಾಗೀಯ ಕಾರ್ಯಾಗಾರ, ತರಬೇತಿ ಕೇಂದ್ರ, ಉಪಹಾರ ಗೃಹಗಳ ಆವರಣದಲ್ಲಿ ಉಗುಳುವುದನ್ನು ನಿಷೇಧಿಸಲಾಗಿದೆ.
ಯಾರಾದರೂ ಈ ನಿಯಮವನ್ನು ಉಲ್ಲಂಘಿಸಿ, ಉಗುಳಿದರೆ 100 ರೂಪಾಯಿ ದಂಡ ವಿಧಿಸಲಾಗುತ್ತದೆ. ಒಂದು ವೇಳೆ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಯೇ ಈ ನಿಯಮವನ್ನು ಉಲ್ಲಂಘಿಸಿದಲ್ಲಿ, 200 ರೂಪಾಯಿ ದಂಡವನ್ನು ವಿಧಿಸಲಾಗುವುದು ಎಂದು ಕೆ.ಎಸ್.ಆರ್.ಟಿ.ಸಿ ನಿಗಮ ತಿಳಿಸಿದೆ.

ನಿಯಮ ಉಲ್ಲಂಘಿಸಿ ಉಗುಳಿದವರಿಗೆ ದಂಡ ವಿಧಿಸುವ ಜೊತೆಗೆ 'ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದೆಂದು ಜಾಗೃತಿ ಮೂಡಿಸುವ ಜವಾಬ್ದಾರಿ' ಕೂಡ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ ಮೇಲಿದೆ.
ಅತ್ತ ರಾಜ್ಯ ಸರ್ಕಾರ ಕೂಡ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಷೇಧಿಸಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳಿದರೆ, ಮಾಸ್ಕ್ ಧರಿಸದೇ ಓಡಾಡಿದರೆ, ಸಾಮಾಜಿಕ ಅಂತರ ಪಾಲನೆ ಮಾಡದವರಿಗೆ ದಂಡ ವಿಧಿಸುತ್ತಿದೆ.












Click it and Unblock the Notifications