ಕೆಎಸ್ಆರ್‌ಟಿಸಿ ನಿರ್ವಾಹಕರಿಗೆ ಮಹತ್ವದ ಸೂಚನೆ ನೀಡಿದ ಸಾರಿಗೆ ಇಲಾಖೆ

ಬೆಂಗಳೂರು, ಜನವರಿ 07: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಎಷ್ಟು ಸ್ಪಷ್ಟನೆ ನೀಡಿದರೂ, ಸರ್ಕಾರ ಹಲವು ಬಾರಿ ಹೇಳಿದರೂ 10 ರೂ. ಕಾಯಿನ್ ಬಗ್ಗೆ ಇರುವ ಜನರ ಗೊಂದಲ ದೂರವಾಗಿಲ್ಲ. ಚಿಲ್ಲರೆಯಾಗಿ ನಮ್ಮ ಬಳಿ ಬಂದು ಸೇರುವ ಕಾಯಿನ್ ಬೇರೆಯವರಿಗೆ ಕೊಡುವುದು ಹೇಗೆ? ಎಂಬುದು ಎಲ್ಲರ ಪ್ರಶ್ನೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಸಿಬ್ಬಂದಿ 10 ರೂ. ನಾಣ್ಯವನ್ನು ಸ್ವೀಕಾರ ಮಾಡುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಈ ಹಿನ್ನಲೆಯಲ್ಲಿ ಸಾರಿಗೆ ಇಲಾಖೆ ಪತ್ರವೊಂದರ ಮೂಲಕ ಈ ಕುರಿತು ಅರಿವು ಮೂಡಿಸಬೇಕು ಎಂದು ಹೇಳಿದೆ.

Rs 10 Coin Acceptance Letter By Transport Department

ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪುಷ್ಪ ವಿ. ಎಸ್. ಈ ಕುರಿತು ಪತ್ರವೊಂದನ್ನು ಬರೆದಿದ್ದಾರೆ. ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ. ವ್ಯವಸ್ಥಾಪಕ ನಿರ್ದೇಶಕರು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ. ವ್ಯವಸ್ಥಾಪಕ ನಿರ್ದೇಶಕರು, ವಾಯುವ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಹುಬ್ಬಳ್ಳಿ ಹಾಗೂ ವ್ಯವಸ್ಥಾಪಕ ನಿರ್ದೇಶಕರು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕಲಬುರಗಿ ಇವರಿಗೆ ಪತ್ರವನ್ನು ಬರೆಯಲಾಗಿದೆ.

ಪತ್ರದ ವಿವರಗಳು; ಈ ಪತ್ರವು ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ರೂ.10 ರ ನಾಣ್ಯಗಳನ್ನು ಸ್ವೀಕರಿಸದಿರುವ ಬಗ್ಗೆ ಎಂಬ ವಿಷಯ ಒಳಗೊಂಡಿದೆ. ಅಲ್ಲದೇ ಸರ್ಕಾರದ ಪತ್ರ ದಿನಾಂಕ 13/06/2023, 2. Deputy General Manager, Reserve Bank of India ಪತ್ರ 7/12/2023 ಉಲ್ಲೇಖ ಮಾಡಲಾಗಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಸದರಿ ಪತ್ರದಲ್ಲಿ ಕೋರಿರುವಂತೆ ರೂ.10ರ ನಾಣ್ಯಗಳು ಚಲಾವಣೆಗಾಗಿ ಪ್ರಯಾಣಿಕರಿಂದ ಸ್ವೀಕರಿಸುವ ಕುರಿತು ಸಂಬಂದಿಸಿದ ಎಲ್ಲಾ ಸಿಬ್ಬಂದಿಗಳಿಗೆ ಮತ್ತೊಮ್ಮೆ ಸೂಕ್ತ ನಿರ್ದೇಶನ ನೀಡಲು ಕ್ರಮವಹಿಸುವಂತೆ ಕೋರಲು ನಿರ್ದೇಶಿಸಲ್ಪಟ್ಟಿದ್ದೇನೆ ಎಂದು ಹೇಳಿದ್ದಾರೆ.

ಪ್ರಯಾಣಿಕರು 10 ರೂ. ನಾಣ್ಯವನ್ನು ನೀಡಿದರೆ ನಿರ್ವಾಹಕರು ಅದನ್ನು ಪಡೆಯಬೇಕಿದೆ. ನಾಣ್ಯ ಪಡೆಯದ ಕುರಿತು ಪ್ರಯಾಣಿಕರಿಂದ ದೂರು ಬಂದರೆ ಬಸ್ಸಿನ ನಿರ್ವಾಹಕರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಹ ತಿಳಿಸಲಾಗಿದೆ.

ಈಗಾಗಲೇ ಹಲವು ಬಾರಿ 10 ರೂ. ನಾಣ್ಯವನ್ನು ಎಲ್ಲಾ ಕಡೆ ವಹಿವಾಟು ನಡೆಸಬಹುದುದ ಅದನ್ನು ಸ್ವೀಕಾರ ಮಾಡಿ ಎಂದು ಸೂಚನೆ ನೀಡಲಾಗಿದೆ. ಆದರೆ ಪದೇ ಪದೇ ನಾಣ್ಯವನ್ನು ಸ್ವೀಕಾರ ಮಾಡದಿರುವ ಬಗ್ಗೆ ದೂರುಗಳು ಬರುತ್ತಿವೆ.

ನಿಯಮ ಏನು ಹೇಳುತ್ತದೆ?; ಆರ್‌ಬಿಐ ಸಾರ್ವಜನಿಕರ ವಹಿವಾಟಿನ ಅಗತ್ಯಗಳನ್ನು ಪೂರೈಸುವ ಸಲುವಾಗಿ ಕಾಲಕಾಲಕ್ಕೆ ನಾಣ್ಯಗಳನ್ನು ಪರಿಚಯಿಸುತ್ತಿದೆ. ಪ್ರಸ್ತುತ ರೂ.10 ಮುಖ ಬೆಲೆಯ ನಾಣ್ಯ ಚಲಾವಣೆಯಲ್ಲಿದ್ದು, ಅಧಿಕೃತವಾಗಿ ಅವುಗಳನ್ನು ಸ್ವೀಕರಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.

ವಹಿವಾಟು ಮತ್ತು ಪಾವತಿಗಾಗಿ ರೂ.10 ರೂಪಾಯಿ ನಾಣ್ಯವನ್ನು ಸ್ವೀಕರಿಸಲು ರಿಸರ್ವ್ ಬ್ಯಾಂಕ್ ತೆಗೆದುಕೊಂಡ ಜಾಗೃತಿ ಪ್ರಯತ್ನಗಳ ಹೊರತಾಗಿಯೂ, ಅಂಗಡಿಯವರು, ವ್ಯಾಪಾರಿಗಳು ಮತ್ತು ಸಾಮಾನ್ಯ ಸಾರ್ವಜನಿಕರು ರೂ.10 ನಾಣ್ಯಗಳ ಸ್ವೀಕಾರ ಮತ್ತು ಬಳಕೆಯನ್ನು ನಿರಾಕರಿಸುವುದನ್ನು ರಾಜ್ಯದ ಆರ್ಥಿಕ ಇಲಾಖೆಯೂ ಸಹ ಗಮನಿಸಿದೆ.

ವ್ಯಾಪಾರಿಗಳು, ಸಾರ್ವಜನಿಕರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ರೂ.10 ನಾಣ್ಯಗಳನ್ನು ಸ್ವೀಕರಿಸಬೇಕು. ಭಾರತೀಯ ನಾಣ್ಯಗಳ ಕಾಯಿದೆ 2011 ರ ಸೆಕ್ಷನ್ 6ರ ಪ್ರಕಾರ ಅದರಲ್ಲಿ ನಿರ್ದಿಷ್ಟಪಡಿಸಿದ ನಾಣ್ಯಗಳು ಕಾನೂನುಬದ್ಧವಾಗಿರುತ್ತವೆ ಎಂದು ತಿಳಿಸಲಾಗಿದೆ.

ಎಲ್ಲರೂ ದಿನ ನಿತ್ಯದ ವಹಿವಾಟುಗಳಿಗಾಗಿ ಈ ನಾಣ್ಯವನ್ನು ಸ್ವೀಕರಿಸಬಹುದಾಗಿದೆ. ರೂ.10 ನಾಣ್ಯಗಳನ್ನು ಸ್ವೀಕರಿಸದಿರುವುದು ನಾಣ್ಯ ಕಾಯ್ದೆ 2011 ರ ಸೆಕ್ಷನ್ 6(1) ರ ಉಲ್ಲಂಘನೆಯಾಗಿದೆ. ನಾಣ್ಯಗಳ ಬಗ್ಗೆ ತಪ್ಪು ಮಾಹಿತಿ ನೀಡುವುದನ್ನು ನಂಬಬಾರದು ಮತ್ತು ವದಂತಿಗಳಿಗೆ ಕಿವಿಗೊಡಬಾರದುಎಂದು ಮನವಿ ಮಾಡಲಾಗಿದೆ.

ಎಲ್ಲಾ ಬ್ಯಾಂಕ್‍ಗಳೂ ತಮ್ಮ ವಹಿವಾಟುಗಳಲ್ಲಿ ನಾಣ್ಯಗಳನ್ನು ಸ್ವೀಕರಿಸಲು ಹಾಗೂ ತಮ್ಮ ಎಲ್ಲಾ ಶಾಖೆಗಳಲ್ಲಿ ಅವುಗಳನ್ನು ವಿನಿಮಯ ಮಾಡಿಕೊಳ್ಳಲು ಈಗಾಗಲೇ ಸೂಚನೆ ನೀಡಲಾಗಿದೆ. ಪ್ರಸ್ತುತ ಚಲಾವಣೆಯಲ್ಲಿರುವ ಎಲ್ಲಾ ನಾಣ್ಯಗಳ ಮಾಹಿತಿಗಾಗಿ www.rbi.org.in/coins ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+