ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

ಆರ್. ಆರ್. ನಗರ, ಶಿರಾ ಉಪ ಚುನಾವಣೆ ಫಲಿತಾಂಶ

|
Google Oneindia Kannada News

ಬೆಂಗಳೂರು, ನವೆಂಬರ್ 10 : ಬೆಂಗಳೂರಿನ ರಾಜರಾಜೇಶ್ವರಿ ನಗರ ಮತ್ತು ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಇಂದು ನಡೆಯಿತು. ರಾಜ್ಯಾದ್ಯಂತ ಉಪ ಚುನಾವಣೆ ಫಲಿತಾಂಶ ಭಾರಿ ಕುತೂಹಲ ಹುಟ್ಟು ಹಾಕಿತ್ತು. ಎರಡೂ ಕ್ಷೇತ್ರಗಳಲ್ಲೂ ಬಿಜೆಪಿ ಜಯಗಳಿಸಿದೆ.

ಮಂಗಳವಾರ ಬೆಂಗಳೂರು ಮತ್ತು ತುಮಕೂರಿನಲ್ಲಿ ಮತ ಎಣಿಕೆ ನಡೆಯಿತು. ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿಯ ಮುನಿರತ್ನ ಭಾರಿ ಅಂತರದಲ್ಲಿ ಗೆಲುವು ಕಂಡರು. ಶಿರಾದಲ್ಲಿ ಮೊದಲ ಬಾರಿಗೆ ಗೆಲ್ಲುವ ಮೂಲಕ ಬಿಜೆಪಿ ಇತಿಹಾಸ ನಿರ್ಮಾಣ ಮಾಡಿದೆ.

Bihar Election Results 2020 Live Updates: ಮತ ಎಣಿಕೆ ಕಾರ್ಯಕ್ಕೆ ಕ್ಷಣಗಣನೆBihar Election Results 2020 Live Updates: ಮತ ಎಣಿಕೆ ಕಾರ್ಯಕ್ಕೆ ಕ್ಷಣಗಣನೆ

ಶಿರಾ ಕ್ಷೇತ್ರದಲ್ಲಿ ಶೇ 84.54 ಮತ್ತು ಆರ್. ಆರ್. ನಗರದಲ್ಲಿ 45.24ರಷ್ಟು ಮತದಾನವಾಗಿತ್ತು. ಉಪ ಚುನಾವಣೆ ಫಲಿತಾಂಶದಿಂದಾಗಿ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರ ಬಲ ಹೆಚ್ಚಾಗಿದೆ. ಸಚಿವ ಸಂಪುಟ ವಿಸ್ತರಣೆ ಚರ್ಚೆಗಳು ಆರಂಭವಾಗಲಿದೆ.

RR Nagar, Sira By Election Results 2020 Live Updates

2018ರಲ್ಲಿ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿರಲಿಲ್ಲ. ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಸ್ತಿತ್ವದಲ್ಲಿ ಇರುವುದರಿಂದ ಸರ್ಕಾರದ ಪರವಾದ ಫಲಿತಾಂಶ ಬಂದಿದೆ. ಎರಡೂ ಕ್ಷೇತ್ರದ ಫಲಿತಾಂಶ ಕ್ಷಣ-ಕ್ಷಣದ ಮಾಹಿತಿ ಇಲ್ಲಿದೆ.

Newest FirstOldest First
5:49 PM, 10 Nov

ಆರ್. ಆರ್. ನಗರ ನನ್ನ ಕರ್ಮ ಭೂಮಿ; ಹೆಚ್. ಕುಸುಮಾ

ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಬಿಜೆಪಿ ಅಭ್ಯರ್ಥಿ ಮುನಿರತ್ನ 57,936 ಮತಗಳ ಅಂತದಿಂದ ಗೆಲುವು ಸಾಧಿಸಿದರು. ಕಾಂಗ್ರೆಸ್ ಅಭ್ಯರ್ಥಿ ಹೆಚ್. ಕುಸುಮಾ ಮೊದಲ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ.
4:45 PM, 10 Nov

ಶಿರಾ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆ ಪೂರ್ಣಗೊಂಡಿದೆ. ಬಿಜೆಪಿಯ ಅಭ್ಯರ್ಥಿ ಡಾ. ರಾಜೇಶ್ ಗೌಡ 74,522 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್‌ನ ಟಿ. ಬಿ. ಜಯಚಂದ್ರ 61,573 ಮತ, ಜೆಡಿಎಸ್‌ನ ಅಮ್ಮಾಜಮ್ಮಗೆ 35,982 ಮತಗಳನ್ನು ಪಡೆದಿದ್ದಾರೆ.
4:38 PM, 10 Nov

ಉಪ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್
3:55 PM, 10 Nov

ಉಪ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾರ್ಯಕರ್ತರ ಜೊತೆ ಸಂಭ್ರಮಾಚರಣೆ ನಡೆಸಿದರು.
3:39 PM, 10 Nov

ಆರ್. ಆರ್. ನಗರದಲ್ಲಿ 25ನೇ ಸುತ್ತು (ಕೊನೆ) ಸುತ್ತಿನ ಎಣಿಕೆ ಮುಕ್ತಾಯ. ಬಿಜೆಪಿಯ ಮುನಿರತ್ನ1,25,734 ಮತ. ಕಾಂಗ್ರೆಸ್‌ನ ಹೆಚ್. ಕುಸುಮಾ 67,798 ಮತ. ಜೆಡಿಎಸ್‌ನ ಕೃಷ್ಣಮೂರ್ತಿ10251 ಮತ. ನೋಟಾ 2,494 ಮತಗಳು ಮುನಿರತ್ನ ಗೆಲುವಿನ ಅಂತರ 57,936 ಮತಗಳು.
3:27 PM, 10 Nov

56 ಸಾವಿರ ಮತಗಳ ಅಂತರದಿಂದ ಗೆದ್ದಿದ್ದೇನೆ. ಇವತ್ತಿನಿಂದ ಕ್ಷೇತ್ರದ ಜನರಿಗಾಗಿ 20 ಗಂಟೆ ಕೆಲಸ ಮಾಡುತ್ತೇನೆ ಎಂದು ಆರ್. ಆರ್. ನಗರದಲ್ಲಿ ಗೆದ್ದ ಮುನಿರತ್ನ ಹೇಳಿದ್ದಾರೆ.
2:57 PM, 10 Nov

ಕೆಲವೇ ಕ್ಷಣದಲ್ಲಿ ಬಿಜೆಪಿ ರಾಜ್ಯಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಶಿರಾಗೆ ತಲುಪಲಿದ್ದಾರೆ.
Advertisement
2:40 PM, 10 Nov

ಆರ್. ಆರ್. ನಗರ 24ನೇ ಸುತ್ತಿನ ಎಣಿಕೆ. ಮುನಿರತ್ನ 1,24,446 ಮತ. ಕುಸುಮಾ 67,405 ಮತ. ಕೃಷ್ಣಮೂರ್ತಿ 10,187 ಮತಗಳು.
2:38 PM, 10 Nov

ಶಿರಾದಲ್ಲಿ ಡಾ. ರಾಜೇಶ್ ಗೌಡ 63,294 ಮತ. ಟಿ. ಬಿ. ಜಯಚಂದ್ರ 52,914 ಮತ. ಅಮ್ಮಾಜಮ್ಮ 29,166 ಮತಗಳನ್ನು ಪಡೆದಿದ್ದಾರೆ.
2:28 PM, 10 Nov

ಆರ್.ಆರ್. ನಗರ ಮತ್ತು ಶಿರಾದಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ. ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆ ಬಾಕಿ ಇದೆ.
2:21 PM, 10 Nov

ಶಿರಾದಲ್ಲಿ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸುತ್ತಿದ್ದು, ಐತಿಹಾಸಿಕ ಸಾಧನೆ ಮಾಡಿದಂತಾಗಿದೆ.
2:19 PM, 10 Nov

ಶಿರಾದಲ್ಲಿ ಬಿಜೆಪಿಯ ರಾಜೇಶ್ ಗೌಡ 10 ಸಾವಿರಕ್ಕೂ ಅಧಿಕ ಮತಗಳ ಅಂತರದ ಮುನ್ನಡೆ ಪಡೆದಿದ್ದಾರೆ. ಇನ್ನು ಮೂರು ಸುತ್ತುಗಳ ಎಣಿಕೆ ಮಾತ್ರ ಬಾಕಿ ಇದೆ.
Advertisement
2:13 PM, 10 Nov

ಉಪ ಚುನಾವಣೆ ಫಲಿತಾಂಶದ ಕುರಿತು ಪತ್ರಿಕಾಗೋಷ್ಠಿ
2:11 PM, 10 Nov

ಆರ್. ಆರ್. ನಗರದಲ್ಲಿ ಮುನಿರತ್ನ 1,07,822 ಮತ. ಕುಸುಮಾ 61,095 ಮತ ಮತ್ತು ಕೃಷ್ಣಮೂರ್ತಿ 9,502 ಮತಗಳನ್ನು ಪಡೆದಿದ್ದಾರೆ. ಮುನಿರತ್ನ ಗೆಲುವಿನ ಬಗ್ಗೆ ಅಧಿಕೃತ ಘೋಷಣೆ ಬಾಕಿ ಇದೆ.
2:07 PM, 10 Nov

ಶಿರಾದಲ್ಲಿ 18 ಸುತ್ತಿನ ಮತ ಎಣೆಕೆ ಮುಕ್ತಾಯವಾಗಿದೆ. ರಾಜೇಶ್ ಗೌಡ 54,630 ಮತ. ಜಯಚಂದ್ರ 47,720 ಮತ. ಅಮ್ಮಾಜಮ್ಮ26,099 ಮತ ಪಡೆದಿದ್ದಾರೆ. ರಾಜೇಶ್ ಗೌಡ 6910 ಮತಗಳ ಮುನ್ನಡೆ ಪಡೆದಿದ್ದಾರೆ.
1:44 PM, 10 Nov

BREAKING NEWS: ಆರ್‌.ಆರ್ ‌ನಗರದಲ್ಲಿ ಗೆಲುವಿನತ್ತ ಬಿಜೆಪಿ
1:34 PM, 10 Nov

ಶಿರಾ ಕ್ಷೇತ್ರದಲ್ಲಿ ಬಿಜೆಪಿ 47,608. ಕಾಂಗ್ರೆಸ್ 43,811 ಮತ್ತು ಜೆಡಿಎಸ್ 23,822 ಮತಗಳನ್ನು ಪಡೆದಿವೆ.
1:24 PM, 10 Nov

ಆರ್. ಆರ್. ನಗರದಲ್ಲಿ 20ನೇ ಸುತ್ತಿನ ಎಣಿಕೆ ಬಳಿಕ ಬಿಜೆಪಿ 103291, ಕಾಂಗ್ರೆಸ್ 58,743 ಮತಗಳು. ಮುನಿರತ್ನ ಅವರು 44,548 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.
1:20 PM, 10 Nov

15 ಸುತ್ತಿನ ಮತ ಎಣೆಕೆ ಬಳಿಕ ಶಿರಾದಲ್ಲಿ ಬಿಜೆಪಿಯ ರಾಜೇಶ್ ಗೌಡ 43,684 ಮತ. ಜಯಚಂದ್ರ 41,919 ಮತ. ಅಮ್ಮಾಜಮ್ಮ 23,051 ಮತಗಳು. ಬಿಜೆಪಿ ಅಭ್ಯರ್ಥಿ ಮುನ್ನಡೆ ಅಂತರ 1765.
1:19 PM, 10 Nov

ಶಿರಾದಲ್ಲಿ ಬಿಜೆಪಿ ಮುನ್ನಡೆಯಲ್ಲಿ ಕುಸಿತ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ನಡೆಯುತ್ತಿದೆ.
1:16 PM, 10 Nov

ಉಪ ಚುನಾವಣೆ ಫಲಿತಾಂಶದ ಕುರಿತು ಸಚಿವ ಈಶ್ವರಪ್ಪ ಪ್ರತಿಕ್ರಿಯೆ
1:07 PM, 10 Nov

ಶಿರಾದಲ್ಲಿ 13ನೇ ಸುತ್ತಿನ ಎಣಿಕೆ ಮುಕ್ತಾಯವಾಗಿದೆ. ರಾಜೇಶ್ ಗೌಡ 41,847 ಮತ. ಜಯಚಂದ್ರ 38,705 ಮತ್ತು ಅಮ್ಮಾಜಮ್ಮ 21,907 ಮತಗಳನ್ನು ಪಡೆದಿದ್ದಾರೆ.
12:59 PM, 10 Nov

2018ರ ಚುನಾವಣೆಯಲ್ಲಿ ಆರ್. ಆರ್. ನಗರದಲ್ಲಿ ಜೆಡಿಎಸ್ 60 ಸಾವಿರಕ್ಕೂ ಅಧಿಕ ಮತಗಳಿಸಿತ್ತು. ಆದರೆ, ಉಪ ಚುನಾವಣೆಯಲ್ಲಿ ಇದುವರೆಗೂ 5,638 ಮತಗಳನ್ನು ಅಭ್ಯರ್ಥಿ ಪಡೆದಿದ್ದಾರೆ.
12:44 PM, 10 Nov

ಆರ್. ಆರ್. ನಗರದಲ್ಲಿ 14ನೇ ಸುತ್ತಿನ ಬಳಿಕ ಮುನಿರತ್ನ 73,932. ಕುಸಮಾ 39,415 ಮತಗಳನ್ನು ಪಡೆದಿದ್ದಾರೆ.
12:42 PM, 10 Nov

ಆರ್. ಆರ್. ನಗರದಲ್ಲಿ ಮುನಿರತ್ನ ಮುನ್ನಡೆ ಕಾಯ್ದುಕೊಂಡಿದ್ದಾರೆ. 14ನೇ ಸುತ್ತಿನ ಬಳಿಕ 33,185 ಮತಗಳ ಮುನ್ನಡೆ ಪಡೆದಿದ್ದಾರೆ.
12:41 PM, 10 Nov

ಶಿರಾದಲ್ಲಿ 12 ಸುತ್ತಿನ ಎಣೆಕೆ ಮುಕ್ತಾಯಗೊಂಡಿದೆ. ರಾಜೇಶ್ ಗೌಡ 37808, ಜಯಚಂದ್ರ 29938, ಅಮ್ಮಾಜಮ್ಮ 19522 ಮತಗಳನ್ನು ಪಡೆದಿದ್ದಾರೆ. ರಾಜೇಶ್ ಗೌಡ 7870 ಮತಗಳ ಮುನ್ನಡೆ ಪಡೆದಿದ್ದಾರೆ.
12:35 PM, 10 Nov

ಉಪ ಚುನಾವಣೆ ಫಲಿತಾಂಶದ ಹಿನ್ನಲೆಯಲ್ಲಿ ಸಚಿವರು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು.
12:33 PM, 10 Nov

ಹೆಣ್ಣಿನ ಕಣ್ಣೀರು, ಸಿಂಗಲ್ ಟೇಕ್ ವರ್ಕೌಟ್ ಆಗಿಲ್ಲ: ಮುನಿರತ್ನ ನಾಗಾಲೋಟ

ರಾಜರಾಜೇಶ್ವರಿ ನಗರ ಅಸೆಂಬ್ಲಿ ಉಪಚುನಾವಣೆಯ ಮತಎಣಿಕೆ ಚಾಲ್ತಿಯಲ್ಲಿದ್ದು, ಬಿಜೆಪಿ ಅಭ್ಯರ್ಥಿ ಮುನಿರತ್ನ ಭರ್ಜರಿ ಲೀಡ್ ಅನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಮೊದಲ ಸುತ್ತಿನಿಂದಲೇ ಮುನಿರತ್ನ ಲೀಡ್ ಕಾಯ್ಡುಕೊಂಡಿದ್ದರು.
12:26 PM, 10 Nov

11ನೇ ಸುತ್ತಿನ ಎಣಿಕೆ ಬಳಿಕ ಶಿರಾದಲ್ಲಿ ರಾಜೇಶ್ ಗೌಡ 34,088 ಮತ, ಜಯಚಂದ್ರ 27,173 ಮತ, ಅಮ್ಮಾಜಮ್ಮ 18,169 ಮತ. ಬಿಜೆಪಿ 6895 ಮತಗಳ ಮುನ್ನಡೆ
12:19 PM, 10 Nov

ಶಿರಾದಲ್ಲಿ ಬಿಜೆಪಿ 30,883, ಕಾಂಗ್ರೆಸ್ 24,908 ಮತ್ತು ಜೆಡಿಎಸ್ 16,911 ಮತಗಳನ್ನು ಪಡೆದಿವೆ.
READ MORE

English summary
RR Nagar, Sira Bypoll Results 2020 Live Updates in Kannada: Bengalruu Rajarajeshwari Nagar and Tumakuru district Sira by elections result.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X