ರೋಹಿತ್ ಚಕ್ರತೀರ್ಥ ಸಮಿತಿಗೆ ಪಿಯು ಪಠ್ಯಪರಿಷ್ಕರಣೆಯಿಂದ ಗೇಟ್‌ಪಾಸ್
ಬೆಂಗಳೂರು , ಜೂನ್ 07: ಕರ್ನಾಟಕ ಪಠ್ಯ ಪುಸ್ತಕ ವಿವಾದ ತಾರಕ್ಕೇರಿದ ಬಳಿಕ ಪಠ್ಯಪುಸ್ತಕ ಸಮಿತಿಯನ್ನು ವಿಸರ್ಜಿಸಲಾಗಿತ್ತು. ಆದರೆ ದ್ವಿತೀಯ ಪಿಯುಸಿ ಪಠ್ಯಪುಸ್ತಕ ಪರಿಷ್ಕರಣೆಯ ಸಮಿತಿಯಲ್ಲಿ ವಿವಾದಿತ ರೋಹಿತ್ ಚಕ್ರತೀರ್ಥ ಮುಂದುವರೆದಿದ್ದರು. ಇದೀಗ ದ್ವಿತೀಯ ಪಿಯುಸಿ ಪಠ್ಯಪುಸ್ತಕ ಪರಿಷ್ಕರಣೆಯ ಸಮಿತಿಯಿಂದ ರೋಹಿತ್ ಚಕ್ರತೀರ್ಥರನ್ನು ಶಿಕ್ಷಣ ಇಲಾಖೆ ಕೈಬಿಟ್ಟಿದೆ.
"ಪಠ್ಯಪುಸ್ತಕ ಪರಿಷ್ಕರಣೆಗಾಗಿ ರೋಹಿತ್ ಚಕ್ರತೀರ್ಥಕರನ್ನು ಸರ್ಕಾರ ನೇಮಿಸಿತ್ತು. ಶಾಲಾ ಪಠ್ಯಪುಸ್ತಕ ಮರುಪರಿಷ್ಕರಣೆಯಲ್ಲಿ ವಿವಾದಗಳು ಹೆಚ್ಚಾಗಿದ್ದವು. ಸಾಹಿತಿಗಳು, ರಾಜಕಾರಣಿಗಳು, ಮಠಾಧೀಶರು, ಪ್ರಬಲ ಜಾತಿಯ ವಿರೋಧ ಎದುರಾಗಿದ್ದರಿಂದ ರೋಹಿತ್ ಚಕ್ರತೀರ್ಥರನ್ನು ದ್ವಿತೀಯ ಪಿಯುಸಿ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯಿಂದ ಕೈಬಿಡಲು ಸರ್ಕಾರ ತೀರ್ಮಾನಿಸಿದೆ," ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ತಿಳಿಸಿದ್ದಾರೆ.
ದ್ವಿತೀಯ ಪಿಯುಸಿಯಲ್ಲಿ ಹೊಸಧರ್ಮಗಳ ಉದಯ ಎಂಬ ಪಠ್ಯವನ್ನು ಪರಿಷ್ಕರಣೆಯನ್ನು ಮಾಡಲು ಸರ್ಕಾರ ಮುಂದಾಗಿತ್ತು. ಈ ಪಠ್ಯದ ಪರಿಷ್ಕರಣೆಯ ಜವಾಬ್ದಾರಿಯನ್ನು ರೋಹಿತ್ ಚಕ್ರತೀರ್ಥರಿಗೆ ವಹಿಸಲಾಗಿತ್ತು. ಶಾಲೆಗಳ ಪಠ್ಯಪುಸ್ತಕದಲ್ಲಿ ವಿವಾದಗಳು ತೆಲೆದೋರಿದ ಹಿನ್ನೆಲೆಯಲ್ಲಿ ಮತ್ತು ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮಕ್ಕೆ ಆಗ್ರಹಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ರೋಹಿತ್ ಚಕ್ರತೀರ್ಥರ ಸಮಿತಿಯನ್ನು ಕೈಬಿಡಲು ಶಿಕ್ಷಣ ಸಚಿವ ಬಿಸಿ ನಾಗೇಶ್ ಮುಂದಾಗಿದ್ದಾರೆ. ಇನ್ನು ರೋಹಿತ್ ಚಕ್ರತೀರ್ಥರ ಸಮಿತಿಯನ್ನು ವಿಸರ್ಜಿಸಿರುವ ಕಾರಣ ಪಿಯುಸಿಯ ಪಠ್ಯಪುಸ್ತಕ ಪರಿಷ್ಕರಣೆಯ ವರದಿಯನ್ನು ಪಡೆಯುವುದಿಲ್ಲಎಂದು ಬಿಸಿ ನಾಗೇಶ್ ಸ್ಪಷ್ಟಪಡಿಸಿದ್ದಾರೆ.

ರೋಹಿತ್ ಚಕ್ರತೀರ್ಥ ಪಠ್ಯಪುಸ್ತಕ ಸಮಿತಿ ವಿಸರ್ಜಿಸಿದ್ದ ಬೊಮ್ಮಾಯಿ
ಶಾಲೆಯ ಪಠ್ಯಪುಸ್ತಕ ಅದರಲ್ಲೂ ಕನ್ನಡ ಮತ್ತು ಸಮಾಜ ವಿಜ್ಞಾನ ಪಠ್ಯಪುಸ್ತಕ ಮರುಪರಿಷ್ಕರಣೆಯ ನಂತರ ವಿವಾದಗಳು ತಾರಕ್ಕೇರಿದ್ದವು. ರೋಹಿತ್ ಚಕ್ರತೀರ್ಥ ಎಂಬ ವ್ಯಕ್ತಿಯನನ್ನು ಸಮಿತಿಯ ಅಧ್ಯಕ್ಷ ಎಂಬುದನ್ನು ಒಪ್ಪಿಕೊಳ್ಳಲು ಸಾಹಿತಿಗಳು ಸಿದ್ದರಾಗಿರಲಿಲ್ಲ. ನಾಡಗೀತೆಗೆ ಅಪಮಾನ, ಕುವೆಂಪು, ಬಸವಣ್ಣ, ಅಂಬೇಡ್ಕರ್ ಗೆ ಅಪಮಾನ ಮಾಡಲಾಗಿದೆ ಎಂದು ಸಾಹಿತಿಗಳ ವರ್ಗ ಬಹು ದೊಡ್ಡದಾಗಿಯೇ ಪ್ರತಿರೋಧವನ್ನು ತೋರಿದ್ದರು. ಪಠ್ಯಪಸ್ತಕದಲ್ಲಿ ತಮ್ಮ ಲೇಖನವನ್ನು ಸೇರಿಸಲು ನೀಡದ್ದ ಅನುಮತಿಯನ್ನು ಕೆಲವು ಲೇಖಕರು ಹಿಂಪಡೆದುಬಿಟ್ಟರು. ಕುವೆಂಪು ಬಗ್ಗೆ ಅವಹೇಳನ ಮಾಡಿದ್ದಕ್ಕೆ ನಿರ್ಮಲಾನಂದ ಸ್ವಾಮೀಜಿ ಆಕ್ಷೇಪವನ್ನು ವ್ಯಕ್ತಪಡಿದ್ದರು. ಬಸವಣ್ಣನ ಕುರಿತ ವಿವಾದದ ವಿಚಾರಕ್ಕೆ ಲಿಂಗಾಯಿತ ಮಠಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಇದೆಲ್ಲದರ ನಡುವೆ ಸಿಎಂ ಬಸವರಾಜ ಬೊಮ್ಮಾಯಿ ಜೂನ್ 3ರಂದು ಪಠ್ಯಪುಸ್ತಕ ಸಮಿತಿಯನ್ನು ವಿಸರ್ಜಿಸಿದ್ದರು. ಆದರೆ ಪಿಯುಸಿ ಪಠ್ಯಪುಸ್ತಕ ಸಮಿತಿಯಲ್ಲಿ ರೋಹಿತ್ ಚಕ್ರತೀರ್ಥ ಮುಂದುವೆರೆದಿರುವುದಕ್ಕೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ರೋಹಿತ್ ಚಕ್ರತೀರ್ಥರನ್ನು ಪಿಯುಸಿ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯಿಂದ ಕೈಬಿಡಲಾಗಿದೆ.

ಶಿಕ್ಷಣ ತಜ್ಞರು ಹೇಳಿದ್ದೇನು..?
ಪಿಯುಸಿ ಪಠ್ಯಪುಸ್ತಕ ಪರಿಷ್ಕರಣೆಯಿಂದ ರೋಹಿತ್ ಚಕ್ರತೀರ್ಥರನ್ನು ಕೈಬಿಡಲಾಗಿದೆ ಎನ್ನಲಾಗ್ತಿದೆ . ಆದರೆ ರೋಹಿತ್ ಚಕ್ರತೀರ್ಥರ ಸಮಿತಿ ಯಾವ ಪಠ್ಯವನ್ನು ಪರಿಷ್ಕರಣೆ ಮಾಡಿದ್ದರು. ಅದನ್ನು ಸರ್ಕಾರ ಒಪ್ಪಲಿದ್ಯಾ. ಪಿಯುಸಿ ಪಠ್ಯ ಪರಿಷ್ಕರಿಸಲು ಅರ್ಹತೆಯಿಲ್ಲದವರು ಶಾಲಾ ಪಠ್ಯಪುಸ್ತಕ ಪರಿಷ್ಕರಣೆಯನ್ನು ಒಪ್ಪಿದ್ದು ಹೇಗೆ..? ಶಾಲಾ ಪಠ್ಯಪುಸ್ತಕ ಪರಿಷ್ಕರಣೆಯನ್ನು ಅಸಿಂಧುಗೊಳಿಸಬೇಕೆಂದು ನಿರಂಜನಾರಾಧ್ಯ ಸರ್ಕಾರಕ್ಕೆ ಆಗ್ರಹವನ್ನು ಮಾಡಿದ್ದಾರೆ.












Click it and Unblock the Notifications