Breaking: ರಾಜ್ಯದಲ್ಲಿ ಜನವರಿ 25ರ ವೇಳೆಗೆ ಕೊರೊನಾ ಸೋಂಕು ಉತ್ತುಂಗಕ್ಕೇರಲಿದೆ: ಆರ್ ಅಶೋಕ್
ಬೆಂಗಳೂರು, ಜನವರಿ 17: ರಾಜ್ಯದಲ್ಲಿ ಕೊರೊನಾ ಅಲೆಯ ತೀವ್ರತೆ ಹೆಚ್ಚಾಗಿದ್ದು, ಜನವರಿ 25ಕ್ಕೆ ಉತ್ತುಂಗಕ್ಕೇರಲಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.
ತಜ್ಞರ ಅಭಿಪ್ರಾಯದಂತೆ ಜನವರಿ 25ರ ವೇಳೆ ಕೊರೊನಾ ಸೋಂಕು ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ, ಈ ಅಲೆಯಲ್ಲಿ ಒಒಂದು ತಿಂಗಳ ಒಂಗೆ ಉತ್ತುಂಗಕ್ಕೆ ಹೋಗುತ್ತದೆ, ಮಹಾರಾಷ್ಟ್ರ, ದೆಹಲಿಯಲ್ಲಿ ಈಗಾಗಲೇ ಕಡಿಮೆ ಆಗುತ್ತಿದೆ, ಈಗಿರುವ ಅಂದಾಜಿನ ಪ್ರಕಾರ ಜನವರಿ 25ರ ವೇಳೆಗೆ ಉತ್ತುಂಗಕ್ಕೇರಲಿದೆ ಎಂದು ಹೇಳಿದ್ದಾರೆ.
ವಾರಾಂತ್ಯ ಕರ್ಫ್ಯೂ ಹಾಗೂ ರಾತ್ರಿ ಕರ್ಫ್ಯೂ ಬಗ್ಗೆಯೂ ಚರ್ಚೆ ನಡೆದಿದೆ, ಮುಖ್ಯಮಂತ್ರೊ ಬೊಮ್ಮಾಯಿಯವರು ಶುಕ್ರವಾರದವರೆಗೂ ಕಾಯೋಣ, ಶುಕ್ರವಾರ ಮತ್ತೊಮ್ಮೆ ಸಭೆ ಸೇರಿ ತೀರ್ಮಾನ ತೆಗೆದುಕೊಳ್ಳೋಣ, ಕೋವಿಡ್ ಹೆಚ್ಚಳ ನೋಡಿ ಈ ಬಗ್ಗೆ ತೀರ್ಮಾನ ಮಾಡುವುದಾಗಿ ಹೇಳಿರುವುದಾಗಿ ಆರ್ ಅಶೋಕ್ ಮಾಹಿತಿ ನೀಡಿದ್ದಾರೆ.
ಪರೀಕ್ಷೆ 1.5 ಲಕ್ಷ ಸಾಕು, ನಿತ್ಯ 2 ಲಕ್ಷ ಪರೀಕ್ಷೆ ಮಾಡಲಾಗುತ್ತಿದೆ, ಪರೀಕ್ಷೆಯನ್ನು ಹೆಚ್ಚಳ ಮಾಡುವುದರಿಂದ ಏನೂ ಪ್ರಯೋಜನವಿಲ್ಲವೆಂದು ತಜ್ಞರು ಹೇಳಿದ್ದಾರೆ ಎಂದು ತಿಳಿಸಿದ್ದಾರೆ. ಲಸಿಕೆ ಪ್ರಮಾಣ ಕಡಿಮೆ ಇರುವ ಐದಾರು ಜಿಲ್ಲೆಗಳ್ಲಲಿ ಲಸಿಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ, ಚಾಮರಾಜನಗರದಲ್ಲಿ ಜನರೇಟರ್ ಬಾಡಿಗೆಗಾದರೂ ಪಡೆದು ಲಸಿಕೆ ಪ್ರಮಾಣ ಹೆಚ್ಚಿಸಬೇಕು ಎಂದರು.
ಕೇಂದ್ರ ಸರ್ಕಾರ, ವಿಶ್ವಸಂಸ್ಥೆ ಮತ್ತು ನಮ್ಮ ಕಾರ್ಯಪಡೆ ಸಮಿತಿ ಸದಸ್ಯರ ಶಿಫಾರಸುಗಳನ್ನು ಗಮನಿಸಿ, ಜನರ ಪರವಾಗಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಶುಕ್ರವಾರದ ಹೊತ್ತಿಗೆ ಕೊರೊನಾ ಸೋಂಕು ಕಡಿಮೆಯಾದರೆ ಒಳ್ಳೆಯ ಸುದ್ದಿ ಬರಬಹುದು ಎಂದು ಸುಳಿವು ನೀಡಿದರು.
ಜ. 21ರ ಸಭೆಯಲ್ಲಿ ವಿಪತ್ತು ನಿರ್ವಹಣಾ ಸಮಿತಿಯ ಜವಾಬ್ದಾರಿ ಹೊತ್ತಿರುವ ಎಲ್ಲ ಸಚಿವರೂ ಮತ್ತು ಅಧಿಕಾರಿಗಳೂ ಪಾಲ್ಗೊಳ್ಳಲಿದ್ದಾರೆ. ಬಳಿಕವೇ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಹೊಟೆಲ್ ಅಥವಾ ಇತರ ಯಾರಿಗೋ ಸಹಾಯ ಮಾಡಲೆಂದು ನಿಯಮ ಸಡಿಲಿಸಲು ಆಗುವುದಿಲ್ಲ. ಕರ್ನಾಟಕದ ಆರೂವರೆ ಕೋಟಿ ಜನರ ಪ್ರಾಣ ರಕ್ಷಣೆ ನಮ್ಮ ಗುರಿ ಎಂದು ಸ್ಪಷ್ಟಪಡಿಸಿದರು.