ದ್ವೇಷಕ್ಕಾಗಿ ದ್ವಿತೀಯ ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ?

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಏಪ್ರಿಲ್ 01 : ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ರಾಜ್ಯಾದ್ಯಂತ ಚರ್ಚೆ ನಡೆಯುತ್ತಿದೆ. ರಸಾಯನ ಶಾಸ್ತ್ರ ವಿಷಯದ ಮರುಪರೀಕ್ಷೆ ಏ.12ರಂದು ನಡೆಯಲಿದೆ. ದ್ವೇಷದ ಕಾರಣಕ್ಕಾಗಿ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಲಾಯಿತೇ? ಎಂಬ ಪ್ರಶ್ನೆ ಎದ್ದಿದೆ.

ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಸಿಐಡಿ ತನಿಖೆ ನಡೆಸುತ್ತಿದೆ. ತನಿಖೆ ನಡೆಸುತ್ತಿರುವ ಅಧಿಕಾರಿಗಳ ತಂಡ ಪತ್ರಿಕೆ ಸೋರಿಕೆ ಹಿಂದೆ ದ್ವೇಷದ ಅಂಶಗಳಿವೆಯೇ? ಎಂಬ ಬಗ್ಗೆಯೂ ತನಿಖೆಯನ್ನು ಕೈಗೊಳ್ಳಲಿದೆ. ಟ್ಯೂಷನ್ ಮಾಫಿಯಾ ಕೈವಾಡದ ಕುರಿತು ತನಿಖೆ ನಡೆಯಲಿದೆ. [ಪ್ರಶ್ನೆ ಪತ್ರಿಕೆ ಸೋರಿಕೆ : ಗುರುವಾರದ 10 ಪ್ರಮುಖ ಬೆಳವಣಿಗೆಗಳು]

puc

ಸೋರಿಕೆಗೆ ಕಾರಣವೇನು?: ಹಿಂದೆ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾದಾಗ ಟ್ಯೂಷನ್ ಮಾಫಿಯಾದ ಕೈವಾಡವಿರುವ ಬಗ್ಗೆ ತಿಳಿದುಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಜನರನ್ನು ಬಂಧಿಸಲಾಗಿತ್ತು ಮತ್ತು ದೋಷರೋಪ ಪಟ್ಟಿ ಸಲ್ಲಿಸಲಾಗಿತ್ತು. ಬಂಧಿತರು ಇಲಾಖೆಯ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿರುವುದು ತಿಳಿದುಬಂದಿತ್ತು. ಎಲ್ಲರೂ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. [ಪ್ರಶ್ನೆ ಪತ್ರಿಕೆ ಸೋರಿಕೆ ರಾಜ್ಯಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆ]

ಪದವಿಪೂರ್ವ ಶಿಕ್ಷಣ ಇಲಾಖೆಗೆ ಪಲ್ಲವಿ ಅಕುರಾತಿ ಅವರು ನಿರ್ದೇಶಕರಾದ ಬಳಿಕ ಸಮಸ್ಯೆ ಆರಂಭವಾಯಿತು. ಇಲಾಖೆಯಲ್ಲಿನ ಹಲವು ಅವ್ಯವಹಾರಗಳನ್ನು ಪತ್ತೆ ಹಚ್ಚಿದ ಅವರು, ಅದನ್ನು ಸರಿಪಡಿಸಲು ಮುಂದಾದದರು. ಕೆಲವು ಅಧಿಕಾರಿಗಳನ್ನು ಅಮಾನತು ಮಾಡುವಂತೆ ಶಿಫಾರಸು ಮಾಡಿ, ಸರ್ಕಾರಕ್ಕೆ ರಹಸ್ಯ ವರದಿಯೊಂದನ್ನು ಸಲ್ಲಿಸಿದರು. [ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದೆ ಟ್ಯೂಷನ್ ಮಾಫಿಯಾ?]

ರಹಸ್ಯವಾಗಿ ಸಲ್ಲಿಕೆಯಾದ ವರದಿಯಲ್ಲಿದ್ದ ಕೆಲವು ಅಧಿಕಾರಿಗಳ ಹೆಸರುಗಳು ಮಾತ್ರ ರಹಸ್ಯವಾಗಿ ಉಳಿಯಲಿಲ್ಲ. ಅವುಗಳು ಬಹಿರಂಗಗೊಂಡವು. ಇದರಿಂದಾಗಿ ಆ ಅಧಿಕಾರಿಗಳು ನಿರ್ದೇಶಕರ ವಿರುದ್ಧ ಅಸಮಾಧಾನಗೊಂಡರು. ನಿರ್ದೇಶಕಿ ಮತ್ತು ಸರ್ಕಾರಕ್ಕೆ ಮುಜುಗರ ಉಂಟು ಮಾಡಲು ಪತ್ರಿಕೆ ಸೋರಿಕೆ ಮಾಡಿರಬಹುದು ಎಂದು ಶಂಕಿಸಲಾಗಿದೆ.

ಪೇಪರ್ ಮೊದಲು ಸೋರಿಕೆ ಆಗಿದ್ದೆಲ್ಲಿ? : ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಮೊದಲು ಎಲ್ಲಿ ಪೇಪರ್ ಸೋರಿಕೆಯಾಯಿತು? ಎಂದು ಪತ್ತೆ ಹಚ್ಚುತ್ತಿದೆ. ಬೆಂಗಳೂರು ಅಥವ ತುಮಕೂರಿನ ಖಜಾನೆಯಿಂದ ಪತ್ರಿಕೆ ಸೋರಿಕೆಯಾಗಿರಬಹುದು ಎಂದು ಶಂಕಿಸಲಾಗಿದೆ. ಹಲವು ಶಂಕಿತ ವ್ಯಕ್ತಿಗಳ ಪಟ್ಟಿ ಸಿದ್ಧಪಡಿಸಿರುವ ಸಿಐಡಿ ಅವರ ದೂರವಾಣಿ ಕರೆಗಳ ಮಾಹಿತಿಯನ್ನು ಸಂಗ್ರಹಣೆ ಮಾಡುತ್ತಿದೆ. ವಿವಿಧ ಕರೆ ಮತ್ತು ಸಂದೇಶಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಅಂದಹಾಗೆ 2016ರ ಮಾರ್ಚ್ 21ರಂದು 1.75 ಲಕ್ಷ ವಿದ್ಯಾರ್ಥಿಗಳು ರಸಾಯನಶಾಸ್ತ್ರ ಪರೀಕ್ಷೆ ಬರೆದಿದ್ದರು. ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ ಆ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಮಾರ್ಚ್ 31ರಂದು ಮರುಪರೀಕ್ಷೆ ನಡೆಸುವುದಾಗಿ ಘೋಷಿಸಲಾಗಿತ್ತು. ಆದರೆ, ಪುನಃ ಪತ್ರಿಕೆ ಸೋರಿಕೆಯಾದ ಕಾರಣ ಪರೀಕ್ಷೆ ರದ್ದುಗೊಳಿಸಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
2nd PUC Chemistry paper leaked : The Criminal Investigation Department (CID) has decided to get to the bottom of this issue and officers point towards revenge as a motive behind the leak. We are probing that angle seriously as there is more than what meets the eye an officer informed OneIndia.
Please Wait while comments are loading...