ಮೈಸೂರು, ಹುಬ್ಬಳ್ಳಿಗೆ ವಿಮಾನ ಸೇವೆ ಆರಂಭಿಸಲು ಮನವಿ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 09 : ಹುಬ್ಬಳ್ಳಿ ಮತ್ತು ಮೈಸೂರಿಗೆ ಏರ್‌ ಇಂಡಿಯಾದ ಸಂಸ್ಥೆಯಿಂದ ನಿತ್ಯ ವಿಮಾನ ಸೇವೆ ಆರಂಭಿಸಬೇಕು ಎಂದು ಸಚಿವ ಬಸವರಾಜ ರಾಯರೆಡ್ಡಿ ಅವರು ಕೇಂದ್ರ ಸಚಿವ ಅಶೋಕ್ ಗಜಪತಿರಾಜು ಅವರಿಗೆ ಮನವಿ ಮಾಡಿದರು.

ಮಂಗಳವಾರ ನವದೆಹಲಿಯಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಕೇಂದ್ರ ವಿಮಾನಯಾನ ಸಚಿವ ಅಶೋಕ್ ಗಜಪತಿರಾಜು ಅವರನ್ನು ಭೇಟಿ ಮಾಡಿದರು. 'ರಾಜ್ಯದಲ್ಲಿ ವಿಮಾನಯಾನ ತರಬೇತಿ ಸಂಸ್ಥೆಯನ್ನು ಆರಂಭಿಸಬೇಕು ಮತ್ತು ಏರ್ ಇಂಡಿಯಾ ಸಂಸ್ಥೆಯಿಂದ ನಿತ್ಯ ಹುಬ್ಬಳ್ಳಿ ಮತ್ತು ಮೈಸೂರಿಗೆ ವಿಮಾನ ಸೇವೆ ಪ್ರಾರಂಭ ಮಾಡಬೇಕು' ಎಂದು ಮನವಿ ಸಲ್ಲಿಸಿದರು.[ಬೆಂಗಳೂರು-ಮೈಸೂರು ನಡುವೆ ಮತ್ತೆ ವಿಮಾನ ಸೇವೆ?]

Request for regular Air India flight to Mysuru and Hubballi

ವಾರದಲ್ಲಿ ಮೂರು ದಿನ ಹಾರಾಟ : ಏರ್ ಇಂಡಿಯಾ ಬೆಂಗಳೂರು-ಹುಬ್ಬಳ್ಳಿ ನಡುವೆ ಜುಲೈ 20ರಿಂದ ವಿಮಾನ ಸೇವೆಯನ್ನು ಆರಂಭಿಸಿದೆ. ವಾರದಲ್ಲಿ ಮೂರು ದಿನಗಳ ಕಾಲ (ಸೋಮವಾರ, ಬುಧವಾರ, ಶುಕ್ರವಾರ) ಏರ್ ಇಂಡಿಯಾ ಎರಡೂ ನಗರಗಳ ನಡುವೆ ಹಾರಾಟ ನಡೆಸುತ್ತಿದ್ದು, 1,902 ರೂ. ಪ್ರಯಾಣ ದರವಿದೆ.[ಬೆಂಗಳೂರು-ಮೈಸೂರು ವಿಮಾನ ಸಂಚಾರ ಸ್ಥಗಿತ]

ಮೈಸೂರಿಗೆ ವಿಮಾನ ಸೇವೆ ಇಲ್ಲ : ಸದ್ಯ ಮೈಸೂರು ನಗರಕ್ಕೆ ವಿಮಾನ ಸಂಪರ್ಕವಿಲ್ಲ. 2015ರ ಸೆಪ್ಟೆಂಬರ್ 5ರಂದು ಅಲೆಯನ್ಸ್ ಏರ್ ಬೆಂಗಳೂರು-ಮೈಸೂರು ನಡುವೆ ವಿಮಾನ ಯಾನ ಸೇವೆಯನ್ನು ಆರಂಭಿಸಿತ್ತು.[ಬೆಂಗಳೂರು-ಹುಬ್ಬಳ್ಳಿ ನಡುವೆ ಏರ್ ಇಂಡಿಯಾ ಸೇವೆ ಆರಂಭ]

Request for regular Air India flight to Mysuru and Hubballi

ಆದರೆ, ಪ್ರಯಾಣಿಕರ ಕೊರತೆ ಹಿನ್ನಲೆಯಲ್ಲಿ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. 2016ರ ಅಕ್ಟೋಬರ್‌ನಲ್ಲಿ ಮೈಸೂರು ದಸರಾಕ್ಕೆ ಪ್ರವಾಸಿಗರನ್ನು ಸೆಳೆಯಲು ಬೆಂಗಳೂರು-ಮೈಸೂರು ನಡುವೆ ವಿಮಾನ ಸಂಚಾರ ಆರಂಭಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka higher education minister Basavaraja Rayareddy met union minister for civil aviation Ashok Gajapati Raju in New Delhi on Tuesday and demand for regular domestic flight service to Mysuru and Hubballi from Air India.
Please Wait while comments are loading...