ರಾಜ್ಯದಲ್ಲಿ 2,856 ಮಂದಿಗೆ ಕಪ್ಪು ಶಿಲೀಂಧ್ರ ಸೋಂಕು
ಬೆಂಗಳೂರು, ಜೂನ್ 19: ಕರ್ನಾಟಕದಲ್ಲಿ ಇದುವರೆಗೆ 2,856 ಮಂದಿಗೆ ಕಪ್ಪು ಶಿಲೀಂಧ್ರ ಸೋಂಕು ತಗುಲಿದೆ.
ಕೊವಿಡ್ ಇಲ್ಲಿದಿರುವಾಗ ಶೇ. 50 ರಷ್ಟು ಮರಣ ಪ್ರಮಾಣ ಇತ್ತು. ಕೊವಿಡ್ ಜೊತೆಗೆ ಬ್ಲ್ಯಾಕ್ ಫಂಗಸ್ ತಗುಲಿದರೆ ಶೇ. 80 ರಷ್ಟು ಮರಣ ಪ್ರಮಾಣವಿದೆ.
ಕೊವಿಡ್ ನಿಂದ ಬ್ಲ್ಯಾಕ್ ಫಂಗಸ್ ಬಂದ್ರೆ ಸಾವು ಜಾಸ್ತಿಯಾಗುತ್ತಿದೆ. ಸದ್ಯ ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ನೀಡುವ ಔಷಧ ದೊರೆಯುತ್ತಿದೆ. ಬ್ಲ್ಯಾಕ್ ಫಂಗಸ್‌ನಿಂದ 225 ಜನರು ಸಾವನ್ನಪ್ಪಿದ್ದಾರೆ.
ಬ್ಲ್ಯಾಕ್ ಫಂಗಸ್‌ನಿಂದ ಇದುವರೆಗೆ 191 ರೋಗಿಗಳು ಗುಣಮುಖರಾಗಿದ್ದು, ಇನ್ನುಳಿದ 2,316 ರೋಗಿಗಳಿಗೆ ಚಿಕಿತ್ಸೆ ಮುಂದುವರೆಸಲಾಗಿದೆ.

ಕೊರೊನಾದಿಂದ ಗುಣಮುಖರಾಗಿದ್ದವರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುತ್ತಿತ್ತು. ಕೊರೊನಾದಿಂದ ಗುಣಮುಖರಾಗಿ ಮತ್ತೆ ಜೀವನ ಶುರು ಮಾಡುವಷ್ಟರಲ್ಲಿ ಬ್ಲ್ಯಾಕ್ ಫಂಗಸ್ ಸಮಸ್ಯೆ ತಲೆದೋರುತ್ತಿತ್ತು. ಆದರೆ ಈಗ ಕೊರೊನಾ ಸೋಂಕಿತರಲ್ಲಿ ಕಪ್ಪು ಶಿಲೀಂಧ್ರ ಸೋಂಕು ಕಡಿಮೆಯಾಗಿದೆ. ಹಾಗೂ ಕೊವಿಡ್‌ನಿಂದ ಗುಣಮುಖರಾದವರಲ್ಲಿ ಹೆಚ್ಚಳವಾಗುತ್ತಿದೆ.
ಟೋಸಿಲಿಜುಮಾಬ್, ಅಂಫೋಟೆರಿಸಿನ್ ಬಿ ಲಸಿಕೆ ಮೇಲಿನ ಜಿಎಸ್‌ಟಿಯನ್ನು ಶೂನ್ಯಕ್ಕೆ ಇಳಿಕೆ ಮಾಡಲಾಗಿದೆ. ರೆಮಿಡಿಸಿವರ್ ಇಂಜೆಕ್ಷನ್ ಮೇಲಿನ ಜಿಎಸ್‌ಟಿ ಶೇ.5 ಕ್ಕೆ ಇಳಿಕೆ ಮಾಡಲಾಗಿದೆ. ಅಲ್ಲದೆ, ಅಂಬ್ಯುಲೆನ್ಸ್ ಮೇಲಿನ ಜಿಎಸ್‌ಟಿ ದರ ಕೂಡ ಇಳಿಕೆಯಾಗಿದೆ.
ಕೊರೊನಾ ವಿರುದ್ಧ ಹೋರಾಡಲು ಬಳಕೆಯಾಗುವ ಕೆಲವು ಔಷಧಗಳು, ಆಸ್ಪತ್ರೆ ಮತ್ತು ವೈದ್ಯಕೀಯ ಉಪಕರಣಗಳ ಮೇಲೆ ತೆರಿಗೆ ಪ್ರಮಾಣವನ್ನು ಇಳಿಕೆ ಮಾಡಲಾಗಿದೆ.
ಸರಕು ಮತ್ತು ಸೇವಾ ತೆರಿಗೆ ಮಂಡಳಿ ಜೂನ್ 12 ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ತೆರಿಗೆ ವಿನಾಯಿತಿಯನ್ನು ಕೆಲವು ಮಂತ್ರಿಗಳ ಸಲಹೆ, ಶಿಫಾರಸಿನಂತೆ ಕೈಗೊಳ್ಳಲಾಗಿದೆ ಎಮದು ಜಿಎಸ್‌ಟಿ ಮಂಡಳಿ ತಿಳಿಸಿದೆ.











Click it and Unblock the Notifications