ಮದ್ಯ ಮಾರಾಟ: ರಾಜ್ಯದಲ್ಲಿ ಎಲ್ಲಾ ವರ್ಷದ ದಾಖಲೆ ಉಡೀಸ್ ಮಾಡಿದ 2024ರ ಡಿಸೆಂಬರ್ 28
ಬೆಂಗಳೂರು, ಡಿಸೆಂಬರ್, 29: 2025ರ ಹೊಸ ವರ್ಷಕ್ಕೆ ಇನ್ನೂ ಎರಡೇ ದಿನವಷ್ಟೇ ಬಾಕಿಯಿದೆ. ಈ ದಿನವನ್ನು ಸ್ವಾಗತಿಸಲು ಇಡೀ ದೇಶವೇ ಕಾತರದಿಂದ ಕಾಯುತ್ತಿದೆ. ಹಾಗಂತ 2024ರಲ್ಲಿ ನಡೆದ ಕೆಲವು ಘಟನೆಗಳನ್ನು ಮರೆಯದೇ ಮೆಲಕು ಹಾಕಬೇಕಾಗುತ್ತದೆ. ಅಬಕಾರಿ ಇಲಾಖೆ ವಿಚಾರಕ್ಕೆ ಬಂದರೆ, ಡಿಸೆಂಬರ್ 28, 2024 ಅಂದರೆ ಶನಿವಾರ ಒಂದೇ ದಿನ ರಾಜ್ಯದಲ್ಲಿ ದಾಖಲೆ ಮಟ್ಟದಲ್ಲಿ ಮದ್ಯ ಮಾರಾಟವಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.
2025ರ ಹೊಸ ವರ್ಷದ ಸಮೀಪವಿದ್ದು, ಇದರ ಬೆನ್ನಲ್ಲೇ ಶನಿವಾರ (ಡಿಸೆಂಬರ್ 28) ಒಂದೇ ದಿನ 408 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ. ಇದು ಅಬಕಾರಿ ಇತಿಹಾಸದಲ್ಲೇ ಹೊಸ ದಾಖಲೆ ಎನ್ನುವ ಮಾಹಿತಿ ಲಭ್ಯವಾಗಿದೆ. ರಾಜ್ಯದಲ್ಲಿ 12,614 ಮದ್ಯದ ಅಂಗಡಿಗಳಿದ್ದು, ಸಾಮಾನ್ಯ ದಿನಗಳಲ್ಲಿ ಮದ್ಯ ಮಾರಾಟದಿಂದ ಸರ್ಕಾರಕ್ಕೆ 65-70 ಕೋಟಿ ರೂಪಾಯಿ ಅಷ್ಟೇ ಬರುತ್ತದೆ. ಆದರೆ, ನಿನ್ನೆ ಒಂದೇ ದಿನ 8ಪಟ್ಟು ಹೆಚ್ಚಿಬ ಮೌಕ್ಯದ ಮಧ್ಯ ಮಾರಾಟವಾಗಿದ್ದು, ಎಲ್ಲಾ ದಿನದ ದಾಖಲೆಗಳನ್ನು ಉಡೀಸ್ ಮಾಡಿದೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ ಹಿನ್ನೆಲೆ ಸರ್ಕಾರ ಡಿಸೆಂಬರ್ 27ರಂದು ರಜೆ ಘೋಷಣೆ ಮಾಡಿತ್ತು. ಇನ್ನು 4ನೇ ಶನಿವಾರವೂ ರಜೆ ಇರುವುದರಿಂದ ಬಹುತೇಕ ಮಂದಿ ಹೆಚ್ಚಿ ಮದ್ಯ ಖರೀದಿ ಮಾಡಿರುವುದು ಬೆಳಕಿದೆ ಬಂದಿದೆ. ಸತತ ರಜೆ ಹಿನ್ನೆಲೆಯಲ್ಲಿ ಮದ್ಯ ಎತ್ತುವಳಿಗೆ ಅವಕಾಶ ನೀಡುವಂತೆ ರಾಜ್ಯ ಮದ್ಯ ಮಾರಾಟಗಾರರ ಸಂಘದ ವಿನಂತಿ ಮೇರೆಗೆ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ (ಕೆಎಸ್ಬಿಸಿಎಲ್) ಸಾಲ ಸೌಲಭ್ಯ(ಕ್ರೆಡಿಟ್ ಫೆಸಿಲಿಟಿ) ಆಧಾರದ ಮೇರೆಗೆ ಶನಿವಾರ ಮದ್ಯ ಎತ್ತುವಳಿಗೆ ಅನುಮತಿ ನೀಡಿತ್ತು.
ಈ ವೇಳೆ 327 ಕೋಟಿ ರೂಪಾಯಿ ಮೌಲ್ಯದ 6 ಲಕ್ಷ ಬಾಕ್ಸ್ ಇಂಡಿಯನ್ ಮೇಡ್ ಲಿಕ್ಕರ್ (ಐಎಂಎಲ್) ಹಾಗೂ 80 ಕೋಟಿ ರೂಪಾಯಿ ಮೌಲ್ಯದ 4,00,000 ಬಾಕ್ಸ್ ಬಿಯರ್ ಎತ್ತುವಳಿಯಾಗಿದೆ. ಇನ್ನು ಮದ್ಯದಂಗಡಿ ಮಾಲೀಕರ ಮನವಿ ಮೇರೆಗೆ ಹಾಗೂ ರಜೆ ಹಿನ್ನೆಲೆ ಬ್ಯಾಂಕ್‌ಗಳು ತೆರೆಯದ ಹಿನ್ನೆಲೆ ದೇಶದಲ್ಲೇ ಪ್ರಥಮ ಬಾರಿಗೆ ಸಾಲ ಸೌಲಭ್ಯ ಆಧಾರದಲ್ಲಿ ಮದ್ಯ ಎತ್ತುವಳಿಗೆ ಅವಕಾಶ ನೀಡಲಾಗಿದೆ.
ಈ ಹಿನ್ನೆಲೆ ದಾಖಲೆ ಮಟ್ಟದಲ್ಲಿ ಮದ್ಯ ಮಾರಾಟ ಆಗಿರುವ ಹಿನ್ನಲೆ ಅಬಕಾರಿ ಇಲಾಖೆಗೆ ಶನಿವಾರ ಒಂದೇ ಹೆಚ್ಚಿನ ಆದಾಯ ಹರಿದುಬಂದಿದೆ ಎಂದು ಇಲಾಖೆ ಜಂಟಿ ಆಯುಕ್ತ ಟಿ.ನಾಗರಾಜಪ್ಪ ತಿಳಿಸಿದ್ದಾರೆ ಎಂದು ವಿಜಯವಾಣಿ ವರದಿ ಮಾಡಿದೆ. ಮತ್ತೊಂದೆಡೆ ಹೊಸ ವರ್ಷ ಹಿನ್ನೆಲೆ ಒಂದು ಮುಂಚೆಯೇ ಹೆಚ್ಚಿನ ಸಂಖ್ಯೆಯಲ್ಲಿ ಮದ್ಯ ಖರೀದಿ ಮಾಡಿರುವ ಬಗ್ಗೆ ತಿಳಿದುಬಂದಿದೆ.
ಇನ್ನೂ ಹೆಚ್ಚಿನ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಮಾರಾಟವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಪಬ್, ಬಾರ್ ಆಂಡ್ ರೆಸ್ಟೋರೆಂಟ್ ಮಾಲೀಕರು ಹೊಸ ವರ್ಷ ಹಿನ್ನೆಲೆ ಈಗಿನಿಂದಲೇ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಅಲ್ಲದೆ, ಹೆಚ್ಚಿನ ಪ್ರಮಾಣದಲ್ಲಿ ಮದ್ಯ, ಬಿಯರ್ ದಾಸ್ತಾನು ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ಹಿನ್ನೆಲೆ ಸರ್ಕಾರಕ್ಕೆ ಮತ್ತಷ್ಟು ಆದಾಯ ಹರಿದುಬರುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಮಾಲೀಕರು ಕ್ರೆಡಿಟ್ ಫೆಸಿಲಿಟಿ ಆಧಾರದಲ್ಲಿ 150 ಕೋಟಿ ರೂಪಾಯಿ ಮೌಲ್ಯದ ಮದ್ಯ ಖರೀದಿ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications