ನ್ಯಾಯಾಧೀಕರಣ ಎಂಬ ಮರೀಚಿಕೆ, ಕಾಂಗ್ರೆಸ್-ಬಿಜೆಪಿ ರಾಜಕೀಯ ಕೆಸರೆರಚಾಟ
ಮದ್ಯಂತರ ಅರ್ಜಿ ಸಲ್ಲಿಸುವ ಬಗ್ಗೆ ಕರ್ನಾಟಕ ಪರ ವಕೀಲ ಫಾಲಿ ನಾರಿಮನ್ ಸೇರಿದಂತೆ ಹಲವರ ಸಮ್ಮತ ಇರಲಿಲ್ಲ ಎಂಬ ಮಾತಿದೆ. ಮದ್ಯಂತರ ಅರ್ಜಿ ಸಲ್ಲಿಸದೇ ಇದ್ದಿದ್ದರೂ ಈಗ ಅರ್ಜಿ ತಿರಸ್ಕಾರದ ತೀರ್ಪಿನಲ್ಲಿ ನ್ಯಾಯಾದೀಕರಣ ನೀಡಿದ ಕಾರಣಗಳು, ಒಪ್ಪದ ಅದ್ಯಯನ ವರದಿಗಳು ಅಂತಿಮ ತೀರ್ಪಿನಲ್ಲಿ ಹೇಗೆ ಬದಲಾಗುತ್ತವೆ..?
ಗೋವಾ ಚುನಾವಣೆ ಹತ್ತಿರವಿದ್ದಂತೆ ಗೋವಾ ಪರ ತೀರ್ಪು ಹೊರಬಿದ್ದಿದ್ದು ನ್ಯಾಯಾಧೀಕರಣದ ತೀರ್ಪಿನಲ್ಲಿ ರಾಜಕೀಯ ದುರ್ವಾಸನೆ ಬಾರದಿರದೇ.?
ನ್ಯಾಯಾಧೀಕರಣದ ಮೊರೆ ಹೋದ ನೀರು ಹಂಚಿಕೆ ವಿವಾದಗಳಲ್ಲಿ ಬಹುತೇಕ ಇಂದು ಸುಪ್ರೀಂ ಕೋರ್ಟ್ ಅಂಗಳದಲ್ಲಿವೆ. ಕರ್ನಾಟಕಕ್ಕಂತೂ ನ್ಯಾಯಾದೀಕರಣವೆನ್ನುವ ಬದಲು ಅನ್ಯಾಯಾದೀಕರಣ ಎನ್ನುವುದು ಸೂಕ್ತವೆನಿಸುತ್ತದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ನಡುವಿನ ಸಮಸ್ಯೆಯನ್ನು ರಾಜ್ಯಗಳೇ ಮಾತುಕತೆ ಮೂಲಕ ಬಗೆಹರಿಸುವುದು ಸರಿಯಾದುದಾಗಿದೆ.

1989 ರಲ್ಲಿ ಎಸ್. ಆರ್. ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಗೋವಾ ಮುಖ್ಯಮಂತ್ರಿ ಪ್ರತಾಪ್ ಸಿಂಗ್ ರಾಣಾ ಜೊತೆ ಮಾತುಕತೆ ನಡೆಸಿ ಯೋಜನೆಗೆ ಎರಡೂ ರಾಜ್ಯಗಳು ಪರಸ್ಪರ ಒಪ್ಪಿಗೆ ಸೂಚಿಸಿದ್ದವು. 2006 ರಲ್ಲಿ ಸುಪ್ರೀಂ ಕೋರ್ಟ್ ಮೂರು ರಾಜ್ಯಗಳೊಂದಿಗೆ ಮಾತುಕತೆ ಮೂಲಕ ಬಗೆಹರಿಸುವಂತೆ ಪ್ರದಾನಿಗೆ ಸೂಚಿಸಿತು. ನಂತರ ಮಾತುಕತೆಗೆ ಪ್ರದಾನಿ ಮನಮೋಹನ್ ಸಿಂಗ್ ಕರೆದ ಸಭೆಗೆ ಗೋವಾ ಕಾಂಗ್ರೆಸ್ ಮುಖ್ಯಮಂತ್ರಿ ಗೈರಾದರು. ಮಾತುಕತೆ ಪ್ರಯತ್ನ ವಿಫಲವಾಯಿತು.
ಈಗಲೂ ಉಳಿದಿರುವ ದಾರಿಯಾಗಿ ಅದೇ ಗೋಚರಿಸುತ್ತದೆ. ಗೋವಾ ಮಾತುಕತೆಗೆ ಸಿದ್ದವಿಲ್ಲವೆಂದಾದರೆ ಕೇಂದ್ರ ಸರಕಾರದ ಮದ್ಯಸ್ಥಿಕೆಯಲ್ಲಿ ಆ ಮಾತುಕತೆ ನಡೆಯಲಿ. ಗೋವಾ ವಿರೋದ ಪಕ್ಷದವರನ್ನು ನೀವು ಮನವಲಿಸಿ, ನಮ್ಮ ಪಕ್ಷದ ಮುಖ್ಯಮಂತ್ರಿಗಳನ್ನು ನಾವು ಮನವೊಲಿಸುತ್ತೇವೆ ಎಂಬ ಮೊಂಡುವಾದ ಬಿಟ್ಟು ಮೂರು ರಾಜ್ಯಗಳ ಸರ್ವಪಕ್ಷ ಸಭೆಯನ್ನು ಕರೆದು ಮಾತುಕತೆ ನಡೆಸುವಂತ ರಾಜಕೀಯ ಮುತ್ಸದ್ದಿತನವನ್ನು ಪ್ರದಾನಿಗಳು ಪ್ರದರ್ಶಿಸಬೇಕಿದೆ.
ಈ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್/ಬಿಜೆಪಿ ಸಂಸದರು, ಶಾಸಕರು ನೆಲ, ಜಲ, ಭಾಷೆ ಬಗ್ಗೆ ರೆಡಿಮೇಡ್ ಉತ್ತರ ಕೊಡುವುದನ್ನು ಬಿಟ್ಟು ಮಾತುಕತೆ ಮೂಲಕ ಪರಿಹಾರ ಪಡೆದುಕೊಳ್ಳುವತ್ತ ಪ್ರದಾನಿಗೆ ಒಕ್ಕೋರಲವಾಗಿ ಒತ್ತಡ ಹೇರುವ ಕೆಲಸ ಮಾಡಲಿ.
ಕರ್ನಾಟಕದ ಕಾಂಗ್ರೆಸ್ ನಾಯಕರು ಗೋವಾ ಚುನಾವಣೆ ಸಮಯದಲ್ಲಿ ಮಹದಾಯಿ ಯೋಜನೆಗೆ ವಿರೋದ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂದಿ ಅವರಿಗೂ ಯೋಜನೆ ಹೇಗೆ ಕರ್ನಾಟಕ ಭಾಗದ ಕುಡಿಯುವ ನೀರಿಗೆ ಆಸರೆಯಾಗಿದೆ ಎಂಬುದರ ಜೊತೆಗೆ ಕಾಂಗ್ರೆಸ್ಸಿಗೂ ಕರ್ನಾಟಕ ಹೇಗೆ ಆಸರೆಯಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಡಲಿ.
ಇನ್ನು, ಜೆಡಿಎಸ್ ಪ್ರಾದೇಶಿಕ ಪಕ್ಷ ಎಂಬ ಗುರುತನ್ನು ಉಳಿಸಿಕೊಂಡಿಲ್ಲವಾದರೂ ಮಾತುಕತೆ ಪರಿಹಾರದ ವಿಶಯದಲ್ಲಿ ಮಾಜಿ ಪ್ರದಾನಿ ದೇವೇಗೌಡರ ಮೇಲೆ ರಾಜ್ಯದ ಜನರ ನಿರೀಕ್ಷೆ ಇದ್ದೇ ಇದೆ. ಕಳಸಾ ಕಿಚ್ಚಿನಲ್ಲಿ ದಶಕಗಳಿಂದ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಕಾಂಗ್ರೆಸ್ ಬಿಜೆಪಿಗಳೆರಡು ಯೋಜನೆ ವಿಳಂಬಕ್ಕೆ ಪಾಲುದಾರರು.
ಇನ್ನಾದರೂ ಒಟ್ಟಿಗೆ ನಿಲ್ಲದಿದ್ದರೆ ಜನರು ತಿರುಗಿ ಬೀಳುವುದರಲ್ಲಿ ಸಂಶಯವಿಲ್ಲ. ಕುಡಿಯುವ ನೀರಿನ ಯೋಜನೆಗೆ ಅನುಮತಿ ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗುವುದರ ಜೊತೆಗೆ ಮಾತುಕತೆ ಮೂಲಕ ಪರಿಹಾರದ ಗಂಬೀರ ಪ್ರಯತ್ನವನ್ನು ಎಲ್ಲರೂ ಮಾಡಬೇಕಿದೆ. (ಮಾಹಿತಿ ಕೃಪೆ:http://publictv.in/?p=98434, http://goo.gl/siA1uN)












Click it and Unblock the Notifications