Real Estate: ಜಾಲಿ.. ಜಾಲಿ ಎಂದ ಡಿ.ಕೆ ಶಿವಕುಮಾರ್: ಈ ಭಾಗದಲ್ಲಿ ಭೂಮಿಗೆ ಚಿನ್ನದ ಬೆಲೆ!
Real Estate: ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಚನ್ನಪಟ್ಟಣದಲ್ಲಿ ಜಾಲಿ.. ಜಾಲಿ ಅಂತಿದ್ದಾರೆ. ಚನ್ನಪಟ್ಟಣ ಹಾಗೂ ರಾಮನಗರ ಭಾಗದಲ್ಲಿ ಡಿ.ಕೆ ಶಿವಕುಮಾರ್ ಅವರು ಕೊಡುತ್ತಿರುವ ಹೇಳಿಕೆಗಳಿಂದ ಈ ಭಾಗದಲ್ಲಿ ರಿಯಲ್ ಎಸ್ಟೇಟ್‌ಗೆ ಬಂಪರ್ ಬಂದಿದೆ. ಚನ್ನಪಟ್ಟಣ ಮಾತ್ರವಲ್ಲ ರಾಮನಗರದ ಹಲವು ಭಾಗದಲ್ಲಿ ರಿಯಲ್ ಎಸ್ಟೇಟ್‌ಗೆ ಬೂಸ್ಟ್ ಸಿಕ್ಕಂತಾಗಿದೆ. ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ನಾಮಕರಣ ಮಾಡಲಾಗುವುದು ಎಂದು ಹೇಳಿದ ಮೇಲೆ ಈ ಭಾಗದಲ್ಲಿ ರಿಯಲ್ ಎಸ್ಟೇಟ್‌ಗೆ ಧಮಾಕ ಶುರುವಾಗಿದೆ. ಚನ್ನಪಟ್ಟಣದಲ್ಲಿ ಪ್ರವಾಸೋದ್ಯಮಕ್ಕೆ ಬೂಸ್ಟ್ ಕೊಡುವ ಮೂಲಕ ರಿಯಲ್ ಎಸ್ಟೇಟ್‌ಗೆ ಬಂಪರ್ ಕೊಟ್ಟಿದ್ದಾರೆ.
ಚನ್ನಪಟ್ಟಣ ರಿಯಲ್ ಎಸ್ಟೇಟ್‌ಗೆ ಬೂಸ್ಟ್: ಸಾಹಸ ಪ್ರಿಯರನ್ನು ಕೈ ಬೀಸಿ ಕರೆಯುತ್ತಿದೆ ಕಣ್ವ ಜಲಾಶಯ ಜಾಲಿ ಜಾಲಿ.. ಅಂತ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಕಣ್ವ ಜಲಾಶಯ ಭಾಗದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಸಾಹಸ ಕ್ರೀಡೆಗೆ ಹಾಗೂ ಪ್ರವಾಸೋದ್ಯಮಕ್ಕೆ ಇಲ್ಲಿ ಉತ್ತೇಜನ ಕೊಡಲಾಗುತ್ತಿದ್ದು. ಹೋಟೆಲ್ ಉದ್ಯಮ ಬೆಳೆಯುತ್ತಿದೆ. ಇದರಿಂದ ಇಲ್ಲಿ ರಿಯಲ್ ಎಸ್ಟೇಟ್‌ಗೆ ಬೂಸ್ಟ್ ಸಿಕ್ಕಂತಾಗಿದೆ. ಬೆಂಗಳೂರಿಗೆ ಕೆಲವೇ ವರ್ಷಗಳ ಹಿಂದೆ 110 ಹಳ್ಳಿಗಳನ್ನು ಸೇರ್ಪಡೆ ಮಾಡಲಾಗಿತ್ತು. ಇದಾದ ಮೇಲೆ ಬೆಂಗಳೂರಿನ 110 ಹಳ್ಳಿಗಳಲ್ಲಿ ರಿಯಲ್ ಎಸ್ಟೇಟ್‌ಗೆ ಬೂಸ್ಟ್ ಸಿಕ್ಕಿತ್ತು.

ಇದೀಗ ರಾಮನಗರವನ್ನೂ ಬೆಂಗಳೂರು ದಕ್ಷಿಣಭಾಗ ಎಂದು ಘೋಷಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಿದೆ. ಇದು ಈ ಭಾಗದಲ್ಲಿ ಆಸ್ತಿ ಖರೀದಿ ಮಾಡುವವರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಅಲ್ಲದೆ, ಈ ಭಾಗದಲ್ಲಿ ಯಾರೂ ಆಸ್ತಿ ಮಾರಾಟ ಮಾಡಬೇಡಿ ಎಂದು ಡಿ.ಕೆ ಶಿವಕುಮಾರ್ ಅವರು ಹೇಳುತ್ತಿರುವುದರ ಹಿಂದೆ ದೊಡ್ಡ ಲೆಕ್ಕಾಚಾರ ಇದೆ ಎಂದೇ ನಿರೀಕ್ಷೆ ಮಾಡಲಾಗಿದೆ.
ರಿಯಲ್ ಎಸ್ಟೇಟ್‌ಗೆ ಹೇಗೆ ಸಹಕಾರಿ: ರಾಮನಗರ ಭಾಗವನ್ನು ಬೆಂಗಳೂರು ದಕ್ಷಿಣ ಎಂದು ಘೋಷಿಸುವುದರಿಂದ ಬ್ರ್ಯಾಂಡ್ ಹೆಚ್ಚಾಗಲಿದೆ. ಇದರಿಂದ ಈ ಭಾಗಕ್ಕೂ ಹೂಡಿಕೆ ಹೆಚ್ಚಳವಾಗಲಿದೆ ಎನ್ನುವ ಲೆಕ್ಕಾಚಾರ ಇದೆ. ಇನ್ನು ರಾಮನಗರದ ಮಂಚನಬೆಲೆ ಜಲಾಶಯವನ್ನು ಬರೋಬ್ಬರಿ 145 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಮಾಡುವುದಕ್ಕೆ ದೊಡ್ಡ ಪ್ಲ್ಯಾನ್ ಹಾಕಿಕೊಳ್ಳಲಾಗಿದೆ. ಮೂರು ಹಂತದಲ್ಲಿ ಇಲ್ಲಿ ಅಭಿವೃದ್ಧಿ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಪ್ರವಾಸೋದ್ಯಮ ಮತ್ತು ಡಿ.ಕೆ ಶಿವಕುಮಾರ್ ಅವರ ಹೇಳಿಕೆಗಳು ಈ ಭಾಗದಲ್ಲಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ರಿಯಲ್ ಎಸ್ಟೇಟ್‌ಗೆ ಬೂಸ್ಟ್ ಕೊಟ್ಟಿವೆ.
ಬೆಂಗಳೂರು ರಿಯಲ್ ಎಸ್ಟೇಟ್‌ಗೆ ಪೆಟ್ಟು: ಇನ್ನು ರಾಮನಗರ ಭಾಗದಲ್ಲಿ ಇಲ್ಲವೇ ಬೆಂಗಳೂರು ದಕ್ಷಿಣ ಭಾಗದಲ್ಲಿ ರಿಯಲ್ ಎಸ್ಟೇಟ್ ಚಿಗುರಲಿದೆ ಎನ್ನುವ ಸಂತೋಷದ ವಿಷಯದ ಜೊತೆಗೇ ಈ ಭಾಗದಲ್ಲಿ ರಿಯಲ್ ಎಸ್ಟೇಟ್ ಅಭಿವೃದ್ಧಿಯಾದರೆ. ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಮೇಲೆ ಪರಿಣಾಮ ಬೀರಲಿದೆಯೇ ಎನ್ನುವ ಲೆಕ್ಕಾಚಾರ ಜೋರಾಗಿದೆ.
ಯಾಕೆಂದರೆ ಬೆಂಗಳೂರಿನಲ್ಲಿ ಈಗಾಗಲೇ ಭೂಮಿ ಅಡಿ ಬೆಲೆ ಕೆಲವು ಭಾಗದಲ್ಲಿ ಚಿನ್ನಕ್ಕಿಂತ ದುಬಾರಿಯಾಗಿದೆ. ಹೀಗಾಗಿ ಬೆಂಗಳೂರಿನ ಸಮೀಪದ ಪ್ರದೇಶಗಳ ಹುಡುಕಾಟ ಕಳೆದ ಒಂದು ದಶಕದಿಂದಲೂ ಹೆಚ್ಚಾಗಿದೆ. ಬೆಲೆ ಹೆಚ್ಚಳದಿಂದ ಜನ ಬೇರೆ ಭಾಗದಲ್ಲಿ ಭೂಮಿ ಖರೀದಿಗೆ ಮುಂದಾಗಿದ್ದಾರೆ. ಇದರಿಂದ ರಾಮನಗರಕ್ಕೆ ಅವಕಾಶ ಹೆಚ್ಚಾಗಿ ಬೆಂಗಳೂರು ರಿಯಲ್ ಎಸ್ಟೇಟ್‌ಗೆ ಪೆಟ್ಟು ಬೀಳುವ ಸಾಧ್ಯತೆಯೂ ಇದೆ. ಆದರೆ, ಇದರ ಪ್ರಮಾಣ ಕಡಿಮೆ ಇರಲಿದೆ ಎಂದು ಅಂದಾಜಿಸಲಾಗಿದೆ.
ಯಾಕೆಂದರೆ ಬೆಂಗಳೂರಿನಲ್ಲಿ ಈಗಾಗಲೇ ಮೂಲಸೌಕರ್ಯ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ರಿಯಲ್ ಎಸ್ಟೇಟ್‌ಗೆ ಮೆಟ್ರೋ ಸಹ ಬೂಸ್ಟ್ ಕೊಟ್ಟಿದೆ ಎನ್ನಲಾಗಿದೆ.
ರಾಮನಗರ ಹಾಗೂ ಬೆಂಗಳೂರಿನ ದಕ್ಷಿಣ ಭಾಗದಲ್ಲಿ ರಿಯಲ್ ಎಸ್ಟೇಟ್ ಚಿಗುರಿದೆ. ಈ ಭಾಗದಲ್ಲಿ ಆಸ್ತಿ ಮಾರಾಟ ಮಾಡದಂತೆ ಡಿ.ಕೆ ಶಿವಕುಮಾರ್ ಅವರು ಪದೇ ಪದೇ ಹೇಳುತ್ತಿದ್ದಾರೆ. ಸುತ್ತಮುತ್ತಲಿನ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ವಿಚಾರವೂ ಇದರ ಹಿಂದೆ ಇದೆ. ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಮೂರು ಜಾಗಗಳನ್ನು ಅಂತಿಮ ಮಾಡಲಾಗಿದೆ.












Click it and Unblock the Notifications