ಸಂವಿಧಾನದ ಆಶಯಗಳ ಕಗ್ಗೊಲೆ ಮಾಡಿದ ಕಾಂಗ್ರೆಸ್‌ನ ಕರಾಳ ನಿದರ್ಶನಗಳು ಇಲ್ಲಿವೆ! ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ
ಬೆಂಗಳೂರು,ಸೆಪ್ಟೆಂಬರ್ 15: ಭಾರತದ ಸಂವಿಧಾನವನ್ನು ಕಾಂಗ್ರೆಸ್ ಕಗ್ಗೊಲೆ ಮಾಡಿ ಸಂವಿಧಾನದ ಪೀಠಿಕೆಯನ್ನು ಓದುವ ನಾಟಕವಾಡುವುದು ಇದೇ ಮೊದಲಲ್ಲ. ಸಂವಿಧಾನದ ಆಶಯಗಳ ಕಗ್ಗೊಲೆ ಮಾಡಿದ ಕಾಂಗ್ರೆಸ್‌ನ ಕರಾಳ ನಿದರ್ಶನಗಳು ಇಲ್ಲಿವೆ ಎಂದು ರಾಜ್ಯ ಬಿಜೆಪಿ ನಿದರ್ಶನಗಳ ಮಾಹಿತಿಯನ್ನ ಹಂಚಿಕೊಂಡಿದ್ದು, ಕಾಂಗ್ರೆಸ್ ವಿರುದ್ದ ಕಿಡಿಕಾರಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಮಾಜಿ ಪ್ರಧಾನಿ ನೆಹರು ಅವರ ಅವಧಿಯಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗಿತ್ತು. ನೂರಾರು ಪುಸ್ತಕಗಳನ್ನು ಬ್ಯಾನ್ ಮಾಡಿ ಅನೇಕ ಸಾಹಿತಿಗಳನ್ನು ಜೈಲಿಗೆ ಕಳುಹಿಸಲಾಗಿತ್ತು. ಪ್ರಜಾಪ್ರಭುತ್ವಕ್ಕೆ ಅನುಗುಣವಾಗಿ ಆಯ್ಕೆಯಾದ ಕೇರಳ ಸರ್ಕಾರವನ್ನೇ ರದ್ದುಗೊಳಿಸಿದ್ದರು. ಚಂದ್ರಮೋಹಿನಿ, ರಾಮಾಯಣ, ಹಾರ್ಟ್ ಆಫ್ ಇಂಡಿಯಾ ಸೇರಿ ಹಲವು ಪುಸ್ತಕಗಳನ್ನು ನಿಷೇಧ ಮಾಡಿದ್ದರು ಎಂದು ಬಿಜೆಪಿ ತಿಳಿಸಿದೆ.

1975ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ ಸಂವಿಧಾನವನ್ನು ಕೊಂದು ಸರ್ವಾಧಿಕಾರ ಜಾರಿಗೊಳಿಸಿದ್ದರು..! ಇಂದಿರಾ ನಡೆಯನ್ನು ವಿರೋಧಿಸಿದ ಸಾವಿರಾರು ಹೋರಾಟಗಾರರನ್ನು ಜೈಲಿಗೆ ಕಳುಹಿಸಲಾಗಿತ್ತು..! ಸರ್ಕಾರ ವಿರುದ್ಧ ವರದಿಗಳನ್ನು ಬಿತ್ತರಿಸದಂತೆ ಪತ್ರಿಕಾ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗಿತ್ತು..!
ಭಾರತದ ಸಂವಿಧಾನವನ್ನು ಕಾಂಗ್ರೆಸ್ ಕಗ್ಗೊಲೆ ಮಾಡಿ ಸಂವಿಧಾನದ ಪೀಠಿಕೆಯನ್ನು ಓದುವ ನಾಟಕವಾಡುವುದು ಇದೇ ಮೊದಲಲ್ಲ!
— BJP Karnataka (@BJP4Karnataka) September 15, 2023
ಸಂವಿಧಾನದ ಆಶಯಗಳ ಕಗ್ಗೊಲೆ ಮಾಡಿದ ಕಾಂಗ್ರೆಸ್‌ನ ಕರಾಳ ನಿದರ್ಶನಗಳು ಇಲ್ಲಿವೆ!
📖 ಮಾಜಿ ಪ್ರಧಾನಿ ನೆಹರು ಅವರ ಅವಧಿಯಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗಿತ್ತು. ನೂರಾರು ಪುಸ್ತಕಗಳನ್ನು ಬ್ಯಾನ್…
1986ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಶಾ ಬಾನೋ ಪ್ರಕರಣದಲ್ಲಿ ಮಹಿಳೆಯರ ಹಕ್ಕುಗಳನ್ನು ಮೊಟಕುಗೊಳಿಸಿ ತುಷ್ಟೀಕರಣ ರಾಜಕೀಯಕ್ಕಿಳಿದು ಸುಪ್ರೀಂ ಕೋರ್ಟ್ ತೀರ್ಪೇ ರದ್ದುಗೊಳ್ಳುವಂತೆ ಮಾಡಿದ್ದರು. ವಿಚ್ಛೇದಿತ ಮುಸ್ಲಿಂ ಮಹಿಳೆಯರಿಗೆ ನೀಡಬೇಕಾಗಿದ್ದ ಜೀವನಾಂಶವನ್ನೇ ರದ್ದುಗೊಳಿಸಲಾಯಿತು..! ಮುಸ್ಲಿಂ ಕಟ್ಟರ್‌ವಾದಿಗಳಿಗಾಗಿ ಮಹಿಳೆಯರ ವಿಚ್ಛೇದನದ ಮೇಲಿನ ರಕ್ಷಣೆ ಕಾಯ್ದೆಯನ್ನೇ ರದ್ದುಗೊಳಿಸಿದರು..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವಧಿಯಲ್ಲಿ ಸಂವಿಧಾನ ಬದ್ಧ ನಿಯಮಗಳನ್ನೇ ಬದಲಾಯಿಸಿ ಭ್ರಷ್ಟಾಚಾರಕ್ಕೆ ಹೊಸ ರೂಪವನ್ನೇ ನೀಡಲಾಯಿತು. 2ಜಿ ತರಂಗಾಂತರ ಹಂಚಿಕೆ ಹಗರಣವನ್ನು ಮಾಡಲಾಯಿತು..! ಸಾಂವಿಧಾನಿಕ ಹುದ್ದೆಯಲ್ಲಿ ಇಲ್ಲದಿದ್ದರೂ ಚೀನಾದೊಂದಿಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಿಂಬಾಗಿಲಿನ ಮೂಲಕ ಅಕ್ರಮ ವ್ಯವಹಾರಗಳನ್ನು ಹೊಂದಿದ್ದರು..!
ಸಿದ್ದರಾಮಯ್ಯರವರ ಮೊದಲ ಅವಧಿಯ ಆಡಳಿತ ಸಂವಿಧಾನ ವಿರೋಧಿ ನಿಲುವುಗಳಿಂದಲೇ ಕೂಡಿತ್ತು. ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು, ಭ್ರಷ್ಟರನ್ನು ರಕ್ಷಣೆ ಮಾಡಲು ಲೋಕಾಯುಕ್ತವನ್ನೇ ಸಮಾಧಿ ಮಾಡಿದ್ದರು..! ಸಮಾಜಘಾತುಕ ಪಿಎಫ್‌ಐ ಗೂಂಡಾಗಳನ್ನು ಅಮಾಯಕರೆಂದು ಬಿಡುಗಡೆ ಮಾಡಿದ್ದರು, ಈ ಬಾರಿಯೂ ಅದನ್ನು ಮುಂದುವರಿಸಿದ್ದಾರೆ..! ಕಾಂಗ್ರೆಸ್ಸಿಗರು ಸಂವಿಧಾನದ ಉಳಿವಿಗಾಗಿ ಮಾಡಿದ ಒಂದೇ ಒಂದು ಸಾಧನೆ ಏನಾದರೂ ಇದ್ದರೆ, ಇಂದೇ ಬಹಿರಂಗಪಡಿಸಿ ತಮ್ಮ ಘನತೆಯನ್ನು ಪ್ರಜಾಪ್ರಭುತ್ವದ ಮುಂದೆ ಪ್ರಸ್ತುತಪಡಿಸಬೇಕು ಎಂದು ಬಿಜೆಪಿ ಟ್ವೀಟ್ ಮೂಲಕ ತಿಳಿಸಿದೆ.












Click it and Unblock the Notifications