ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರವಿ ಬೆಳಗೆರೆ ಬಂಧನ : ಸೋಮವಾರದ 5 ಪ್ರಮುಖ ಬೆಳವಣಿಗೆ

|
Google Oneindia Kannada News

ಬೆಂಗಳೂರು, ಡಿಸೆಂಬರ್. 11 : ಹಾಯ್ ಬೆಂಗಳೂರು ಪತ್ರಿಕೆ ಪ್ರಧಾನ ಸಂಪಾದಕ ರವಿ ಬೆಳಗೆರೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ಸೋಮವಾರ ನಡೆದ 5 ಬೆಳವಣಿಗೆಗಳ ಮಾಹಿತಿ ಇಲ್ಲಿದೆ.

ರವಿ ಬೆಳಗೆರೆ ಅವರ ಸಿಸಿಬಿ ಪೊಲೀಸ್ ಕಸ್ಟಡಿ ಅಂತ್ಯಗೊಂಡ ಹಿನ್ನಲೆಯಲ್ಲಿ ಸೋಮವಾರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ, ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.

ರವಿ ಬೆಳಗೆರೆ ಬಂಧನ : ಯಶೋಮತಿ ಫೇಸ್‌ಬುಕ್ ಸ್ಟೇಟಸ್ರವಿ ಬೆಳಗೆರೆ ಬಂಧನ : ಯಶೋಮತಿ ಫೇಸ್‌ಬುಕ್ ಸ್ಟೇಟಸ್

ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್‌ನ ನ್ಯಾಯಾಧೀಶ ಜಗದೀಶ್ ಅವರು ರವಿ ಬೆಳಗೆರೆ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ನಂತರ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಯಿತು.

ಸುಪಾರಿ ಕೇಸ್ : ರವಿಬೆಳಗೆರೆಗೆ 14 ದಿನಗಳ ನ್ಯಾಯಾಂಗ ಬಂಧನಸುಪಾರಿ ಕೇಸ್ : ರವಿಬೆಳಗೆರೆಗೆ 14 ದಿನಗಳ ನ್ಯಾಯಾಂಗ ಬಂಧನ

ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಪ್ರಕರಣದ 3ನೇ ಆರೋಪಿ ವಿಜು ಬಡಿಗೇರ್ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈ ಬಂಧನದಿಂದಾಗಿ ಪ್ರಕರಣದ ತನಿಖೆಗೆ ಮತ್ತಷ್ಟು ಚುರುಕು ಸಿಗಲಿದೆ.

ಕೊಲೆ ಅಂದರೆ ರವಿ ಹುಡುಗಾಟ ಅಂದುಕೊಂಡಿದ್ದಾನೆ: ಅಗ್ನಿಶ್ರೀಧರ್ ಸಂದರ್ಶನಕೊಲೆ ಅಂದರೆ ರವಿ ಹುಡುಗಾಟ ಅಂದುಕೊಂಡಿದ್ದಾನೆ: ಅಗ್ನಿಶ್ರೀಧರ್ ಸಂದರ್ಶನ

ರವಿ ಬೆಳಗೆರೆ 2ನೇ ಪತ್ನಿ ಯಶೋಮತಿ ಅವರು ರವಿ ಬೆಳಗೆರೆ ಬಂಧನದ ಕುರಿತು ಮೌನ ಮುರಿದಿದ್ದಾರೆ. ಪ್ರಕರಣದ ಕುರಿತು ಸೋಮವಾರ ಫೇಸ್ ಬುಕ್ ಸ್ಟೇಟಸ್ ಹಾಕಿದ್ದಾರೆ. ರವಿ ಬೆಳಗೆರೆಗೆ ಜಾಮೀನು ನೀಡುವಂತೆ ಅವರ ಪರ ವಕೀಲ ದಿವಾಕರ್ ಅವರು ಮಂಗಳವಾರ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

ರವಿ ಬೆಳಗೆರೆ ಕೈದಿ ನಂ 12785

ರವಿ ಬೆಳಗೆರೆ ಕೈದಿ ನಂ 12785

ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಪ್ರಕರಣದಲ್ಲಿ ರವಿ ಬೆಳಗೆರೆ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧಕ್ಕೆ ಒಪ್ಪಿಸಲಾಗಿದೆ. ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದ್ದು ಅವರೀಗ ಕೈದಿ ನಂಬರ್ 12785. ಸಾಮಾನ್ಯ ಕೈದಿಯಂತೆ ಅವರನ್ನು ನೋಡಿಕೊಳ್ಳಲಾಗುತ್ತಿದ್ದು, ಕೋರ್ಟ್ ಆದೇಶದಂತೆ ಅವರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಲಾಗಿದೆ.

ಪೊಲೀಸರಿಂದ ವಿಜು ಬಡಿಗೇರ್ ಬಂಧನ

ಪೊಲೀಸರಿಂದ ವಿಜು ಬಡಿಗೇರ್ ಬಂಧನ

ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಪ್ರಕರಣದ 3ನೇ ಆರೋಪಿ ವಿಜು ಬಡಿಗೇರ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಪೋನ್ ಕರೆ ಆಧರಿಸಿ ತನಿಖೆ ನಡೆಸಿದ ಪೊಲೀಸರು ಮಹಾರಾಷ್ಟ್ರದಲ್ಲಿ ಬಂಧಿಸಿದ್ದಾರೆ. ಮಂಗಳವಾರ ಕೋರ್ಟಿಗೆ ಹಾಜರುಪಡಿಸುವ ಸಾಧ್ಯತೆ ಇದೆ.

ಮೌನ ಮುರಿದ ಯಶೋಮತಿ

ಮೌನ ಮುರಿದ ಯಶೋಮತಿ

ರವಿ ಬೆಳಗೆರೆ ಬಂಧನದ ಬಗ್ಗೆ ಯಶೋಮತಿ ಮೌನ ಮುರಿದಿದ್ದಾರೆ. ಸೋಮವಾರ 'ಅನುಮಾನಗಳು, ಅವಮಾನಗಳು, ಆರೋಪಗಳು ಬೆನ್ನ ಹಿಂದೆ ನೆರಳಿನಂತೆ ನಡೆದು ಬರುತ್ತಲೇ ಇವೆ. ನಿಖರವಾದ ಮಾಹಿತಿಯಿಲ್ಲದೆ ಟಿವಿ ಮಾಧ್ಯಮಗಳು ತಮಗೆ ಬೇಕಾದ ಬಣ್ಣ ತುಂಬಿ ಒಂದು ರೀತಿಯ ರಿವೇಂಜಿಗಿಳಿದಿವೆ. ಕೆಲವರಿಗೆ ಮನರಂಜನೆ, ಕೆಲವರಿಗೆ ಆತಂಕ. ಕೆಲವರಿಗೆ ಕುತೂಹಲ. ಇನ್ನು ಕೆಲವರಿಗೆ ಅನುಮಾನ' ಎಂದು ಸ್ಟೇಟಸ್ ಹಾಕಿದ್ದಾರೆ.

ಜಾಮೀನು ಅರ್ಜಿ ಹಾಕಿಲ್ಲ

ಜಾಮೀನು ಅರ್ಜಿ ಹಾಕಿಲ್ಲ

ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಪ್ರಕರಣದಲ್ಲಿ ರವಿ ಬೆಳಗೆರೆ ಅವರಿಗೆ ಜಾಮೀನು ನೀಡುವಂತೆ ಇಂದು ಅರ್ಜಿ ಹಾಕಿಲ್ಲ. ಮಂಗಳವಾರ ಅಥವ ಬುಧವಾರ ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗುತ್ತದೆ ಎಂದು ವಕೀಲ ದಿವಾಕರ್ ಹೇಳಿದ್ದಾರೆ. ಎಸಿಎಂಎಂ ನ್ಯಾಯಾಲಯದಲ್ಲಿ ಇಂದು ವಿಚಾರಣೆ ನಡೆಯುವಾಗ ದಿವಾಕರ್ ಅವರು ಹಾಜರಿದ್ದರು.

ರವಿ ಬೆಳಗೆರೆ ವಿರುದ್ಧ ದೂರು ದಾಖಲು

ರವಿ ಬೆಳಗೆರೆ ವಿರುದ್ಧ ದೂರು ದಾಖಲು

ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಅವರ ಹತ್ಯೆಗೆ ಸುಪಾರಿ ನೀಡಿದ ಆರೋಪ ಎದುರಿಸುತ್ತಿರುವ ರವಿ ಬೆಳಗೆರೆ ವಿರುದ್ಧ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಅವರು ಸೋಮವಾರ ಬೆಳಗ್ಗೆ ದೂರು ದಾಖಲಿಸಿದ್ದಾರೆ. ಸಿಸಿಬಿ ವಶದಲ್ಲಿದ್ದ ರವಿ ಬೆಳಗೆರೆ ಭಾನುವಾರ ರಾತ್ರಿ ಸುನೀಲ್ ಹೆಗ್ಗರವಳ್ಳಿಗೆ ಕರೆ ಮಾಡಿದ್ದರು. ಈ ಕುರಿತು ದೂರು ದಾಖಲಿಸಿದ್ದಾರೆ. ಕುಟುಂಬಕ್ಕೆ ರಕ್ಷಣೆ ನೀಡುವಂತೆಯೂ ಅವರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

English summary
Hai Bangalore editor Ravi Belagere arrested for allegedly giving Supari to kill fellow journalist Sunil Heggaravalli. On December 11, 2017 he was sent to judicial custody for 14 days. Here are top 5 developments of the day on issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X