Ration Card: "ಇ - ಕೆವೈಸಿ ಹೆಸರಿನಲ್ಲಿ ಬಡವರ ಅಕ್ಕಿಗೆ ಕನ್ನ: ರೇಷನ್ ಕಾರ್ಡ್ ಹೊಸ ಗಡುವಿನಿಂದ ಆತಂಕ'

Ration Card: ಇ - ಕೆವೈಸಿ ಹೆಸರಿನಲ್ಲಿ ಬಡವರ ಅಕ್ಕಿಗೆ ಕನ್ನ: ರೇಷನ್ ಕಾರ್ಡ್ ಹೊಸ ಗಡುವಿನಿಂದ ಆತಂಕ ಎದುರಾಗಲಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಹೇಳಿದ್ದಾರೆ.

ಒಂದು ಕಡೆ ನೂರು ದಿನದ ಸರ್ಕಾರ ಎಂದು ಭರ್ಜರಿ ಸಂಭ್ರಮ ಆಚರಿಸುತ್ತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ, ಮತ್ತೊಂದು ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ. ಪಡಿತರ ಚೀಟಿದಾರರಿಗೆ ಕಡ್ಡಾಯಗೊಳಿಸಲಾಗಿರುವ ಇ-ಕೆವೈಸಿ (e-KYC) ಪ್ರಕ್ರಿಯೆಯಲ್ಲಿ ತಾಂತ್ರಿಕ ದೋಷ ಹಾಗೂ ಸರ್ವರ್ ಸಮಸ್ಯೆಯಿಂದಾಗಿ ಲಕ್ಷಾಂತರ ಬಡವರು ನಿತ್ಯ ಬೀದಿಯಲ್ಲಿ ನಿಲ್ಲುವಂತಾಗಿದೆ.

Ration Card e-KYC Deadline Sparks Concern Over Poor s Ration Says R Ashoka

ಬೆಳಗಿನ ಜಾವ 5 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ರಾಯಚೂರು, ಯಾದಗಿರಿ, ಕಲುಬುರಗಿ, ತುಮಕೂರು, ಚಿತ್ರದುರ್ಗ ಹಾಗೂ ಬೆಂಗಳೂರು ಗ್ರಾಮಾಂತರ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಬಡವರು ಕೆಲಸ-ಕಾರ್ಯ ಬಿಟ್ಟು ಕ್ಯೂನಲ್ಲಿ ನಿಂತರೂ ಇ-ಕೆವೈಸಿ ಪೂರ್ಣಗೊಳ್ಳುತ್ತಿಲ್ಲ. ಬಯೋಮೆಟ್ರಿಕ್ ಬೆರಳಚ್ಚು ಪಂದ್ಯವಾಗದೆ, ಸರ್ವರ್ ಕಡಿತದಿಂದಾಗಿ ವೃದ್ಧರು, ಮಹಿಳೆಯರು ಹಾಗೂ ಕೂಲಿ ಕಾರ್ಮಿಕರು ಪರದಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಹೇಳಿದ್ದಾರೆ.

ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ ಸರ್ವರ್ ಸರಿಪಡಿಸಲು ನಿಮ್ಮ ಸರ್ಕಾರಕ್ಕೆ ಯೋಗ್ಯತೆಯಿಲ್ಲವೇ?: ಪಡಿತರ ವಿತರಣೆ ಮತ್ತು ಇ-ಕೆವೈಸಿ ಎರಡನ್ನೂ ಒಂದೇ ದುರ್ಬಲ ಸರ್ವರ್ ವ್ಯವಸ್ಥೆಯ ಅಡಿಯಲ್ಲಿ ನಡೆಸಿ ಜನರಿಗೆ ಕಿರುಕುಳ ನೀಡುತ್ತಿರುವುದು ಏಕೆ? ಇ-ಕೆವೈಸಿ ಪ್ರಕ್ರಿಯೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲು ಸರ್ಕಾರಕ್ಕೆ ಇರುವ ತೊಂದರೆಯಾದರೂ ಏನು ಎಂದು ಆರ್. ಅಶೋಕ್ ಅವರು ಪ್ರಶ್ನೆ ಮಾಡಿದ್ದಾರೆ.

ಸೆಪ್ಟೆಂಬರ್ 30ರ ಗಡುವು ವಿಸ್ತರಿಸಿ: ಒಂದೆಡೆ ತಾಂತ್ರಿಕ ದೋಷ, ಮತ್ತೊಂದೆಡೆ ಸೆಪ್ಟೆಂಬರ್ 30ರ ಗಡುವು ನೀಡಿ ಬಡವರನ್ನು ಆತಂಕಕ್ಕೆ ತಳ್ಳಲಾಗಿದೆ. ಈ ಕೂಡಲೇ ಈ ಗಡುವನ್ನು ತೆರವುಗೊಳಿಸಿ, ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು.

ಆಹಾರ ಸಚಿವರ ಜವಾಬ್ದಾರಿರಹಿತ ಧೋರಣೆ: ತಾಂತ್ರಿಕ ಸಮಸ್ಯೆಯನ್ನು ಪರಿಹರಿಸಲಾಗದ ಸರ್ಕಾರ, ನಿಜವಾದ ಫಲಾನುಭವಿಗಳನ್ನು ಗುರ್ತಿಸುವ ಹೆಸರಿನಲ್ಲಿ ಪಡಿತರ ಧಾನ್ಯ ಕಡಿತಗೊಳಿಸುವ ಸಂಚು ನಡೆಸಿದೆಯೇ ಎಂದು ಪ್ರಶ್ನಿಸಿದ್ದಾರೆ. ಆಹಾರ ಸಚಿವ ರಿಜ್ವಾನ್ ಅರ್ಷದ್ ಅವರು ತಕ್ಷಣ ನಿದ್ದೆಯಿಂದ ಎಚ್ಚೆತ್ತು ಸರ್ವರ್ ಸಾಮರ್ಥ್ಯವನ್ನು ಹೆಚ್ಚಿಸಬೇಕು ಹಾಗೂ ಇ-ಕೆವೈಸಿ ಪ್ರಕ್ರಿಯೆಗೆ ಸರಳ ಹಾಗೂ ಪರ್ಯಾಯ ಮಾರ್ಗಗಳನ್ನು ಒದಗಿಸಬೇಕು. ಇಲ್ಲವಾದಲ್ಲಿ, ಪಡಿತರ ವಂಚಿತ ಬಡಜನರ ಪರವಾಗಿ ರಾಜ್ಯಾದ್ಯಂತ ಕಠಿಣ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಎಚ್ಚರಿಸಿದ್ದಾರೆ.

ಸಾಧನೆಯ ಖಾತೆ ಖಾಲಿ - ಸಂಭ್ರಮದ ಖರ್ಚು ಭಾರಿ!

ಸಾಧನೆಯ ಖಾತೆ ಖಾಲಿ - ಸಂಭ್ರಮದ ಖರ್ಚು ಭಾರಿ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಹೇಳಿದ್ದಾರೆ. ಯಾವ ಸಾಧನೆಗೆ ಈ ಸಂಭ್ರಮ, ಯಾವ ಸಾಧನೆಗೆ ಈ ಸಡಗರ, ನಾಚಿಕೆಯಾಗಬೇಕು, ಸಿಎಂ ಡಿ.ಕೆ. ಶಿವಕುಮಾರ್ ಅವರೇ! ಆದರೆ ನಿಮ್ಮ ಭಂಡತನವನ್ನ ಮಾತ್ರ ಮೆಚ್ಚಲೇಬೇಕು! 100 ದಿನಗಳ ಆಡಳಿತಕ್ಕೆ ಬ್ಯಾಂಕ್ವೆಟ್ ಹಾಲ್, ಭರ್ಜರಿ ವೇದಿಕೆ, ವಿದ್ಯುತ್ ದೀಪಾಲಂಕಾರ, ಕೋಟ್ಯಂತರ ರೂಪಾಯಿಗಳ ಪ್ರಚಾರ - ಇಷ್ಟೆಲ್ಲಾ ಸಂಭ್ರಮ ಸಡಗರ ಯಾವ ಪುರುಷಾರ್ಥಕ್ಕೆ? ಯಾವ ಸಾಧನೆಗೆ ಎಂದು ಪ್ರಶ್ನೆ ಮಾಡಿದ್ದಾರೆ.

ಜನರಿಗೆ ತೋರಿಸಲು ಒಂದೇ ಒಂದು ದೊಡ್ಡ ಸಾಧನೆಯೂ ಇಲ್ಲದಿದ್ದಾಗ, ವೈಫಲ್ಯಗಳನ್ನೇ ಸಾಧನೆಗಳೆಂದು ಬಿಂಬಿಸಲು ಈ ಸಂಭ್ರಮವೇ. ರಾಜ್ಯದ ವಾಸ್ತವ ಚಿತ್ರಣ - ಪ್ರತಿಯೊಂದು ವರ್ಗಕ್ಕೂ ದ್ರೋಹ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+