ಅಂಬಿ ಅಂತ್ಯಕ್ರಿಯೆಗೆ ರಮ್ಯಾ ಬಂದಿದ್ದರೆ ಅವರ ಮೇಲೆ ಹಲ್ಲೆ ನಡೆಯುತ್ತಿತ್ತೇ?
ಬೆಂಗಳೂರು, ನವೆಂಬರ್ 28: 'ಅಂಬರೀಶ್ ಅಂಕಲ್' ಎಂದೇ ಕರೆಯುತ್ತಿದ್ದ ರಮ್ಯಾ, ಅಂಬರೀಶ್ ಅವರ ಅಂತಿಮ ದರ್ಶನ ಪಡೆದುಕೊಳ್ಳಲು ಬಾರದೆ ಇರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ತಮಗೆ ರಾಜಕೀಯ ಮಾರ್ಗದರ್ಶನ ತೋರಿದ ಅಂಬರೀಶ್ ಅವರನ್ನೇ ರಮ್ಯಾ ನಿರ್ಲಕ್ಷಿಸಿದ್ದಾರೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ, ರಮ್ಯಾ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳದೆ ಇರಲು ಆಸ್ಟಿಯೋಕ್ಲ್ಯಾಟೋಮಾ ಎಂಬ ಕಾಯಿಲೆಗೆ ತುತ್ತಾಗಿದ್ದು, ಕಾಲಿಗೆ ಗಾಯ ಆಗಿರುವುದರಿಂದ ನಡೆದಾಡುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಅವರು ಗೈರು ಹಾಜರಾಗಿದ್ದಾರೆ ಎಂದು ಸಮರ್ಥನೆ ನೀಡಲಾಗುತ್ತಿದೆ.
ಈ ನಡುವೆ ಮತ್ತೊಂದು ಆಘಾತಕಾರಿ ಸುದ್ದಿಯೂ ಹರಿದಾಡುತ್ತಿದೆ.
ಅಂಬರೀಶ್ ಅವರ ಅಂತ್ಯಕ್ರಿಯೆಗೆ ರಮ್ಯಾ ಬಂದಿದ್ದರೆ, ಅವರ ಮೇಲೆ ಹಲ್ಲೆ ನಡೆಯುವ ಸಾಧ್ಯತೆ ಇತ್ತು ಎಂದು ಹೇಳಲಾಗಿದೆ.
ರಮ್ಯಾ ಅವರ ಗೈರು ಹಾಜರಿಯ ಬಗ್ಗೆ ಅನೇಕ ಊಹಾಪೋಹಗಳು ಹರಿದಾಡುತ್ತಿವೆ. ರಮ್ಯಾ ಅವರ ಅನಾರೋಗ್ಯದ ಬಗ್ಗೆ ಚರ್ಚಿಸುತ್ತಿರುವ ಅನೇಕರು, ರಮ್ಯಾ ಅವರ ಪರವಾಗಿ ಧ್ವನಿ ಎತ್ತಿದ್ದಾರೆ. ಆ ಚರ್ಚೆಗೆ ಈಗ ಮತ್ತೊಂದು ಆಯಾಮ ದೊರಕಿದೆ.

ಟಿಕೆಟ್ ಕಾಯ್ದಿರಿಸಿದ್ದರು
ಒಂದು ವೇಳೆ ರಮ್ಯಾ ಅಂತ್ಯಕ್ರಿಯೆಗೆ ಬಂದಿದ್ದರೆ ಅವರ ವಿರುದ್ಧ ಸಿಟ್ಟಿಗೆದ್ದಿರುವ ಜನರು ಹಲ್ಲೆ ನಡೆಸುವ ಅಪಾಯವಿದೆ ಎಂದು ರಾಜ್ಯ ಗುಪ್ತಚರ ವರದಿ ತಿಳಿಸಿದ್ದವು. ಈ ಕಾರಣದಿಂದ ಅವರು ಬರಲು ಹಿಂದೇಟು ಹಾಕಿದ್ದರು ಎಂದು ಹೇಳಲಾಗಿದೆ.
ರಮ್ಯಾ ಅವರು ದೆಹಲಿಯಲ್ಲಿದ್ದು, ರಾಜ್ಯಸಭೆಯ ಹಿರಿಯ ಸದಸ್ಯರೊಬ್ಬರ ಜತೆ ಬೆಂಗಳೂರಿಗೆ ಬರಲು ವಿಮಾನದ ಟಿಕೆಟ್ ಕಾಯ್ದಿರಿಸಿದ್ದರು. ಆದರೆ, ಗುಪ್ತಚರ ಇಲಾಖೆ ವರದಿ ಬಂದ ಹಿನ್ನೆಲೆಯಲ್ಲಿ ಅವರು ಪ್ರಯಾಣವನ್ನು ರದ್ದುಗೊಳಿಸಿದರು ಎನ್ನಲಾಗಿದೆ.

ಡಿಕೆ ಶಿವಕುಮಾರ್ ಹೇಳಿದ್ದೇ ಬೇರೆ
ರಮ್ಯಾ ಅವರಿಗೆ ನಾನೇ ಖುದ್ದಾಗಿ ದೂರವಾಣಿ ಕರೆ ಮಾಡಿದ್ದೆ ನನಗೆ ಬರಲು ಆಗುವುದಿಲ್ಲ ಎಂದು ತಿಳಿಸಿದ್ದರು. ಕಳೆದ ಕೆಲವು ದಿನಗಳ ಹಿಂದೆ ರಮ್ಯಾ ಅವರು ಕಾಲು ಮುರಿದುಕೊಂಡಿದ್ದು ನಡೆಯಲಾಗದ ಸ್ಥಿತಿಯಲ್ಲಿದ್ದಾರೆ ವೈದ್ಯರ ಸಲಹೆ ಮೇರೆಗೆ ಅಂಬರೀಶ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿಲ್ಲ. ಹೀಗಾಗಿ ಈ ವಿಚಾರದಲ್ಲಿ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಸಚಿವ ಡಿಕೆ ಶಿವಕುಮಾರ್ ಮನವಿ ಮಾಡಿದ್ದರು.
|
ಒಂದು ತಿಂಗಳ ಹಿಂದೆ ಬರೆದಿದ್ದರು
ಅಕ್ಟೋಬರ್ 19ರಂದು ರಮ್ಯಾ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದರು. ನನ್ನ ಕಾಲು ಈಗ ಗೆಡ್ಡೆ ಮತ್ತು ಕ್ಯಾನ್ಸರ್ ಮುಕ್ತವಾಗಿದೆ. ಆದರೆ, ಕೆಲವು ವಾರಗಳವರೆಗೆ ವಿಶ್ರಾಂತಿ ಪಡೆದುಕೊಳ್ಳಬೇಕಿದೆ. ಮತ್ತೆ ಪರೀಕ್ಷೆಗೆ ಒಳಪಡಬೇಕಿದೆ. ನಿಮಗೆ ಯಾರಿಗಾದರೂ ನೋವಿನ ಅನುಭವ ಆದಾಗ ಅದನ್ನು ನಿರ್ಲಕ್ಷಿಸದೆಯೇ ವೈದ್ಯರನ್ನು ಸಂಪರ್ಕಿಸಿ ಎಂದು ಸಲಹೆ ನೀಡಿದ್ದರು. ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಈ ಸಮಸ್ಯೆ ಬೆಳೆದುಬಿಟ್ಟರೆ ಭಾರಿ ತೊಂದರೆಯಾಗುತ್ತದೆ. ಮೊದಲೇ ಅದನ್ನು ಪತ್ತೆಹಚ್ಚಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಉತ್ತಮ ಎಂದು ರಮ್ಯಾ ವಿವರಿಸಿದ್ದರು. ಅಂಬರೀಶ್ ಅಂತಿಮ ದರ್ಶನಕ್ಕೆ ಅವರು ಬಾರದೆ ಇರಲು ಇದೇ ಕಾರಣ ಎಂದು ವಿಶ್ಲೇಷಿಸಲಾಗಿದೆ.
|
ಮನುರೂಪದ ರಾಕ್ಷಸ ಗುಣ
ಸಾವಿನಲ್ಲಿ ಗೌರವಿಸದವರು ಮನುರೂಪದ ರಾಕ್ಷಸ ಗುಣದವರು..! ಕ್ರೂರತ್ವದ ಮಗ್ಗಲು ಪ್ರಕಟಿಸಿದ ಮಹನೀಯರು.! ದೇವನೊಬ್ಬ ಇರುವ ಅವ ಎಲ್ಲ ನೋಡುತಿರುವ! ದೋಸೆ ಮೊಗಚಿ ತಳಸೀಯುತ್ತದೆ ತಪ್ಪದೆ ಒಂದು ದಿನ! ಯತಃಮನಃತಥಃಜೀವನ! ಎಂದು ಜಗ್ಗೇಶ್ ಪರೋಕ್ಷವಾಗಿ ರಮ್ಯಾ ವಿರುದ್ಧ ಹರಿಹಾಯ್ದಿದ್ದಾರೆ.












Click it and Unblock the Notifications