ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮೋದಿ ಸಂಪುಟದಲ್ಲಿ ಕರ್ನಾಟಕಕ್ಕೆ ಹೆಚ್ಚು ಆದ್ಯತೆ ಬೇಕು'

|
Google Oneindia Kannada News

ಬೆಂಗಳೂರು, ಜುಲೈ 06 : 'ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಕರ್ನಾಟಕದ ಸಂಸದರಿಗೆ ಹೆಚ್ಚಿನ ಅವಕಾಶಬೇಕು' ಎಂದು ಸಚಿವ ರಮೇಶ್ ಜಿಗಜಿಣಗಿ ಹೇಳಿದ್ದಾರೆ. ಮಂಗಳವಾರ ಮೋದಿ ಸಂಪುಟ ಪುನಾರಚನೆಯಾಗಿದ್ದು, ವಿಜಯಪುರ ಸಂಸದ ರಮೇಶ್ ಅವರು ಸಂಪುಟ ಸೇರಿದ್ದಾರೆ.

'ಕರ್ನಾಟಕದಿಂದ ಆಯ್ಕೆಯಾದ ಸಂಸದರ ಪೈಕಿ 3 ರಿಂದ 4 ಜನರು ಸಂಪುಟದಲ್ಲಿದ್ದೇವೆ. 15 ಕ್ಕೂ ಹೆಚ್ಚು ಸಂಸದರನ್ನು ಕರ್ನಾಟಕ ಆರಿಸಿ ಕಳಿಸಿದೆ. ಆದ್ದರಿಂದ, ಸಂಪುಟದಲ್ಲಿ ರಾಜ್ಯದವರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು' ಎಂದು ರಮೇಶ್ ಜಿಗಜಿಣಗಿ ಹೇಳಿದ್ದಾರೆ. [ರಮೇಶ್ ಜಿಗಜಿಣಗಿ ಪರಿಚಯ]

ramesh jigajinagi

ಕರ್ನಾಟಕದಿಂದ ಆಯ್ಕೆಯಾದ ಸಂಸದರಲ್ಲಿ ರಮೇಶ್ ಜಿಗಜಿಣಗಿ (ಕುಡಿಯುವ ನೀರು ಮತ್ತು ನೈರ್ಮಲ್ಯ), ಜಿ.ಎಂ.ಸಿದ್ದೇಶ್ವರ (ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ), ಅನಂತ್ ಕುಮಾರ್ (ರಾಸಾಯನಿಕ ಮತ್ತು ರಸಗೊಬ್ಬರ, ಸಂಸದೀಯ ವ್ಯವಹಾರ), ಡಿ.ವಿ.ಸದಾನಂದ ಗೌಡ (ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ) ಮೋದಿ ಸಂಪುಟದಲ್ಲಿ ಸಚಿವರಾಗಿದ್ದಾರೆ. [ಮೋದಿ ಸಂಪುಟದಲ್ಲಿ ಯಾರಿಗೆ, ಯಾವ ಖಾತೆ?]

ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾದ ನಿರ್ಮಲಾ ಸೀತಾರಾಮನ್ (ವಾಣಿಜ್ಯ ಮತ್ತು ಕೈಗಾರಿಕೆ) ಅವರು ಮೋದಿ ಸಂಪುಟದಲ್ಲಿ ಸಚಿವರಾಗಿದ್ದಾರೆ. ಆದ್ದರಿಂದ, ಐವರು ಸಂಪುಟದಲ್ಲಿದ್ದಾರೆ ಎಂದು ಅಂದುಕೊಳ್ಳಬಹುದು. ಆದರೆ, ಹೆಚ್ಚಿನ ಪ್ರಾತಿನಿಧ್ಯ ಅಗತ್ಯವಿದೆ ಎಂಬುದು ನೂತನ ಸಚಿವರ ಅಭಿಪ್ರಾಯ. [ನಾಯ್ಡು ಬದಲು ನಿರ್ಮಲಾ: ಕನ್ನಡಿಗರ ಹೋರಾಟ ವ್ಯರ್ಥ?]

English summary
More representation from the state is required. There are around 16 MPs from the state out of whom only 3-4 have been inducted as ministers says Ramesh Jigajinagi. Ramesh Jigajinagi who was on Tuesday inducted into the Narendra Modi cabinet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X