Lok Sabha Elections 2024: ಪ್ರಧಾನಿ ಮೋದಿ ನನಗೆ ಅನ್ಯಾಯ ಮಾಡಲ್ಲ, ಟಿಕೆಟ್ ಕೈತಪ್ಪಲ್ಲ: ರಮೇಶ ಜಿಗಜಿಣಗಿ
ವಿಜಯಪುರ, ಜೂನ್ 14: 2024 ರ ಲೋಕಸಭಾ ಚುನಾವಣೆಯಲ್ಲಿ ಈ ಬಾರೀ 12 ಜನ ಹಾಲಿ ಸಂಸದರಿಗೆ ಟಿಕೆಟ್ ಇಲ್ಲ ಎನ್ನುವ ಚರ್ಚೆ ಬಿಜೆಪಿ ಪಾಳಯದಲ್ಲಿ ಜೋರಾಗಿದ್ದು, ಹಲವು ಹಿರಿಯ ಸಂಸದರು ಟಿಕೆಟ್ ಕೈ ತಪ್ಪುವ ಭೀತಿಯಲ್ಲಿದ್ದಾರೆ.
ವಯಸ್ಸು ಹಾಗೂ ಅನಾರೋಗ್ಯದ ಕಾರಣದಿಂದ ಕೆಲ ನಾಯಕರಿಗೆ ಮುಂದಿದನ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಲಿದೆ ಎಂಬ ಚರ್ಚೆಗಳು ಶುರುವಾಗಿದ್ದು, ನನಗೆ ಲೋಕಸಭೆ ಟಿಕೆಟ್ ಕೈತಪ್ಪುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷ ನನಗೆ ಅನ್ಯಾಯ ಮಾಡುವುದಿಲ್ಲ ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಹಿರಿಯ ಸಂಸದರಿಗೆ ಬಿಜೆಪಿ ಟಿಕೆಟ್ ಕೈತಪ್ಪಲಿದೆ ಎಂಬ ವದಂತಿಗಳಿಗೆ ಖಾರವಾಗಿ ಪ್ರತಿಕ್ರಿಯೆ ನೀಡಿದರು. ಹೊಟ್ಟೆ ಉರಿಯುವವರು ಹಿರಿಯರಿಗೆ ಬಿಜೆಪಿಯಲ್ಲಿ ಟಿಕೆಟ್ ಸಿಗುವುದಿಲ್ಲ ಎಂದು ಹೇಳುತ್ತಾರೆ ಎಂದು ಕಿಡಿಕಾರಿದರು.
ಇನ್ನೂ ಸ್ವಪಕ್ಷದವರ ವಿರುದ್ದ ವಾಗ್ದಾಳಿ ನಡೆಸಿದ್ದು, ಯಾವುದೇ ಪಟ್ಟಿ ಇದ್ದರೂ ಅದರಲ್ಲಿ ರಮೇಶ ಜಿಗಜಿಣಗಿ ಹೆಸರನ್ನು ದುರುದ್ದೇಶದಿಂದ ಸೇರಿಸಿ ಅಪಪ್ರಚಾರ ಮಾಡುತ್ತಾರೆ. ವಿರೋಧಿಗಳಿಗೆ ನನ್ನ ಬಗ್ಗೆ ಹೆದರಿಕೆ ಇದೆ. ಎಲ್ಲಾದರೂ ಸೇರಿ ಟಿಕೆಟ್ ತಗೊಂಡು ಬಿಡ್ತಾನೆ ಎನ್ನುವ ಹೆದರಿಕೆ ಅವರಿಗೆ ಇದೆ. ಹೀಗಾಗಿ ನನ್ನನ್ನು ಸೇರಿಸಿ ಹಿರಿಯರಿಗೆ ಟಿಕೆಟ್ ಇಲ್ಲ ಎಂದು ಸುಳ್ಳು ಸುದ್ದಿ ಹರಡಿಸುತ್ತಾರೆ ಎಂದು ಕಿಡಿಕಾರಿದರು.
ಒಂದು ವೇಳೆ ಟಿಕೆಟ್ ಸಿಗದಿದ್ದರೆ ವಿಜಯಪುರ ನಗರದ ಗ್ರಾಮದೇವತೆ ಶ್ರೀ ಸಿದ್ಧರಾಮೇಶ್ವರನಿಗೆ ಟೆಂಗಿನಕಾಯಿ ಒಡೆಯುತ್ತೇನೆ. ದೇವರಿಗೆ ಎರಡೂ ಕೈ ಮುಗಿದು ಒಳ್ಳೆಯದನ್ನು ಮಾಡಿದ್ದೀಯಾ ಎಂದು ಆರಾಮವಾಗಿ ಮನೆಯಲ್ಲಿರುತ್ತೇನೆ. ನಾನು 45 ವರ್ಷ ರಾಜಕಾರಣ ಮಾಡಿದ್ದೇನೆ. ಪಾರ್ಟಿ ನನಗೆ ಮೋಸ ಮಾಡುವುದಿಲ್ಲ. ಪ್ರಧಾನಿಯೂ ನನಗೆ ಅನ್ಯಾಯ ಮಾಡುವುದಿಲ್ಲ. ನನಗೇ ಟಿಕೆಟ್ ಕೊಡುತ್ತಾರೆ. ನಾನೇ ಎಲೆಕ್ಷನ್ ನಿಲ್ಲುತ್ತೇನೆ ಎಂದು ಸಂಸದರು ಸ್ಪಷ್ಟಪಡಿಸಿದರು.
45 ವರ್ಷ ರಾಜಕಾರಣ ಮಾಡಿದ್ದೇನೆ. ಯಾರೂ ಮಾಡದ ರಾಜಕಾರಣ ನಾನು ಮಾಡಿದ್ದೇನೆ. ಯಾರಿಗೂ ನೋವಾಗದಂತೆ ರಾಜಕಾರಣ ಮಾಡಿದ್ದೇನೆ. ದಲಿತನಾಗಿ ಯಾವ ಸಮಾಜದ ಮನಸ್ಸಿಗೂ ನೋವಾಗದಂತೆ ರಾಜಕಾರಣ ಮಾಡಿದ್ದೇನೆ. ಇವತ್ತಿಗೂ ಹೀಗೆ ಇದ್ದೇನೆ. ಹೀಗೆ ಸಾಯುತ್ತೇನೆ. ಯಾರಿಗೂ ತೊಂದರೆ ಮಾಡಲು ಹೋಗುವುದಿಲ್ಲ ಎಂದರು.
ರಾಜಕೀಯ ಕಾರಣ, ಅಸಹಿಷ್ಣು ಭಾವನೆಯಿಂದ ಪಠ್ಯ ಪರಿಷ್ಕರಣೆ: ಸಿ.ಟಿ.ರವಿ
ಜಬಿಜೆಪಿ ಸರಕಾರದ ಅವಧಿಯಲ್ಲಿ ಶಿಕ್ಷಣ ಸಚಿವರಾಗಿ ಕೆಲಸ ಮಾಡಿದ ಎಲ್ಲ ಮಾಜಿ ಶಿಕ್ಷಣ ಸಚಿವರು, ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿ ಮೇಲ್ಮನೆ ಸದಸ್ಯರಾಗಿ ಕೆಲಸ ಮಾಡುತ್ತಿರುವ ಸದಸ್ಯರು ಒಟ್ಟು ಸೇರಿ ಸಭೆ ನಡೆಸಲಾಗಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಶಿಕ್ಷಣ ಕ್ಷೇತ್ರದಲ್ಲಿ ಸಮಗ್ರವಾಗಿ ಅವಲೋಕನ ಮಾಡದೆ, ಸಾಧಕ ಬಾಧಕ ಅಧ್ಯಯನ ಮಾಡದೆ, ರಾಜಕೀಯ ಕಾರಣಕ್ಕಾಗಿ ಪೂರ್ವಾಗ್ರಹಪೀಡಿತರಾಗಿ ಕೊಟ್ಟಿರುವ ಪಠ್ಯ ಪರಿಷ್ಕರಣೆ ಕುರಿತ ಹೇಳಿಕೆ ಅಸಹಿಷ್ಣು ಭಾವನೆಯಿಂದ ಕೂಡಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಡಿಕಾರಿದರು.
ಕೆಲವು ಮಹನೀಯರ ಪಾಠವನ್ನು ಕೈಬಿಡಬೇಕು ಎಂಬ ಹೇಳಿಕೆ ಕುರಿತು ಸಮಗ್ರವಾಗಿ ಚರ್ಚಿಸಲಾಗಿದೆ. ಶಿಕ್ಷಣ ಕ್ಷೇತ್ರವು ಪೂರ್ವಾಗ್ರಹಪೀಡಿತ ಮನಸ್ಥಿತಿಯಿಂದ ಹೊರಬರಬೇಕು. ಉತ್ತಮ ನಾಗರಿಕರನ್ನು ಶಿಕ್ಷಣ ತಯಾರು ಮಾಡಬೇಕು ಎಂದು ಅವರು ಕಿವಿಮಾತು ಹೇಳಿದರು. ಸಮಾನಮನಸ್ಕರ ಸಭೆ ನಡೆಸಿ ಸಲಹೆಗಳನ್ನು ಪಡೆಯಲಾಗುವುದು. ಅದರ ಬಳಿಕ ಮುಂದಿನ ರೂಪುರೇಷೆ ನಿರ್ಧರಿಸಲಾಗುತ್ತದೆ ಎಂದರು.
ಮಾಜಿ ಸಚಿವ ಬಿ.ಸಿ.ನಾಗೇಶ್ ಅವರು ಮಾತನಾಡಿ, ದ್ವೇಷದಿಂದ ವರ್ತಿಸುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಎನ್‍ಸಿಇಆರ್‍ಟಿ ಸೂಚನೆ ಮೇರೆಗೆ ನಾವು ಹಿಂದೆ ಬದಲಾವಣೆ ಮಾಡಿದ್ದೆವು ಎಂದು ಸ್ಪಷ್ಟಪಡಿಸಿದರು.
ತಪ್ಪುಗಳನ್ನು ಸರಿಪಡಿಸುವ ಉದ್ದೇಶ ನಮ್ಮದಾಗಿತ್ತು. ಈಗ ದ್ವೇಷದಿಂದ ಬದಲಾವಣೆ ಮಾಡಿದರೆ ಅದರಿಂದ ಮಕ್ಕಳು, ಪೋಷಕರ ಮೇಲೆ ದುಷ್ಪರಿಣಾಮ ಬೀರಲಿದೆ. ಬದಲಾವಣೆ ಮಾಡುವುದಿದ್ದರೆ ಪೋಷಕರ ಗಮನಕ್ಕೆ ತಂದು ಮಾಡಬೇಕು ಎಂದು ಒತ್ತಾಯಿಸಿದರು.












Click it and Unblock the Notifications