'ಸಿಡಿ' ಪ್ರಕರಣಕ್ಕೆ ಮಹತ್ವದ ತಿರುವು; 'ಸಿಡಿ' ಪ್ರಕರಣದ ಸಂತ್ರಸ್ತ ಯುವತಿ ಈಗೆಲ್ಲಿದ್ದಾರೆ?

ಬೆಂಗಳೂರು, ಮಾ. 09: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ 'ಸಿಡಿ' ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳತ್ತಿದೆ. ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕ ಮೊದಲ ಬಾರಿ ರಮೇಶ್ ಜಾರಕಿಹೊಳಿ ಅವರು ಇಂದು ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪ್ರಕರಣದಲ್ಲಿ ನಾನು ನಿರಪರಾಧಿ ಎಂಬುದನ್ನು ಪುನರುಚ್ಚರಿಸಿದ್ದಾರೆ.

Recommended Video

      ನನ್ನ ವಿರುದ್ಧ ತೆವಲಿಗೆ ಮಾತನಾಡುವುದು ನಿಲ್ಲಿಸಬೇಕು-ಹೆಚ್ ಡಿಕೆಗೆ ಪರೋಕ್ಷವಾಗಿ ಕಲ್ಲಹಳ್ಳಿ ಟಾಂಗ್ | Oneindia Kannada

      ಕಳೆದ ಮಾರ್ಚ್ 2ರಂದು ಶುರುವಾದ 'ಸಿಡಿ' ಪ್ರಕರಣ, ನಂತರ ರಮೇಶ್ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರೇ ಹೇಳಿದಂತೆ ಇನ್ನು ಕೆಲ ದಿನಗಳಲ್ಲಿ ತಾರ್ಕಿಕ ಅಂತ್ಯ ಕಾಣಲಿದೆ ಎಂಬ ಖಚಿತ ಮಾಹಿತಿ ಇದೆ.

      'ಸಿಡಿ' ಬಿಡುಗಡೆಯಾದ ಬಳಿಕ ಕ್ಷಣಕ್ಕೊಂದು ಬೆಳವಣಿಗೆಗಳು ತೆರೆಯ ಹಿಂದೆ ನಡೆದಿವೆ. ಬಿಡುಗಡೆ ಮಾಡುವಂತೆ ದಿನೇಶ್ ಕಲ್ಲಹಳ್ಳಿ ಅವರಿಗೆ 'ಸಿಡಿ' ಕೊಟ್ಟವರು ಬೇರೆ ಯಾವುದೇ ಮಾಹಿತಿ ನೀಡಿರಲಿಲ್ಲ. ಹೆಣ್ಣುಮಗಳಿಗೆ ಅನ್ಯಾಯವಾಗಿದೆ ಎಂದಷ್ಟೇ ಹೇಳಿದ್ದರು. ಹೀಗಾಗಿ ದಿನೇಶ್ ಕಲ್ಲಹಳ್ಳಿ ದೂರು ಸಲ್ಲಿಸಿ 'ಸಿಡಿ' ಬಿಡುಗಡೆ ಮಾಡಿದ್ದರು.

      ಆ ಬಳಿಕ ಮೇಲೆ ಒಂದರ ನಂತರ ಮತ್ತೊಂದು ತಾಂತ್ರಿಕ ಸಮಸ್ಯೆಗಳನ್ನು ದಿನೇಶ್ ಕಲ್ಲಹಳ್ಳಿ ಅವರು ಎದುರಿಸಿದ್ದಾರೆ. ಜೊತೆಗೆ ದಿನೇಶ್ ಕಲ್ಲಹಳ್ಳಿ ಅವರು ಸಿಡಿ ಬಿಡುಗಡೆ ಮಾಡುವ ಮೊದಲೇ ರಷ್ಯಾದಿಂದ ಯುಟ್ಯೂಬ್‌ನಲ್ಲಿ 'ಸಿಡಿ'ಯಲ್ಲಿನ ದೃಶ್ಯಾವಳಿಗಳು ಅಪ್‌ಲೋಡ್ ಆಗಿದ್ದವು. ಇದ್ಯಾವುದು ದಿನೇಶ್ ಕಲ್ಲಹಳ್ಳಿ ಅವರ ಗಮನಕ್ಕೆ ಇರಲಿಲ್ಲ ಎಂಬ ಮಾಹಿತಿಯೂ ಇದೆ.

      ಇಷ್ಟೆಲ್ಲ ಬೆಳವಣಿಗೆಳು ಆಗುತ್ತಿದ್ದರೂ ಸಂತ್ರಸ್ತ ಯುವತಿ ಮಾತ್ರ ಇನ್ನೂ ಅಧಿಕೃತವಾಗಿ ಪತ್ತೆಯಾಗಿಲ್ಲ. ಜೊತೆಗೆ ರಮೇಶ್ ಜಾರಕಿಹೊಳಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರೂ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಲೂ ಕನಿಷ್ಠ ದೂರು ಕೂಡ ಸಲ್ಲಿಕೆಯಾಗಿಲ್ಲ. ಇದರೊಂದಿಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಐದು ದಿನಗಳ ನಂತರ ರಮೇಶ್ ಜಾರಕಿಹೊಳಿ ಅವರು ಇವತ್ತು ಅಜ್ಞಾತವಾಸದಿಂದ ಹೊರಬಂದು ಸುದ್ದಿಗೋಷ್ಠಿ ನಡೆಸಿದ್ದಾರೆ. ಇಡೀ ಪ್ರಕರಣದ ಹಿಂದೆ 'ಆ ಮಹಾನ್ ನಾಯಕ'ನಿದ್ದಾನೆ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇವು 'ಸಿಡಿ' ಪ್ರಕರಣದ ಕುರಿತು ಮೇಲ್ನೋಟಕ್ಕೆ ಕಂಡು ಬರುತ್ತಿರುವ ಘಟನಾವಳಿಗಳು.

      ಆದರೆ ಇಡೀ ಪ್ರಕರಣ ಬಹಿರಂಗವಾದ ನಂತರ ಬಹಳಷ್ಟು ರಹಸ್ಯ ಬೆಳವಣಿಗೆಗಳು ನಡೆದಿವೆ ಎಂಬ ಖಚಿತ ಮಾಹಿತಿ 'ಒನ್‌ಇಂಡಿಯಾ ಕನ್ನಡ'ಕ್ಕೆ ಸಿಕ್ಕಿವೆ.

      ರಮೇಶ್ ಜಾರಕಿಹೊಳಿ ಅವರು ಆರೋಪಿಸಿರುವ ಆ 'ಮಾಹಾನ್ ನಾಯಕನ' ಬಳಿ ಸಂತ್ರಸ್ತ ಯುವತಿಯ ಮತ್ತೊಂದು 'ಸಿಡಿ' ಇದೆ ಎಂಬ ಮಾಹಿತಿಯೂ ಇದೆ. ಅದು ಜಾರಕಿಹೊಳಿ ಸಹೋದರರ ಆತಂಕಕ್ಕೆ ಕಾರಣವಾಗಿತ್ತು. ಹೀಗಾಗಿ ದೂರುದಾರ ದಿನೇಶ್ ಕಲ್ಲಹಳ್ಳಿ ಅವರು ದೂರು ವಾಪಾಸ್ ಪಡೆದ ಬಳಿಕ ಇಡೀ ಪ್ರಕರಣ ಬೇರೆ ರೀತಿಯ ತಿರುವು ಪಡೆಯಿತು.

      ದಿನೇಶ್ ಕಲ್ಲಹಳ್ಳಿಗೆ ಸಂತ್ರಸ್ತ ಯುವತಿ ದೂರವಾಣಿ ಕರೆ?

      ದಿನೇಶ್ ಕಲ್ಲಹಳ್ಳಿಗೆ ಸಂತ್ರಸ್ತ ಯುವತಿ ದೂರವಾಣಿ ಕರೆ?

      'ಸಿಡಿ' ಬಿಡುಗಡೆ ಬಳಿಕ ದೂರುದಾರ ದಿನೇಶ್ ಕಲ್ಲಹಳ್ಳಿ ಅವರಿಗೆ ಸಂತ್ರಸ್ತ ಯುವತಿಯೇ ದೂರವಾಣಿ ಕರೆ ಮಾಡಿದ್ದರು ಎಂಬ ಖಚಿತ ಮಾಹಿತಿಯಿದೆ. ಯಾವಾಗ ಸಂತ್ರಸ್ತ ಯುವತಿಯೇ ಕರೆ ಮಾಡಿದ್ರೋ, ಆಗ ದಿನೇಶ್ ಕಲ್ಲಹಳ್ಳಿ ಕೂಡ ಕಂಗಾಲಾಗಿದ್ದಾರೆ. ಹೀಗಾಗಿ ದೂರು ಹಿಂದಕ್ಕೆ ಪಡೆಯಲು ದಿನೇಶ್ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

      ದಿನೇಶ್ ಕಲ್ಲಹಳ್ಳಿ ತಾವು ಕೊಟ್ಟಿರುವ ದೂರು ವಾಪಾಸ್ ಪಡೆಯುವುದಾಗಿ ಘೋಷಣೆ ಮಾಡುತ್ತಿದ್ದಂತೆಯೆ ರಮೇಶ್ ಜಾರಕಿಹೊಳಿ ಸಹೋದರ ಬಾಲಚಂದ್ರ ಜಾರಕಿಹೊಳಿ ಅವರು ಸುದ್ದಿಗೋಷ್ಠಿ ನಡೆಸಿದ್ದರು.

      ಯುವತಿ ಇದ್ದುದ್ದು ಎಲ್ಲಿ?

      ಯುವತಿ ಇದ್ದುದ್ದು ಎಲ್ಲಿ?

      ಋಷಿ ಮೂಲ, ನದಿ ಮೂಲ ಹಾಗೂ ಸ್ತ್ರೀ ಮೂಲ ಹುಡುಕಲು ಹೋಗಬಾರದು ಎಂಬ ಗಾದೆ ಮಾತಿದೆ. ಅದರಂತೆ ಸಂತ್ರಸ್ತೆಯನ್ನು ಪತ್ತೆ ಮಾಡಲು ಬೆಂಗಳೂರು ಪೋಲಿಸರು ಹರಸಾಹಸ ಪಟ್ಟಿದ್ದರು. ಆದರೆ ಯುವತಿ ಪತ್ತೆಯಾಗಿದ್ದು ಬೆಂಗಳೂರಿನಲ್ಲಿ ಅಲ್ಲ. ಅಸಲಿಗೆ ಆ ಸಂತ್ರಸ್ತೆ 'ಸಿಡಿ' ಬಿಡುಗಡೆ ಆದಾಗ ಬೆಂಗಳೂರಿನಲ್ಲಿ ಇರಲೇ ಇಲ್ಲ. ಮೂಲಗಳ ಪ್ರಕಾರ ಆಕೆ ಇದ್ದುದು ಗೋವಾ ಅಥವಾ ವಿಜಯಪುರ ಜಿಲ್ಲೆಯ ನಿಡಗುಂದಿಯಲ್ಲಿ ಎಂಬ ಮಾಹಿತಿಯಿದೆ.

      ಆ ಸಂತ್ರಸ್ತ ಯುವತಿ ಮೂಲತಃ ಬೆಳಗಾವಿ ಜಿಲ್ಲೆಯ ಸಂಕೇಶ್ವರದವರು. ತಂದೆ ಸೇನೆಯಲ್ಲಿದ್ದು, ನಿವೃತ್ತರಾಗಿದ್ದಾರೆ. ತಂದೆ ಸೇನೆಯಲ್ಲಿ ಇದ್ದುದ್ದರಿಂದ ಯುವತಿ ತನ್ನ ತಾಯಿಯ ತವರು ವಿಜಯಪುರ ಜಿಲ್ಲೆಯ ನಿಡಗುಂದಿ (ಆಲ್ಮಟ್ಟಿ ಡ್ಯಾಂ ಸಮೀಪ)ಯಲ್ಲಿ ತನ್ನ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. ಹೀಗಾಗಿ ಸಿಡಿ ಬಹಿರಂಗವಾದಾಗ ಒಂದು ಮೂಲದ ಪ್ರಕಾರ ಸಂತ್ರಸ್ತ ಯುವತಿ ನಿಡಗುಂದಿಯಲ್ಲಿದ್ದರು. ಮತ್ತೊಂದು ಮೂಲದ ಪ್ರಕಾರ ಗೋವಾದಲ್ಲಿದ್ದರು. ಒಟ್ಟಾರೆ ಬೆಂಗಳೂರಿನಲ್ಲಿ ಅಥವಾ ವಿದೇಶದಲ್ಲಿ ಇರಲಿಲ್ಲ.

      ಬೆಂಗಳೂರಿನಲ್ಲಿದ್ದಾರಾ ಸಂತ್ರಸ್ತ ಯುವತಿ?

      ಬೆಂಗಳೂರಿನಲ್ಲಿದ್ದಾರಾ ಸಂತ್ರಸ್ತ ಯುವತಿ?

      'ಸಿಡಿ' ಬಹಿರಂಗಾವಗುತ್ತಿದ್ದಂತೆಯೆ ಯುವತಿಯನ್ನು ಪತ್ತೆ ಮಾಡುವ ಪ್ರಯತ್ನಗಳು ನಡೆದಿದ್ದವು. ಕೊನೆಗೆ ಪತ್ತೆಯಾಗಿದ್ದ ಯುವತಿಯನ್ನು ಬೆಂಗಳೂರಿಗೆ ಕರೆತರಲಾಗಿದೆ. ಬೆಂಗಳೂರಿಗೆ ಬಂದ ಬಳಿಕ ಆ ಸಂತ್ರಸ್ತ ಯುವತಿಯೇ ದೂರವಾಣಿ ಕರೆ ಮಾಡಿ ದಿನೇಶ್ ಕಲ್ಲಹಳ್ಳಿಗೆ ದೂರು ವಾಪಾಸ್ ಪಡೆಯುವಂತೆ ಸೂಚಿಸಿದ್ದಾರೆ. ಹೀಗಾಗಿ ದಿನೇಶ್ ದೂರು ವಾಪಾಸ್ ಪಡೆಯಲು ಮುಂದಾಗಿದ್ದಾರೆ ಎಂಬ ಮಾಹಿತಿಯಿದೆ. ಹೀಗಾಗಿಯೇ 'ಸಿಡಿ' ಬಿಡುಗಡೆ ಮಾಡಿ ದೂರು ಸಲ್ಲಿಸಿದ್ದ ದಿನೇಶ್ ಕಲ್ಲಹಳ್ಳಿ ಮೇಲೆ ಜಾರಕಿಹೊಳಿ ಸಹೋದರರು ಮೃದುವಾಗಿಯೇ ಮಾತನಾಡಿದ್ದರು.

      ಮಹಾನಾಯಕನ ಬಳಿ ಇದೆಯಾ ಇನ್ನೊಂದು 'ಸಿಡಿ'?

      ಮಹಾನಾಯಕನ ಬಳಿ ಇದೆಯಾ ಇನ್ನೊಂದು 'ಸಿಡಿ'?

      ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಇಡೀ ಪ್ರಕರಣದ ಹಿಂದೆ ಆ ಮಹಾನ್ ನಾಯಕ ಇದ್ದಾನೆ, ಸುಮ್ಮನೆ ಬಿಡಲ್ಲ ಎಂದಿದ್ದಾರೆ. ಆದರೆ ಆ ಮಾಹಾನ್ ನಾಯಕನ ಬಳಿ ಯುವತಿಯ ಮತ್ತೊಂದು 'ಸಿಡಿ' ಇದೆ ಎನ್ನಲಾಗಿದೆ. ಆ 'ಸಿಡಿ'ಯಲ್ಲಿ ತನ್ನನ್ನು ಸಚಿವರು ಬಳಸಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಅದನ್ನು ರೆಕಾರ್ಡ್‌ ಮಾಡಿ ಇಟ್ಟುಕೊಂಡಿದ್ದು. ಆ ಸಿಡಿ ಕೂಡ ನಂತರದ ದಿನಗಳಲ್ಲಿ ಬಿಡುಗಡೆ ಆಗುವುದರಲ್ಲಿತ್ತು. ಆದರೆ ಇದೀಗ ಸಂತ್ರಸ್ತ ಯುವತಿ ಬೆಂಗಳೂರಿನಲ್ಲಿದ್ದು, ಆ 'ಸಿಡಿ' ಬಿಡುಗಡೆ ಆದಲ್ಲಿ ಸ್ವತಃ ಅಜ್ಞಾತ ಸ್ಥಳದಿಂದ ಹೊರಬಂದು ಸ್ವಂತ ಹೇಳಿಕೆ ನೀಡಲಿದ್ದಾರೆ ಎಂಬ ಮಾಹಿತಿಯಿದೆ.

      ಐಪಿ ಅಡ್ರೆಸ್ ಬದಲಿಸಿ ಇಲ್ಲಿಂದಲೇ ಅಪ್‌ಲೋಡ್?

      ಐಪಿ ಅಡ್ರೆಸ್ ಬದಲಿಸಿ ಇಲ್ಲಿಂದಲೇ ಅಪ್‌ಲೋಡ್?

      'ಸಿಡಿ' ರಷ್ಯಾದಿಂದ ಯುಟ್ಯೂಬ್‌ಗೆ ಅಪ್‌ಲೋಡ್ ಆಗಿದೆ ಎಂಬ ಆರೋಪ ಕೇಳಿ ಬಂದಿದ್ದವು. ಅದನ್ನೇ ರಮೇಶ್ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರೂ ಹೇಳಿದ್ದರು. ಆದರೆ 'ಸಿಡಿ' ರಷ್ಯಾ ಅಥವಾ ಇನ್ಯಾವುದೇ ಬೇರೆ ದೇಶದಿಂದ ಅಪ್‌ಲೋಡ್ ಆಗಿಲ್ಲ. ಇಲ್ಲಿದ್ದುಕೊಂಡೇ ಐಪಿ ಅಡ್ರೆಸ್ ಬದಲಾಯಿಸಿ ಅಪ್‌ಲೋಡ್ ಮಾಡಿರುವ ಸಾಧ್ಯತೆಯಿದೆ. ಈಗಿನ ತಂತ್ರಜ್ಞಾನದ ಸಹಾಯದಿಂದ ಹಾಗೆ ಮಾಡಲು ಬರುತ್ತದೆ. ಆದರೆ ಸೂಕ್ತ ತನಿಖೆ ನಡೆದಲ್ಲಿ ಯಾವ ಐಪಿ ಅಡ್ರೆಸ್‌ನಿಂದ ವಿಡಿಯೋ ಅಪ್‌ಲೋಡ್ ಆಗಿದೆ ಎಂಬುದನ್ನು ಪತ್ತೆ ಮಾಡಬಹುದು ಎಂದು ಐಟಿ ತಜ್ಞರು ವಿವರಿಸಿದ್ದಾರೆ.

      ಯುವತಿಯ ಸಮುದಾಯ ಒಂದೇ?

      ಯುವತಿಯ ಸಮುದಾಯ ಒಂದೇ?

      ಸಂತ್ರಸ್ತ ಯುವತಿ ರಮೇಶ್ ಜಾರಕಿಹೊಳಿ ಅವರ ಸಮುದಾಯಕ್ಕೆ ಸೇರಿದವರು ಎಂಬ ಮಾಹಿತಿಯಿದೆ. ಈಗಾಗಲೇ ರಮೇಶ್ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿರುವಂತೆ ಪ್ರಕರಣದಲ್ಲಿ 2+3+4 ಜನರಿದ್ದಾರೆ. ಅವರಿಗೊಬ್ಬ ಮಹಾನ್ ನಾಯಕ ಇದ್ದಾನೆ ಎಂದು ಆರೋಪಿಸಿದ್ದಾರೆ.

      ಜೊತೆಗೆ ಯುವತಿ ವಾಲ್ಮಿಕಿ ಸಮುದಾಯಕ್ಕೆ ಸೇರಿದ್ದು, ಮೊದಲೇ ಎಲ್ಲ ಯೋಜನೆ ಸಿದ್ದಪಸಿಡಿಕೊಂಡು ಹನಿಟ್ರ್ಯಾಪ್ ಮಾಡಲಾಗಿದೆಯಾ? ಎಂಬ ಸಂಶಯ ಮೂಡುತ್ತಿದೆ.

      ಜೊತೆಗೆ ಎಲ್ಲವನ್ನೂ ಕಾನೂನಾತ್ಮಕವಾಗಿ ಯೋಚಿಸಿದ ಬಳಿಕವೇ ಜಾರಕಿಹೊಳಿ ಸಹೋದರರು ಕಾನೂನು ಹೋರಾಟಕ್ಕೆ ಮುಂದಾಗಲಿದ್ದಾರೆ ಎಂಬುದು ಅವರ ಮಾತಿನಿಂದಲೇ ತಿಳಿದು ಬಂದಿದೆ. ಒಟ್ಟಾರೆ 'ಸಿಡಿ' ಸ್ಫೋಟದಿಂದ ತಕ್ಷಣಕ್ಕೆ ರಮೇಶ್ ಜಾರಕಿಹೊಳಿ ಅವರಿಗೆ ತೀವ್ರ ಹಿನ್ನಡೆ ಆಗಿರುವಂತೆ ಕಂಡುಬರುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ರಮೇಶ್ ಜಾರಕಿಹೊಳಿ ಅವರು ಆರೋಪಿಸುತ್ತಿರುವ ಆ ಮಹಾನ್ ನಾಯಕನಿಗೆ ದೊಡ್ಡ ಮಟ್ಟದಲ್ಲಿ ಸಂಕಷ್ಟ ಉಂಟಾಗಲಿದೆ ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+