ರಾಮನಗರದಲ್ಲಿ ಹರಿದಾಡುತ್ತಿದೆ ಅಶ್ಲೀಲ ಎಂಎಂಎಸ್
ರಾಮನಗರ, ಜೂ.7 : ರಾಮನಗರ ಗಡಿಭಾಗದ ಮುತ್ತತ್ತಿ ಸಮೀಪದ ಕಾವೇರಿ ನದಿ ದಡದಲ್ಲಿ ಮಹಿಳೆ ಮತ್ತು ಪುರುಷನ ಕಾಮಕೇಳಿ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆಹಿಡಿರುವ ದುಷ್ಕರ್ಮಿಗಳು ಅದನ್ನು ಯುಟ್ಯೂಬ್ ಗೆ ಅಪ್ ಲೋಡ್ ಮಾಡಿದ್ದಾರೆ. ರಾಮನಗರದ ಹಲವಾರು ಯುವಕರ ಮೊಬೈಲ್ ನಲ್ಲಿಯೂ ಈ ದೃಶ್ಯಾವಳಿಗಳು ಹರಿದಾಡುತ್ತಿದ್ದು, ಪೊಲೀಸರು ಈ ಬಗ್ಗೆ ಮೌನವಹಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಮೊಬೈಲ್ ನಲ್ಲಿ ಹರಿದಾಡುತ್ತಿರುವ ದೃಶ್ಯದಲ್ಲಿ ಒಮ್ಮೆ ಖಾಕಿ ಪ್ಯಾಂಟ್ ಮತ್ತು ಲಾಠಿ ಕಾಣಿಸಿಕೊಂಡಿದ್ದು, ಕೃತ್ಯದಲ್ಲಿ ಪೊಲೀಸರು ಅಥವ ಅರಣ್ಯ ಇಲಾಖೆಯ ಸಿಬ್ಬಂದಿಗಳ ಕೈವಾಡವಿರಬಹುದು ಎಂದು ಅನುಮಾನ ಹುಟ್ಟುಹಾಕಿದೆ. ಕಾಮಕೇಳಿಯಲ್ಲಿ ತೊಡಗಿದ್ದವರು ಸಿಕ್ಕಿಹಾಕಿಕೊಂಡ ತಕ್ಷಣ ಅಂಗಲಾಚಿ ಬೇಡಿಕೊಂಡರೂ ವಿಡಿಯೋ ಚಿತ್ರೀಕರಣವನ್ನು ಅವರು ನಿಲ್ಲಿಸದೆ ದೌರ್ಜನ್ಯ ನಡೆಸಲಾಗಿದೆ.

ಯುವ ಜೋಡಿ ಸಿಕ್ಕಬಿದ್ದ ಬಳಿಕವೂ ಕೆಲ ಹೊತ್ತು ಬಟ್ಟೆಗಳನ್ನು ಹಾಕಿಕೊಳ್ಳಲು ಅವಕಾಶ ಕೊಡದೆ ವಿವಸ್ತ್ರರನ್ನಾಗಿಯೇ ನಿಲ್ಲಿಸಲಾಗಿದ್ದು, ಗಲಾಟೆ ಮಾಡಿದರೆ ಪೊಲೀಸರಿಗೆ ಕೊಡುತ್ತೇವೆ ಎಂದು ಚಿತ್ರೀಕರಣ ಮಾಡಿದವರು ಜೋಡಿಗೆ ಹೆದರಿಸುತ್ತಿರುವ ಮಾತುಗಳು ರೆಕಾರ್ಡ್ ಆಗಿವೆ.
4 ನಿಮಿಷ 33 ಸೆಕೆಂಡ್ ವಿಡಿಯೋ ದೃಶ್ಯಾಳಿಯನ್ನು ಮುತ್ತತ್ತಿ ಬಳಿ ಚಿತ್ರಿಸಲಾಗಿದೆ. ಗಡಿಭಾಗವಾದ ಮುತ್ತತ್ತಿ ಪ್ರದೇಶವು ಮಂಡ್ಯ ಮತ್ತು ರಾಮನಗರ ಯಾವ ಜಿಲ್ಲೆಯ ಪೊಲೀಸರ ವ್ಯಾಪ್ತಿಗೆ ಬರುತ್ತದೆ ಎಂಬುದು ಗೊಂದಲವಾಗಿದೆ. ಆದ್ದರಿಂದ ಸ್ಥಳೀಯರು ವಿಡಿಯೋ ಬಗ್ಗೆ ಯಾವ ಪೊಲೀಸರಿಗೆ ದೂರು ನಿಡಬೇಕು ಎಂಬ ಗೊಂದಲದಲ್ಲಿದ್ದಾರೆ.
ತನಿಖೆಗೆ ಆಗ್ರಹ : ವಿಡಿಯೋ ದೃಶ್ಯಾವಳಿಗಳ ಬಗ್ಗೆ ವಿವರವಾದ ತನಿಖೆ ನಡೆಯಬೇಕೆಂದು ಮುತ್ತತ್ತಿ ಭಾಗದ ಜನರು ಆಗ್ರಹಿಸುತ್ತಿದ್ದಾರೆ. ಕಳೆದ ಎರಡು ವಾರಗಳಿಂದ ಹಲವರ ಮೊಬೈಲ್ ಗಳಲ್ಲಿ ಈ ದೃಶ್ಯಾವಳಿ ಹರಿದಾಡುತ್ತಿದೆ. ಜಿಲ್ಲೆಯಲ್ಲಿ ಹಿಂದೆ ಸಿಲ್ಕ್ ಸಿಟಿ ಸೆಕ್ಸ್ ಭಾಗ-1 ಮತ್ತು ಭಾಗ-2, ಮಾಗಡಿ ಮಂದಾರ ಎನ್ನುವ ಇಂಥಹ ವೀಡಿಯೋಗಳು ಹರಿದಾಡಿದ್ದವು. ಇದೀಗ ಆ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗಿದೆ.
-
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ












Click it and Unblock the Notifications