ರಾಮನಗರ ಮೆಮು ರೈಲು ಡಿ.23ರಿಂದ ಮೈಸೂರಿನ ತನಕ ಸಂಚರಿಸಲಿದೆ
ಬೆಂಗಳೂರು, ಡಿಸೆಂಬರ್ 20 : ಬೆಂಗಳೂರು-ರಾಮನಗರ ನಡುವೆ ಸಂಚಾರ ನಡೆಸುವ ಮೆಮು ರೈಲು ಮೈಸೂರಿನ ತನಕ ವಿಸ್ತರಣೆ ಆಗಲಿದೆ. ಇದರಿಂದಾಗಿ ಸಂಜೆ ಉಭಯ ನಗರಗಳ ನಡುವೆ ಮತ್ತೊಂದು ರೈಲು ಸಂಚಾರ ನಡೆಸಲಿದೆ.
ರಾಮನಗರದ ತನಕ ಸಂಚಾರ ನಡೆಸುವ ವಿಶೇಷ ವಿದ್ಯುತ್ ರೈಲು (ಮೆಮು) 06576 ರೈಲನ್ನು ಮೈಸೂರಿನ ತನಕ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆ ಇತ್ತು. ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಈ ಕುರಿತು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಘೋಯಲ್ ಅವರಿಗೆ ಪತ್ರ ಬರೆದ್ದರು.
ಈ ಪ್ರಸ್ತಾವನೆಗೆ ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ ಮೈಸೂರಿನ ತನಕ ಮೆಮು ರೈಲು ಸಂಚಾರ ನಡೆಸಲಿದೆ. ಭಾನುವಾರ ರೈಲು ಸಂಚಾರ ಉದ್ಘಾಟನೆಯಾಗಲಿವೆ.

ರಾತ್ರಿ 7 ಗಂಟೆಯಿಂದ 11 ಗಂಟೆ ತನಕ ಮೈಸೂರಿಗೆ ಯಾವುದೇ ರೈಲು ಸಂಚಾರ ನಡೆಸುತ್ತಿರಲಿಲ್ಲ. ಆದ್ದರಿಂದ, ಮೈಸೂರಿಗೆ ರೈಲು ಸೇವೆ ಆರಂಭಿಸಬೇಕು ಎಂದು ಜನರು ಇಲಾಖೆಯನ್ನು ಆಗ್ರಹಿಸಿದ್ದರು.
ರಾಮನಗರ ವಿಶೇಷ ಮೆಮು ರೈಲು 2019ರ ಫೆಬ್ರವರಿ ತನಕ ಮಾತ್ರ ಸಂಚಾರ ನಡೆಸಲಿದೆ. ಬಳಿಕ ಮತ್ತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ ರೈಲು ಸೇವೆಯನ್ನು ಪಡೆಯಬೇಕಿದೆ.
ರಾಮನಗರ ಮೆಮು ರೈಲು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ 7.55ಕ್ಕೆ ಹೊರಡಲಿದೆ. 9 ಗಂಟೆಗೆ ರಾಮನಗರ ತಲುಪಲಿದ್ದು, ಮೈಸೂರನ್ನು 11.15ಕ್ಕೆ ತಲುಪುವ ನಿರೀಕ್ಷೆ ಇದೆ.












Click it and Unblock the Notifications