ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಮೇಲೆ ಆಸಿಡ್ ದಾಳಿ: ಪಾಗಲ್ ಪ್ರೀಮಿ ಬಂಧನ
ಶಾಂತಿ ಇರುವಂತ ನೆಲದಲ್ಲಿ ಇಂತಹ ದುಷ್ಕರ್ಮಿಗಳು ಇರಬಾರದು ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.
ರಾಮನಗರ,ಫೆಬ್ರವರಿ18: ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಕಾಲೇಜು ವಿದ್ಯಾರ್ಥಿನಿ ಮೇಲೆ ಒರ್ವ ಯುವಕ ಆಸಿಡ್ ದಾಳಿ ನಡೆಸಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ನಗರದಲ್ಲಿ ಶುಕ್ರವಾರ ನಡೆದಿದೆ.
ಕುರುಪೇಟೆ ಮೂಲದ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ 22 ರ ಯುವಕ ನಗರದ ಬೈಪಾಸ್ ರಸ್ತೆ ಬಳಿ ಆಸಿಡ್ ಅಪ್ರಾಪ್ರ ಬಾಲಕಿ ಮೇಲೆ ಆಸಿಡ್ ದಾಳಿ ಮಾಡಿದ್ದಾನೆ.ಈ ಘಟನೆಯಲ್ಲಿ ಯುವತಿಯ ಎಡ ಭಾಗದ ಕಣ್ಣಿಗೆ ಗಂಭೀರ ಗಾಯವಾಗಿದ್ದು, ನಗರದ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ನಗರ ವೃತ್ತ ನಿರೀಕ್ಷಕ ಮಿಥುನ್ ಶಿಲ್ಪಿ ಸ್ಥಳ ಪರಿಶೀಲನೆ ನಡೆಸಿ, ಯುವತಿಯ ಹೇಳಿಕೆ ದಾಖಲಿಸಿಕೊಂಡು ಪೋಷಕರು ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಯುವತಿಯನ್ನ ಒಂದು ವರ್ಷದಿಂದ ಪ್ರೀತಿಸುತ್ತಿದ್ದ ಸಮಂತ್ ನಿನ್ನೆ ಆಕೆಯ ಮನವೊಲಿಸಲು ಶುಕ್ರವಾರ ನಗರದ ಬೈಪಾಸ್ ರಸ್ತೆಯಲ್ಲಿ ಕರೆದೊಯ್ದಿದ್ದ. ಆಕೆ ಒಪ್ಪದಿದ್ದಾಗ ಕುಪಿತಗೊಂಡು ಕಾರ್‌ಎಂಜಿನ್ ಶುಚಿಗೊಳಿಸಲು ಬಳಸುತ್ತಿದ್ದ ಆಸಿಡ್ ನ್ನು ಮುಖದ ಮೇಲೆ ಎರಚಿದ್ದಾನೆ. ಆಸಿಡ್ ದಾಳಿ ಮಾಡಿದ ಸಮಂತ್ ಎಸ್ಕೇಪ್ ಆಗಿದ್ದ ಆರೋಪಿಯನ್ನು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಆಸಿಡ್ ದಾಳಿಗೆ ಒಳಗಾದ ಬಾಲಕಿ ಆರೋಗ್ಯ ವಿಚಾರಿಸಿದ ಬಳಿಕ ಶನಿವಾರ ಮುಖ್ಯಮಂತ್ರಿಗಳನ್ನ ಭೇಟಿ ಮಾಡಿದ ಸಚಿವ ಹಾಲಪ್ಪ ಆಚಾರ್ ಅವರು, ಆಸಿಡ್ ದಾಳಿಗೆ ಒಳಗಾದ ಯುವತಿ ಆರೋಗ್ಯ ಸ್ಥಿತಿ ಬಗ್ಗೆ ಸಿಎಂಗೆ ಮಾಹಿತಿ ನೀಡಿದ್ದಾರೆ.
ಇಂತಹ ದುಷ್ಕರ್ಮಿಗಳು ನಮ್ಮ ಸಮಾಜದಲ್ಲಿಇರಬಾರದು: ಹಾಲಪ್ಪ ಆಚಾರ್
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಶುಕ್ರವಾರ ಕನಕಪುರ ಟೌನ್ ನಲ್ಲಿ ಬಾಲಕಿ ಮೇಲೆ ಕಿಡಿಗೇಡಿಯೊಬ್ಬ ರಾಸಾಯನಿಕ ಎರಚಿದ್ದಾನೆ. ಬಾಲಕಿಯ ಕಣ್ಣಿಗೆ ಗಾಯ ಆಗಿದೆ. ಬಾಲಕಿಗೆ ಸಂಪೂರ್ಣ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿ ಬಂಧನ ಆಗಿದ್ದು, ಸರ್ಕಾರದಿಂದ ಆರೋಪಿಗೆ ಕಠಿಣ ಕ್ರಮ ಕೊಡಿಸಲಾಗುತ್ತೆ ಎಂದು ಹಾಲಪ್ಪ ಆಚಾರ್ ಹೇಳಿದ್ದಾರೆ.
ರಾಮನಗರ ಎಸ್ ಪಿ ಜತೆಗೂ ನಾನು ಮಾತಾಡಿದ್ದೇನೆ. ಬಾಲಕಿಗೆ ಕುಟುಂಬಕ್ಕೆ ಆರೋಪಿ ಕಡೆಯಿಂದ ಬೆದರಿಕೆ ಇದೆಯಾ ಅಂತ ಪರಿಶೀಲಿಸಲು ತಿಳಿಸಿದ್ದೇನೆ. ಇನ್ನೂ ಕುಟುಂಬಕ್ಕೆ ಪೊಲೀಸ್ ಭದ್ರತೆ ಒದಗಿಸಲು ಎಸ್‌ಪಿ ಅವರಿಗೆ ಸೂಚಿಸಿದ್ದೇವೆ. ಇಂತಹ ದುಷ್ಕರ್ಮಿಗಳು ನಮ್ಮ ಸಮಾಜದಲ್ಲಿಇರಬಾರದು, ಕಾನೂನಿನ ರೀತಿಯಲ್ಲಿ ಅವನ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಶಾಂತಿ ಇರುವಂತ ನೆಲದಲ್ಲಿ ಇಂತಹ ದುಷ್ಕರ್ಮಿಗಳು ಇರಬಾರದು. ಈ ರೀತಿಯ ಒಂದೆರಡು ಕ್ರಿಮಿಗಳಿಂದ ಹೆಣ್ಣು ಮಕ್ಕಳ ಭವಿಷ್ಯ ಹಾಳಾಗುತ್ತದೆ ಎಂದು ಹೇಳಿದ್ದಾರೆ.

ಸಮಾಜದಲ್ಲಿ ಇಂತಹ ದುಷ್ಕೃತ್ಯವನ್ನು ಸಹಿಸೋಕೆ ಸಾಧ್ಯ ಇಲ್ಲ. ಈ ರೀತಿಯ ಅಪರಾಧ ಮಾಡಿದರೆ ಕಾನೂನಿನ ಚೌಕಟ್ಟಿನಲ್ಲಿ ಏನೇನು ಕ್ರಮ ತಗೊಬೇಕೋ ಅದನ್ನು ತಗೆದುಕೊಳ್ಳುತ್ತೇವೆ, ಈ ಅಪರಾಧದ ಬಗ್ಗೆ ಕಾನೂನು ಕ್ರಮ ದೊಡ್ಡದು ಇದೆ ಇದನ್ನು ಅರ್ಥ ಮಾಡಿಕೊಳ್ಳದೇ ಕೆಲವು ಕ್ರಿಮಿಗಳು ಈ ಕೆಲಸ ಮಾಡುತ್ತಾರೆ. ಇಂತಹವರನ್ನು ಯಾವುದೇ ಮುಲಾಜಿ ಇಲ್ಲದೇ ಕಠಿಣ ಶಿಕ್ಷೆಗೆ ಒಳಪಡಿಸುತ್ತೇವೆ. ಈ ಬಗ್ಗೆ ಸಂಪೂರ್ಣ ತನಿಖೆಯಾದ ನಂತರ ಪರಿಹಾರದ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.












Click it and Unblock the Notifications