ರಾಜ್ಯಸಭೆ ಚುನಾವಣೆ: ಮತದಾನ ಆರಂಭದ ನಂತರವೂ ಜೆಡಿಎಸ್‌ ಆಸೆ ಬಿಡದ ಡಿಕೆಶಿ

ಬೆಂಗಳೂರು, ಜೂನ್ 10: ರಾಜ್ಯಸಭೆ ಚುನಾವಣೆಗೆ ನಾನು, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಹಾಗೂ ಪಕ್ಷದ ನಾಯಕರು ಚರ್ಚೆ ಮಾಡಿ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ. ಕಾಂಗ್ರೆಸ್ ಪಕ್ಷದಿಂದ ಮಂಡ್ಯ ಮೂಲದ, ಅಲ್ಪಸಂಖ್ಯಾತ ಸಮುದಾಯದ, ಸಾಚಾರ್ ವರದಿಗೆ ಕಾರಣಕರ್ತರಾದ ನಮ್ಮ ಪಕ್ಷದ ಹಿರಿಯ ಮುಖಂಡ ಕೆ. ರೆಹಮಾನ್ ಖಾನ್ ಅವರ ಪುತ್ರ, ವಿದ್ಯಾವಂತ ಯುವಕ ಮನ್ಸೂರ್ ಅಲಿ ಖಾನ್ ಅವರನ್ನು ಎರಡನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು, ಜಾತ್ಯತೀತ ತತ್ವ ಉಳಿಸಲು ನಮ್ಮ ಪಕ್ಷದ ಅಭ್ಯರ್ಥಿಗೆ ಮತ ನೀಡಬೇಕು ಎಂದು ಜೆಡಿಎಸ್‌ಗೆ ನಾನು ಮತ್ತು ಸಿದ್ದರಾಮಯ್ಯನವರು ಮನವಿ ಮಾಡಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಈ ಹಿಂದೆ ಜೆಡಿಎಸ್ ಪಕ್ಷಕ್ಕೆ ನಾವು ಸಾಕಷ್ಟು ಬಾರಿ ಸಹಾಯ ಮಾಡಿದ್ದು, ಈ ಬಾರಿ ಅವರು ನಮಗೆ ಬೆಂಬಲ ನೀಡಬೇಕು ಎಂದು ಡಿಕೆ ಶಿವಕುಮಾರ್ ಕಡೆಯ ಸಮಯದಲ್ಲೂ ಮನವಿಯನ್ನು ಮಾಡದ್ದಾರೆ.

ಜೆಡಿಎಸ್ ಶಾಸಕರು ರೆಸಾರ್ಟ್‌ನಲ್ಲಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ""ಅದು ಅವರ ಪಕ್ಷದ ವಿಚಾರ. ನಮ್ಮ ಪಕ್ಷದ ಹಲವು ನಾಯಕರನ್ನು ಸಂಪರ್ಕಿಸುವ ಪ್ರಯತ್ನ ನಡೆಯುತ್ತಿದೆ. ನಿನ್ನೆ ಯಾರು ಯಾರ ಮನೆಗೆ ಹೋಗಿದ್ದಾರೆ. ಯಾರಿಗೆ ಕರೆ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಇದು ತಪ್ಪು ಎಂದು ನಾನು ಹೇಳುವುದಿಲ್ಲ'' ಎಂದು ಉತ್ತರಿಸಿದರು.

Rajya Sabha Election: DK Shivakumar Again Asking JDS Support

Recommended Video

      Rajyasabha Election ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿ | Oneindia Kannada

      ರಾಜ್ಯಸಭೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲ ಕಾಂಗ್ರೆಸ್ ಜಾತ್ಯತೀತತೆಯ ಟ್ರಂಪ್ ಕಾರ್ಡ್ ಅನ್ನು ಬಳಸಿದೆ. ಜೆಡಿಎಸ್ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಬೆಂಬಲಿಸಿಲ್ಲ ಎಂದು ಮುಂದಿನ ಚುನಾವಣೆಯಲ್ಲಿ ಪ್ರಚಾರ ಮಾಡಲು ಅನುಕೂಲವನ್ನು ಮಾಡಿಕೊಳ್ಳುತ್ತಿದೆ. ಆದೇನಾದರು ಸಿದ್ದರಾಮಯ್ಯ ಮತ್ತು ಡಿಕೆಶಿ ಜಂಟಿಯಾಗಿ ರಾಜಕೀಯ ಚದುರಂಗದಾಟವಾಡುತ್ತಿದ್ದು ಯಾರಿಗೆ ಚೆಕ್ ಮೆಟ್ ಇಟ್ಟಿದ್ದಾರೆ ಅನ್ನೋದು ಚುನಾವಣೆ ಬಳಿಕ ಉತ್ತರ ಸಿಗಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+