• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತ ಸಂಘದಿಂದ ಕೋಡಿಹಳ್ಳಿ ಚಂದ್ರಶೇಖರ್ ವಜಾ: ರೈತ ಸಂಘಕ್ಕೆ ನೂತನ ಸಾರಥಿ

|
Google Oneindia Kannada News

ಬೆಂಗಳೂರು, ಮೇ31: ಕರ್ನಾಟಕದಲ್ಲಿ ರೈತ ಮುಖಂಡರೆನಿಸಿಕೊಂಡ ಕೋಡಿಹಳ್ಳಿ ಚಂದ್ರಶೇಖರ್ ಹಣವನ್ನು ಪಡೆದು ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಯ ಪ್ರತಿಭಟನೆಯನ್ನು ಕೈಬಿಟ್ಟಿದ್ದರು ಎಂಬುದರ ಬಗ್ಗೆ ಖಾಸಗಿ ಸುದ್ದಿವಾಹಿನಿ ಸ್ಟಿಂಗ್ ಮಾಡಿ ಸುದ್ದಿಯನ್ನು ಪ್ರಸಾರ ಮಾಡಿತ್ತು. ಇದೀಗ ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆಯಿಂದ ಕೋಡಿಹಳ್ಳಿ ಚಂದ್ರಶೇಖರ್‌ರನ್ನು ವಜಾ ಮಾಡಿ ಸಂಘಟನೆಯ ನೂತನ ಅಧ್ಯಕ್ಷರನ್ನಾಗಿ ಹೆಚ್.ಆರ್. ಬಸವರಾಜಪ್ಪ ಅವರನ್ನು ಆಯ್ಕೆ ಮಾಡಿದೆ.

ಕೋಡಿಹಳ್ಳಿ ಚಂದ್ರಶೇಖರ್ ಮೇಲೆ ಆರೋಪಗಳು ಬಂದ ನಂತರವೂ ಕೋಡಿಹಳ್ಳಿ ಸರಿಯಾದ ಸ್ಪಷ್ಟನೆಯನ್ನು ನೀಡಲಿಲ್ಲ. ಆರೋಪಗಳನ್ನು ಅಲ್ಲಗಳೆಯುವ ಕೆಲಸವನ್ನು ಮಾಡಲಿಲ್ಲ. ಇದರಿಂದಾಗಿ ಸಂಘ ಗೌರವಕ್ಕೂ ಹಾಳಾಗುತ್ತಿರುವುದನ್ನು ಗಮನಿಸಿ ಪದಾಧಿಕಾರಿಗಳು ರಾಜ್ಯ ಸಮಿತಿಯ ಸಭೆಯನ್ನು ಮಾಡಿ ಕೋಡಿಹಳ್ಳಿ ಚಂದ್ರಶೇಖರ್‌ರನ್ನು ವಜಾಗೊಳಿಸಿ ಹೆಚ್ ಆರ್ ಬಸವರಾಜುರನ್ನು ಆಯ್ಕೆ ಮಾಡಿದ್ದಾರೆ.

ರೈತ ಸಂಘದ ರಾಜ್ಯ ಸಮಿತಿ ಸಭೆಯ ನಿರ್ಣಯಗಳೇನು..?

1. ಕರ್ನಾಟಕ ರಾಜ್ಯ ರೈತ ಸಂಘ ತ್ಯಾ‌ಗ, ಬಲಿದಾನಗಳಿಂದ ರಚನೆಯಾಗಿದೆ. 153ಜನ ರೈತರು ಚಳುವಳಿಯ ಸಂದರ್ಭದಲ್ಲಿ ಗುಂಡಿಗೆ ಆಹುತಿಯಾಗಿದ್ದಾರೆ. ಲಕ್ಷಾಂತರಜನ ರೈತರು ಲಾಠಿ ಏಟು ತಿಂದು ಜೈಲು ಅನುಭವಿಸಿ, ರಕ್ತಹರಿಸಿ ಸಂಘಟನೆಯನ್ನು ಕಟ್ಟಿದ್ದಾರೆ. ಸಂಘದ ಪಾವಿತ್ರತೆಯನ್ನು ಮತ್ತು ರೈತ ಚಳುವಳಿಯನ್ನು ರೈತರಿಗೆ , ಶೋಷಿತರಿಗಾಗಿ ಮುಂದುವರೆಸಬೇಕಿದೆ. ಪ್ರಸ್ತುತ ಕೋಡಿಹಳ್ಳಿ ಚಂದ್ರಶೇಖರ್ ಖಾಸಗಿವಾಹಿಯ ಸುದ್ದಿಯನ್ನು ಅಲ್ಲಗೆಳೆದಿಲ್ಲ. ಅವರು ಏಳೆಂಟು ತಿಂಗಳ ಕಾಲ ನನ್ನನ್ನು ಭೇಟಿಟಿ ಮಾಡಿದ್ದಾರೆ. ನಮ್ಮ ಮನೆಯಲ್ಲಿ ಊಟ ಮಾಡಿದ್ದಾರೆ, ನಿನ್ನನ್ನು ನಂಬಿ ಮಾತನಾಡಿದ್ದೀನಿ ಹೀಗೆ ಹೇಳಿದ್ದಾರೆಯೇ ವಿನಃ ತಮ್ಮ ಮೇಲಿನ ಆರೋಪವನ್ನು ನಿರಾಕರಣೆ ಮಾಡಿಲ್ಲ.


ಈ ವಿಚಾರವಾಗಿ ನಾವೆಲ್ಲರು ತಲೆ ತಗ್ಗಿಸುವಂತಾಗಿದೆ. ಇದು ರೈತ ಚಳುವಳಿಗೆ ಒಂದು ಕಪ್ಪು ಚುಕ್ಕೆಯಾಗಿದೆ. ಈಗಿನ ಅಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್‌ರವರು ತನಿಖೆ ಆಗುವವರೆಗಾದರೂ ರಾಜೀನಾಮೆ ಕೊಟ್ಟು ಸಂಘದ ಗೌರವವನ್ನು ಉಳಿಸಬೇಕಿತ್ತು. ಈ ದಿನ ಸಭೆ ಸೇರಿದ ಎಲ್ಲರೂ ಸ್ತಾನ ತ್ಯಜಿಸಿ ಬೇರೆಯವರನ್ನು ಆಯ್ಕೆ ಮಾಡಿ ಎಂದು ಸಲಹೆಯನ್ನು ನೀಡಿದರು ಒಪ್ಪಲಿಲ್ಲ. ಈ ಕಾರಣದಿಂದಾಗಿ ಶಿವಮೊಗ್ಗದಲ್ಲಿ ಸಂಘದ ರಾಜ್ಯ ಗೌರವಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪನವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಕೋಡಿಹಳ್ಳಿ ಚಂದ್ರಶೇಖರ್‌ರವರನ್ನು ಅಧ್ಯಕ್ಷ ಸ್ಥಾನದಿಂದ ವಜಗೊಳಿಸಲಾಗಿದೆ. ರೌತ ಸಂಘದ ಸಂಸ್ಥಪಕರಾದ ಹೆಚ್ ಎಸ್ ರುದ್ರಪ್ಪ. ಪ್ರೋ ಎಂ.ಡಿ ನಂಜುಂಡ ಸ್ವಾಮಿ, ಎನ್ ಡಿ ಸುಂದರೇಶ್, ಕಡಿದಾಳ್ ಶಾಮಣ್ಣ, ಡಾ. ಬಿಎಂ ಚಿಕ್ಕಸ್ವಾಮಿ ಇವರೊಡನೆ ಸಂಸ್ಥಾಪಕರಲ್ಲಿ ಒಬ್ಬರಾದ ಹೆಚ್.ಆರ್. ಬಸವರಾಜಪ್ಪ ಅವರನ್ನು ರೈತ ಸಂಘ ರಾಜ್ಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

2. ಸರ್ಕಾರ ಖಾಸಗಿ ವಾಹಿನಿ ಸುದ್ದಿಯ ಸತ್ಯಾಸತ್ಯತೆ ಪರಿಶೀಲಿಸಲು ಮೊಕದ್ದಮೆಯನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಮಾಡಬೇಕು.

3. ಈ ಘಟನೆಯ ಬಗ್ಗೆ 5 ಸದಸ್ಯರನ್ನೊಳಗೊಂಡ ಸತ್ಯ ಶೋಧನಾ ಸಮಿತಿಯನ್ನು ರಚನೆ ಮಾಡಲಾಗಿದೆ.

4. ಹಾಲಿ ರೈತ ಸಂಘದ ಪದಾಧಿಕಾರಿಗಳನ್ನೇ ಮುಂದುವರೆಸಲಾಗಿದೆ.

Karnataka Rajya Raitha Sangha sacks Kodihalli Chandrashekar from the post of president

ಹಾಲಿ ರೈತ ಸಂಘದಲ್ಲಿರುವ ಪದಾಧಿಗಳು ಯಾರು..?

ರಾಜ್ಯಾಧ್ಯಕ್ಷರು- ಹೆಚ್ ಆರ್ ಬಸವರಾಜಪ್ಪ

ರಾಜ್ಯ ಗೌರವಾಧ್ಯಕ್ಷರು - ಶಶಿಕಾಂತ್ ಪಡಸಲಗಿ

ರಾಜ್ಯ ಖಜಾಂಜಿ- ಡಾ. ಬಿಎಂ ಚಿಕ್ಕಸ್ವಾಮಿ

ರಾಜ್ಯ ಕಾರ್ಯಾಧ್ಯಕ್ಷರು- ಸಿದ್ದವೀರಪ್ಪ, ಕರುವ ಗಣೇಶ್, ಚುನ್ನಪ್ಪ ಪೂಜಾರಿ

ಈ ಪದಾಧಿಕಾರಗಳ ಪಟ್ಟಿಯ ಜೊತೆಗೆ ಮತ್ತಷ್ಟು ಪದಾಧಿಕಾರಿಗಳ ಪಟ್ಟಿಯನ್ನು ರೈತ ಸಂಘ ಬಿಡುಗಡೆ ಮಾಡಿದೆ. ಆದರೆ ರೈತರ ಹೆಸರನ್ನು ಮತ್ತು ಸಾರಿಗೆ ಸಂಸ್ಥೆಯ ನೌಕರರು ಇಟ್ಟಿದ್ದ ವಿಶ್ವಾಸವನ್ನು ಇಟ್ಟಿದ್ದರು. ಇದನ್ನು ದುರುಪಯೊಗ ಪಡಿಸಿಕೊಂಡು ಹಣಪಡೆದರು ಎಂಬ ಆರೋಪಕ್ಕೆ ಕೋಡಿಹಳ್ಳಿ ಚಂದ್ರಶೇಖರ್ ತುತ್ತಾಗಿದ್ದರು. ಕೋಡಿಹಳ್ಳಿಯ ಮೇಲಿನ ಸಂಪೂರ್ಣ ಅಸಮಧಾನದಿಂದಲೇ ರೈತ ಸಂಘ ಅವರನ್ನು ಸಂಘದಿಂದ ವಜಾಗೊಳಿಸಿದೆ. ಆ ಮೂಲಕ ರೈತ ಸಂಘ ತನ್ನ ಅಸಮಧಾನವನ್ನು ಹೊರಹಾಕಿದೆ.

English summary
Karnataka Rajya Raitha Sangha sacks Kodihalli Chandrashekar from the post of president. Elects HR Basavarajappa as new president. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X