• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲವ್ ಜಿಹಾದ್ ಗೊತ್ತಿಲ್ಲದವರು ಅವರೆಂಥ ಗೃಹ ಸಚಿವರು?

|

ಮುಂಬೈ, ಸೆ 20: ಲವ್ ಜಿಹಾದ್ ಬಗ್ಗೆ ಕೇಂದ್ರ ಗೃಹ ಸಚಿವರು ನೀಡಿರುವ ಹೇಳಿಕೆ ಶ್ರೀರಾಮಸೇನೆ ಮುಖ್ಯಸ್ಥರಿಗೆ ಸಹಿಸಲಿಲ್ಲವೇನೋ? ಆ ವಿಚಾರ ತಿಳಿಯದವರು ಅವರೆಂಥಾ ಗೃಹ ಸಚಿವರು ಎಂದು ಮುಂಬೈನಲ್ಲಿ ಪ್ರಮೋದ್ ಮುತಾಲಿಕ್ ಅಬ್ಬರಿಸಿದ್ದಾರೆ.

ಗೃಹ ಸಚಿವರಾದ ರಾಜನಾಥ್ ಸಿಂಗ್ ಅನುಭವಿ ರಾಜಕಾರಣಿ. ಹಿಂದೂ ಸಮಾಜವನ್ನು ಕಾಡುತ್ತಿರುವ ಲವ್ ಜಿಹಾದ್ ಎನ್ನುವ ಪಿಡುಗಿನ ಬಗ್ಗೆ ನಿರ್ಲ್ಯಕ್ಷದಿಂದ ಮಾತನಾಡುವ ರಾಜನಾಥ್ ಅವರಿಗೆ ಸೂಕ್ತ ಪಾಠ ಕಲಿಸುವುದಾಗಿ ಮುತಾಲಿಕ್ ಹೇಳಿದ್ದಾರೆ.

ಲವ್ ಜಿಹಾದ್ ಬಗ್ಗೆ ಗೊತ್ತಿಲ್ಲದ ರಾಜನಾಥ್ ಸಿಂಗ್ ಯಾವ ಸೀಮೆಯ ಗೃಹ ಸಚಿವರು? ದೆಹಲಿಯಲ್ಲಿನ ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ಲವ್ ಜಿಹಾದ್ ಬಗ್ಗೆ ತಿಳಿಸಿಕೊಡುತ್ತೇವೆ ಎಂದು ಶ್ರೀರಾಮಸೇನೆಯ ಮುಖ್ಯಸ್ಥರು ಎಚ್ಚರಿಸಿದ್ದಾರೆ.

ಮಹಾರಾಷ್ಟ್ರ ರಾಜ್ಯವೊಂದರಲ್ಲೇ ಸುಮಾರು 22 ಲವ್ ಜಿಹಾದ್ ಪ್ರಕರಣ ವರದಿಯಾಗಿದೆ. ಇದರಿಂದ ಅನ್ಯಾಯಕ್ಕೆ ಒಳಗಾದವರನ್ನು ರಾಜನಾಥ್ ಸಿಂಗ್ ನಿವಾಸಕ್ಕೆ ಕರೆದುಕೊಂಡು ಹೋಗಲು ಶ್ರೀರಾಮಸೇನೆ ಸಿದ್ದವಾಗಿದೆ ಎಂದು ಮುತಾಲಿಕ್ ಕೇಂದ್ರ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಮುಖವಾಗಿ ರಾಜ್ಯ ಕರಾವಳಿ, ಮಲೆನಾಡು ಭಾಗದಲ್ಲಿ ಹೆಚ್ಚಾಗಿ ವರದಿಯಾಗಿತ್ತಿರುವ ಲವ್ ಜಿಹಾದ್, ಏನಿದು?

ರಾಜ್ಯಕ್ಕೆ ಈ ಪದ ಪರಿಚಯಿಸಿದ್ದೇ ಕರಾವಳಿ

ರಾಜ್ಯಕ್ಕೆ ಈ ಪದ ಪರಿಚಯಿಸಿದ್ದೇ ಕರಾವಳಿ

ಕಳೆದ ಕೆಲವು ವರ್ಷಗಳಿಂದ ರಾಜ್ಯಕ್ಕೆ ಲವ್ ಜಿಹಾದ್ ಎನ್ನುವ ಹೆಸರನ್ನು ಪರಿಚಯಿಸಿದ್ದೇ ರಾಜ್ಯ ಕರಾವಳಿ ಮತ್ತು ಮಲೆನಾಡು ಭಾಗದ ಪ್ರದೇಶ. ಕಳೆದ ಆರು ವರ್ಷಗಳಲ್ಲಿ ಕರಾವಳಿಯಲ್ಲಿ ವರದಿಯಾದಷ್ಟು ಲವ್ ಜಿಹಾದ್ ಪ್ರಕರಣ ರಾಜ್ಯದಲ್ಲಿ ಎಲ್ಲೂ ವರದಿಯಾಗಿರಲಿಕ್ಕಿಲ್ಲ.

ಲವ್ ಜಿಹಾದ್ ಅಥವಾ ರೋಮಿಯೋ ಜಿಹಾದ್

ಲವ್ ಜಿಹಾದ್ ಅಥವಾ ರೋಮಿಯೋ ಜಿಹಾದ್

ಲವ್ ಜಿಹಾದ್ ಅಥವಾ ರೋಮಿಯೋ ಜಿಹಾದ್ ಎನ್ನುವ ಕಾರ್ಯಸೂಚಿಯ ಮೂಲಕ ಕೆಲವೊಂದು ಮತೀಯ ಸಂಘಟನೆಗಳು ಒಂದು ಕೋಮಿನ ಹುಡುಗಿಯರನ್ನು (ಪ್ರಮುಖವಾಗಿ ಶಾಲಾ, ಕಾಲೇಜುಗಳೇ ಟಾರ್ಗೆಟ್) ಇನ್ನೊಂದು ಕೋಮಿಗೆ ಮತಾಂತರಿಸುವುದೇ ಈ ಸಂಘಟನೆಗಳ ಕಾಯಕ.

ಕೇರಳದಲ್ಲಿ ವ್ಯಾಪಕಾವಿಗಿದ್ದ ಲವ್ ಜಿಹಾದ್ ಈಗ ರಾಜ್ಯದಲ್ಲೂ

ಕೇರಳದಲ್ಲಿ ವ್ಯಾಪಕಾವಿಗಿದ್ದ ಲವ್ ಜಿಹಾದ್ ಈಗ ರಾಜ್ಯದಲ್ಲೂ

ಕೇರಳದಲ್ಲಿ ವ್ಯಾಪಕವಾಗಿದ್ದ ಲವ್ ಜಿಹಾದ್ ಸಾಮಾಜಿಕ ಪಿಡುಗು ಈಗ ರಾಜ್ಯದಲ್ಲೂ ಸಾಂಕ್ರಾಮಿಕ ರೋಗದಂತೆ ಹರಡುತ್ತಿದೆ. ಹಿಂದೂ ಅಥವಾ ಕ್ರಿಶ್ಚಿಯನ್ ಸಮುದಾಯದ ಹೆಣ್ಣುಮಕ್ಕಳನ್ನು ಪ್ರೀತಿಸಿ, ಮೋಹಿಸಿ, ಮದುವೆಯಾಗಿ ಅಥವಾ ಮದುವೆಯಾಗುವುದಾಗಿ ನಂಬಿಸಿ, ಅನುಭವಿಸಿ ನಂತರ ಇಸ್ಲಾಂಗೆ ಮತಾಂತರಗೊಳಿಸುವುದೇ ಈ ಲವ್ ಜಿಹಾದ್.

ಹೇಗೆ ಈ ಸಂಘಟನೆಗಳು ಕಾರ್ಯನಿರ್ವಹಿಸುತ್ತವೆ

ಹೇಗೆ ಈ ಸಂಘಟನೆಗಳು ಕಾರ್ಯನಿರ್ವಹಿಸುತ್ತವೆ

ಈ ಸಂಘಟನೆಯ ಸದಸ್ಯರು ತಮ್ಮ ಸಮುದಾಯದ ಸುಂದರ, ಕಟ್ಟುಮಸ್ತಾದ ಹುಡುಗರನ್ನು ಕಾಲೇಜು ಅಥವಾ ಶಾಲಾ ಕ್ಯಾಂಪಸ್ ನಲ್ಲಿ ಬಿಡುತ್ತಾರೆ. ಇಂತಹ ಹುಡುಗರಲ್ಲಿ ಕೆಲವರಿಗೆ ನಯಾಪೈಸೆಯ ವಿದ್ಯೆ ಇರದಿದ್ದರೂ ಚೆನ್ನಾಗಿ ಡ್ರೆಸ್ ಮಾಡಿಕೊಂಡು, ಹಣ ಖರ್ಚುಮಾಡಿಕೊಂಡು ಸುತ್ತಾಡುತ್ತಿರುತ್ತಾರೆ. ಇವರಿಗೆ ಇರುವ ಟಾರ್ಗೆಟ್ ಅಂದರೆ ಇತರ ಧರ್ಮೀಯ ಹುಡುಗಿಯರನ್ನು ಬಳಸಿಕೊಂಡು ತಮ್ಮ ಧರ್ಮಕ್ಕೆ ಮತಾಂತರಗೊಳಿಸುವುದು.

ಮತಾಂತರ ಮಾಡುವುದು ಮಾತ್ರವಲ್ಲ

ಮತಾಂತರ ಮಾಡುವುದು ಮಾತ್ರವಲ್ಲ

ಲವ್ ಜಿಹಾದ್ ಮೂಲಕ ಹುಡುಗಿಯರನ್ನು ಇಸ್ಲಾಂಗೆ ಮತಾಂತರಗೊಳಿಸುವುದಷ್ಟೇ ಅಲ್ಲದೆ ಭಯೋತ್ಪಾದನಾ ಚಟುವಟಿಕೆಗೂ ದೂಡಿದ ಉದಾಹರಣೆಗಳೂ ಇವೆ. ಲವ್ ಜಿಹಾದ್ ಮೂಲಕ ಲೈಂಗಿಕ ಸಂಪರ್ಕ ಬಳಸಿ, ಅದನ್ನು ಚಿತ್ರೀಕರಿಸಿ ಸಾಮಾಜಿಕ ತಾಣಗಳಲ್ಲೂ ಹಾಕಿ ಬ್ಲ್ಯಾಕ್ ಮೇಲ್ ಮಾಡಿದ ಉದಾಹರಣೆಗಳೂ ನಮ್ಮ ಮುಂದಿವೆ.

ಸರಕಾರ ಕಣ್ಣುಮುಚ್ಚಿ ಕೂತಿದೆಯೇ ?

ಸರಕಾರ ಕಣ್ಣುಮುಚ್ಚಿ ಕೂತಿದೆಯೇ ?

ಮಂಗಳೂರು, ಉಡುಪಿ, ಭಟ್ಕಳ ಭಾಗದಲ್ಲಿ ದಿನಕ್ಕೊಂದರಂತೆ ಪ್ರಕರಣಗಳು ದಾಖಲಾಗುತ್ತಿದ್ದರೂ, ಸಿದ್ದರಾಮಯ್ಯ ಸರಕಾರ ಇದರ ಬಗ್ಗೆ ಹೆಚ್ಚು ತಲೆಕೆಡಿಸಿ ಕೊಳ್ಳದೇ ಕೂತಿರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು pramod muthalik ಸುದ್ದಿಗಳುView All

English summary
Rajnath Singh unfit to be the Union Home Minister, Srirama Sene Chief Pramod Muthalik in Mumbai.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more