ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಉಳಿಸಲು ಪರಿಸರ ನೀತಿ ಜಾರಿ: ರಾಜೀವ್ ಚಂದ್ರಶೇಖರ್ ಒತ್ತಾಯ

|
Google Oneindia Kannada News

ಬೆಂಗಳೂರು, ಜುಲೈ 25: ಕರ್ನಾಟಕ ಮತ್ತು ಬೆಂಗಳೂರು ಸೇರಿದಂತೆ ಎಲ್ಲ ರಾಜ್ಯಗಳು ಹಾಗೂ ನಗರಗಳನ್ನು ರಕ್ಷಿಸಲು ಸೂಕ್ತವಾದ ಪರಿಸರ ನೀತಿಗಳನ್ನು ಜಾರಿಗೊಳಿಸುವ ಅಗತ್ಯವಿದೆ ಎಂದು ಸಂಸದ ರಾಜೀವ್ ಚಂದ್ರಶೇಖರ್ ಹೇಳಿದರು.

ಸಂಸತ್‌ನಲ್ಲಿ ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು, ಪರಿಸರದ ಉಳಿವಿಗೆ ಸಂಬಂಧಿಸಿದಂತೆ ನಾಲ್ಕು ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಿದರು.

ಮಾದಕದ್ರವ್ಯ ಸಮಸ್ಯೆ ರಾಜ್ಯಸಭೆಯಲ್ಲಿ ರಾಜೀವ್ ಚಂದ್ರಶೇಖರ್ ಪ್ರಸ್ತಾವಮಾದಕದ್ರವ್ಯ ಸಮಸ್ಯೆ ರಾಜ್ಯಸಭೆಯಲ್ಲಿ ರಾಜೀವ್ ಚಂದ್ರಶೇಖರ್ ಪ್ರಸ್ತಾವ

ಮುಖ್ಯವಾಗಿ ಕರ್ನಾಟಕದಲ್ಲಿ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತೆಗೆದುಕೊಂಡ ನಿರ್ಧಾರಗಳನ್ನು ಪ್ರಸ್ತಾಪಿಸಿದ ಅವರು, ಕೆಲವು ಹಿತಾಸಕ್ತಿಗಳ ಈಡೇರಿಕೆಗಾಗಿ ಕಾನೂನುಗಳನ್ನು ಉಲ್ಲಂಘಿಸಿ ಸರ್ಕಾರ ರೂಪಿಸಿದ ಯೋಜನೆಗಳು ಪರಿಸರಕ್ಕೆ ಮಾರಕವಾಗುತ್ತಿದೆ.

ಪರಿಸರ ಸಂರಕ್ಷಣೆಯ ನಿಯಮಗಳನ್ನು ಸಹ ಗಾಳಿಗೆ ತೂರಲಾಗುತ್ತಿದೆ. ಇದನ್ನು ನಿಯಂತ್ರಿಸಬೇಕಾದ ಸಂಸ್ಥೆಗಳು ಜಡ್ಡುಗಟ್ಟಿವೆ ಎಂದು ಆರೋಪಿಸಿದರು.

Array

ಎಸ್‌ಇಐಎಎ ಕಾರ್ಯನಿರ್ವಹಣೆ

ರಾಜ್ಯ ಪರಿಸರದ ಮೇಲಾಗುವ ಪರಿಣಾಮದ ಮೌಲ್ಯಮಾಪನ ಪ್ರಾಧಿಕಾರದ (ಎಸ್‌ಇಐಎಎ) ಕಾರ್ಯವೈಖರಿ ಬಗ್ಗೆ ಗಂಭೀರವಾದ ಪ್ರಶ್ನೆಗಳಿವೆ.

ನಿಯಂತ್ರಕವಾಗಿ ಕೆಲಸ ಮಾಡುವ ಬದಲು ಎಸ್‌ಇಐಎಎ ತಾನೇ ಅದರ ಪಾರ್ಟಿಯಂತೆ ಕೆಲಸ ಮಾಡುತ್ತಿದೆ. ಅಲ್ಲದೆ, ಪರಿಸರ ನಿಯಮಾವಳಿಗಳನ್ನು ಉಲ್ಲಂಘಿಸುತ್ತಿದೆ. ಇದಕ್ಕೆ ಭಾರಿ ವಿವಾದ ಕೆರಳಿಸಿದ ಉಕ್ಕಿನ ಸೇತುವೆ ಹಾಗೂ ಹಿರ ವರ್ತುಲ ರಸ್ತೆ ಉದಾಹರಣೆ.

ಈ ಎರಡೂ ಪ್ರಕರಣಗಳಲ್ಲಿ ಪರಿಸರ ಅನುಮತಿಯನ್ನು ಪಡೆದುಕೊಳ್ಳುವ ವಿಚಾರದಲ್ಲಿ ಪರಿಸರ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ. ಬಿಬಿಎಂಪಿ ಮೂಲಕ ಕರ್ನಾಟಕ ಸರ್ಕಾರ ಯಾವುದೇ ಪರಿಸರ ಅನುಮತಿ ಪಡೆದುಕೊಳ್ಳದೆ ಚಟುವಟಿಕೆಗಳನ್ನು ಮುಂದುವರಿಸಿದ್ದರೂ, ಕ್ರಮ ತೆಗೆದುಕೊಳ್ಳುವಲ್ಲಿ ಎಸ್‌ಇಐಎಎ ವಿಫಲವಾಗಿದೆ.

ಇದಲ್ಲದೆ ಕರ್ನಾಟಕ ಸರ್ಕಾರ ಇತ್ತೀಚೆಗೆ ಆರಂಭಿಸಿರುವ ನೂತನ ಯೋಜನೆಗಳಿಂದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಮತ್ತು ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮವಲಯಗಳಿಗೆ ಹಾನಿಯಾಗಲಿದೆ. ಇಂತಹ ಉದ್ದೇಶಪೂರ್ವಕ ಪರಿಸರ ಕಾನೂನುಗಳು ಹಾಗೂ ನ್ಯಾಯಾಲಯದ ನಿರ್ದೇಶನಗಳನ್ನು ಕರ್ನಾಟಕ ಸರ್ಕಾರ ಉಲ್ಲಂಘಿಸುತ್ತಿದ್ದರೂ ಎಸ್‌ಇಐಎಎ ನಿರ್ಲಕ್ಷ್ಯ ವಹಿಸಿದೆ.

ಕೆಂಪೇಗೌಡರ ಕನಸಿನ ಬೆಂಗಳೂರು ಮರು ನಿರ್ಮಾಣವಾಗಬೇಕು: ಸಂಸದ ರಾಜೀವ್‌ಕೆಂಪೇಗೌಡರ ಕನಸಿನ ಬೆಂಗಳೂರು ಮರು ನಿರ್ಮಾಣವಾಗಬೇಕು: ಸಂಸದ ರಾಜೀವ್‌

ಬೆಂಗಳೂರಿನ ಸಾಯುತ್ತಿರುವ ಕೆರೆಗಳು

ಬೆಂಗಳೂರಿನಲ್ಲಿನ ಕೆರೆಗಳು ನಾಶವಾಗುತ್ತಿದ್ದರೂ ಅದಕ್ಕೆ ಪರಿಹಾರ ಮಾತ್ರ ಸಿಕ್ಕಿಲ್ಲ. ಕೆರೆಗಳನ್ನು ನಿರ್ದಾಕ್ಷಿಣ್ಯವಾಗಿ ಸಾಯಿಸಿ ಬಫರ್ ವಲಯಗಳಲ್ಲಿ ಅಕ್ರಮ ಕಟ್ಟಡ ನಿರ್ಮಾಣ, ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದರೂ ಕರ್ನಾಟಕ ಸರ್ಕಾರ ಅದರ ಬಗ್ಗೆ ಜಾಣ ಕುರುಡುತನ ಪ್ರದರ್ಶಿಸುತ್ತಿರುವುದರ ಫಲಿತಾಂಶವಿದು.

ಬೆಂಗಳೂರಿನ ಕೆರೆಗಳು ಒಂದಕ್ಕೊಂದು ಅಂತರ್‌ ಸಂಪರ್ಕ ಹೊಂದಿವೆ. ಒತ್ತುವರಿದಾರರು ಹಾಗೂ ಮಲಿನಗೊಳಿಸುವವರಿಂದ ಅವುಗಳನ್ನು ರಕ್ಷಿಸಬೇಕಾಗಿದೆ. ಏಕೆಂದರೆ, ನಮ್ಮ ನೀರಿನ ಭದ್ರತೆ ಮತ್ತು ನಗರದ ಪರಿಸರ ಸುಸ್ಥಿರತೆಗೆ ಕೆರೆಗಳು ಅತ್ಯಂತ ಮಹತ್ವದ್ದಾಗಿವೆ.

ಬಿಎನ್‌ಪಿಯ ಪರಿಸರ ಸೂಕ್ಷ್ಮವಲಯದಲ್ಲಿ ಅಕ್ರಮ ಚಟುವಟಿಕೆ

ಬಿಎನ್‌ಪಿಯ ಪರಿಸರ ಸೂಕ್ಷ್ಮವಲಯದಲ್ಲಿ ಅಕ್ರಮ ಚಟುವಟಿಕೆ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಅಕ್ರಮವಾಗಿ ಗಣಿಗಾರಿಕೆ ಹಾಗೂ ಕ್ವಾರಿಗಳು ನಡೆಯುತ್ತಿದ್ದು, ಅವುಗಳನ್ನು ಕರ್ನಾಟಕ ಭೂಗಣಿ ಇಲಾಖೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ. ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು.

2018 ಖಾಸಗಿ ಸಂರಕ್ಷಣಾ ನಿಯಮಗಳನ್ನು ಹೇರುವ ಮೂಲಕ ಕರ್ನಾಟಕ ಸರ್ಕಾರ ಪರಿಸರ ಸೂಕ್ಷ್ಮ ವಲಯಗಳ ವ್ಯಾಪ್ತಿಯನ್ನು ಕುಗ್ಗಿಸುವ ಕೆಲಸ ಮಾಡುತ್ತಿದೆ. ಈ ಕಾನೂನುಗಳು ಜಾರಿಯಾದರೆ ಅಸ್ತಿತ್ವದಲ್ಲಿರುವ ವನ್ಯಜೀವಿಗಳು, ಅಮೂಲ್ಯ ಸಸ್ಯ ಸಂಪತ್ತುಗಳಿಗೆ ಭಾರಿ ಹಾನಿಯಾಗಲಿದೆ.

ಇದನ್ನು ತಡೆಯಲು ಕೇಂದ್ರ ಸರ್ಕಾರವು ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಕೇಂದ್ರ ಪರಿಸರ ಸಚಿವಾಲಯ ತಕ್ಷಣ ಮಧ್ಯಪ್ರವೇಶ ಮಾಡಿ ಪರಿಶೀಲನೆ ನಡೆಸಬೇಕು.

ಕರ್ನಾಟಕದಲ್ಲಿನ ಅಭಿವೃದ್ಧಿ ಯೋಜನೆಗಳು

ಕರ್ನಾಟಕದಲ್ಲಿನ ಅಭಿವೃದ್ಧಿ ಯೋಜನೆಗಳು

ಅಭಿವೃದ್ಧಿ ಹೆಸರಿನಲ್ಲಿ ಕರ್ನಾಟಕ ಸರ್ಕಾರ ಆರಂಭಿಸಿರುವ ಕೆಲವು ಯೋಜನೆಗಳಿಗೆ ಪರಿಸರ ಪರಿಣಾಮ ಪರಿಶೀಲನೆಯ ಅಗತ್ಯವಿದೆ. ಇವುಗಳಿಗೆ ಪರ್ಯಾಯ ಪರಿಹಾರಗಳಿಲ್ಲ. ಕೆಲವು ಯೋಜನೆಗಳನ್ನು ತಮ್ಮ ಅನುಕೂಲಕ್ಕಾಗಿ ಮಾಡಲಾಗುತ್ತಿದೆ.

ನಾಗರಿಕರಿಗೆ ಇರುವುದು ಹಸಿರ ನ್ಯಾಯಪೀಠದ ಮೊರೆ ಹೋಗುವ ದಾರಿ ಮಾತ್ರ. ಆದರೆ ಎನ್‌ಜಿಟಿಯಲ್ಲಿ ಹೆಚ್ಚಿನ ಹೊರೆ ಇರುವುದರಿಂದ ತ್ವರಿತವಾಗಿ ತೀರ್ಮಾನ ನಡೆಯುತ್ತಿಲ್ಲ. ಹೀಗಾಗಿ ನಮಗೆ ರಾಜ್ಯಮಟ್ಟದಲ್ಲಿ ಕೆಲಸ ಮಾಡುವ ನಿಯಂತ್ರಣ ಸಂಸ್ಥೆಗಳ ಅಗತ್ಯವಿದೆ.

English summary
MP Rajeev Chandrashekhar urged for Environment Regulations to save Bengaluru. He presented 4 key points in the Zero Hour at Parliament on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X