NWKRTC: ಸಂಸ್ಥೆಗೆ ಹೊಸ ರಾಜರಥ ಬಸ್‌ಗಳ ಆಗಮನ: ಬೆಂಗಳೂರು, ಥಾಣೆ ಸೇರಿ ಎಲ್ಲೆಲ್ಲಿಗೆ ಸಂಚಾರ, ವೇಳಾಪಟ್ಟಿ ಇಲ್ಲಿದೆ
ಬೆಂಗಳೂರು: ಹುಬ್ಬಳ್ಳಿ, ಬೆಳಗಾವಿ, ಚಿಕ್ಕೋಡಿ ಸೇರಿದಂತೆ ಉತ್ತರ ಕರ್ನಾಟಕದ ಭಾಗದ ಪ್ರಯಾಣಿಕರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಎರಡು ಹೊಸ ಐಷಾರಾಮಿ ರಾಜರಥ (NWKRTC Raja Ratha AC Bus) ಎಸಿ ಸ್ಲೀಪರ್ ಬಸ್‌ಗಳು ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ (NWKRTC) ಸೇರ್ಪಡೆಯಾಗಿವೆ. ಇದರಲ್ಲಿ ಒಂದು ಬಸ್ ಬೆಂಗಳೂರಿಗೆ, ಇನ್ನೊಂದು ಬಸ್ ಮಹಾರಾಷ್ಟ್ರದ ಪ್ರಮುಖ ನಗರಗಳಿಗೆ ಸಂಪರ್ಕ ನೀಡುತ್ತದೆ. ಇದಲ್ಲದೇ ಹುಬ್ಬಳ್ಳಿಯಿಂದ ಮಹಾರಾಷ್ಟ್ರಕ್ಕೆ ಕೊರೊನಾ ಎಸಿ ಸ್ಲೀಪರ್ ಬಸ್ ಸೇವೆ ಸಹ ಆರಂಭವಾಗಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ವಾಯುವ್ಯ ಸಾರಿಗೆ ಸಂಸ್ಥೆಯ ಚಿಕ್ಕೋಡಿ ಘಟಕಕ್ಕೆ ನೂತನ ರಾಜರಥ ಬಸ್‌ಗಳು ಸೇರ್ಪಡೆಯಾಗಿವೆ. ಒಂದು ಚಿಕ್ಕೋಡಿಯಿಂದ ಮತ್ತೊಂದು ಬೆಳಗಾವಿಯಿಂದ ಕಾರ್ಯಾರಣೆ ನಡೆಸಲಿವೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಪ್ರಮುಖ ನಗರಗಳ ನಡುವೆ ಸಂಪರ್ಕ ಕೊಂಡಿಯಾಗಿವೆ. ಹವಾ ನಿಯಂತ್ರಿತ, ಆರಾಮದಾಯಕ ಹಾಗೂ ನಾಗರಿಕರಿಗೆ ಐಷಾರಾಮಿ ಪ್ರಯಾಣ ಸೇವೆ ಒದಗಿಸಲಿವೆ.

ಎಲ್ಲಿಂದ ಎಲ್ಲಿಗೆ ಬಸ್ ಸಂಚಾರ, ವೇಳಾಪಟ್ಟಿ
1. ಬೆಳಗಾವಿ- ಥಾಣೆ ರಾಜರಥ ಬಸ್
ರಾಜ್ಯದ ಬೆಳಗಾವಿಯಿಂದ ಮಹಾರಾಷ್ಟ್ರದ ಠಾಣಾವರೆಗೆ ರಾಜರಥ ಎಸಿ ಸ್ಲೀಪರ್ ಬಸ್ ಕಾರ್ಯಾರಣೆ ನಡೆಸುತ್ತಿದೆ. ನಿತ್ಯ ರಾತ್ರಿ 8.15 ಗಂಟೆಗೆ ಬೆಳಗಾವಿಯಿಂದ ಹೊರಟು, ಮಾರನೇ ಬೆಳಗ್ಗೆ 6.30ಕ್ಕೆ ಥಾಣೆ ತಲುಪುತ್ತಿದೆ. ಮರಳಿ ಅಲ್ಲಿಂದ ರಾತ್ರಿ 8 ಗಂಟೆಗೆ ಬಿಟ್ಟು ಬೆಳಗ್ಗೆ 6.45ಕ್ಕೆ ಬೆಳಗಾವಿಗೆ ಬರಲಿದೆ.
ಪ್ರಯಾಣ ದರ: ಈ ರೂಟ್‌ನ ಒಬ್ಬ ಪ್ರಯಾಣಿಕರಿಗೆ ಟಿಕೆಟ್ ದರ 1250 ರೂಪಾಯಿ ನಿಗದಿಪಡಿಸಲಾಗಿದೆ.
ಮಾರ್ಗ/ ನಿಲುಗಡೆ ನಿಲ್ದಾಣಗಳು: ಬೆಳಗಾವಿಯಿಂದ ಸಂಕೇಶ್ವರ್, ನಿಪ್ಪಾಣಿ, ಕೊಲ್ಲಾಪುರ ಮತ್ತು ಪುಣೆಯಂತಹ ಪ್ರಮುಖ ನಗರಗಳಲ್ಲಿ ನಿಲುಗಡೆ ನೀಡುತ್ತದೆ.
2. ಚಿಕ್ಕೋಡಿ-ಬೆಂಗಳೂರು ರಾಜರಥ ಬಸ್
ಚಿಕ್ಕೋಡಿ-ಬೆಂಗಳೂರು ಮಾರ್ಗದಲ್ಲಿ ಹೊಸದಾಗಿ ರಾಜರಥ ಎಸಿ ಸ್ಲೀಪರ್ ಬಸ್ ಸೇವೆ ಶುರುವಾಗಿದೆ., ಬಸ್ ಸಂಜೆ 7 ಗಂಟೆಗೆ ಚಿಕ್ಕೋಡಿಯಿಂದ ಹೊರಟು ಬೆಳಗ್ಗೆ 6.45ಕ್ಕೆ ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಆಗಮಿಸುತ್ತದೆ. ಮತ್ತೆ ರಾತ್ರಿ ಬೆಂಗಳೂರಿನಿಂದ 9.55ಕ್ಕೆ ಹೊರಟು ಮಾರನೇ ದಿನ ಬೆಳಗ್ಗೆ 7.45ಕ್ಕೆ ಚಿಕ್ಕೋಡಿ ನಿಲ್ದಾಣ ತಲುಪುತ್ತದೆ.
ಮಾರ್ಗ/ ನಿಲುಗಡೆ ನಿಲ್ದಾಣಗಳು
ಚಿಕ್ಕೋಡಿ-ಬೆಂಗಳೂರು ರಾಜರಥ ಎಸಿ ಸ್ಲೀಪರ್ ಬಸ್ ನಿಪ್ಪಾಣಿ, ಸಂಕೇಶ್ವರ, ಬೆಳಗಾವಿ, ಧಾರವಾಡ, ಹುಬ್ಬಳ್ಳಿ ಮಾರ್ಗವಾಗಿ ಸಾಗಿ ಬೆಂಗಳೂರಿಗೆ ಬರಲಿದೆ.
ಬಸ್ ಟಿಕೆಟ್ ದರ: ತಲಾ ಒಬ್ಬ ಪ್ರಯಾಣಿಕರಿಗೆ ಟಿಕೆಟ್ ದರ 1357 ರೂಪಾಯಿ ನಿಗದಿಪಡಿಸಲಾಗಿದೆ. ಉತ್ತರ ಕರ್ನಾಟಕದಿಂದ ರಾಜಧಾನಿ ಬೆಂಗಳೂರಿಗೆ ಬರುವವ ನೌಕರರು, ಸಾರ್ವಜನಿಕರಿಗೆ ಈ ಬಸ್ ಸೇವೆ ಹೆಚ್ಚಿನ ಅನುಕೂಲ ಒದಗಿಸಲಿದೆ. ಹೆಚ್ಚುವರಿ ಐಷಾರಾಮಿ ಬಸ್ ಸೇವೆ ಸಿಕ್ಕಂತಾಗಿದೆ.
3. ಹುಬ್ಬಳ್ಳಿಯಿಂದ ಪಿಂಪ್ರಿಗೆ ಕೊರೊನಾ ಬಸ್
ಇನ್ನೂ ಹುಬ್ಬಳ್ಳಿಯಿಂದ ಮಹಾರಾಷ್ಟ್ರದ ಪಿಂಪ್ರಿವರೆಗೆ ರಾಜರಥಾ ಬಸ್ ಬದಲಾಗಿ 'ಕೊರೊನಾ ಎಸಿ ಸ್ಲೀಪರ್ ಬಸ್‌ಗಳ ಸೇವೆ' ಲಭ್ಯವಿದೆ. ಈ ಬಸ್‌ಗಳು ಹುಬ್ಬಳ್ಳಿಯನ್ನು ರಾತ್ರಿ 9, 9.30ಕ್ಕೆ ಬಿಟ್ಟು ಮಾರನೇ ದಿನ ಬೆಳಗ್ಗೆ ಪ್ರಿಂಪ್ರಿ ತಲುಪುತ್ತವೆ. ಮರಳಿ ಅಲ್ಲಿಂದ ರಾತ್ರಿ 9, 9.31 ಗಂಟೆಗೆ ಹೊರಟು ಮರುದಿನ ಬೆಳಗ್ಗೆ ಹುಬ್ಬಳ್ಳಿಗೆ ಆಗಮಿಸುತ್ತವೆ.
ಟಿಕೆಟ್ ಬುಕ್ಕಿಂಗ್ ಪ್ರಯಾಣಿಕರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಅಧಿಕೃತ ವೆಬ್‌ಸೈಟ್ www.ksrtc.in ಗೆ ಭೇಟಿ ನೀಡಬೇಕು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆಗೆ 94810 06515 ಅಥವಾ 77609 91875 ಗೆ ಸಂಪರ್ಕಿಸುವಂತೆ NWKRTC ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.


Click it and Unblock the Notifications
