ರಾಜ್ಯದಲ್ಲಿ ಮತ್ತೆ ಮಳೆ: ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟು
Rain in karnataka: ರಾಜ್ಯದಲ್ಲಿ ಮಳೆಯ ಆರ್ಭಟ ಮತ್ತೆ ಹೆಚ್ಚಾಗಿದೆ. ಕರ್ನಾಟಕದ ವಿವಿಧ ಭಾಗದಲ್ಲಿ ಈಚೆಗೆ ಧಾರಾಕಾರ ಮಳೆಯಾಗಿತ್ತು. ಈ ನಡುವೆ ಮೂರ್ನಾಲ್ಕು ದಿನಗಳಿಂದ ಮಳೆಯ ಅಬ್ಬರ ತುಸು ಇಳಿಕೆಯಾಗಿತ್ತು. ಇದೀಗ ಮತ್ತೆ ರಾಜ್ಯದಲ್ಲಿ ಮಳೆಯ ಆರ್ಭಟ ಜೋರಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ ಕರಾವಳಿ ಜಿಲ್ಲೆಗಳು ಹಾಗೂ ಮಲೆನಾಡಿನಲ್ಲಿ ಮುಂದಿನ ಐದು ದಿನಗಳ ವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಾಳೆಯಿಂದ (ಅಕ್ಟೋಬರ್ 31) ನವೆಂಬರ್ 2ರ ವರೆಗೆ ರಾಜ್ಯದಲ್ಲಿ ಮಳೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ನಡುವೆ ರಾಜ್ಯ ಹಲವು ಪ್ರಮುಖ ಜಲಾಶಯಗಳು ತುಂಬಿ ಹರಿಯುತ್ತಿವೆ.

ರಾಜ್ಯದ ಪ್ರಮುಖ ಜಲಾಶಗಳ ಇಂದಿನ (ಅಕ್ಟೋಬರ್ 30)ರ ನೀರಿನ ಮಟ್ಟ ಎಷ್ಟಿದೆ ಎನ್ನುವ ವಿವರ ಇಲ್ಲಿದೆ.
ಸೂಪಾ ಜಲಾಶಯ
ಗರಿಷ್ಠ ನೀರಿನ ಮಟ್ಟ: 145.33 ಟಿಎಂಸಿ
ಇಂದಿನ ನೀರಿನ ಮಟ್ಟ: 138.60 ಟಿಎಂಸಿ
ಒಳಹರಿವು: 1186 ಕ್ಯೂಸೆಕ್ಸ್
ಹೊರಹರಿವು: 4104 ಕ್ಯೂಸೆಕ್ಸ್
ವಾರಾಹಿ ಜಲಾಶಯ
ಗರಿಷ್ಠ ನೀರಿನ ಮಟ್ಟ: 31.10 ಟಿಎಂಸಿ
ಇಂದಿನ ನೀರಿನ ಮಟ್ಟ: 29.11 ಟಿಎಂಸಿ
ಒಳಹರಿವು: 0 ಕ್ಯೂಸೆಕ್ಸ್
ಹೊರಹರಿವು: 0 ಕ್ಯೂಸೆಕ್ಸ್
ಹಾರಂಗಿ ಜಲಾಶಯ
ಗರಿಷ್ಠ ನೀರಿನ ಮಟ್ಟ: 8.50 ಟಿಎಂಸಿ
ಇಂದಿನ ನೀರಿನ ಮಟ್ಟ: 7.37 ಟಿಎಂಸಿ
ಒಳಹರಿವು: 162 ಕ್ಯೂಸೆಕ್ಸ್
ಹೊರಹರಿವು: 1,500 ಕ್ಯೂಸೆಕ್ಸ್
ಕೆಆರ್‌ಎಸ್ ಜಲಾಶಯ
ಗರಿಷ್ಠ ನೀರಿನ ಮಟ್ಟ: 49.45 ಟಿಎಂಸಿ
ಇಂದಿನ ನೀರಿನ ಮಟ್ಟ: 49.45 ಟಿಎಂಸಿ
ಒಳಹರಿವು: 5,311 ಕ್ಯೂಸೆಕ್ಸ್
ಹೊರಹರಿವು:5,052 ಕ್ಯೂಸೆಕ್ಸ್
ಕಬಿನಿ ಜಲಾಶಯ
ಗರಿಷ್ಠ ನೀರಿನ ಮಟ್ಟ: 19.52 ಟಿಎಂಸಿ
ಇಂದಿನ ನೀರಿನ ಮಟ್ಟ: 19.08 ಟಿಎಂಸಿ
ಒಳಹರಿವು: 223 ಕ್ಯೂಸೆಕ್ಸ್
ಹೊರಹರಿವು: 1,100 ಕ್ಯೂಸೆಕ್ಸ್
ಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ: 71.54 ಟಿಎಂಸಿ
ಇಂದಿನ ನೀರಿನ ಮಟ್ಟ: 71.40 ಟಿಎಂಸಿ
ಒಳಹರಿವು: 2,292 ಕ್ಯೂಸೆಕ್ಸ್
ಹೊರಹರಿವು: 3,206 ಕ್ಯೂಸೆಕ್ಸ್
ತುಂಗಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ: 105.79 ಟಿಎಂಸಿ
ಇಂದಿನ ನೀರಿನ ಮಟ್ಟ: 101.77 ಟಿಎಂಸಿ
ಒಳಹರಿವು: 14,134 ಕ್ಯೂಸೆಕ್ಸ್
ಹೊರಹರಿವು: 14,134 ಕ್ಯೂಸೆಕ್ಸ್
ಘಟಪ್ರಭಾ ಜಲಾಶಯ
ಗರಿಷ್ಠ ನೀರಿನ ಮಟ್ಟ: 51.00 ಟಿಎಂಸಿ
ಇಂದಿನ ನೀರಿನ ಮಟ್ಟ: 50.93 ಟಿಎಂಸಿ
ಒಳಹರಿವು: 1,802 ಕ್ಯೂಸೆಕ್ಸ್
ಹೊರಹರಿವು: 2,286 ಕ್ಯೂಸೆಕ್ಸ್
ಮಲಪ್ರಭಾ ಜಲಾಶಯ
ಗರಿಷ್ಠ ನೀರಿನ ಮಟ್ಟ: 37.73 ಟಿಎಂಸಿ
ಇಂದಿನ ನೀರಿನ ಮಟ್ಟ: 37.73 ಟಿಎಂಸಿ
ಒಳಹರಿವು: 1,444 ಕ್ಯೂಸೆಕ್ಸ್
ಹೊರಹರಿವು: 1,444 ಕ್ಯೂಸೆಕ್ಸ್
ಆಲಮಟ್ಟಿ ಜಲಾಶಯ
ಗರಿಷ್ಠ ನೀರಿನ ಮಟ್ಟ: 123.08 ಟಿಎಂಸಿ
ಇಂದಿನ ನೀರಿನ ಮಟ್ಟ: 123.08 ಟಿಎಂಸಿ
ಒಳಹರಿವು: 20,511 ಕ್ಯೂಸೆಕ್ಸ್
ಹೊರಹರಿವು: 20,511 ಕ್ಯೂಸೆಕ್ಸ್
ನಾರಾಯಣಪುರ ಜಲಾಶಯ
ಗರಿಷ್ಠ ನೀರಿನ ಮಟ್ಟ: 33.31 ಟಿಎಂಸಿ
ಇಂದಿನ ನೀರಿನ ಮಟ್ಟ: 33.32 ಟಿಎಂಸಿ
ಒಳಹರಿವು: 18,923 ಕ್ಯೂಸೆಕ್ಸ್
ಹೊರಹರಿವು: 18,373 ಕ್ಯೂಸೆಕ್ಸ್
ವಾಣಿ ವಿಲಾಸ ಸಾಗರ
ಗರಿಷ್ಠ ನೀರಿನ ಮಟ್ಟ: 30.42 ಟಿಎಂಸಿ
ಇಂದಿನ ನೀರಿನ ಮಟ್ಟ: 27.87 ಟಿಎಂಸಿ
ಒಳಹರಿವು: 1,040 ಕ್ಯೂಸೆಕ್ಸ್
ಹೊರಹರಿವು: 133 ಕ್ಯೂಸೆಕ್ಸ್












Click it and Unblock the Notifications