Karnataka Rain: ಚಂಡಮಾರುತ ಅಬ್ಬರಕ್ಕೆ ಶಾಲೆಗಳಿಗೆ ರಜೆ ಘೋಷಣೆ, ಬೆಂಗಳೂರು ಸೇರಿ ಕರ್ನಾಟಕದಲ್ಲಿ ಭಾರಿ ಮಳೆ!
ಮಳೆ.. ಮಳೆ.. ಮಳೆ.. ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆ & ತಾಲೂಕುಗಳಲ್ಲಿ ಇದೀಗ ಭಾರಿ ಭರ್ಜರಿ ಮಳೆ ಸುರಿಯುತ್ತಿದೆ. ಪರಿಸ್ಥಿತಿ ಕೈಮೀರಿ ಹೋಗಿ ಇದೀಗ ಜನರು ಪರದಾಡುತ್ತಿದ್ದಾರೆ. ಮುಂದಿನ 4 ರಿಂದ 5 ದಿನಗಳ ಕಾಲ ಇದೇ ರೀತಿಯಾಗಿ ಭಾರಿ ಭರ್ಜರಿ ಮಳೆ ಸುರಿಯುವ ಎಚ್ಚರಿಕೆ ಕೂಡ ನೀಡಲಾಗಿದೆ. ಪರಿಸ್ಥಿತಿ ಹೀಗೆ ಇದ್ದಾಗಲೇ, ಚಂಡಮಾರುತ ಅಬ್ಬರಕ್ಕೆ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ!
ದಿಢೀರ್ ಭಾರಿ ಭರ್ಜರಿ ಮಳೆ ಸುರಿಯುತ್ತಿರುವ ಕಾರಣಕ್ಕೆ ಜನರು ಕೂಡ ಟೆನ್ಷನ್ ಆಗಿದ್ದಾರೆ. ಬಂಗಾಳ ಕೊಲ್ಲಿ ಸಮುದ್ರ ಪ್ರದೇಶದಲ್ಲಿ 'ಫೆಂಗಲ್' ಚಂಡಮಾರುತ ಜನ್ಮ ಪಡೆದಿದ್ದು, ಮಳೆ ಬರಲು ಶುರುವಾಗಿದೆ. ಕಡಿಮೆ ಒತ್ತಡ ಪ್ರದೇಶದ ಪರಿಣಾಮ ಕಳೆದ 3 ದಿನಗಳಿಂದಲೂ ಇಲ್ಲಿನ ವಾತಾವರಣ ಸಂಪೂರ್ಣ ಕೈಕೊಟ್ಟಿದೆ. ಪರಿಸ್ಥಿತಿ ಹೀಗಿದ್ದಾಗಲೇ ಮತ್ತೆ ಮುಂದಿನ 3 ದಿನಗಳ ಕಾಲ ಇನ್ನಷ್ಟು ಜೋರಾಗಿ ಮಳೆ ಬರುವುದು ಕನ್ಫರ್ಮ್ ಆಗಿದೆ. ಇದೇ ಸಮಯದಲ್ಲಿ ಇದೀಗ, ಚಂಡಮಾರುತ ಅಬ್ಬರಕ್ಕೆ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಮಳೆ ಅಬ್ಬರ, ಶಾಲೆಗಳಿಗೆ ರಜೆ ಘೋಷಣೆ!
ಬೆಂಗಳೂರು ಸೇರಿ ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಕೋಲಾರ ಜಿಲ್ಲೆ ಭಾಗದ ಹಲವು ಕಡೆ ಮಳೆ ಸುರಿಯುತ್ತಿದೆ. ಹಾಗೇ, ಚಿಕ್ಕಬಳ್ಳಾಪುರ ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮಳೆಯು ಅಬ್ಬರಿಸುವ ವಾರ್ನಿಂಗ್ ಕೊಡಲಾಗಿದೆ. ಇದರ ಜೊತೆ, ಉತ್ತರ ಕರ್ನಾಟಕ ಭಾಗದ ಕೆಲ ಜಿಲ್ಲೆಗಳಿಗೆ ಕೂಡ ಮಳೆಯ ಕಾಟವು ಇರಲಿದೆ. ಹೀಗಿದ್ದಾಗ ಕೋಲಾರ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ ಒಂದು ದಿನ ರಜೆ ನೀಡಲಾಗಿದೆ.
ಬೆಂಗಳೂರಲ್ಲಿ ಕೂಡ ನಿನ್ನೆಯಿಂದ ಭಾರಿ ಮಳೆ ಸುರಿಯುತ್ತಿದ್ದು, ಪರಿಸ್ಥಿತಿ ಇದೇ ರೀತಿ ಇದ್ದರೆ ನಾಳೆ ಅಂದ್ರೆ ಸೋಮವಾರ ಮಕ್ಕಳು ಶಾಲೆ & ಕಾಲೇಜುಗಳಿಗೆ ಹೋಗುವುದು ಅನುಮಾನವೇ ಸರಿ ಎನ್ನಲಾಗುತ್ತಿದೆ. ಹೀಗಿದ್ದರೂ ಬೆಂಗಳೂರಿನ ಶಾಲೆ & ಕಾಲೇಜುಗಳಿಗೆ ರಜೆ ಇನ್ನೂ ಘೋಷಣೆ ಮಾಡಿಲ್ಲ. ಆದರೆ ನಾಳೆ ಬೆಳಗ್ಗೆ ತನಕ ಏನಾಗಲಿದೆ? ಎಂಬ ಪ್ರಶ್ನೆ ಮೂಡಿದೆ. ಯಾಕಂದ್ರೆ, ಇದೀಗ ಮಳೆ ಭಾರಿ ಭರ್ಜರಿಯಾಗಿ ಸುರಿಯುತ್ತಿದೆ. ಬೆಂಗಳೂರಿನ ರಸ್ತೆಗಳಲ್ಲಿ ಮಾರುದ್ದ ನೀರು ಹರಿಯುವಂತೆ ಆಗಿದೆ.
72 ಗಂಟೆಗಳ ಕಾಲ ಭಾರಿ ಮಳೆ!
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ ಭರ್ಜರಿ ಮಳೆ ಸುರಿದು, ಕೆರೆ & ಕುಂಟೆ ಸೇರಿದಂತೆ ಕರ್ನಾಟಕದ ಎಲ್ಲಾ ಜಲಾಶಯಗಳು ತುಂಬಿ ತುಳುಕುತ್ತಿವೆ. ಇಂತಹ ಸಮಯದಲ್ಲೂ, ಮತ್ತೆ ಮಳೆ ಮುನ್ನೆಚ್ಚರಿಕೆ ನೀಡಲಾಗಿದೆ. 72 ಗಂಟೆಗಳ ಕಾಲ ಫೆಂಗಲ್ ಚಂಡಮಾರುತದ ಪರಿಣಾಮ ಭಾರಿ ಭರ್ಜರಿ ಮಳೆ ಸುರಿಯಲಿದೆ ಎಂದು ಇದೀಗ ಎಚ್ಚರಿಕೆ ನೀಡಲಾಗಿದೆ.
ಹೀಗಿದ್ದಾಗ ಮುನ್ನೆಚ್ಚರಿಕೆ ಕ್ರಮವಾಗಿ ಭಾರಿ ಮಳೆ ಬರುತ್ತಿರುವ ಕಾರಣ ಶಾಲೆ & ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ನಿರೀಕ್ಷೆಯಲ್ಲಿ ಜನರು ಇದ್ದಾರೆ. ಆದರೆ ಬೆಂಗಳೂರಿನಲ್ಲಿ ರಜೆಯ ಘೋಷಣೆ ಬಗ್ಗೆ ಈವರೆಗೂ ಸ್ಪಷ್ಟನೆ ಸಿಕ್ಕಿಲ್ಲ, ಹೀಗಾಗಿ ಬೆಳಗ್ಗೆ ತನಕ ಕಾದು ನೋಡಬೇಕಿದೆ. ಮತ್ತೊಂದು ಕಡೆ ಭಾರಿ ಮಳೆ ಹಿನ್ನೆಲೆ ಪೋಷಕರು ಕೂಡ ಟೆನ್ಷನ್ ಆಗಿ ಆಕಾಶ ನೋಡುತ್ತಾ ಕೂರುವಂತೆ ಆಗಿದೆ!












Click it and Unblock the Notifications