Karnataka Rains: ಸಂಜೆಯಿಂದಲೇ ಜಿಲ್ಲೆಗಳಲ್ಲಿ ರಣಮಳೆ! ಆಗಸ್ಟ್ 11ರವರೆಗೆ ಭಾರೀ ಮಳೆ ಮುನ್ಸೂಚನೆ

August Rain Forecast: ಕರ್ನಾಟಕದಾದ್ಯಂತ ಮುಂಗಾರು ಮಳೆ ಮತ್ತೆ ಚುರುಕಾಗಿದೆ. ಇಂದು ಸಂಜೆಯಿಂದ ಅನೇಕ ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಂದೇ ಸಮನೇ ಜೋರು ಮಳೆ ಸುರಿದಿದೆ. ಹೆಚ್ಚಾಗಿ ಉತ್ತರ ಕರ್ನಾಟಕದ ಭಾಗದ ಹುಬ್ಬಳ್ಳಿ, ಧಾರವಾಡ, ಹಾವೇರಿ, ಗದಗ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸಂಜೆ 7 ಗಂಟೆಯಿಂದಲೇ ಸಾಧಾರಣದಿಂದ ಭಾರೀ ಮಳೆ ಆಗಿದೆ. ಹಾಗಾದ್ರೆ ರಾಜ್ಯಕ್ಕೆ ಏನೆಲ್ಲ ಮಳೆ ಮುನ್ಸೂಚನೆ ಇದೆ?

ವಿವಿಧ ಜಿಲ್ಲೆಗಳಲ್ಲಿ ಕಡಿಮೆಯಾಗಿದ್ದ ಮುಂಗಾರು ಮಳೆ ಮತ್ತೆ ಆರ್ಭಟಿಸಲು ಶುರು ಮಾಡಿದೆ. ಈ ಮೇಲಿನ ಕೆಲವು ಜಿಲ್ಲೆಗಳಲ್ಲಿ ಬೆಳಗ್ಗೆಯಿಂದ ಬಿರು ಬಿಸಿಲು ಕಂಡು ಬಂತಾದರೂ ಸಹಿತ ಸಂಜೆ ನಂತರ ದಿಢೀರ್ ಜೋರು ಮಳೆ ಸುರಿಯಲಾರಂಭಿಸಿತ್ತು. ಕೆಲವೆಡೆ ತಡರಾತ್ರಿವರೆಗೂ ಮುಂದುವರಿಯುವ ನಿರೀಕ್ಷೆ ಇದೆ. ನೆನ್ನೆ ಸೋಮವಾರ ಹುಬ್ಬಳ್ಳಿ, ಶಿಗ್ಗಾವಿ, ಹಾವೇರಿ, ಧಾರವಾಡ ಸೇರಿ ಹಲವೆಡೆ ತುಂತುರು ಮಳೆ ಆಯಿತು ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Rain Alert Widespread Monsoon Showers Lash on Karnataka Heavy Rain Likely Till August 11

ಮುಂದಿನ ಮೂರು ದಿನ ಅಂದರೆ ಆಗಸ್ಟ್ 11ರವರೆಗೆ ಇದೇ ಜಿಲ್ಲೆಗಳು ಒಳಗೊಂಡಂತೆ ರಾಜ್ಯದ ಮಲೆನಾಡು ಹಾಗೂ ಕರಾವಳಿ ಮತ್ತು ಹಲವು ಒಳನಾಡು ಜಿಲ್ಲೆಗಳ ವ್ಯಾಪ್ತಿಯಲ್ಲಿ ಭಾರೀ ಮಳೆ ಆಗಲಿದೆ. ಆಗಾಗ ಬಿಸಿಲಿನ ದರ್ಶನವಾದರು ಸಹಿತ ಜೋರು ಗಾಳಿ ಸಮೇತ ಧಾರಾಕಾರ ಮಳೆ ನಿರೀಕ್ಷೆ ಇದೆ.

ಎಲ್ಲೆಲ್ಲಿ ಭಾರೀ ಮಳೆ ಎಚ್ಚರಿಕೆ

ಚಂಡಮಾರುತ ಪ್ರಸರಣದಂತಹ ಹವಾಮಾನ ವೈಪರೀತ್ಯಗಳ ಪ್ರಭಾವ ಹಾವೇರಿ, ಬೆಳಗಾವಿ, ಧಾರವಾಡ, ಗದಗ, ಬೀದರ್, ವಿಜಯಪುರ, ಚಿತ್ರದುರ್ಗ, ದಾವಣಗೆರೆ, ಮಂಗಳೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಮೈಸೂರು ಹಾಗೂ ಚಿಕ್ಕಮಗಳೂರು, ಚಾಮರಾಜನಗರ, ಹಾಸನ, ಕೊಡಗು ಭಾಗಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಿಢೀರ್ ಮಳೆಗೆ ಪ್ರಮುಖ ಕಾರಣ?

ಮಾನ್ಸೂನ್ ಸ್ಟ್ರಫ್ ಅಮೃತಸರ, ಪಟಿಯಾಲ, ಮುಜಫರ್‌ನಗರ, ಖೇರಿ, ವಾಲ್ಮೀಕ್ ನಗರ್ ಮೂಲಕ ಹಾದುಹೋಗಿದೆ. ಇದು ಸರಾಸರಿ ಸಮುದ್ರ ಮಟ್ಟದಿಂದ ಪೂರ್ವ-ಈಶಾನ್ಯಕ್ಕೆ ಅರುಣಾಚಲ ಪ್ರದೇಶದತ್ತ ಸಾಗಲಿದೆ. ತಮಿಳುನಾಡು ಕರಾವಳಿಯ ಬಂಗಾಳಕೊಲ್ಲಿ ನೈಋತ್ಯ ಭಾಗದಲ್ಲಿ ವಾಯು ಚಂಡಮಾರುತದ ಪರಿಚಲನೆ ಮುಂದುವರೆದಿದೆ. ಅದೀಗ ಸಮುದ್ರ ಮಟ್ಟದಿಂದ 1.5 ಮತ್ತು 7.6 ಕಿ.ಮೀ ವರೆಗೆ ಎತ್ತರದಲ್ಲಿ ವಿಸ್ತರಣೆ ಆಗಿದೆ.

ಕರ್ನಾಟಕದ ಒಳನಾಡು ಭಾಗಕ್ಕು ಹೊಂದಿಕೊಂಡಂತೆ ಪೂರ್ವ-ಮಧ್ಯ ಅರೇಬಿಯನ್ ಸಮುದ್ರದ ದಕ್ಷಿಣ ಭಾಗಗಳಿಂದ ಬಂಗಾಳ ಕೊಲ್ಲಿಯ ದಕ್ಷಿಣ ಭಾಗಗಳವರೆಗೆ 10°N ಮತ್ತು ಉತ್ತರ ತಮಿಳುನಾಡು ಕರಾವಳಿಯ ನೈಋತ್ಯ ಕೊಲ್ಲಿಯ ಮೇಲೆ ಸರಾಸರಿ ಸಮುದ್ರ ಮಟ್ಟದಿಂದ 3.1 ಮತ್ತು 7.6 ಕಿ.ಮೀ ನಡುವೆ ಚಂಡಮಾರುತದ ಪ್ರಸರಣ ಉಂಟಾಗಿದೆ.

ಈ ಮೇಲಿನ ಹವಾಮಾನ ವೈಪರೀತ್ಯಗಳ ಕಾರಣದಿಂದಾಗಿ ಮುಂಗಾರು ಮಳೆ ಅಪಾರ ಪ್ರಮಾಣದಲ್ಲಿ ಸುರಿಯುತ್ತಿದೆ. ಮಲೆನಾಡು ಬಿಟ್ಟರೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಬಿರುಸಿನ ಮಳೆ ಕಂಡು ಬಂದಿದೆ. ಆಗಸ್ಟ್ 11ರವರೆಗೆ ಮಳೆ ಮುಂದುವರಿಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+