Heavy Rain: ಮಳೆ.. ಮಳೆ.. ಮಳೆ ಆರ್ಭಟ ಮತ್ತೆ ಶುರು!

ಕರ್ನಾಟಕದಲ್ಲಿ ಮಳೆಯ ಕೊರತೆ ಕಾರಣಕ್ಕೆ ಕನ್ನಡಿಗರು ನಲುಗಿ ಹೋಗಿದ್ದು, ಈಗಿನ ಸ್ಥಿತಿ ನೋಡಿದರೆ ಅದೆಷ್ಟೇ ಮಳೆ ಸುರಿದರೂ ಕಡಿಮೆ ಎನ್ನಬಹುದು. ಹೀಗಾಗಿ ಭರ್ಜರಿ ಮಳೆಯ ಆಗಮನ ಆಗಲಿ ಅಂತಾ ಕನ್ನಡಿಗರು ಬೇಡಿಕೆ ಇಡುತ್ತಲೇ ಇದ್ದಾರೆ. ಆದರೂ, ಮಳೆ ಮಾತ್ರ ಕೈಕೊಡುತ್ತಲೇ ಇದೆ. ಇಂತಹ ಪರಿಸ್ಥಿತಿ ನೋಡಿ ವರುಣ ದೇವ ಈಗ ಕರ್ನಾಟಕದ ಹಲವು ಜಿಲ್ಲೆಗಳಿಗೆ ಆಶೀರ್ವಾದ ಮಾಡಿದಂತೆ ಕಾಣುತ್ತಿದ್ದು. ಮುಂದಿನ ಕೆಲವೇ ಗಂಟೆಗಳಲ್ಲಿ ಮಳೆ ಅಬ್ಬರ ಮತ್ತೆ ಶುರುವಾಗಲಿದೆ, ಆ ಬಗ್ಗೆ ಇಂಚಿಂಚು ಮಾಹಿತಿ ಇಲ್ಲಿದೆ.

1 ವಾರದಿಂದ ಕರ್ನಾಟಕದಲ್ಲಿ ವರುಣ ಅಬ್ಬರಿಸಲು ಶುರು ಮಾಡಿದ್ದು ನಿಧಾನವಾಗಿ ಮಳೆ ಎಲ್ಲ ಜಿಲ್ಲೆಗೂ ಹಬ್ಬುತ್ತಿತ್ತು. ಉತ್ತರ ಕರ್ನಾಟಕ ಸೇರಿ ಕರ್ನಾಟಕದ ಮಲೆನಾಡು ಭಾಗ & ಕರಾವಳಿ ಪ್ರದೇಶದಲ್ಲು ಮಳೆರಾಯ ಅಬ್ಬರಿಸಿದ್ದಾನೆ. ಇದೇ ಸಮಯದಲ್ಲಿ ಕರ್ನಾಟಕದ ಬಯಲು ಸೀಮೆ ಭಾಗದಲ್ಲೂ ಮಳೆರಾಯನ ಆರ್ಭಟ ಶುರುವಾಗಿತ್ತು. ಆದರೆ, ಕಳೆದ ವಾರ ಅಬ್ಬರಿಸಿದ್ದ ಮಳೆ ಈ ವಾರ ಸೈಲೆಂಟ್ ಆಗಿದ್ದು ಕನ್ನಡಿಗರ ನಿದ್ದೆಗೆಡಿಸಿದೆ. ಹೀಗಿದ್ದಾಗ ಗುಡ್ ನ್ಯೂಸ್ ಒಂದು ಸಿಕ್ಕಿದೆ. ಅದು ಏನೆಂದರೆ ಕರ್ನಾಟಕದ ಈ ಜಿಲ್ಲೆಗಳಲ್ಲಿ ಮುಂದಿನ ಕೆಲವೇ ಗಂಟೆಯಲ್ಲಿ ಭಾರಿ ಮಳೆ ಸುರಿಯಲಿದೆ.

Rain Alert Heavy Rain Alert Has Been Given In Karnataka For Next 24 Hours On 18th Of April 2024

ಮಳೆ.. ಮಳೆ.. ಭರ್ಜರಿ ಮಳೆ!

ಹವಾಮಾನ ಇಲಾಖೆ ಮಳೆ ಬಗ್ಗೆ ನೀಡಿರುವ ಮುನ್ಸೂಚನೆ ಪ್ರಕಾರ, ಏಪ್ರಿಲ್ 18 & 19 ರಂದು ಕೊಡಗು, ಚಿಕ್ಕಮಗಳೂರು, ಮೈಸೂರು, ಮಂಡ್ಯ ಹಾಗೂ ಹಾಸನ ಜಿಲ್ಲೆಗಳಲ್ಲಿ ಗುಡುಗು & ಸಿಡಿಲು ಸಹಿತ ಮಳೆ ಬೀಳಲಿದೆ. ಜೊತೆಗೆ ದಕ್ಷಿಣ ಕನ್ನಡ, ಉಡುಪಿ, ಬೀದರ್, ಕಲಬುರಗಿ, ವಿಜಯಪುರ, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ & ಮೈಸೂರು ಜಿಲ್ಲೆಗಳಲ್ಲಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೀಗಿದ್ದಾಗಲೆ ಈಗ ರಾಜಧಾನಿ ಬೆಂಗಳೂರಿನಲ್ಲಿ ಇದುವರೆಗೂ ಒಂದೇ ಒಂದು ಹನಿ ಮಳೆ ಬಿದ್ದಿಲ್ಲ. ಅರೆರೆ ಈಗ ಪರಿಸ್ಥಿತಿ ಏನಾಗಬಹುದು? ಬೆಂಗಳೂರಿನಲ್ಲಿ ಮಳೆ ಯಾವಾಗ ಬೀಳುತ್ತೆ? ಬನ್ನಿ ಮುಂದೆ ತಿಳಿಯೋಣ.

ಬೆಂಗಳೂರಲ್ಲಿ ಮಳೆ ಬರಲ್ವ?

ಅಂದಹಾಗೆ ಬೆಂಗಳೂರು ಮಳೆಯ ಬಗ್ಗೆ ಈವರೆಗಿನ ಮಾಹಿತಿ ಪ್ರಕಾರ, ಭರ್ಜರಿಯಾಗಿ ಮಳೆ ಬೀಳುವ ಬಗ್ಗೆ ಯಾವುದೇ ಮುನ್ಸೂಚನೆ ಸಿಗುತ್ತಿಲ್ಲ. ಆದರೆ ಮುಂದಿನ 2 ದಿನದಲ್ಲಿ ಸಾಮಾನ್ಯ ಮಳೆ ಬೀಳಬಹುದು ಎನ್ನಲಾಗಿದೆ. ಅಲ್ಲದೆ ಸಾಕಷ್ಟು ದಿನಗಳಿಂದ ಬೆಂಗಳೂರಿನಲ್ಲಿ ಮಳೆಯೆ ಬಂದಿಲ್ಲ, ಹೀಗಾಗಿ ಬೆಂಗಳೂರಿನಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಕಾಡುತ್ತಿದೆ. ಹೀಗಾಗಿ, ಮುಂದಿನ ಕೆಲವೇ ದಿನಗಳಲ್ಲಿ ಸಾಮಾನ್ಯ ಮಳೆ ಬಿದ್ದರೂ, ಏಪ್ರಿಲ್ ಕೊನೆಯ ವಾರದಲ್ಲೇ ಭರ್ಜರಿ ಮಳೆ ಬರಲಿದೆ ಎನ್ನಲಾಗುತ್ತಿದೆ. ಇದು ಕನ್ನಡಿಗರಿಗೆಲ್ಲಾ, ಅದರಲ್ಲೂ ಬೆಂಗಳೂರಿನ ನಿವಾಸಿಗಳಿಗೆ ಸಾಕಷ್ಟು ಖುಷಿ ಕೊಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+