ಮುಂದಿನ 24 ಗಂಟೆ ಈ ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ... Karnataka Rain
ಮಳೆ ಆರ್ಭಟ ಮತ್ತಷ್ಟು ಹೆಚ್ಚಾಗುತ್ತಿದೆ, ಮುಂಗಾರು ಮಳೆಯ ಮೋಡಗಳು ಈಗಾಗಲೇ ನಮ್ಮ ಕರ್ನಾಟಕ ಸೇರಿ ದಕ್ಷಿಣ ಭಾರತದ ಬಹುತೇಕ ಪ್ರದೇಶಗಳ ಮೇಲೆ ಮಳೆ ಸುರಿಸುತ್ತಿವೆ. ಹೀಗೆ ಮುಂಗಾರು ಮಳೆ ಅಬ್ಬರ ಹೆಚ್ಚಾಗಿರುವ ಕಾರಣಕ್ಕೆ ಕರ್ನಾಟಕದ ನದಿಗಳು ಕೂಡ ತುಂಬಿ, ತುಂಬಿ ಹರಿಯುತ್ತಿದ್ದು ಜಲಾಶಯಗಳಿಗೆ ಕೂಡ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಇದನ್ನ ನೋಡಿ ಕನ್ನಡ ನಾಡಿನ ಅನ್ನದಾತ ರೈತರು ಫುಲ್ ಖುಷಿಯಾಗಿದ್ದಾರೆ. ಈ ಖುಷಿ, ಖುಷಿಯಾದ ಸಮಯದಲ್ಲೇ ಮುಂದಿನ 24 ಗಂಟೆ ಈ ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ...
ಮುಂಗಾರು ಮಳೆ ಯಾಕೆ ಮುಖ್ಯ ಅಂದ್ರೆ, ಕರ್ನಾಟಕ ಸೇರಿದಂತೆ ಇಡೀ ದಕ್ಷಿಣ ಭಾರತದ ಪಾಲಿಗೆ ಇದೇ ಮಳೆ ಗ್ಯಾರಂಟಿ. ಮುಂಗಾರು ಮಳೆ ನಂಬಿಕೊಂಡೇ ಅನ್ನದಾತ ರೈತರು ಕೃಷಿ ಮಾಡುತ್ತಾರೆ. ಭಾರಿ ಪ್ರಮಾಣದಲ್ಲಿ ಮಳೆ ಸುರಿಯುವಂತೆ ಮಾಡುವ ಮುಂಗಾರು ಮಳೆಯ ಮೋಡಗಳು ಸಾಕಷ್ಟು ಮಹತ್ವ ಪಡೆದಿವೆ. ಅದರಲ್ಲೂ 2025 ವರ್ಷದಲ್ಲಿ ಮುಂಗಾರು ಮಳೆ ಸೀಸನ್ ಬೇಗನೇ ಶುರುವಾಗಿದ್ದು, ಈ ವರ್ಷ ಕೂಡ ಭಾರಿ ಮಳೆ ಸುರಿದು ನೀರಿಗೆ ಯಾವುದೇ ರೀತಿ ತೊಂದರೆ ಇಲ್ಲದಂತೆ ಮಾಡುವ ನಿರೀಕ್ಷೆ ಇದೆ. ಹೀಗಿದ್ದಾಗಲೇ ಮತ್ತೆ 24 ಗಂಟೆ ಮಳೆ ಅಬ್ಬರಿಸುವ ಮುನ್ನೆಚ್ಚರಿಕೆ ಸಿಕ್ಕಿದೆ.

ಮಳೆ.. ಮಳೆ.. ಮಳೆ..!
ಎಲ್ಲೆಲ್ಲೂ ಹಸಿರು ಕಂಗೊಳಿಸಿ, ಜಲಪಾತಗಳು ಮೈದುಂಬಿ ಜನರನ್ನ ಆಕರ್ಷಣೆ ಮಾಡ್ತಿವೆ. ಮಳೆ ಅಬ್ಬರಿಸುತ್ತಿರುವುದು ನೋಡಿ ಜನರು ಗೊಣಗುತ್ತಿದ್ದಾರೆ, ಅಲ್ಲದೆ ಹೀಗೆ ಸುರಿಯುತ್ತಿರುವ ಮಳೆ ಯಾವಾಗ ನಿಲ್ಲುತ್ತೆ? ಅಂತಾ ಕರಾವಳಿ & ಮಲೆನಾಡು ಜನ ಚಿಂತೆ ಮಾಡುವಂತೆ ಆಗಿದೆ. 2023 ವರ್ಷ ಪೂರ್ತಿ ಕೈಕೊಟ್ಟು ಬರ ತರಿಸಿದ್ದ ಮಳೆ, ಆ ನಂತರ 2024 ವರ್ಷ ಪೂರ್ತಿ ಸುರಿದು ಸಮಾಧಾನ ನೀಡಿತ್ತು. ಇದೀಗ 2025 ರಲ್ಲಿ ಕೂಡ ಭಾರಿ ಭರ್ಜರಿಯಾಗಿ ಸುರಿಯುತ್ತಿದ್ದು, ಮೇ ತಿಂಗಳಲ್ಲೇ ಮುಂಗಾರು ಮಳೆ ಶುರುವಾಗಿದೆ. ಇದು ಕೂಡ ಕನ್ನಡ ನಾಡಿಗೆ ದೊಡ್ಡ ಕೊಡುಗೆ ನೀಡಲಿದೆ. ಇದರ ಜೊತೆಗೆ ಮತ್ತಷ್ಟು ಮಳೆ ಹೆಚ್ಚಾಗುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ.












Click it and Unblock the Notifications