Karnataka Rains: ಮುಂದಿನ 5 ದಿನಗಳ ಕಾಲ ಭಾರಿ ಭರ್ಜರಿ ಮಳೆ, ಶಾಲಾ ಕಾಲೇಜುಗಳಿಗೆ....

ಮಳೆ ಅದ್ಯಾಕೆ ಈ ರೇಂಜ್‌ಗೆ ರೊಚ್ಚಿಗೆದ್ದು ಸುರಿಯುತ್ತಿದೆಯೋ ಗೊತ್ತಿಲ್ಲ, ಮಳೆ.. ಮಳೆ.. ನಿಲ್ಲದ ಮಳೆ ರಗಳೆ ಮತ್ತಷ್ಟು ಆಘಾತ ನೀಡುತ್ತಿದೆ. ಕಳೆದ ಕೆಲವು ತಿಂಗಳಿಂದ ಮಳೆ ಅಬ್ಬರ ಜೋರಾಗಿ ಜನ & ಅನ್ನದಾತ ರೈತರು ತಲೆ ಮೇಲೆ ಕೈಹೊತ್ತು ಕೂರುವ ಪರಿಸ್ಥಿತಿ ನಿರ್ಮಾಣ ಆಗಿದೆ. ಇದು ಸಾಲದು ಎನ್ನುವಂತೆ ಸೈಕ್ಲೋನ್ ಪರಿಣಾಮ ಕಳೆದ 1 ವಾರ ಕನ್ನಡಿಗರು ಈ ರೀತಿ ಮಳೆ ಕಾಟಕ್ಕೆ ಬೆಚ್ಚಿಬಿದ್ದು ಭಯಗೊಂಡಿದ್ದಾರೆ. ಹೀಗಿದ್ದಾಗಲೇ, ಮುಂದಿನ 5 ದಿನಗಳ ಕಾಲ ಭಾರಿ ಭರ್ಜರಿ ಮಳೆ ಸುರಿಯುವುದು ಪಕ್ಕಾ ಆಗಿದೆ. ಯಾವ ಯಾವ ಜಿಲ್ಲೆಗಳಿಗೆ?

ಅಯ್ಯೋ... ಮಳೆಗಾಲ ನಿಂತು ಚಳಿಗಾಲ ಶುರು ಆಗಬೇಕಿದ್ದ ಸಮಯ ಇದು. ಆದರೂ, ಮಳೆ ಅಬ್ಬರ ನಿಂತಿಲ್ಲ. ಅದರಲ್ಲೂ ಕಳೆದ ಒಂದು ತಿಂಗಳಲ್ಲಿ ಭಾರಿ ಮಳೆ ಬಿದ್ದಿದ್ದು, ಈ ಹೊತ್ತಿಗೂ ಮತ್ತೆ ಮಳೆ ಅಬ್ಬರಿಸುತ್ತಿದೆ. ಬೆಂಗಳೂರಿನ ಹಲವು ಭಾಗಗಳಲ್ಲಿ ಬುಧವಾರ ರಾತ್ರಿ ಕೂಡ ಮಳೆ ಅಬ್ಬರಿಸಿದ್ದು, ಈಗಲೂ ಮಳೆ ಬರುವ ಮುನ್ಸೂಚನೆ ಇದೆ. ಕರ್ನಾಟಕದ ಹಲವು ಜಿಲ್ಲೆಗಳ ಜನರಿಗೆ ಮತ್ತೆ ಮಳೆ ಅಬ್ಬರ ಕಾಟ ಕೊಡುವುದು ಗ್ಯಾರಂಟಿ ಆಗಿದೆ. ಇದೇ ಸಮಯದಲ್ಲಿ, ಮತ್ತೆ ಮುಂದಿನ 5 ದಿನಗಳ ಕಾಲ ಭಾರಿ ಭರ್ಜರಿ ಮಳೆ...

Rain Alert Given To Karnataka From December 5th Of 2024

ಮಳೆ.. ಮಳೆ.. ಯಾವ ಜಿಲ್ಲೆಗಳಿಗೆ?

ಅಂದಹಾಗೆ, ಮಳೆ ಇದೀಗ ಗ್ಯಾಪ್ ಕೊಡದೆ ಅಬ್ಬರ ತೋರಿಸುತ್ತಿದ್ದು, ಜನರು ಕೂಡ ಹೀಗೆ ಭಾರಿ ಮಳೆ ಕಾಟಕ್ಕೆ ಬೆಚ್ಚಿ ಬಿದ್ದಿದ್ದಾರೆ. ಹವಾಮಾನ ವೈಪರಿತ್ಯ ಪರಿಣಾಮ ಹೀಗೆ ಭಾರಿ ಘೋರ ಮಳೆ ಬೀಳುತ್ತಿದೆ. ಅಕ್ಟೋಬರ್ & ನವೆಂಬರ್ ತಿಂಗಳಲ್ಲಿ ಸಾಮಾನ್ಯವಾಗಿ ಮಳೆ ಕಡಿಮೆ ಬೀಳುತ್ತಿತ್ತು. ಆದ್ರೆ ಈ ಬಾರಿ ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಭಾರಿ ಮಳೆ ಬೀಳ್ತಿದ್ದು ಡಿಸೆಂಬರ್ ಬಂದ್ರು ಕೂಡ ಮಳೆ ತನ್ನ ಆರ್ಭಟ ಕಡಿಮೆ ಮಾಡಿಲ್ಲ. ಹೀಗಿದ್ದಾಗಲೇ ಮತ್ತೆ ಮುಂದಿನ 5 ದಿನಗಳ ಕಾಲ ಭಾರಿ ಭರ್ಜರಿ ಮಳೆ ಬೀಳುವುದು ಗ್ಯಾರಂಟಿ ಆಗಿದೆ.

ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ಡಿಸೆಂಬರ್ 5ರಿಂದ 12ರ ತನಕ ಬೀದರ್ & ಕಲಬುರಗಿ ಸೇರಿದಂತೆ ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ವಿಜಯಪುರ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯ ಸಾಧ್ಯತೆ ಇದೆ. ಹಾಗೇ ಕೊಪ್ಪಳ, ಧಾರವಾಡ, ಗದಗ, ಬಳ್ಳಾರಿ, ಚಿತ್ರದುರ್ಗ, ತುಮಕೂರು, ಹಾಸನ, ಬೆಂಗಳೂರು ಗ್ರಾಂ, ಬೆಂಗಳೂರು ನಗರ ಹಾಗೇ ಮಂಡ್ಯ, ರಾಮನಗರ, ಚಾಮರಾಜನಗರ, ಮೈಸೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಬೀಳುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ. ಹೀಗಾಗಿ ಒಂದು ಹಂತದಲ್ಲಿ ಶಾಲಾ & ಕಾಲೇಜಿಗೆ ರಜೆ ನೀಡಿದರೂ ಅಚ್ಚರಿ ಇಲ್ಲ.

ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು....

ಇಷ್ಟು ಮಾತ್ರವಲ್ಲ, ಮಲೆನಾಡು ಭಾಗದಲ್ಲಿ ಕೂಡ ಮಳೆ ಬೀಳಲಿದ್ದು, ಕರಾವಳಿ ಜಿಲ್ಲೆಗಳ ಜನರಿಗೆ ಕೂಡ ಮಳೆರಾಯ ಕಾಟ ಕೊಡುವುದು ಗ್ಯಾರಂಟಿ ಆಗಿದೆ. ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳು ಸೇರಿದಂತೆ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೂಡ ಮಳೆ ಬೀಳುವ ಸಾಧ್ಯತೆ ದಟ್ಟವಾಗಿದೆ. ಈ ಮೂಲಕ ಮಳೆ ಅಬ್ಬರ ಮತ್ತಷ್ಟು ಹೆಚ್ಚುವ ಅಪಾಯ ಕಾಡುತ್ತಿದೆ.

2023ರಲ್ಲಿ ಮಳೆ ಬೇಕು ಅಂತಿದ್ದರು ಜನ!

ಕಳೆದ ವರ್ಷ ಅಂದ್ರೆ 2023 ಡಿಸೆಂಬರ್ ವೇಳೆಗೆ ಜನ ಮಳೆ ಯಾಕೆ ಬಂದಿಲ್ಲ?? ಅಂತಾ ಹಿಡಿಶಾಪ ಹಾಕುತ್ತಾ ವರುಣನ ವಿರುದ್ಧವೇ ಗೊಣಗುತ್ತಿದ್ದರು. ಯಾಕಂದ್ರೆ, 2023 ರಲ್ಲಿ ಮಳೆ ಕೈಕೊಟ್ಟಿದ್ದ ಕಾರಣಕ್ಕೆ ಜನರಿಗೆ ನಾನಾ ರೀತಿಯ ಸಮಸ್ಯೆಗಳು ಎದುರಾಗಿದ್ದವು. ಹೀಗಾಗಿ ಜನರಿಗೆ ಕೂಡ ಚಿಂತೆ ಶುರುವಾಗಿತ್ತು, ಆದ್ರೆ 2024ರ ಹೊತ್ತಿಗೆ ಅಂದ್ರೆ ಪ್ರಸಕ್ತ ವರ್ಷದಲ್ಲಿ ಮಳೆ ಯಾಕಪ್ಪಾ ಬೀಳುತ್ತಿದೆ? ಅಂತಾ ಈಗ ಜನರು ಗೊಣಗುತ್ತಿದ್ದಾರೆ. ಹೀಗಿದ್ದರೂ ಮತ್ತೆ ಹಲವಾರು ಜಿಲ್ಲೆಗಳಿಗೆ ಭಾರಿ ಮಳೆಯ ಮುನ್ನೆಚ್ಚರಿಕೆ ಸಿಗುತ್ತಿದ್ದು, ಇದು ಆತಂಕ ಮತ್ತಷ್ಟು ಹೆಚ್ಚುವಂತೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+